ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ಚೀನಾದಲ್ಲಿ ಹೆಚ್ಚಾದ ಕೊರೊನಾ ತಳಿ ಭಾರತದಲ್ಲಿ ಪತ್ತೆ

|
Google Oneindia Kannada News

ಅಹಮದಾಬಾದ್ ಡಿಸೆಂಬರ್ 21: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿರುವ ಕೊರೊನಾ ಮತ್ತೆ ಅಟ್ಟಹಾಸ ಮೆರೆಯುತ್ತಿದೆ. ಚೀನಾದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗಿದ್ದು ಆಸ್ಪತ್ರೆಗಳಲ್ಲಿ ರೋಗಿಗಳು ಬೆಡ್‌ ಇಲ್ಲದ ಪರಿಸ್ಥಿತಿಗೆ ಬಂದೊದಗಿದ್ದಾರೆ. ಸದ್ಯ ಚೀನಾದಲ್ಲಿ ಹೆಚ್ಚಾದ ಕೊರೊನಾ ರೂಪಾಂತರಿ BF7 ಭಾರತಕ್ಕೂ ಕಾಲಿಟ್ಟಿದೆ. ಚೀನಾದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚಾಗಲು ಕಾರಣವಾಗಿರುವ BF7 ರೂಪಾಂತರದ ಶಂಕಿತ ಪ್ರಕರಣ ಗುಜರಾತ್‌ನಲ್ಲಿ ಕಂಡುಬಂದಿದೆ.

ವಡೋದರದ ಸಭಾನ್‌ಪುರ ಪ್ರದೇಶದಲ್ಲಿ ವಾಸಿಸುವ ಎನ್‌ಆರ್‌ಐ ಮಹಿಳೆಯೊಬ್ಬರಿಗೆ ಕೋವಿಡ್-19 ರ ರೂಪಾಂತರಿ ಬಿಎಫ್.7 ಪಾಸಿಟಿವ್ ಬಂದಿದೆ.

ವಡೋದರಾ ಮುನ್ಸಿಪಲ್ ಕಮಿಷನರ್ ಬಾಂಚನಿಧಿ ಪಾನಿ ಪ್ರಕಾರ, ಅನಿವಾಸಿ ಭಾರತೀಯ ಮಹಿಳೆ ಡಿಸೆಂಬರ್ 9 ರಂದು ಯುನೈಟೆಡ್ ಸ್ಟೇಟ್ಸ್‌ನಿಂದ ಭಾರತಕ್ಕೆ ಬಂದರು. ಡಿಸೆಂಬರ್ 18 ರಂದು ಕೋವಿಡ್ -19 ಗೆ ಪರೀಕ್ಷೆ ನಡೆಸಿದರು. ಮಹಿಳೆಯ ಮಾದರಿಯನ್ನು ಜೀನೋಮ್ ಸೀಕ್ವೆನ್ಸಿಂಗ್‌ಗಾಗಿ ಕಳುಹಿಸಲಾಗಿದೆ. ಅದರ ಫಲಿತಾಂಶಗಳು ಬುಧವಾರ ಬಂದಿದ್ದು ಅದು ದೃಢಪಟ್ಟಿದೆ. ಮಹಿಳೆಯಲ್ಲಿ BF.7 ರೂಪಾಂತರಿ ಇರುವುದು ಕಂಡು ಬಂದಿದೆ.

Corona case in China: Suspected case of BF7 mutation detected in Gujarat

ಆಡಳಿತದ ಪ್ರಕಾರ, ಅವಳೊಂದಿಗೆ ಸಂಪರ್ಕಕ್ಕೆ ಬಂದ ಇತರ ಇಬ್ಬರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಮತ್ತು ಅವರ ಮಾದರಿಗಳನ್ನು ಜೀನೋಮ್ ಅನುಕ್ರಮಕ್ಕಾಗಿ ಕಳುಹಿಸಲಾಗಿದೆ.

ಎನ್‌ಆರ್‌ಐ ಮಹಿಳೆಯ ಹೊರತಾಗಿ, ಅಹಮದಾಬಾದ್‌ನ ಗೋಟಾ ಪ್ರದೇಶದಲ್ಲಿ ವಾಸಿಸುವ ವ್ಯಕ್ತಿ ಕೂಡ ಬಿಎಫ್.7 ಪರೀಕ್ಷೆ ನಡೆಸಲಾಗಿದೆ. ಈ ವ್ಯಕ್ತಿ ಕೆಲವು ದಿನಗಳ ಹಿಂದೆ ಅಹಮದಾಬಾದ್‌ಗೆ ಆಗಮಿಸಿ ಕೋವಿಡ್-19 ಪರೀಕ್ಷೆ ನಡೆಸಿದ್ದರು. ಅವರ ಮಾದರಿಯನ್ನು ಜಿನೋಮ್ ಸೀಕ್ವೆನ್ಸಿಂಗ್‌ಗಾಗಿ ಕಳುಹಿಸಲಾಗಿದೆ. ಫಲಿತಾಂಶಗಳು ಅವರು BF.7 ರೂಪಾಂತರದಿಂದ ಸೋಂಕಿಗೆ ಒಳಗಾಗಿದ್ದಾರೆ ಎಂದು ಖಚಿತಪಡಿಸುತ್ತದೆ.

English summary
Suspected case of BF7 mutation responsible for surge in Covid-19 cases in China found in Gujarat
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X