ಜಾರ್ಖಂಡ್: ಪೊಲೀಸ್ ಠಾಣೆಯೊಳಗೆ ಮದ್ಯ ಸೇವಿಸಿ ನೃತ್ಯ ಮಾಡಿದ ಪೊಲೀಸರು, ಐವರ ಅಮಾನತು

ಪೊಲೀಸರ ಕೃತ್ಯವನ್ನು ಖಂಡಿಸಿ ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಬಾಬು ಲಾಲ್ ಮರಾಂಡಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ರಾಂಚಿ, ಮಾರ್ಚ್ 10: ಪೊಲೀಸ್ ಠಾಣೆ ಆವರಣದಲ್ಲಿ ಪೊಲೀಸ್ ಸಿಬ್ಬಂದಿ ಮದ್ಯ ಸೇವಿಸಿ ಕುಣಿದು ಕುಪ್ಪಳಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದು ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯ ಪೊಲೀಸ್ ಠಾಣೆಯಾಗಿದ್ದು, ಘಟನೆ ಬಳಿಕ ಐವರು ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

ಗೊಡ್ಡಾ ಜಿಲ್ಲೆಯ ಪೊಲೀಸ್ ಠಾಣೆ ಕ್ಯಾಂಪಸ್‌ನಲ್ಲಿ ಮದ್ಯ ಸೇವಿಸಿ ನೃತ್ಯ ಮಾಡಿದ ಐವರು ಪೊಲೀಸರನ್ನು ಅಮಾನತುಗೊಳಿಸಲಾಗಿದ್ದು, ಅಮಾನತುಗೊಂಡವರು ಠಾಣೆಯಲ್ಲಿ ಹೋಳಿ ಆಚರಣೆ ಮಾಡುತ್ತಿದ್ದರು. ಹೋಳಿ ಆಚರಣೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಕಾನೂನು ಪಾಲಿಸಬೇಕಾದವರು, ರಕ್ಷಣೆ ನೀಡುವ ಸ್ಥಳದಲ್ಲಿ ಮದ್ಯಪಾನ ಮಾಡುತ್ತ ಆಮೋಜು ಮಸ್ತಿ ಮಾಡಿರುವುದಕ್ಕೆ ಭಾರಿ ಆಕ್ಷೇಪ ಉಂಟಾಗಿದೆ.

Cops Seen Drinking, Dancing at Police Station in Jharkhand, Video Went Viral; 5 Suspended

ಘಟನೆಯ ವೈರಲ್ ಆದ ಬೆನ್ನಲ್ಲೆ ಈ ಕುರಿತು ತನಿಖೆಗೆ ಆದೇಶಿಸಲಾಗಿದೆ. ಐವರು ಪೊಲೀಸರು ತಪ್ಪಿತಸ್ಥರು ಎಂದು ತಿಳಿದು ಬಂದಿದ್ದು, ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ ಎಂದು ಗೊಡ್ಡಾದ ಪೊಲೀಸ್ ಅಧೀಕ್ಷಕ ನಾಥು ಸಿಂಗ್ ಮೀನಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಪೊಲೀಸರ ಕೃತ್ಯವನ್ನು ಖಂಡಿಸಿ ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಅಮಾನತುಗೊಂಡ ಪೊಲೀಸರಲ್ಲಿ ಇಬ್ಬರು ಎಎಸ್‌ಐಗಳು ಮತ್ತು ಮೂವರು ಕಾನ್‌ಸ್ಟೆಬಲ್‌ಗಳು ಸೇರಿದ್ದಾರೆ. ಸಹಾಯಕ ಸಬ್ ಇನ್‌ಸ್ಪೆಕ್ಟರ್ ಬಿಪಿನ್ ಬಿಹಾರಿ ರಾಯ್, ಸಹಾಯಕ ಸಬ್ ಇನ್‌ಸ್ಪೆಕ್ಟರ್ ರಾಧಾ ಕೃಷ್ಣ ಸಿಂಗ್, ಕಾನ್‌ಸ್ಟೆಬಲ್ ಸತ್ಯೇಂದ್ರ ನಾರಾಯಣ ಸಿಂಗ್, ಕಾನ್‌ಸ್ಟೆಬಲ್ ಕೃಷ್ಣ ಕುಮಾರ್ ಸಿಂಗ್ ಮತ್ತು ಕಾನ್‌ಸ್ಟೆಬಲ್ ಪ್ಯಾರೆ ಮೋಹನ್ ಸಿಂಗ್ ಅಮಾನತುಗೊಂಡವರು.

"09.03.2023 ರಂದು, ಗೊಡ್ಡಾ ಜಿಲ್ಲೆಯ ಮಹಾಗಾಮಾ ಪೊಲೀಸ್ ಠಾಣೆಯ ವಿಡಿಯೋ ವೈರಲ್ ಆಗಿತ್ತು, ಈ ವೈರಲ್ ವಿಡಿಯೋಗೆ ಸಂಬಂಧಿಸಿದಂತೆ, ಉಪವಿಭಾಗೀಯ ಪೊಲೀಸ್ ಅಧಿಕಾರಿ, ಮಹಾಗಾಮಾ ಅವರೊಂದಿಗೆ ವಿಚಾರಣೆ ನಡೆಸಲಾಯಿತು. ತನಿಖೆಯ ಸಂದರ್ಭದಲ್ಲಿ, ಈ ಕೆಳಗಿನ ಅಧಿಕಾರಿಗಳು ತಪ್ಪಿತಸ್ಥರೆಂದು ಕಂಡುಬಂದಿದ್ದು, ಅವರನ್ನು ಅಮಾನತುಗೊಳಿಸಿ ಠಾಣೆಗೆ ಹಿಂತಿರುಗಿಸಲಾಗಿದೆ" ಎಂದು ಎಸ್‌ಪಿ ಕಚೇರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

Cops Seen Drinking, Dancing at Police Station in Jharkhand, Video Went Viral; 5 Suspended

ಗುರುವಾರ, ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಬಾಬು ಲಾಲ್ ಮರಾಂಡಿ ಅವರು ವೈರಲ್ ವಿಡಿಯೋ ಸ್ಕ್ರೀನ್-ರೆಕಾರ್ಡಿಂಗ್ ಅನ್ನು ಹಂಚಿಕೊಂಡಿದ್ದಾರೆ. ಇದನ್ನು ಕಾನ್‌ಸ್ಟೆಬಲ್ ಸತ್ಯೇಂದ್ರ ನಾರಾಯಣ್ ಸಿಂಗ್ ಅವರು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದರು.

ಘಟನೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಮಾಜಿ ಮುಖ್ಯಮಂತ್ರಿ ಬಾಬು ಲಾಲ್ ಮರಾಂಡಿ, "ಪೊಲೀಸ್ ಠಾಣೆ ಕ್ಯಾಂಪಸ್‌ನಲ್ಲಿ ಕೆಲವು ಪೊಲೀಸರ ಈ ಅಸಭ್ಯ ಮತ್ತು ಅಸಡ್ಡೆ ಪ್ರಸ್ತುತಿ ರಕ್ಷಕರ ವೇಷದಲ್ಲಿರುವ ವ್ಯಾಘ್ರರ ಮುಖ. ಸೋರೆನ್ ಸುಲ್ತಾನರ ಆಕಸ್ಮಿಕ ರಾಜಕುಮಾರ ಹೇಮಂತ್‌ನಿಂದ ಜಾರ್ಖಂಡ್ ನಿಜವಾಗಿಯೂ ಪುಡಿಪುಡಿಯಾಗಿದೆ. ಬುಡಕಟ್ಟು ಸಮಾಜ ಮತ್ತು ಜಾರ್ಖಂಡ್ ಯುವಜನತೆ ಎದ್ದೇಳಿ" ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+