• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಫೆಲ್‌: ಹಳೆ ವಿಡಿಯೋ ಟ್ವೀಟ್ ಮಾಡಿ ಹೊಸ ಪ್ರಶ್ನೆಗಳನ್ನು ಎತ್ತಿದ ಕಾಂಗ್ರೆಸ್

|

ನವದೆಹಲಿ, ಸೆಪ್ಟೆಂಬರ್ 24: ರಫೆಲ್‌ ಹಗರಣದ ಬಗ್ಗೆ ಕೇಂದ್ರ ಸರ್ಕಾರದ ಬೆನ್ನು ಬಿಡದ ಬೇತಾಳನಾಗಿರುವ ಕಾಂಗ್ರೆಸ್ ಇಂದು ಹಳೆಯ ವಿಡಿಯೋ ಒಂದನ್ನು ಟ್ವೀಟ್ ಮಾಡಿ ಹಲವು ಮೌಲ್ಯಯುತ ಪ್ರಶ್ನೆಗಳನ್ನು ಎತ್ತಿದೆ.

ರಫೆಲ್‌ ಫೈಟರ್‌ ವಿಮಾನಗಳನ್ನು ತಯಾರಿಸುವ ಡಸ್ಸಾಲ್ಟ್‌ ಕಂಪೆನಿಯ ಚೇರ್‌ಮನ್‌ ಟ್ರಾಫೆರ್‌ ಅವರು 2015ರ ಮಾರ್ಚ್‌ 23ರಂದು ಎಚ್‌ಎಎಲ್‌ ಅಧ್ಯಕ್ಷ ಹಾಗೂ ಭಾರತೀಯ ವಾಯುಸೇನೆ ಮುಖ್ಯಸ್ಥರು ಉಪಸ್ಥಿತಿರುವ ಕಾರ್ಯಕ್ರಮದಲ್ಲಿ ರಫೇಲ್‌ ಯುದ್ಧವಿಮಾನದ ಒಪ್ಪಂದದ ಬಗ್ಗೆ ಮಾತನಾಡುವ ವಿಡಿಯೋವನ್ನು ಕಾಂಗ್ರೆಸ್ ಟ್ವೀಟ್ ಮಾಡಿದೆ.

ವಿಡಿಯೋದಲ್ಲಿ ತಾವು ಎಚ್‌ಎಎಲ್‌ ಜೊತೆ ತಂತ್ರಜ್ಞಾನ ಹಂಚಿಕೊಳ್ಳಲು ಉತ್ಸುಕರಾಗಿದ್ದೇವೆ ಎಂಬರ್ಥದ ಮಾತುಗಳನ್ನಾಡಿದ್ದಾರೆ. ಆದರೆ ಈ ಡಸ್ಸಾಲ್ಟ್‌ ಸಂಸ್ಥೆಯ ಅಧ್ಯಕ್ಷ ಈ ಮಾತುಗಳನ್ನು ಆಡಿದ 17 ದಿನಗಳ ನಂತರ ಮೋದಿ ಅವರು ಇದೇ ಒಪ್ಪಂದವನ್ನು ರಿಲಯನ್ಸ್‌ಗೆ ನೀಡಿದರು ಎಂದು ಟ್ವೀಟ್‌ನಲ್ಲಿ ಕಾಂಗ್ರೆಸ್‌ ಹೇಳಿದೆ. ಅಷ್ಟೆ ಅಲ್ಲದೆ ಸುಳ್ಳು ಹೇಳಿದ್ದಕ್ಕಾಗಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ರಾಜೀನಾಮೆ ನೀಡಬೇಕು ಎಂದು ಹೇಳಿದೆ.

ರಫೇಲ್ ಒಪ್ಪಂದ: ವಿವಾದದ ನಡುವೆ ಮರೆಯಾದ ಸೂಕ್ಷ್ಮ ಸತ್ಯಗಳು

ಎಚ್‌ಎಎಲ್‌ ಕಾರ್ಯಕ್ಷಮತೆಯ ಮೇಲೆ ಅನುಮಾನವಿದ್ದ ಕಾರಣ ಅಂಬಾನಿ ಒಡೆತನದ ಸಂಸ್ಥೆಗೆ ವಿಮಾನ ತಯಾರಿ ಒಪ್ಪಂದ ನೀಡಲಾಯಿತು ಎಂದು ಬಿಜೆಪಿಯ ಕೆಲವು ಮುಖಂಡರು ಹೇಳುತ್ತಿದ್ದಾರೆ (ಅಧಿಕೃತ ಹೇಳಿಕೆ ಬಂದಿಲ್ಲ). ಆದರೆ ಕಾಂಗ್ರೆಸ್ ಟ್ವೀಟ್ ಮಾಡಿರುವ ವಿಡಿಯೋದಲ್ಲಿ ಎಚ್‌ಎಎಲ್‌ ಅನ್ನು ಡಸ್ಸಾಲ್ಟ್‌ ಸಂಸ್ಥೆ ಗೌರವಯುತವಾಗಿ ಹೊಗಳುತ್ತಿದೆ. ಹಾಗಿದ್ದಮೇಲೆ ಬಿಜೆಪಿ ಸುಳ್ಳು ಹೇಳುತ್ತಿದೆಯೇ ಎಂಬ ಅನುಮಾನ ಮೂಡದೇ ಇರದು.

ಕಾವಲುಗಾರನೇ ಕಳ್ಳತನ ಮಾಡಿದ್ದಾನೆ: ಮೋದಿ ವಿರುದ್ಧ ರಾಹುಲ್ ವಾಗ್ದಾಳಿ

ಅನಿಲ್ ಅಂಬಾನಿ ಒಡೆತನದ ರಿಲಯನ್ಸ್‌ ಸಂಸ್ಥೆಗೆ ರಫೆಲ್‌ ತಯಾರಿಸುವ ಒಪ್ಪಂದ ನೀಡಲಾಗಿದೆ. ಆದರೆ ಈವರೆಗೆ ಅನಿಲ್ ಅಂಬಾನಿ ಒಂದೂ ವಿಮಾನ ತಯಾರಿಸಿದ ಅನುಭವ ಇಲ್ಲ. ಅವರಿಗೆ ರಫೇಲ್ ಒಪ್ಪಂದ ನೀಡಲಾಗುವ ಕೆಲವು ತಿಂಗಳುಗಳ ಮುಂಚೆಯಷ್ಟೆ ಅವರು ಸಂಸ್ಥೆ ಸ್ಥಾಪಿಸಿದ್ದಾರೆ. ಇದು ಸಹ ಅನುಮಾನಗಳನ್ನು ಮೂಡಿಸುತ್ತಿದೆ.

ಇದು 'ಗ್ರಹಿಕೆ ಯುದ್ಧ, ನಾವು ಹೋರಾಡುತ್ತೇವೆ' ಎಂದ ರಕ್ಷಣಾ ಸಚಿವೆ

2015ರ ಏಪ್ರಿಲ್ ತಿಂಗಳಲ್ಲಿ ಮೋದಿ ಅವರು ಫ್ರಾನ್ಸ್‌ಗೆ ಭೇಟಿ ನೀಡಿದರು. ಮೋದಿ ಅವರು ಆಗಿನ ಫ್ರಾನ್ಸ್‌ ಅಧ್ಯಕ್ಷ ಫ್ರಾನ್ಕೋಯಿಸ್ ಹೋಲ್ಯಾಂಡ್‌ ಅವರ ಜತೆ 36 ರಫೆಲ್ ಫೈಟರ್‌ ಜೆಟ್‌ಗಳನ್ನು 60000 ಕೋಟಿ ಮೊತ್ತದಲ್ಲಿ ಖರೀದಿ ಮಾಡುತ್ತಿರುವುದಾಗಿ ಹೇಳಿದರು. ಏಪ್ರಿಲ್ 10ರಂದು ಅನಿಲ್ ಅಂಬಾನಿ ಅವರ ರಿಲಯನ್ಸ್‌ ಒಡೆತನದ ಸಂಸ್ಥೆಗೆ ರಫೆಲ್‌ ತಯಾರಿಸುವ ಒಪ್ಪಂದ ನೀಡಲಾಯಿತು. ಮೋದಿ ಭೇಟಿ ನಂತರವೇ ಎಚ್‌ಎಎಲ್‌ನಿಂದ ಒಪ್ಪಂದವು ಅನಿಲ್ ಅಂಬಾನಿ ಕೈ ಸೇರಿತು . ಹಾಗಿದ್ದಮೇಲೆ ಇದರಲ್ಲಿ ಮೋದಿ ಅವರ ಕೈವಾಡ ಅಥವಾ ಒತ್ತಡವಿಲ್ಲವೆಂದು ಹೇಳುವುದು ಹೇಗೆ ಎಂಬ ಪ್ರಶ್ಮೆ ಹುಟ್ಟುತ್ತಿದೆ.

English summary
Congress has tweeted a video in which Dassault company chief talking about rafale deal with HAL and IAF. this video is shooted on 2015 march 23, before the contract hand over to Anil Ambani.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more