Get Updates
Get notified of breaking news, exclusive insights, and must-see stories!

ಹೊಸ ಸಂಸತ್ ಭವನ ನಿರ್ಮಾಣ ಶ್ಲಾಘಿಸಿದ ಶಾರೂಖ್ ಖಾನ್ ವಿರುದ್ಧ ಕಾಂಗ್ರೆಸ್ ಕಿಡಿ

ನವದೆಹಲಿಯಲ್ಲಿ ಎರಡೂವರೆ ವರ್ಷಗಳ ಅವಧಿಯಲ್ಲಿ ನಿರ್ಮಿಸಿರುವ ನೂತನ ಸಂಸತ್ ಭವನವನ್ನು ಪ್ರಧಾನಿ ನರೇಂದ್ರ ಮೋದಿ ಇಂದು (ಮೇ 28, ಭಾನುವಾರ) ಉದ್ಘಾಟಿಸಿದರು.

1200 ಕೋಟಿ ರೂಪಾಯಿ ವೆಚ್ಚದಲ್ಲಿ 39.6 ಮೀಟರ್ ಎತ್ತರದಲ್ಲಿ ನಾಲ್ಕು ಅಂತಸ್ತಿನ ಹೊಸ ಸಂಸತ್ ಭವನ ನಿರ್ಮಾಣ ಮಾಡಲಾಗಿದೆ. 1272 ಆಸನ ಸಾಮರ್ಥ್ಯವನ್ನು ಇದು ಹೊಂದಿದ್ದು, ಲೋಕಸಭೆಯನ್ನು ಗರಿಬಿಚ್ಚಿರುವ ನವಿಲಿನ ವಿನ್ಯಾಸದಲ್ಲಿ ನಿರ್ಮಾಣ ಮಾಡಲಾಗಿದೆ.

New Parliament Building Construction

ಭಾರತದ ಪ್ರಜಾಭುತ್ವದ ದೇಗುಲ ಉದ್ಘಾಟನೆ ಹಲವು ಕಾರಣಗಳಿಂದ ವಿವಾದಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಸೇರಿದಂತೆ ಹಲವು ವಿಪಕ್ಷಗಳು ಉದ್ಘಾಟನೆ ಕಾರ್ಯಕ್ರಮಕ್ಕೆ ಬಹಿಷ್ಕಾರ ಹಾಕಿವೆ. ಇದೇ ವೇಳೆ ಸರಣಿ ಟ್ವೀಟ್ ಮೂಲಕ ನೂತನ ಸಂಸತ್ ಭವನ, ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯನ್ನು ಟೀಕಿಸಿದೆ.

ಇದೇ ವೇಳೆ ಖ್ಯಾತ ಬಾಲಿವುಡ್ ನಟ ಶಾರುಖ್ ಖಾನ್ ಅವರು ನೂತನ ಸಂಸತ್ ಭವನ ಹಾಗೂ ಪ್ರಧಾನಿ ನರೇಂದ್ರ ಮೋದಿಯನ್ನು ಶ್ಲಾಘಿಸಿ ಟ್ವೀಟ್ ಮಾಡಿದ್ದಾರೆ. ಇದು ಕಾಂಗ್ರೆಸ್ ಪಕ್ಷವನ್ನು ಕೆರಳಿಸಿದ್ದು, ಶಾರೂಖ್ ಖಾನ್ ಇನ್ಯಾವತ್ತು ಕಿಂಗ್ ಅಲ್ಲ ಎಂದು ಕಿಡಿಕಾರಿದ್ದಾರೆ.

ಹೊಸ ಸಂಸತ್ ಭವನವನ್ನು ನಿರ್ದಿಷ್ಟ ಕಾಲಮಿತಿಯೊಳಗೆ ನಿರ್ಮಿಸಿ ಇದೀಗ ಉದ್ಘಾಟನೆಗೊಂಡಿದೆ. ದೇಶಾದ್ಯಂತ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಮೋದಿಗೆ ಮೆಚ್ಚುಗೆ ಮಾತುಗಳು ವ್ಯಕ್ತವಾಗಿವೆ. ಉದ್ಘಾಟನೆಗೆ ಒಂದು ದಿನ ಮುಂಚೆ ಸುಸಜ್ಜಿತ ಕಟ್ಟಡದ ವಿಡಿಯೋವನ್ನು ಪ್ರಧಾನಿ ನರೇಂದ್ರ ಮೋದಿ ಹಂಚಿಕೊಂಡಿದ್ದರು.

New Parliament Building Construction

ಅದರಲ್ಲಿ ನಿಮ್ಮದೇ ಧ್ವನಿಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲು ಪ್ರಧಾನಿ ಮೋದಿ ಮನವಿ ಮಾಡಿದ್ದರು. ಇದರಂತೆ ಬಾಲಿವುಡ್ ನಟ ಶಾರುಖ್ ಖಾನ್ ತಮ್ಮ ಧ್ವನಿಯ ಮೂಲಕ ಈ ವಿಡಿಯೋ ಹಂಚಿಕೊಂಡಿದ್ದರು.

ಈ ವಿಡಿಯೋದಲ್ಲಿ ಶಾರುಖ್ ಖಾನ್, "ನಮ್ಮ ಸಂವಿಧಾನವನ್ನು ಎತ್ತಿಹಿಡಿಯುವ, ದೇಶದ ಪ್ರತಿಯೊಬ್ಬ ಪ್ರಜೆಯನ್ನು ಪ್ರತಿನಿಧಿಸುವ ಹಾಗೂ ಜನರ ವೈವಿಧ್ಯತೆಯನ್ನು ರಕ್ಷಿಸುವ ಭವ್ಯ ಭವನವಾಗಿದೆ. ಪ್ರಧಾನಿ ಮೋದಿಜಿ ಹೊಸ ಭಾರತಕ್ಕಾಗಿ ಹೊಸ ಸಂಸತ್ ಕಟ್ಟಡ ನಿರ್ಮಿಸಿದ್ದಾರೆ. ಗತವೈಭವದ ಹಳೆಯ ಕನಸಿನೊಂದಿಗೆ ಹೊಸ ಹೆಜ್ಜೆ ಹಾಕುತ್ತಿದ್ದೇವೆ. ಜೈ ಹಿಂದ್, ನನ್ನ ಸಂಸತ್ ನನ್ನ ಹೆಮ್ಮೆ," ಎಂದು ಶಾರುಖ್ ಖಾನ್ ಟ್ವೀಟ್ ಹಂಚಿಕೊಂಡಿದ್ದಾರೆ.

ಶಾರುಖ್ ಖಾನ್ ಅವರು ಟ್ವೀಟ್ ಮೂಲಕ ನೂತನ ಸಂಸತ್ ಭವನ ಹಾಗೂ ಪ್ರಧಾನಿ ಮೋದಿ ಹೊಗಳಿದ ಬೆನ್ನಲ್ಲೇ ವಿಪಕ್ಷಗಳಿಂದ ಭಾರೀ ಟೀಕೆಗೆ ಗುರಿಯಾಗಿದ್ದಾರೆ. ಮೋದಿ ಹಾಗೂ ಬಿಜೆಪಿ ವಿರೋಧಿಗಳು ಶಾರುಖ್ ಖಾನ್ ವಿರುದ್ಧ ಸರಣಿ ಟ್ವೀಟ್ ಮಾಡಿದ್ದಾರೆ.

ಉತ್ತರ ಪ್ರದೇಶದ ಕಾಂಗ್ರೆಸ್ ವಕ್ತಾರ ಪಂಖುರಿ ಪಾಠಕ್ ಕಿಡಿಕಾರಿದ್ದು, "ನಿಮ್ಮ ಪುತ್ರನನನ್ನು ವಿನಾಕಾರಣ ಜೈಲಿಗೆ ಕಳಿಸಿದಾಗ ನಾವು ನಿಮ್ಮ ಬೆಂಬಲಕ್ಕೆ ನಿಂತಿದ್ದೆವು. ನಿಮ್ಮ ಚಿತ್ರವನ್ನು ಬಹಿಷ್ಕರಿಸಿದಾಗ ನಾವು ಬೆಂಬಲ ಸೂಚಿಸಿದೆವು. ಧರ್ಮದ ಕಾರಣಕ್ಕಾಗಿ ನಿಮ್ಮನ್ನು ಟಾರ್ಗೆಟ್ ಮಾಡಿದಾಗ, ನಾವು ನಿಮಗೆ ಸಹಕಾರ ನೀಡಿದೆವು. ಇದೀಗ ನೀವು ಏನು ಮಾಡಿದ್ದೀರಿ? ಅದನ್ನೇ ಪಡೆಯಲು ಅರ್ಹರು. ಇನ್ಯಾವತ್ತು ನೀವು ಕಿಂಗ್ ಅಲ್ಲ," ಎಂದು ಟೀಕಿಸಿದ್ದಾರೆ.

ಮೇ 28ರಂದು ನಡೆದ ಹೊಸ ಸಂಸತ್ ಭವನ ಉದ್ಘಾಟನೆ ಕಾರ್ಯಕ್ರಮಕ್ಕೆ ವಿಪಕ್ಷ ಕಾಂಗ್ರೆಸ್ ಬಹಿಷ್ಕಾರ ಹಾಕಿದೆ. ಕಾಂಗ್ರೆಸ್ ಜೊತೆ 20ಕ್ಕೂ ಹೆಚ್ಚು ವಿಪಕ್ಷಗಳು ಕೂಡಿಕೊಂಡಿವೆ. ನೂತನ ಸಂಸತ್ ಭವನವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡಬಾರದು, ರಾಷ್ಟ್ರಪತಿ ಉದ್ಘಾಟನೆ ಮಾಡಬೇಕು ಎನ್ನುವುದು ಕಾಂಗ್ರೆಸ್ ಸೇರಿದಂತೆ ಕೆಲವು ಪಕ್ಷಗಳ ವಾದವಾಗಿದೆ.

ಈ ಎಲ್ಲಾ ವಿವಾದಗಳ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರು ನೂತನ ಮತ್ತು ಪುರಾತನ ಸಮ್ಮಿಶ್ರದಂತೆ ಐತಿಹಾಸಿಕ ರಾಜದಂಡ ಸ್ಥಾಪಿಸಿ ಸಂಸತ್ ಭವನ ಉದ್ಘಾಟಿಸಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+