ಗೋಲಿ ಮಾರೇಂಗೆ ಅಬ್ಕಿ ಬಾರ್: ಮೋದಿಗೆ ಕಾಂಗ್ರೆಸ್ 'ಭಯಂಕರ' ಟ್ವೀಟ್

ಮೂರು ವರ್ಷ ಪೂರೈಸಿರುವ ಕೇಂದ್ರದ ನರೇಂದ್ರ ಮೋದಿ ಸರಕಾರಕ್ಕೆ ಪ್ರಮುಖ ವಿಪಕ್ಷ ಕಾಂಗ್ರೆಸ್ ತನ್ನ @INCIndia ಅಕೌಂಟ್ ನಿಂದ ಟ್ವೀಟ್ ಪ್ರಹಾರ ನಡೆಸುತ್ತಿದೆ. 'ಗೋಲಿ ಮಾರೇಂಗೆ ಅಬ್ಕಿ ಬಾರ್' ಅದರಲ್ಲೊಂದು.

ಮೂರು ವರ್ಷ ಪೂರೈಸಿರುವ ಕೇಂದ್ರದ ನರೇಂದ್ರ ಮೋದಿ ಸರಕಾರಕ್ಕೆ ಪ್ರಮುಖ ವಿಪಕ್ಷ ಕಾಂಗ್ರೆಸ್ ತನ್ನ @INCIndia ಅಕೌಂಟ್ ನಿಂದ ಟ್ವೀಟ್ ಪ್ರಹಾರ ನಡೆಸುತ್ತಿದೆ.

ಮಧ್ಯಪ್ರದೇಶದಲ್ಲಿ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಬಿಜೆಪಿ ಸರಕಾರ ರೈತರ ಮೇಲೆ ದಬ್ಬಾಳಿಕೆ ನಡೆಸುತ್ತಿದೆ, ಬಿಜೆಪಿ ಅಧಿಕಾರದಲ್ಲಿರುವ ಎಲ್ಲಾ ರಾಜ್ಯಗಳಲ್ಲಿ ಇದೇ ಕಥೆ ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ಚಾಟಿ ಬೀಸುತ್ತಿದೆ. [ತಡರಾತ್ರಿ ಉಸ್ತುವಾರಿ ಭೇಟಿ ಮಾಡಿದ ಸಿದ್ದು]

ನೊಂದ ರೈತರ ಕುಟುಂಬವನ್ನು ನೋಡಲು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ಯಾವ ಮುಖಂಡರಿಗೂ ಅನುಮತಿ ನೀಡದೇ ಬಿಜೆಪಿ ಸರಕಾರ ಸರ್ವಾಧಿಕಾರಿ ಧೋರಣೆ ತಾಳುತ್ತಿದೆ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸುತ್ತಿದೆ.

'ಅಬ್ ಕೀ ಬಾರ್ ಮೋದಿ ಸರ್ಕಾರ್' ಎನ್ನುವ ಬಿಜೆಪಿಯ ಹಿಂದಿನ ಘೋಷಣೆಗೂ ಕಾಂಗ್ರೆಸ್ ಅಣಕವಾಡಿದೆ. ಮೂರು ವರ್ಷದಲ್ಲಿ ಮೋದಿ, ಭಾಷಣ ಮಾಡಿ ಮೈಲೇಜ್ ತೆಗೆದುಕೊಂಡಿದ್ದನ್ನು ಬಿಟ್ಟರೆ ಇನ್ನೇನನ್ನೂ ಸಾಧಿಸಲಿಲ್ಲ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.

ಹೊಸ ಉದ್ಯೋಗ ಸೃಷ್ಟಿಸುತ್ತೇವೆಂದು ಭರವಸೆ ನೀಡಿದ್ದ ಮೋದಿ ಸರಕಾರ, ಇರುವ ಕೆಲಸಕ್ಕೂ ಸಂಚಕಾರ ತರುತ್ತಿದೆ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ. ಕೆಲವೊಂದು ಟ್ವೀಟ್ ಸ್ಯಾಂಪಲ್ ಗಳು, ಮುಂದೆ ಓದಿ..

ನಿಮ್ಮ ಹಿಂದಿನ ಪೋಸ್ಟರ್ ಕ್ಯಾಂಪೇನ್ ಚೇಂಜ್ ಮಾಡಿದ್ದೇವೆ

ಚಿಂತೆ ಮಾಡಬೇಡಿ ಮೋದಿ ಸರ್.. ನಿಮ್ಮ ಹಿಂದಿನ ಕ್ಯಾಂಪೇನ್ ಪೋಸ್ಟರ್ ಅನ್ನು ನಾವು ' ಗೋಲಿ ಮಾರೇಂಗೆ ಅಬ್ಕಿ ಬಾರ್' ಎಂದು ಬದಲಾಯಿಸಿದ್ದೇವೆ ಎನ್ನುವ ಟ್ವೀಟ್.

ರೈತರ ಮೇಲೆ ಗುಂಡು ಹಾರಿಸುತ್ತೀರಾ?

ರೈತರು ಉತ್ತಮ ಬೆಲೆ, ಸಾಲಮನ್ನಾ ಕೇಳಿದರೆ ಮೋದಿ ಸರಕಾರ ಗುಂಡು ಹಾರಿಸುತ್ತೆ.

ಶಿವರಾಜ್ ಸಿಂಗ್ ಅವರನ್ನು ಶವ ಚೌಹಾಣ್ ಎಂದು ಲೇವಡಿ

ಮಧ್ಯಪ್ರದೇಶದ ಸಿಎಂ ಶಿವರಾಜ್ ಸಿಂಗ್ ಅವರನ್ನು 'ಶವ' ಚೌಹಾಣ್ ಎಂದು ಲೇವಡಿ ಮಾಡಿರುವ ಕಾಂಗ್ರೆಸ್, ಉತ್ತಮ ಬೆಲೆಗಾಗಿ ಹೋರಾಟ ಮಾಡುತ್ತಿದ್ದ ರೈತ ಇಹಲೊಕವನ್ನೇ ತ್ಯಜಿಸುವಂತಾಯಿತು ಎಂದು ಟ್ವೀಟ್ ಮಾಡಿದೆ.

ಅಚ್ಚೇದಿನ್ ಬಂದಿಲ್ಲ, ದುಡ್ಡೂ ಬಂದಿಲ್ಲ

ಅಚ್ಚೇ ದಿನ ಬಂದಿಲ್ಲ, ಹದಿನೈದು ಲಕ್ಷವೂ ಬಂದಿಲ್ಲ, ರೈತರಿಗೆ ಗುಂಡೇಟು ಬೀಳುತ್ತಿದೆ ಎನ್ನುವ ಟ್ವೀಟ್

ದಲಿತರನ್ನು ಬಿಜೆಪಿ ಕಡೆಗಣಿಸುತ್ತಿದೆ

ದಲಿತರಿಗೆ ಬಿಜೆಪಿ ಮೋಸ ಮಾಡುತ್ತಿದೆ. ದಲಿತರ ಮೇಲಿನ ದೌರ್ಜನ್ಯ ಬಿಜೆಪಿ ರಾಜ್ಯಗಳಲ್ಲಿ ಹೆಚ್ಚು ಎನ್ನುವ ಅಂಕಿಅಂಶದ ಮೂಲಕ ಕಾಂಗ್ರೆಸ್ ಟ್ವೀಟ್.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+