ವಿಪಕ್ಷಗಳ ಒಗ್ಗಟ್ಟಿನಿಂದ ಬಿಜೆಪಿಗೆ ಆತಂಕ, ಹೀಗಾಗಿ ನಾಳೆ ಸಭೆ ಕರೆದಿದೆ ಎಂದ ಮಲ್ಲಿಕಾರ್ಜುನ ಖರ್ಗೆ

ನವದೆಹಲಿ, ಜುಲೈ. 17: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ಪ್ರತಿಪಕ್ಷಗಳನ್ನು ಎದುರಿಸಲು ನಾನೊಬ್ಬನೇ ಸಾಕು ಎಂದು ಪ್ರಧಾನಿ ಮೋದಿ ಹೇಳಿದ್ದರು, ಆದರೆ ಈಗ 30 ಪಕ್ಷಗಳನ್ನು ಒಟ್ಟಿಗೆ ಸೇರಿಸುವ ಅಗತ್ಯ ಏಕೆ ಬಂತು..? ಎಂದು ಸೋಮವಾರ ವ್ಯಂಗ್ಯವಾಡಿದ್ದಾರೆ.

ಮಂಗಳವಾರ ನಡೆಯಲಿರುವ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್‌ಡಿಎ) ಸಭೆಯನ್ನು ಉಲ್ಲೇಖಿಸಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಪ್ರತಿಪಕ್ಷಗಳು ಒಗ್ಗೂಡುತ್ತಿರುವುದನ್ನು ಕಂಡು ಬಿಜೆಪಿ ಆತಂಕಕ್ಕೆ ಒಳಗಾಗಿದೆ ಮತ್ತು ಹೀಗಾಗಿ ಈಗ ಸಂಖ್ಯಾಬಲವನ್ನು ತೋರಿಸಲು ಈಗಾಗಲೇ ಒಡೆದಿರುವ ಪಕ್ಷಗಳನ್ನು ಒಟ್ಟಿಗೆ ಸೇರಿಸುತ್ತಿದೆ ಎಂದಿದ್ದಾರೆ.

Bengaluru opposition meet

ಸುದ್ದಿಗಾರರೊಂದಿಗೆ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಸಂಸತ್ತಿನಲ್ಲಿಯೂ ವಿರೋಧ ಪಕ್ಷಗಳು ಸುದೀರ್ಘ ಸಮಯದಿಂದ ಸಭೆ ನಡೆಸಿ ಸಮನ್ವಯ ಸಾಧಿಸುತ್ತಿವೆ. ಆದರೆ ಎನ್‌ಡಿಎಯ 30 ಪಕ್ಷಗಳ ಸಭೆಯ ಬಗ್ಗೆ ನಾನು ಈ ಮೊದಲು ಕೇಳಿಲ್ಲ ಎಂದಿದ್ದಾರೆ.

ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದ ಮಲ್ಲಿಕಾರ್ಜುನ ಖರ್ಗೆ, "ಪ್ರಧಾನಿ ಅವರು ರಾಜ್ಯಸಭೆಯಲ್ಲಿ ಮಾತನಾಡುವಾಗ 'ಮೈನೆ ಅಕೇಲಾ ಕಾಫಿ ಹೂಂ ಸಾರೆ ಆಪ್ ಕೇ ಲಿಯೇ' ಎಂದು ಹೇಳಿದ್ದರು. ಇದಾದ ನಂತರ ಅವರು ಈಗ 30 ಪಕ್ಷಗಳನ್ನು ಏಕೆ ಒಟ್ಟುಗೂಡಿಸಿದ್ದಾರೆ..? ಈ 30 ಪಕ್ಷಗಳು ಯಾರು, ಅವುಗಳ ಹೆಸರುಗಳು ಯಾವುವು..? ಅವರೆಲ್ಲರೂ ಚುನಾವಣಾ ಆಯೋಗದಲ್ಲಿ ನೋಂದಾಯಿಸಲಾಗಿದೆಯೇ..?" ಎಂದು ಪ್ರಶ್ನಿಸಿದ್ದಾರೆ.

ಫೆಬ್ರವರಿಯಲ್ಲಿ ರಾಜ್ಯಸಭೆಯಲ್ಲಿ ಪ್ರಧಾನ ಮಂತ್ರಿಯವರ ಹೇಳಿಕೆಗಳನ್ನು ಮಲ್ಲಿಕಾರ್ಜುನ ಖರ್ಗೆ ಉಲ್ಲೇಖಿಸಿದ್ದಾರೆ. "ದೇಶ್ ದೇಖ್ ರಹಾ ಹೈ, ಏಕ್ ಅಕೇಲಾ ಕಿತ್ನೋ ಕೋ ಭಾರಿ ಪಡ್ ರಹಾ ಹೈ (ಒಬ್ಬ ವ್ಯಕ್ತಿ ಹೇಗೆ ಅನೇಕರನ್ನು ಮೀರಿಸಿದ್ದಾರೆ ಎಂಬುದನ್ನು ದೇಶವು ಗಮನಿಸುತ್ತಿದೆ)" ಎಂದು ಪ್ರಧಾನಿ ಹೇಳಿದ್ದರು.

"ನಾವು ಎಲ್ಲಾ ಪಕ್ಷಗಳನ್ನು ಒಟ್ಟು ಮಾಡುತ್ತಿರುವುದನ್ನು ನೋಡಿ ಬಿಜೆಪಿಯವರು ಗಲಿಬಿಲಿಗೊಂಡಿದ್ದಾರೆ ಮತ್ತು ಈಗ ಒಡೆದ ಪಕ್ಷಗಳನ್ನು ಒಟ್ಟುಗೂಡಿಸಿ ಸಂಖ್ಯೆ ತೋರಿಸಲು ಪ್ರಯತ್ನಿಸುತ್ತಿದ್ದಾರೆ" ಎಂದು ಹೇಳಿದ್ದಾರೆ. ಸುಗ್ರೀವಾಜ್ಞೆ ವಿಚಾರದಲ್ಲಿ ಆಮ್ ಆದ್ಮಿ ಪಕ್ಷವನ್ನು ಬೆಂಬಲಿಸಲು ಕಾಂಗ್ರೆಸ್ ತನ್ನ ದೆಹಲಿ ಮತ್ತು ಪಂಜಾಬ್ ಘಟಕವನ್ನು ನಿರ್ಲಕ್ಷಿಸಿದೆ ಎಂಬ ಬಿಜೆಪಿಯ ಹೇಳಿಕೆಯ ಬಗ್ಗೆ ಮಾತಾಡಿರುವ ಅವರು, ಇದು ಒಬ್ಬ ವ್ಯಕ್ತಿಯ ಬಗ್ಗೆ ಅಲ್ಲ, ಆದರೆ ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ರಕ್ಷಿಸುವ ನಿರ್ಧಾರ ಎಂದು ಹೇಳಿದ್ದಾರೆ.

Bengaluru opposition meet

ತಮಿಳುನಾಡು ಉನ್ನತ ಶಿಕ್ಷಣ ಸಚಿವ ಮತ್ತು ಡಿಎಂಕೆ ನಾಯಕ ಕೆ ಪೊನ್ಮುಡಿ ಅವರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯ ಶೋಧ ನಡೆಸಿದ್ದು, ಇದು ವಿರೋಧ ಪಕ್ಷಗಳ ಒಗ್ಗಟ್ಟನ್ನು ಮುರಿಯುವ ತಂತ್ರ. ಈ ದಾಳಿಗಳು ತಮಿಳುನಾಡಿನಲ್ಲಿ ಡಿಎಂಕೆ - ಕಾಂಗ್ರೆಸ್ ಮೈತ್ರಿಕೂಟವನ್ನು ಗುರಿಯಾಗಿಸಿಕೊಂಡಿವೆ. ಇದರಿಂದ ಡಿಎಂಕೆ ಅಥವಾ ಕಾಂಗ್ರೆಸ್ ಹೆದರುವುದಿಲ್ಲ. ಪ್ರಜಾಸತ್ತಾತ್ಮಕವಾಗಿ ಚುನಾಯಿತ ಸರ್ಕಾರಗಳನ್ನು ಅಸ್ಥಿರಗೊಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+