ವಿದೇಶಿ ಮಾಧ್ಯಮಕ್ಕೆ 'Operation Sindoor' ಹೆಸರಿನ ವಿವರಣೆ ಕೊಟ್ಟ ಶಶಿ ತರೂರ್
Operation Sindoor: ಭಾರತ ಪಾಕಿಸ್ತಾನದ ಮಧ್ಯೆ ಯುದ್ಧ ಸನ್ನಿವೇಶಗಳು ಮುಂದುವರಿದಿವೆ. ಯುದ್ಧಕ್ಕೆ ಭಾರತವು 'ಆಪರೇಷನ್ ಸಿಂದೂರ' ಎಂದು ಹೆಸರಿಟ್ಟಿದೆ. ಈ ಹೆಸರಿನ ಶಕ್ತಿಯ ಬಗ್ಗೆ ವಿದೇಶಿ ಮಾಧ್ಯಮಗಳಿಗೆ ಕಾಂಗ್ರಸ್ ಸಂಸದ ಶಶಿ ತರೂರ್ ವಿವರಿಸಿದ್ದಾರೆ. "ಆಪರೇಷನ್ ಸಿಂಧೂರ" ಎಂಬುದು ನವವಿವಾಹಿತೆ ವಿಧವೆಯಾದ ವಧುವಿನ ದುಃಖ ತೋರ್ಪಡಿಸುವ ಪ್ರಬಲ ಹೆಸರಾಗಿದೆ. ಇದರ ಸಂಕೇತವೇ ರಕ್ತಪಾತ, ನಷ್ಟವನ್ನು ಶತ್ರುಗಳಿಗೆ ಜ್ಞಾಪಿಸುವಾಗಿದೆ ಎಂದು ಅವರು ವಿವರಿಸಿದ್ದಾರೆ.
ಸೌದಿ ಅರೇಬಿಯಾದ ಸುದ್ದಿ ವಾಹಿನಿ ಅಲ್ ಅರೇಬಿಯಾ ಜೊತೆಗೆ ಮಾತನಾಡಿದ ಅವರಿಗೆ ಭಾರತದ 'ಆಪರೇಷನ್ ಸಿಂಧೂರ'ವು ಕಾಶ್ಮೀರ ಪಹಲ್ಗಾಮ್ ನಲ್ಲಿ ನಡೆಸಿದ ದಾಳಿಯ ಉಗ್ರರು ನೆತ್ತರಿಗೂ ಈ ಶಬ್ಧವು ಹೆಚ್ಚು ಭಿನ್ನವಾಗಿಲ್ಲ. ರಕ್ತ ಬಣ್ಣವು, ಸಿಂದೂರು ಹೆಚ್ಚೇನು ಭಿನ್ನವಾಗಿಲ್ಲ. ಭಾರತದ ಪಹಲ್ಗಾಮ್ ದಾಳಿ ಪ್ರತಿದಾಳಿ, ನೋವಿಗೆ ಸೇಡು ತೀರಿಸಿಕೊಳ್ಳುತ್ತಿದೆ. ಉಗ್ರರ ರಕ್ತ ಹರಿಯುವುದನ್ನು ಈ ಹೆಸರು ಸೂಚಿಸುತ್ತದೆ ಎಂದು ಅವರು ಹೇಳಿದರು.

ವಿವಾಹಿತ ಮಹಿಳೆಯರು ತಮ್ಮ ಮುಂದಲೆ ಹಚ್ಚಿಕೊಳ್ಳುವ ಕುಂಕುಮ ಚಿಹ್ನೆಯೇ ಸಿಂದೂರವಾಗಿದೆ. ಇತ್ತೀಚೆಗೆ ಉಗ್ರರು ನಡೆಸಿದ ಪಹಲ್ಗಾಮ್ ದಾಳಿಯಲ್ಲಿ ಆಗಷ್ಟೇ ವಿವಾಹವಾಗಿ ವಧು ತನ್ನ ಪತಿ ಜೊತೆಗೆ ಮಧುಚಂದ್ರಕ್ಕೆ ಬಂದಾಗ ಪತಿ ಕಳೆದುಕೊಂಡು ವಿಧವೆಯಾಗಿದ್ದಾರೆ. ಆ ವಧು ಸೇರಿದಂತೆ ಕೆಲವು ಮಹಿಳೆಯರ ಸಿಂಧೂರವನ್ನು ಪಾಕಿಸ್ತಾಣ ಕಸಿದುಕೊಂಡಿದೆ. ಆ ವಧು ಪತಿ ಇಲ್ಲದೇ ಮಂಡಿಯೂರಿ ದುಃಖಿತಳಾಗಿದ್ದಾಳೆ.
ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಉಗ್ರರು ಭಾರತೀಯ ಹೆಣ್ಣಿನ ಹಣೆಯ ಸಿಂಧೂರ ಅಳಿಸಿದ್ದರು. ಅದರ ಪ್ರತಿಯಾಗಿ ಭಾರತ ಸೇನೆ ಉಗ್ರರ ರಕ್ತವನ್ನು ಹರಿಸುತ್ತಿದೆ ಎಂದು ಅವರು ಬಿಡಿಸಿ ಹೇಳಿದ್ದಾರೆ.
ಭಾರತೀಯ ನೌಕಾಪಡೆಯ ಅಧಿಕಾರಿ ಲೆಫ್ಟಿನೆಂಟ್ ವಿನಯ್ ನರ್ವಾಲ್ ಅವರನ್ನು ಕಳೆದುಕೊಂಡ ಪತ್ನಿ ಹಿಮಾಂಶಿ ನರ್ವಾಲ್ ಅವರ ಹೃದಯವಿದ್ರಾವಕ ಚಿತ್ರ ಭಾರತೀಯರಿಗೆ ಇನ್ನೂವರೆಗೂ ಕಾಡುತ್ತಿದೆ. ಇಲ್ಲಿನ ಉಗ್ರರ ದಾಳಿಯಲ್ಲಿ ಬರೋಬ್ಬರಿ 26 ಮಂದಿಯನ್ನು ಭಾರತ ಕಳೆದುಕೊಂಡಿದೆ. ಅದರ ಪ್ರತಿಕಾರವೇ 'ಆಪರೇಷನ್ ಸಿಂಧೂರ' ಕಾರ್ಯಾಚರಣೆ. ಇದು ಕೇವಲ ಹೆಸರಲ್ಲ ಭಾರತೀಯರ ಭಾವನಾತ್ಮಕ ಪದ. ಉಗ್ರರ ದಾಳಿಗೆ ನೋವುಂಡ ಭಾರತೀಯರ ಸೇಡಿನ ಪ್ರತಿಕ, ಮೃತರಿಗೆ ದೊರಕಿಸಿ ಕೊಟ್ಟ ನ್ಯಾಯ ಎಂದು ಶಶಿ ತರೂರ್ ತಿಳಿಸಿದ್ದಾರೆ.
ಇತ್ತೀಚೆಗಷ್ಟೆ ಪಾಕಿಸ್ತಾನ ಮೇಲೆ ಭಾರತ ನಡೆಸಿದ ದಾಳಿ, ಆಪರೇಷನ್ ಸಿಂದೂರವು ಅದ್ಭುತ ಎಂದು ಅವರು ಹೆಸರಿಸಿದ್ದರು. ಪಹಲ್ಗಾಮ್ ಅಟ್ಯಾಕ್ ಆದ ವೇಳೆ ಅವರು ಬಹಿರಂಗವಾಗಿಯೇ ಪಾಕಿಸ್ತಾನ ನಡೆ ಖಂಡಿಸಿದ್ದರು. ದೇಶದ ಪರವಾಗಿ ಮಾತನಾಡಿದ್ದರು. ಅಂತಾರರಾಷ್ಟ್ರೀಯ ಸುದ್ದಿ ಸಂಸ್ಥೆಗಳಿಗೆ ತಮ್ಮ ಸ್ಪಷ್ಟ ನಿಲುವು ತಿಳಿಸಿದ್ದರು. ದಾಳಿ ಬಗ್ಗೆ ಒಪ್ಪದ ಪಾಕಿಸ್ತಾನವನ್ನು "ನಿರಾಕರಣೆಯ ನಿಪುಣ" ಎಂದು ಜರಿದಿದ್ದರು.












Click it and Unblock the Notifications