G20 Summit: ‘ಭಾರತ ಮಂಟಪ’ಕ್ಕೆ ಮಳೆ ನೀರು ನುಗ್ಗಿದ್ದು ನಿಜವಾ?
ಭಾರತದ ನೇತೃತ್ವದಲ್ಲಿ ನಡೆದ ಮೊದಲ ಜಿ20 ಶೃಂಗಸಭೆ ಮುಕ್ತಾಯವಾಗಿದೆ. ಆದ್ರೆ ಇದೇ ಸಂದರ್ಭದಲ್ಲಿ ಕೆಲ ವಿಡಿಯೋ ಹಾಗೂ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಜಿ20 ಶೃಂಗಸಭೆಗಾಗಿ ನಿರ್ಮಿಸಿದ್ದ 'ಭಾರತ ಮಂಟಪ'ಕ್ಕೆ ಮಳೆ ನೀರು ನುಗ್ಗಿದೆ ಅನ್ನೋ ಗಂಭೀರ ಆರೋಪ ಈಗ ಕೇಳಿಬಂದಿದೆ. ಹಾಗಾದರೆ ಕೋಟಿ ಕೋಟಿ ಹಣ ಖರ್ಚು ಮಾಡಿ ಕಟ್ಟಿದ್ದ ಕಟ್ಟಡದ ಬಳಿ ಮಳೆ ನೀರು ನುಗ್ಗಿದ್ದು ನಿಜವಾ? ಬನ್ನಿ ತಿಳಿಯೋಣ.
ಅತ್ತ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಜಿ20 ಶೃಂಗಸಭೆ ನಡೆಯುತ್ತಿದ್ರೆ, ಮತ್ತೊಂದು ಕಡೆ ದೆಹಲಿಯಲ್ಲಿ ಭಾರಿ ಮಳೆ ಸುರಿಯುತ್ತಿತ್ತು. ಹೀಗಾಗಿ ದೆಹಲಿಯ ಹಲವು ಪ್ರದೇಶಗಳು ಮಳೆ ನೀರಿನಲ್ಲಿ ತೇಲಾಡಿವೆ. ಆದರೆ ಇದನ್ನೆಲ್ಲಾ ಬಿಡಿ ಜಗತ್ತಿನ ಶಕ್ತಿಶಾಲಿ ರಾಷ್ಟ್ರಗಳ ನಾಯಕರ ಜೊತೆ ಸಭೆ ನಡೆಸಲು ನಿರ್ಮಿಸಿದ್ದ 'ಭಾರತ ಮಂಟಪ'ಕ್ಕೆ ಕೂಡ ಮಳೆ ನೀರು ನುಗ್ಗಿರುವ ಆರೋಪ ಕೇಳಿಬಂದಿದೆ. ಅಲ್ಲದೆ ಅದಕ್ಕೆ ಪೂರಕವಾಗಿ ವಿಡಿಯೋ ಕೂಡ ಪೋಸ್ಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ ಕಾಂಗ್ರೆಸ್ ನಾಯಕರು.

ಪೊಳ್ಳು ಅಭಿವೃದ್ಧಿ ಬಯಲಾಗಿದೆ!
ಅಂದಹಾಗೆ ಈ ಕುರಿತು ವಿಡಿಯೋ ಹಂಚಿಕೊಂಡು ಆಕ್ರೋಶ ಹೊರಹಾಕಿರುವ ಕಾಂಗ್ರೆಸ್‌ನ ಸಂಸದ & ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ಪೊಳ್ಳು ಅಭಿವೃದ್ಧಿ ಬಯಲಾಗಿದೆ ಎಂದು ಆರೋಪಿಸಿದ್ದಾರೆ. ಅಲ್ಲದೆ 2,700 ಕೋಟಿ ಹೂಡಿಕೆ ಮಾಡಿ ನಿರ್ಮಾಣ ಮಾಡಿದ್ದ ವೇದಿಕೆ ಕೇವಲ ಒಂದೇ ಮಳೆಗೆ ಜಲಾವೃತವಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ. ರಾಹುಲ್ ಗಾಂಧಿ ಮಾತ್ರವಲ್ಲದೆ ಹಲವು ಕಾಂಗ್ರೆಸ್ ನಾಯಕರು ಹಾಗೂ ಮುಖಂಡರು ಈ ವಿಡಿಯೋ ಶೇರ್ ಆಕ್ರೋಶ ಹೊರಹಾಕುತ್ತಿದ್ದಾರೆ.
खोखले विकास की पोल खुल गई
— Congress (@INCIndia) September 10, 2023
G20 के लिए भारत मंडपम तैयार किया गया। 2,700 करोड़ रुपए लगा दिए गए।
एक बारिश में पानी फिर गया... pic.twitter.com/jBaEZcOiv2
ಒಟ್ನಲ್ಲಿ ಜಿ20 ಶೃಂಗಸಭೆ ವಿಚಾರದಲ್ಲಿ ಮತ್ತೊಂದು ಫೈಟ್ ಶುರುವಾಗಿದೆ. ಅದರಲ್ಲೂ ಈ ಬಾರಿ ಮಳೆಗೆ 'ಭಾರತ ಮಂಟಪ' ತತ್ತರಿಸಿದೆ ಅನ್ನೋ ಆರೋಪವನ್ನು ವಿರೋಧ ಪಕ್ಷಗಳ ನಾಯಕರು ಮಾಡಿದ್ದಾರೆ. ಆದ್ರೆ ಈ ಬಗ್ಗೆ ಇನ್ನು ಬಿಜೆಪಿ ನಾಯಕರು ಪ್ರತಿಕ್ರಿಯೆ ನೀಡಿಲ್ಲ. ಹೀಗಾಗಿ 'ಭಾರತ ಮಂಟಪ'ಕ್ಕೆ ಮಳೆ ನೀರು ನುಗ್ಗಿದೆ ಎಂಬ ಆರೋಪಕ್ಕೆ ಬಿಜೆಪಿ ಯಾವ ರೀತಿ ಪ್ರತಿಕ್ರಿಯೆ ನೀಡಲಿದೆ ಎಂಬುದನ್ನ ಕಾದು ನೋಡಬೇಕಿದೆ.
ಮಹತ್ವದ ಜಿ20 ಶೃಂಗಸಭೆ ಮುಕ್ತಾಯ
ಭಾರತದ ಶಕ್ತಿಯನ್ನ ಇಡೀ ಜಗತ್ತಿಗೆ ತೋರಿಸಿದ ಮತ್ತು ವಿಶ್ವ ನಾಯಕರ ಗಮನ ಸೆಳೆದಿದ್ದ ಜಿ20 ಶೃಂಗಸಭೆ ಮುಕ್ತಾಯವಾಗಿದೆ. ಶೃಂಗಸಭೆ ಜೊತೆ ವಿವಿಧ ದೇಶಗಳೊಟ್ಟಿಗೆ ದ್ವಿಪಕ್ಷೀಯ ಮಾತುಕತೆಯು ನಡೆದಿತ್ತು. ಭಾರತ ನೇತೃತ್ವದಲ್ಲಿ ನಡೆದ ಶೃಂಗಸಭೆ ಮುಕ್ತಾಯವಾಗಿದ್ರೂ, ಭಾರತದ ಬಳಿಯೇ ನವೆಂಬರ್ ತನಕವೂ ಜಿ20 ಶೃಂಗಸಭೆಯ ಅಧ್ಯಕ್ಷತೆ ಇರಲಿದೆ. ಹೀಗಾಗಿ ನವೆಂಬರ್‌ನಲ್ಲಿ ಜಿ20 ಒಕ್ಕೂಟದ ದೇಶಗಳ ಜೊತೆಗೆ ವರ್ಚ್ಯುವಲ್ ಸಭೆ ನಡೆಯಲಿದೆ ಎಂದು ಪ್ರಧಾನಿ ಮೋದಿ ಅವರು ಈಗಾಗಲೇ ತಿಳಿಸಿದ್ದಾರೆ.
ಭಾರತಕ್ಕೆ ಸಿಕ್ಕಿದೆ ಭರ್ಜರಿ ಯಶಸ್ಸು!
ಜಿ20 ಶೃಂಗಸಭೆ ನೇತೃತ್ವ ವಹಿಸಿದ್ದ ಭಾರತಕ್ಕೆ ದೊಡ್ಡ ಗೆಲುವು ಸಿಕ್ಕಂತಾಗಿದೆ. ಅದರಲ್ಲೂ ಅಮೆರಿಕ ಜತೆಗಿನ ದ್ವಿಪಕ್ಷೀಯ ಮಾತುಕತೆ ಭಾರಿ ಸಕ್ಸಸ್ ಕೊಟ್ಟಿದೆ. ಸೆಪ್ಟೆಂಬರ್ 8ರಂದು ಪ್ರಧಾನಿ ಮೋದಿ ಮತ್ತು ಬೈಡನ್ ಅವರು ದ್ವಿಪಕ್ಷೀಯ ಮಾತುಕತೆ ನಡೆಸಿದ್ದರು. ಅಮೆರಿಕ ಅಧ್ಯಕ್ಷ ಬೈಡನ್ ನವದೆಹಲಿಗೆ ಬಂದಿಳಿದ ತಕ್ಷಣ ನೇರವಾಗಿ ಪಿಎಂ ಮೋದಿ ಅವರ ನಿವಾಸಕ್ಕೆ ತೆರಳಿದ್ದರು. ಆ ನಂತರ ಉಭಯ ನಾಯಕರು ಸುಮಾರು 50 ನಿಮಿಷ ಚರ್ಚೆ ನಡೆಸಿದ್ದರು.
ಈ ವೇಳೆ ರಕ್ಷಣಾ ಪಾಲುದಾರಿಕೆ ಮತ್ತಷ್ಟು ಸದೃಢಗೊಳಿಸಲು ಪ್ರಧಾನಿ ಮೋದಿ ಮತ್ತು ಜೋ ಒಪ್ಪಿಗೆ ನೀಡಿದ್ದರು. ಇದರ ಜೊತೆಗೆ ಡ್ರೋನ್ ಸೇರಿ ಜೆಟ್ ಎಂಜಿನ್‌ಗಳ ನಿರ್ಮಾಣ ಯೋಜನೆ ಜಂಟಿಯಾಗಿ ಅಭಿವೃದ್ಧಿಪಡಿಸುವ ಕ್ರಮಕ್ಕೆ ಕೂಡ ಪ್ರಧಾನಿ ಮೋದಿ & ಬೈಡನ್ ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಹಾಗೇ ಭಾರತ ಮತ್ತೊಂದು ಮೈಲಿಗಲ್ಲನ್ನ ಸಾಧಿಸುವಲ್ಲೂ ಯಶಸ್ವಿಯಾಗಿತ್ತು. ಜಿ20 ಶೃಂಗಸಭೆಯಲ್ಲಿ ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್ ಚರ್ಚೆ ಸಕ್ಸಸ್ ಆಗಿತ್ತು. ಹೀಗೆ ಭಾರತ ಜಾಗತಿಕವಾಗಿ ಬಲಾಢ್ಯವಾಗಿ ಬೆಳೆಯುತ್ತಿರುವ ಮುನ್ಸೂಚನೆ ಕೂಡ ಸಿಕ್ಕಂತಾಗಿತ್ತು.

ಆಫ್ರಿಕಾ ಒಕ್ಕೂಟಕ್ಕೆ ದೊಡ್ಡ ಗೆಲುವು
ಭಾರತದ ಒತ್ತಾಸೆ & ಭಾರತ ಸರ್ಕಾರದ ಅದ್ಭುತ ನಡೆಯಿಂದಾಗಿ ಆಫ್ರಿಕಾ ಒಕ್ಕೂಟ ರಾಷ್ಟ್ರಗಳಿಗೆ ಜಿ20 ಶೃಂಗಸಭೆ ಖಾಯಂ ಸದಸ್ಯತ್ವ ಸಿಕ್ಕಿದೆ. ಹೀಗೆ ಸದಸ್ಯ ಸ್ಥಾನ ಕೊಡಿಸಲು ಭಾರತ ಸಾಕಷ್ಟು ಕಷ್ಟಪಟ್ಟಿತ್ತು ಎಂಬುದು ಇಲ್ಲಿ ಗಮನಾರ್ಹ. ಆಫ್ರಿಕಾ ಒಕ್ಕೂಟವನ್ನ ಜಿ20ಗೆ ಸೇರಿಸುವ ಕುರಿತು ಇತರ ಸದಸ್ಯ ರಾಷ್ಟ್ರಗಳ ಮನವೊಲಿಸಲು ಭಾರತ ಸಾಕಷ್ಟು ಪ್ರಯತ್ನಪಟ್ಟಿದೆ. ಅಲ್ಲದೆ ಖುದ್ದು ಭಾರತ ಜಿ20 ಸದಸ್ಯ ರಾಷ್ಟ್ರಗಳ ನಾಯಕರ ಜತೆಗೆ ಮಾತನಾಡಿತ್ತು ಎನ್ನಲಾಗಿತ್ತು. ಇಷ್ಟೆಲ್ಲಾ ಬೆಳವಣಿಗೆ ನಡುವೆ ಆಫ್ರಿಕಾ ಒಕ್ಕೂಟಕ್ಕೂ ಜಿ20 ಶೃಂಗಸಭೆಯಲ್ಲಿ ಸ್ಥಾನ ಸಿಕ್ಕಂತಾಗಿದೆ.
ಒಟ್ನಲ್ಲಿ ಹೀಗೆ ಒಂದ್ಕಡೆ ಜಿ20 ಶೃಂಗಸಭೆ ಮುಕ್ತಾಯದ ಬೆನ್ನಲ್ಲೇ ಸಭೆಯ ಯಶಸ್ಸಿನ ಬಗ್ಗೆ ಮಾತುಕತೆ ನಡೆಯುತ್ತಿದೆ. ಹಾಗೆ ಇನ್ನೊಂದು ಕಡೆ 'ಭಾರತ ಮಂಟಪ'ಕ್ಕೆ ಮಳೆಯ ನೀರು ನುಗ್ಗಿದೆ ಎಂಬ ಆರೋಪ ಕೂಡ ಕೇಳಿಬಂದಿದೆ. ಹೀಗಾಗಿ ಈ ಆರೋಪ & ಪ್ರತ್ಯಾರೋಪಕ್ಕೆ ಸೂಕ್ತ ಉತ್ತರ ಹೊರಬೀಳಲಿ ಎಂಬ ಆಗ್ರಹ ಕೂಡ ಕೇಳಿಬಂದಿದೆ.
-
ಬೆಂಗಳೂರಿನ ಪಾನಿಪುರಿ ವ್ಯಾಪಾರಿಯ ತಿಂಗಳ ಸಂಪಾದನೆ ಫುಲ್ Viral: ದಿನಕ್ಕೆ 3 ಸಾವಿರ ರೂ. ಗಳಿಕೆ -
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Viral Videlo: 2 ಗಂಟೆ ಸ್ಟ್ಯಾಚ್ಯೂ ರೀತಿ ನಿಂತ ಯುವಕ ವಿಡಿಯೋ ವೈರಲ್, ಭಾರತಕ್ಕೂ ಬಂತಾ ಅಮೆರಿಕದ ಜಾಂಬಿ ಡ್ರಗ್ಸ್ -
ಉದ್ಯೋಗ ಸಂದರ್ಶನ ಮಾಡಲು ಹೋದ CEOಗೆ ಬೆವರಿಳಿಸಿದ ಅಭ್ಯರ್ಥಿ, Viral ಆಯ್ತು ವಿಚಿತ್ರ ಕಥೆ












Click it and Unblock the Notifications