ಆರ್‌ಎಸ್‌ಎಸ್ ಕಾರ್ಯಕ್ರಮಕ್ಕೆ ಅತಿಥಿಯಾಗಿ ಕಾಂಗ್ರೆಸ್‌ನ ಹಿರಿಯ ಮುಖಂಡ!
ನವ ದೆಹಲಿ, ಮೇ 28: ಕಾಂಗ್ರೆಸ್‌ಗೂ ಆರ್‌ಎಸ್‌ಎಸ್‌ಗೂ ಎಣ್ಣೆ-ಸೀಗೆಕಾಯಿ. ರಾಹುಲ್ ಗಾಂಧಿ ಅವರಂತೂ ಹೊದಲ್ಲಿ ಬಂದಲ್ಲಿ ಬಿಜೆಪಿ ಜೊತೆಗೆ ಅದರ ಮಾತೃ ಸಂಸ್ಥೆ ಎಂದೇ ಕರೆಯಲಾಗುವ ಆರ್‌ಎಸ್‌ಎಸ್ ಅನ್ನು ಟೀಕಿಸದೇ ಇರುವುದಿಲ್ಲ. ಅಂತಹುದರಲ್ಲಿ ಕಾಂಗ್ರೆಸ್‌ನ ಹಿರಿಯ ಮುಖಂಡರೊಬ್ಬರು ಆರ್‌ಎಸ್‌ಎಸ್ ಕಾರ್ಯಕ್ರಮಕ್ಕೆ ಅತಿಥಿಯಾಗಿ ಹೋಗುತ್ತಿದ್ದಾರೆ.
ಹೌದು, ಕಾಂಗ್ರೆಸ್‌ನ ಹಿರಿಯ ನಾಯಕ, ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಆರ್‌ಎಸ್‌ಎಸ್‌ನ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸುತ್ತಿದ್ದಾರೆ. ಆರ್‌ಎಸ್‌ಎಸ್ ಕಾರ್ಯಕರ್ತರನ್ನು ಉದ್ದೇಶಿಸಿ ಭಾಷಣವನ್ನೂ ಮಾಡಲಿದ್ದಾರೆ.

ಜೂನ್ 7 ರಂದು ಆರ್ಎಸ್‌ಎಸ್‌ನ ಕೇಂದ್ರ ಸ್ಥಾನ ನಾಗ್ಪುರದಲ್ಲಿ ನಡೆಯಲಿರುವ ಮೂರನೇ ವರ್ಷದ 'ಸಂಘ ಶಿಕ್ಷ ವರ್ಗ' ಶಿಬಿರದಲ್ಲಿ ಅತಿಥಿಯಾಗಿ ಭಾಗವಹಿಸಲು ಪ್ರಣಬ್ ಮುಖರ್ಜಿ ಅವರು ಒಪ್ಪಿಕೊಂಡಿದ್ದಾರೆ.
ಈ ವಿಷಯವನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಖಿಲ ಭಾರತೀಯ ಪ್ರಚಾರ ಪ್ರಮುಖ್ ಅರುಣ್‌ಕುಮಾರ್ ಸ್ಪಷ್ಟಪಡಿಸಿದ್ದಾರೆ. ಸ್ವಯಂ ಸೇವಕರ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಪ್ರಣಬ್ ಮುಖರ್ಜಿ ಭಾಷಣ ಮಾಡಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.












Click it and Unblock the Notifications