ಸಂಸತ್ತಿನ ಪಿಎಸಿ ನೂತನ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ
ನವದೆಹಲಿ, ಮೇ 03 : ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರು ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ (ಪಿಎಸಿ) 21ನೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಈ ಹಿಂದೆ ಅಧ್ಯಕ್ಷರಾಗಿದ್ದ ಕೆ.ವಿ. ಥಾಮಸ್ ಅವರ ಅಧಿಕಾರಾವಧಿ ಏಪ್ರಿಲ್ 30ಕ್ಕೆ ಕೊನೆಗೊಂಡಿದ್ದರಿಂದ ಇವರ ಸ್ಥಾನಕ್ಕೆ ಕಲಬುರಗಿ ಸಂಸದ ಮಲ್ಲಿಕಾರ್ಜುನ ಖರ್ಗೆ ಅವರನ್ನು ನಿಯೋಜಿಸಲಾಗಿದೆ.[ಗಾಂಧಿ ದೇಶಕ್ಕಾಗಿ ಪ್ರಾಣ ಬಿಟ್ಟರು, ನಿಮ್ಮ ಮನೆಯಿಂದ ನಾಯಿ ಕೂಡ ತ್ಯಾಗ ಮಾಡಿಲ್ಲ]

ಈ ಪಿಎಸಿ ಹೊಸ ಸಮಿತಿಯಲ್ಲಿ ಇಬ್ಬರು ಮಾತ್ರ ಹೊಸಬರಾಗಿದ್ದು ಉಳಿದ ಸದಸ್ಯರೆಲ್ಲಾ ಅಧಿಕಾರದಲ್ಲಿ ಮುಂದುವರಿಯಲಿದ್ದಾರೆ.












Click it and Unblock the Notifications