ಕಾಂಗ್ರೆಸ್‌ನ 'ಕಬ್ಜ' ಹೊಸ ಲಕ್ಷಣವೇನಲ್ಲ. ಐತಿಹಾಸಿಕ ಮತ್ತು ಸಮಕಾಲೀನ ವಿಶ್ಲೇಷಣೆ
ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ವಿಜಯ ದೇಶದ ಇತರ ರಾಜ್ಯಗಳಲ್ಲಿ ಪಕ್ಷದ 'ಕಬ್ಜ'ಕ್ಕೆ ಸೂಚನೆಯಾಗಲಿದೆ ಎಂದು ಕೆಲವು ದಿನಗಳ ಹಿಂದೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು. ಈ ಹೇಳಿಕೆಯನ್ನು ಟೀಕಾಕಾರರು ಬೇರೆಯದೇ ರೀತಿ ಅರ್ಥೈಸಿದರು. ಕಾಂಗ್ರೆಸ್‌ನ ಈ 'ಕಬ್ಜ' ಲಕ್ಷಣ ಹೊಸತೇನಲ್ಲ ಪಕ್ಷದ ಅಧಿಕಾರದ ಅನುಸಂಧಾನ ಐತಿಹಾಸಿಕವಾಗಿಯೂ ನಡೆದುಕೊಂಡು ಬಂದಿದೆ.
ಕಾಂಗ್ರೆಸ್ ಪಕ್ಷದ ಐತಿಹಾಸಿಕ ಮತ್ತು ಸಮಕಾಲೀನ ಪರಿಸ್ಥಿತಿಯನ್ನು ವಿಶ್ಲೇಷಿಸುವುದಾದರೆ ಪಕ್ಷ ನಿರಂತರವಾಗಿ ಅಧಿಕಾರ ಪಡೆಯುವ ಮತ್ತು ಅದನ್ನು ಹಿಡಿತದಲ್ಲಿಟ್ಟುಕೊಳ್ಳುವ ಕಾರ್ಯತಂತ್ರವನ್ನು ಹಿಂದಿನಿಂದಲೂ ನಡೆಸಿಕೊಂಡು, ಬಂದಿದೆ.

'ಕಬ್ಜ' ಕಾರ್ಯತಂತ್ರ ಮತ್ತು ಐತಿಹಾಸಿಕ ದೃಷ್ಟಿಕೋನ
ಕಾಂಗ್ರೆಸ್ ಪಕ್ಷ ಆರಂಭದಲ್ಲಿ ಹೇಗಾದರೂ ಸರಿ ಅಧಿಕಾರವನ್ನು ಹಿಡಿಯಬೇಕು ಎಂಬ ಕಾರ್ಯತಂತ್ರವನ್ನು ಅಳವಡಿಕೆ ಮಾಡಿಕೊಂಡಿತ್ತು ಎಂದು ಆರೋಪಿಸಲಾಗುತ್ತದೆ. ಈ 'ಕಬ್ಜ' ತಂತ್ರ ಭಾರತದ ರಾಜಕೀಯ ಇತಿಹಾಸದಲ್ಲಿ ಹಲವಾರು ಕಸಿದುಕೊಳ್ಳುವ ಅಥವ ಇತರ ಬೆಳವಣಿಗೆಗೆ ಕಾರಣವಾಯಿತು.
1975ರಲ್ಲಿ ತುರ್ತು ಪರಿಸ್ಥಿತಿ ಹೇರಿಕೆಯಿಂದ ಪ್ರಜಾಪ್ರಭವುತ್ವದ ಮೌಲ್ಯಗಳನ್ನು ದುರ್ಬಲಗೊಳಿಸಲಾಯಿತು. ಕಾಂಗ್ರೆಸ್ ನೇತೃತ್ವದ ಸರ್ಕಾರಗಳ ಅಧಿಕಾರ ಕೇಂದ್ರೀಕರಣ ಪ್ರವೃತ್ತಿ ಸರ್ವಾಧಿಕಾರದ ಟೀಕೆಗಳಿಗೆ ಕಾರಣವಾಯಿತು. ಈ ಮನಃಸ್ಥಿತಿ ಕೇವಲ ರಾಜಕೀಯ ನಿಯಂತ್ರಣ ಪಡೆಯುವುದು ಮಾತ್ರವಲ್ಲ ಅದರ ವಿಸ್ತರಣೆಗೂ ಕಾರಣವಾಯಿತು.
ಐತಿಹಾಸಿಕವಾಗಿ ಕಾಂಗ್ರೆಸ್ ಪಕ್ಷ ಹಲವಾರು ಸಮಯದಾಯ ಮತ್ತು ಪ್ರದೇಶಗಳ ಮೇಲೆ ತನ್ನ ಪ್ರಾಬಲ್ಯವನ್ನು ಹೊಂದಿದೆ. ವಿಭಜನೆಯ ನೀತಿಗಳ ಹೊರತಾಗಿಯೂ ಅವು ಹಾಗೆಯೇ ಮುಂದುವರೆದಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಸಂವಿಧಾನದ 370ನೇ ವಿಧಿ ಮತ್ತು ಕಲಂ 35ಎ ಹೇರಿಕೆ ಕೂಡ ಇದರ ಭಾಗವಾಗಿತ್ತು. 370ನೇ ವಿಧಿ ಅಡಿಯಲ್ಲಿ ವಿಶೇಷ ಸ್ಥಾನಮಾನವನ್ನು ಕಲ್ಪಿಸಿ ಪ್ರದೇಶವನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಳ್ಳುವ ವೋಟ್ ಬ್ಯಾಂಕ್ ಭದ್ರಪಡಿಸಿಕೊಳ್ಳುವುದು ಸೇರಿತ್ತು. ಈ ನೀತಿಗಳು ವಿಭಜನೆ, ಪ್ರತ್ಯೇಕತಾವಾದಕ್ಕೆ ಕೊಡುಗೆಗಳನ್ನು ನೀಡುತ್ತಿದ್ದರೂ ಸಹ ಇದನ್ನು ರದ್ದುಗೊಳಿಸಲು ಪಕ್ಷ ಹಿಂಜರಿಯಿತು.

ವಕ್ಫ್ ಮಂಡಳಿ ಮಾದರಿ ಮತ್ತು ಸ್ವಯಂ ಮತ್ತು ವೋಟ್ ಬ್ಯಾಂಕ್ ನಿಯಂತ್ರಣ
ಖರ್ಗೆ ಅವರ ಹೇಳಿಕೆ ಸಹ ಭಾರತದ ವಕ್ಫ್ ಮಂಡಳಿಯ ಸಮಾನಾಂತರ ಕಾರ್ಯ ವಿಧಾನದ ಕಡೆ ಸಾಗುತ್ತದೆ. ಶಾಸನ ಬದ್ಧವಾದ ವಕ್ಫ್ ಮಂಡಳಿ ಮುಸ್ಲಿಂ ಧಾರ್ಮಿಕ ಅಥವಾ ದತ್ತಿಗಳ ಕಾರ್ಯ ನಿರ್ವಹಣೆ ನೋಡಿಕೊಳ್ಳುತ್ತದೆ. ಇದು ಧಾರ್ಮಿಕ ಅಧಿಕಾರದ ಹೆಸರಿನಲ್ಲಿ ಭೂ ಸ್ವಾಧೀನ ಮಾಡಿಕೊಳ್ಳುತ್ತದೆ ಎಂದು ಆರೋಪಿಸಲಾಗುತ್ತಿದೆ. ಹಲವಾರು ಕಡೆ ದೊಡ್ಡ ಪ್ರಮಾಣದ, ಆಯ್ದ ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳುವುದು ಅಧಿಕಾರವನ್ನು ಪಡೆದುಕೊಳ್ಳುವ ಕಾಂಗ್ರೆಸ್ ಪಕ್ಷದ ತಂತ್ರದ ಭಾಗವಾಗಿದೆ.
ವಕ್ಫ್ ಮಂಡಳಿಯ ಚಟುವಟಿಕೆಗಳು ಪಾರದರ್ಶಕತೆ ಮತ್ತು ಹೊಣೆಗಾರಿಕೆ ಇಲ್ಲ ಎಂಬ ಕಾರಣಕ್ಕೆ ಟೀಕೆಗೆ ಕಾರಣವಾದರೆ ಕಾಂಗ್ರೆಸ್ ಪಕ್ಷದ ನಡೆ ಕೆಲವು ನಿರ್ದಿಷ್ಟ ಸಮಯದಾಯದ ಮತಗಳನ್ನು ಭದ್ರ ಪಡಿಸಿಕೊಳ್ಳುವತ್ತ ಮತ್ತು ಚುನಾವಣಾ ಜಯದ ಸುತ್ತಲೇ ಇತ್ತು. ಇದು ರಾಷ್ಟ್ರೀಯ ಐಕ್ಯತೆ ಮಾತ್ರವಲ್ಲ ಸಮಯದಾಯಗಳ ನಡುವಿನ ವಿಭಜನೆಗೂ ದಾರಿ ಮಾಡಿಕೊಟ್ಟಿತು.
ಕಾಂಗ್ರೆಸ್‌ನ 370ನೇ ವಿಧಿ ಮತ್ತು ಕಲಂ 35ಎ ಮರುಸ್ಥಾಪನೆ ವಾದ ವಿಭಜನೆ ಆಡಳಿತ
ಜಮ್ಮು ಮತ್ತು ಕಾಶ್ಮೀರ ಗೆದ್ದರೆ ಭಾರತದ ಇತರ ರಾಜ್ಯಗಳ ಜಯಕ್ಕೆ ಮುನ್ನುಡಿ ಎಂಬ ಖರ್ಗೆ ಹೇಳಿಕೆ ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿ ಮತ್ತು ಕಲಂ 35ಎ ಮರುಸ್ಥಾಪನೆಯ ಹಿಂದಿನ ಕಾರ್ಯತಂತ್ರ ಎಂದು ಬಿಂಬಿಸಲಾಗುತ್ತಿದೆ. ವಿಶೇಷ ಸ್ಥಾನಮಾನವನ್ನು ನರೇಂದ್ರ ಮೋದಿ ನೇತೃತ್ವದ ಸರ್ಕಾರ 2019ರಲ್ಲಿ ರದ್ದುಗೊಳಿಸಿತು. ಇದು ಭಾರತದ ರಾಜಕೀಯ ಸನ್ನಿವೇಶದಲ್ಲಿಯೇ ಪುರಾತನ ವಿವಾದವಾಗಿತ್ತು. ಆದರೆ ಕಾಂಗ್ರೆಸ್ ಜಮ್ಮು ಮತ್ತು ಕಾಶ್ಮೀರದ ವಿಶೇಷ ಗುರುತಿಗಾಗಿ ಇದು ಅಗತ್ಯವಾಗಿದೆ ಎಂದು ಸಮರ್ಥನೆ ಮಾಡಿಕೊಂಡಿತು. ಇದರ ಪರಿಣಾಮ ಪ್ರತ್ಯೇಕತಾವಾದಿಗಳು, ಭಯೋತ್ಪಾದನೆಯ ಮೇಲೆ ಆಗುತ್ತದೆ.
ವಿಶೇಷ ಸ್ಥಾನಮಾನ ಮರು ಸ್ಥಾಪನೆ ಕೇವಲ ರಾಷ್ಟ್ರೀಯ ಐಕ್ಯತೆ ವಿಚಾರದಲ್ಲಿ ಹೆಜ್ಜೆ ಹಿಂದಿಡುವುದು ಮಾತ್ರವಲ್ಲ ದಶಕಗಳ ಕಾಲದ ಒಡೆದು ಆಳುವ ನೀತಿಗೆ ಕಾರಣವಾಗುತ್ತದೆ. ರಾಷ್ಟ್ರೀಯ ಭದ್ರತೆಯನ್ನು ಲೆಕ್ಕಿಸದೇ ವಿಶೇಷ ಸ್ಥಾನಮಾನವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಪುರಾತನ ಕಾರ್ಯತಂತ್ರವನ್ನು ಬಳಕೆ ಮಾಡಿಕೊಂಡು ಕಣಿವೆ ಮೇಲೆ ಹಿಡಿತ ಸಾಧಿಸಲು ಪ್ರಯತ್ನ ನಡೆಸಿದೆಯೇ ಎಂದು ಆಲೋಚಿಸುವಂತೆ ಮಾಡಿದೆ.
ರಾಷ್ಟ್ರೀಯ ಭದ್ರತೆ ಪರಿಣಾಮಗಳು: ಕಾಂಗ್ರೆಸ್‌ನ ಹಿಂದಿನ ದಾಖಲೆಗಳ ಮೆಲುಕು
ಹಲವಾರು ತಜ್ಞರು, ಐತಿಹಾಸಕಾರರು ರಾಷ್ಟ್ರೀಯ ಭದ್ರತೆ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದ ನಿಲುವುಗಳನ್ನು ಮೆಲುಕು ಹಾಕಿದ್ದಾರೆ. ಇದರಲ್ಲಿ ವಿಶೇಷವಾಗಿ ಜಮ್ಮು ಮತ್ತು ಕಾಶ್ಮೀರ ಸೇರಿದೆ. ಕಾಂಗ್ರೆಸ್ ನಾಯಕತ್ವದ ಸರ್ಕಾರದ ಆಡಳಿತದಲ್ಲಿ ಕಣಿವೆ ಪ್ರದೇಶದಲ್ಲಿ ಪ್ರತ್ಯೇಕತಾವಾದಿ ಚಟುವಟಿಕೆಗಳು ಹೆಚ್ಚಾದವು. ಪ್ರಾದೇಶಿಕ ಪಕ್ಷವಾದ ನ್ಯಾಷನಲ್ ಕಾನ್ಫರೆನ್ಸ್ ಜೊತೆಗೆ ಕಾಂಗ್ರೆಸ್ ಮೈತ್ರಿ ಪ್ರತ್ಯೇಕತಾವಾದಿಗಳಿಗೆ ಬೆಂಬಲಿ ಮತ್ತು ಕಣಿವೆಯ ಪರಿಸ್ಥಿತಿ ಉಲ್ಭಣಿಸುವಂತೆ ಮಾಡಿತು. ಪ್ರತ್ಯೇಕತಾವಾದಿಗಳ ಬಗ್ಗೆ ಯುಪಿಎ ಸರ್ಕಾರದ ಮೃದು ಧೋರಣೆಯಿಂದ ಕಣಿವೆ ಪ್ರದೇಶದಲ್ಲಿ ಭಯೋತ್ಪಾದಕ ಚಟುವಟಿಕೆಯ ಏರಿಕೆಗೆ ಕಾರಣವಾಯಿತು.
ಅಂತಿಮ ಷರಾ
ಖರ್ಗೆ ಹೇಳಿಕೆ ಕೇವಲ ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆ ಚುನಾವಣೆ ಗೆಲ್ಲುವುದು ಮಾತ್ರವಲ್ಲ ರಾಜಕೀಯ ಲಾಭಕ್ಕಾಗಿ ರಾಷ್ಟ್ರೀಯ ಹಿತಾಸಕ್ತಿ ಜೊತೆಗೆ ರಾಜಿ ಮಾಡಿಕೊಳ್ಳುವುದಾಗಿದೆ. ದಶಕಗಳ ಹಿಂದಿನ 370ನೇ ವಿಧಿ ಮತ್ತು ಕಲಂ 35ಎ ಚರ್ಚೆಯ ಮೂಲಕ ಕಾಂಗ್ರೆಸ್ ಬೆಂಕಿಯ ಜೊತೆ ಸರಸವಾಡುತ್ತಿದೆ ಅಲ್ಲದೇ ಕಣಿಯಲ್ಲಿನ ಶಾಂತ ಪರಿಸ್ಥಿತಿಯನ್ನು ಸವಾಲಿಗೆವೊಡ್ಡಿ ರಾಜಕೀಯ ಲಾಭ ನೋಡುವಂತೆ ಮಾಡುತ್ತಿದೆ.












Click it and Unblock the Notifications