'ಕಾಂಗ್ರೆಸ್‌ಗೆ ಗುಜರಾತ್ ಬಗ್ಗೆ ಯಾವುದೇ ದೂರದೃಷ್ಟಿ ಇಲ್ಲ': ಹಾರ್ದಿಕ್ ಪಟೇಲ್

ಅಹಮದಾಬಾದ್ ನವೆಂಬರ್ 26: ಗುಜರಾತ್‌ ಚುನಾವಣೆಗೆ ದಿನಗಣನೆ ಶುರುವಾಗಿದೆ. ವಲಸೆ ಬಿಜೆಪಿಗರು ಕ್ಷೇತ್ರಗಳಲ್ಲಿ ಗೆಲ್ಲಲು ಶತ ಪ್ರಯತ್ನ ಮಾಡುತ್ತಿದ್ದಾರೆ. ಬಿಜೆಪಿಯೊಂದಿಗಿನ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಈ ಪೈಕಿ ಯುವ ಪಾಟಿದಾರ್ ಸಮುದಾಯದ ನಾಯಕ ಹಾರ್ದಿಕ್ ಪಟೇಲ್ ಕೂಡ ಒಬ್ಬರು. ಈಗ ಬಿಜೆಪಿ ಅಭ್ಯರ್ಥಿಯಾಗಿರುವ ಹಾರ್ದಿಕ್ ಪಟೇಲ್ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ತಮ್ಮ ಹಿಂದಿನ ಪಕ್ಷ ಕಾಂಗ್ರೆಸ್‌ಗೆ ಗುಜರಾತ್ ಬಗ್ಗೆ ಯಾವುದೇ ದೂರದೃಷ್ಟಿ ಇಲ್ಲ ಎಂದು ಹೇಳಿದ್ದಾರೆ.

ವಿರಾಮಗಮ್‌ನಲ್ಲಿ ನಿನ್ನೆ ಎನ್‌ಡಿಟಿವಿಗೆ ಮಾತನಾಡಿದ ಹಾರ್ದಿಕ್ ಪಟೇಲ್, ರಾಹುಲ್ ಗಾಂಧಿ ಅವರು ದಕ್ಷಿಣದಲ್ಲಿ ತಮ್ಮ 'ಭಾರತ್ ಜೋಡೋ ಯಾತ್ರೆ'ಯಲ್ಲಿ ನಿರತರಾಗಿದ್ದಾರೆ. ಆದರೆ ಕಾಂಗ್ರೆಸ್ ಉನ್ನತ ನಾಯಕರ ಮಾರ್ಕ್ಯೂ ಮೆರವಣಿಗೆಯು ಚುನಾವಣೆಗೆ ಒಳಪಟ್ಟಿರುವ ಗುಜರಾತ್ ಮೂಲಕ ಹಾದುಹೋಗುತ್ತಿಲ್ಲ ಎಂಬ ಅಂಶವನ್ನು ಹಾರ್ದಿಕ್ ಪಟೇಲ್ ಒತ್ತಿ ಹೇಳಿದರು. ಕಾಂಗ್ರೆಸ್ ಯಾರನ್ನೂ ತೊರೆಯುವುದನ್ನು ಎಂದಿಗೂ ತಡೆಯುವುದಿಲ್ಲ ಮತ್ತು ಪಕ್ಷಕ್ಕೆ ಗುಜರಾತಿಗಳ ಅಗತ್ಯವಿಲ್ಲ ಎಂದು ವ್ಯಂಗ್ಯವಾಡಿದರು.

ಇತ್ತೀಚೆಗೆ ಗುಜರಾತ್ ಕಾಂಗ್ರೆಸ್ ಕಾರ್ಯಾಧ್ಯಕ್ಷ ಸ್ಥಾನವನ್ನು ತ್ಯಜಿಸಿದ ಹಾರ್ದಿಕ್ ಪಟೇಲ್ ಆಡಳಿತಾರೂಢ ಬಿಜೆಪಿಗೆ ಸೇರ್ಪಡೆಗೊಂಡರು. ಪಾಟಿದಾರ್ ಕೋಟಾ ಆಂದೋಲನದ ಸಮಯದ ಕೆಲವು ಪ್ರಕರಣಗಳು ಸೇರಿದಂತೆ ಬಾಕಿ ಉಳಿದಿರುವ ಪ್ರಕರಣಗಳಲ್ಲಿ ಜೈಲು ಪಾಲಾಗಬಹುದು ಎಂಬ ಭಯ ಹಾರ್ದಿಕ್ ಪಟೇಲ್ ಅವರನ್ನು ಪಕ್ಷ ಬದಲಾಯಿಸುವಂತೆ ಮಾಡಿದೆ ಎಂಬ ಕಾಂಗ್ರೆಸ್ ಹೇಳಿಕೆಯನ್ನು ನಿರಾಕರಿಸಿದರು.

"ನನ್ನ ಮೇಲೆ ಇನ್ನೂ 32 ಪ್ರಕರಣಗಳಿವೆ. ಪಕ್ಷಕ್ಕೆ ಸೇರುವುದರಿಂದ ನನ್ನನ್ನು ಮುಕ್ತಗೊಳಿಸಬಹುದು ಎಂದು ನೀವು ಭಾವಿಸಿದರೆ, ಅದನ್ನು ನಾನು ಒಪ್ಪುವುದಿಲ್ಲ. ಕಾನೂನು ಮತ್ತು ನ್ಯಾಯಾಲಯಗಳು ಸ್ವತಂತ್ರವಾಗಿವೆ" ಎಂದು ಹೇಳಿದರು.

'ಗುಜರಾತಿಗಳ ವಿರುದ್ಧ ಕಾಂಗ್ರೆಸ್ ನಿರ್ಧಾರ'

'ಗುಜರಾತಿಗಳ ವಿರುದ್ಧ ಕಾಂಗ್ರೆಸ್ ನಿರ್ಧಾರ'

"ಕಾಂಗ್ರೆಸ್ ನಿರಂತರವಾಗಿ ಗುಜರಾತಿಗಳ ವಿರುದ್ಧ ಮಾತನಾಡುತ್ತಿರುವುದರಿಂದ ನಾನು ನಿರ್ಧಾರ ತೆಗೆದುಕೊಳ್ಳಬೇಕಾಗಿತ್ತು. ಉದ್ಯಮಿಗಳ ವಿರುದ್ಧ ಮಾತನಾಡಬೇಡಿ ಎಂದು ನಾನು ಅವರಿಗೆ ಹೇಳಿದ್ದೇನೆ" ಎಂದು ಅವರು ಹೇಳಿದರು. ಜೊತೆಗೆ ಪಕ್ಷದ ರಾಜ್ಯ ಘಟಕವು ಯುಪಿಯ ಅಯೋಧ್ಯೆಯ ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಲು ಹಿಂದೇಟು ಹಾಕಿದೆ ಎಂದು ತಮ್ಮ ಸಮರ್ಥನೆಯನ್ನು ಪುನರುಚ್ಚರಿಸಿದರು.

"ಗುಜರಾತ್ ಜನರಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ನೀವು ನಿಲುವು ತೆಗೆದುಕೊಳ್ಳದಿದ್ದರೆ, ಅವರು(ಕಾಂಗ್ರೆಸ್) ನಿಮ್ಮನ್ನು ಹೇಗೆ ಇಷ್ಟಪಡುತ್ತಾರೆ?" ಎಂದು ನೆರೆದ ಜನರನ್ನು ಪ್ರಶ್ನೆ ಮಾಡಿದರು."ಕಾಂಗ್ರೆಸ್‌ಗೆ ನಮ್ಮಂತಹ ಕಷ್ಟಪಟ್ಟು ದುಡಿಯುವ ಜನರು ಅಗತ್ಯವಿಲ್ಲ, ಅದು ಕೇವಲ ಸಿಕೋಫಂಟ್‌ಗಳನ್ನು ಬಯಸುತ್ತದೆ." ಹೀಗಾಗಿ ಈ ವರ್ಷದ ಆರಂಭದಲ್ಲಿ ನಾನು ಕಾಂಗ್ರೆಸ್ ತೊರೆಯುವಾಗ ಯಾರೂ ನನ್ನನ್ನು ತಡೆಯಲು ಪ್ರಯತ್ನಿಸಲಿಲ್ಲ ಎಂದರು.

ಪಕ್ಷಗಳನ್ನು ಬದಲಾಯಿಸುವುದು ಎಂದರೆ ಅವರ ಸಿದ್ಧಾಂತವನ್ನು ಬದಲಾಯಿಸುವುದು ಎಂದು ಅವರು ನಿರಾಕರಿಸಿದರು. "ಸಿದ್ಧಾಂತ ಎಂದರೇನು? ಸಾರ್ವಜನಿಕ ಸೇವಾ ಮನೋಭಾವದ ಹೊರತು ಬೇರೇನೂ ಇಲ್ಲ. ಮೊದಲಿನಿಂದಲೂ ಅದೇ ಸಿದ್ಧಾಂತವನ್ನು ಹೊಂದಿದ್ದೇನೆ" ಎಂದು ಅವರು ಬಿಜೆಪಿಯೊಂದಿಗೆ ಕುಟುಂಬ ಸಂಪರ್ಕದ ಬಗ್ಗೆ ಮಾತನಾಡಿದರು. 'ನನ್ನ ತಂದೆ ವಿರಾಮಗ್ರಾಮ ಪ್ರದೇಶದಲ್ಲಿ ಬಿಜೆಪಿಯನ್ನು ಸ್ಥಾಪಿಸಲು ಸಹಾಯ ಮಾಡಿದರು' ಎಂದರು.

ಬಿಜೆಪಿಯ ಮತ ಬ್ಯಾಂಕ್ ಪಾಟಿದಾರ್ ಸಮುದಾಯ

ಬಿಜೆಪಿಯ ಮತ ಬ್ಯಾಂಕ್ ಪಾಟಿದಾರ್ ಸಮುದಾಯ

ವಿರಾಮ್‌ಗ್ರಾಮ್‌ನಲ್ಲಿ ಅವರು ಏಕೆ ಗೆಲ್ಲುತ್ತಾರೆ ಎಂಬುದನ್ನು ಪಟ್ಟಿ ಮಾಡುತ್ತಾ ಮಾತನಾಡಿದ ಹಾರ್ದಿಕ್ ಪಟೇಲ್ ಅವರು, ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯಲ್ಲಿ ಜನರ ನಂಬಿಕೆಯನ್ನು ಹೆಚ್ಚಿಸುತ್ತಿದ್ದಾರೆ ಎಂದು ಹೇಳಿದರು.

ಜನರಲ್ಲಿ ಕಾಂಗ್ರೆಸ್ ಬಗ್ಗೆ ಕೋಪವಿದೆ. ಸತತ 27 ವರ್ಷಗಳ ಬಿಜೆಪಿ ಸರ್ಕಾರದ ವಿರುದ್ಧ ಯಾವುದೇ ಆಡಳಿತ ವಿರೋಧಿತನವಿಲ್ಲ ಎಂದು ಅವರು ಹೇಳಿದರು.

ಜೊತೆಗೆ ಪಟೇಲ್-ಪಾಟಿದಾರ್ ಸಮುದಾಯ "ಯಾವಾಗಲೂ ಬಿಜೆಪಿಯ ಮತ ಬ್ಯಾಂಕ್" ಎಂದು ಹೇಳಿದರು. 2017ರಲ್ಲಿ (ಚುನಾವಣೆ) ಆಂದೋಲನ ನಡೆದಾಗಲೂ ಸಹ 60 ಪ್ರತಿಶತ ಪಾಟಿದಾರ್‌ಗಳು ಬಿಜೆಪಿಗೆ ಮತ ಹಾಕಿದ್ದಾರೆ, ಏಕೆಂದರೆ ಅವರು ಕಾಂಗ್ರೆಸ್ ಅನ್ನು ನಂಬಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

150 ಸ್ಥಾನದಲ್ಲಿ ಬಿಜೆಪಿಗೆ ಗೆಲುವು- ಹಾರ್ದಿಕ್

150 ಸ್ಥಾನದಲ್ಲಿ ಬಿಜೆಪಿಗೆ ಗೆಲುವು- ಹಾರ್ದಿಕ್

ಈ ಬಾರಿ ಎಎಪಿ ತ್ರಿಕೋನ ಸ್ಪರ್ಧೆ ಮಾಡಬಹುದು ಎಂಬ ಕಲ್ಪನೆಯನ್ನು ಅವರು ತಳ್ಳಿಹಾಕಿದರು. "ಬಿಜೆಪಿ 150 (182 ರಲ್ಲಿ) ಸ್ಥಾನಗಳನ್ನು ಗೆಲ್ಲುತ್ತದೆ. ಎಎಪಿ ಮತ್ತು ಕಾಂಗ್ರೆಸ್ ಪರಸ್ಪರ ಹೊಡೆದಾಡಿಕೊಂಡರೂ ನಾವು ಹೆದರುವುದಿಲ್ಲ" ಎಂದರು.

ಬೆಲೆ ಏರಿಕೆ ಮತ್ತು ನಿರುದ್ಯೋಗ ಸಮಸ್ಯೆಗಳಾಗಿರಬಹುದು ಎಂದು ಅವರು ಒಪ್ಪಿಕೊಂಡರು. ಆದರೆ ಇವುಗಳಿಗೆ "ರಾಷ್ಟ್ರೀಯ ಮತ್ತು ಜಾಗತಿಕ ಆರ್ಥಿಕ ಸನ್ನಿವೇಶ" ಕಾರಣವೆಂದು ಹೇಳಿದರು. "ಬಿಜೆಪಿ ಶ್ರದ್ಧೆಯಿಂದ ಪ್ರಯತ್ನಿಸಿದೆ. ಗುಜರಾತ್ ಉದ್ಯೋಗ ಸೃಷ್ಟಿಯಲ್ಲಿ ಅತ್ಯುತ್ತಮವಾಗಿದೆ" ಎಂದು ಅವರು ಹೇಳಿದರು.

ಹಾರ್ದಿಕ್ ನ್ಯಾಯದ ಭರವಸೆ

ಹಾರ್ದಿಕ್ ನ್ಯಾಯದ ಭರವಸೆ

ಕಳೆದ ತಿಂಗಳು 130 ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾದ ಮೋರ್ಬಿ ಸೇತುವೆಯ ಕುರಿತು ಕೇಳಲಾದ ಪ್ರಶ್ನೆಗೆ, ಯಾರಾದರೂ ನಿರ್ಲಕ್ಷ್ಯ ಅಥವಾ ಭ್ರಷ್ಟಾಚಾರದಿಂದ ಕಾರಣವೆಂದು ಕಂಡುಬಂದರೆ, "ಅನುಕರಣೀಯ ಶಿಕ್ಷೆಯನ್ನು ನೀಡಬೇಕು" ಎಂದು ಹೇಳಿದರು.

ಕಳೆದ ಬಾರಿ 182 ಸ್ಥಾನಗಳಲ್ಲಿ 99 ಸ್ಥಾನಗಳನ್ನು ಗೆಲ್ಲುವ ಮೂಲಕ ಕಾಂಗ್ರೆಸ್ ತನ್ನ ಪಾಲನ್ನು ಹೆಚ್ಚಿಸಿಕೊಂಡಿತ್ತು, ಆದರೆ ನಂತರ ಅದರ ಹಲವಾರು ಶಾಸಕರು ರಾಜೀನಾಮೆ ನೀಡಿ ತೊರೆದರು. ಈ ಬಾರಿ ಡಿಸೆಂಬರ್ 1 ಮತ್ತು 5 ರಂದು ಗುಜರಾತ್‌ನಲ್ಲಿ ಮತದಾನ ನಡೆಯಲಿದ್ದು, ನವೆಂಬರ್ 12 ರಂದು ಮತದಾನ ನಡೆದಿರುವ ಹಿಮಾಚಲ ಪ್ರದೇಶದ ಫಲಿತಾಂಶಗಳೊಂದಿಗೆ ಗುಜರಾತ್‌ ಫಲಿತಾಂಶವೂ ಡಿಸೆಂಬರ್ 8 ರಂದು ಹೊರಬೀಳಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+