ಲೋಕಸಭೆ ಚುನಾವಣೆಗೆ ಮೊದಲು ಕಾಂಗ್ರೆಸ್‌ಗೆ ಬಿಗ್ ರಿಲೀಫ್!
ದೇಶದಲ್ಲಿ ಇನ್ನೇನು ಲೋಕಸಭೆ ಚುನಾವಣೆ ನಡೆಯಲಿದ್ದು, 2024ರ ಲೋಕಸಭೆ ಚುನಾವಣೆಗಾಗಿ ಕೌಂಟ್‌ಡೌನ್ ಶುರುವಾಗಿದೆ. ಆದರೆ ಇದೇ ಸಮಯದಲ್ಲಿ 'ಚುನಾವಣಾ ಬಾಂಡ್' ವಿಚಾರವಾಗಿ ಸಂಚಲನ ಸೃಷ್ಟಿಯಾಗಿದೆ. ಈ ಸಮಯದಲ್ಲೇ ಯುವ ಕಾಂಗ್ರೆಸ್‌ಗೆ ಕೂಡ ದೊಡ್ಡ ಆಘಾತ ಇದೀಗ ಎದುರಾಗಿತ್ತು. ಅದ್ರಲ್ಲೂ ಚುನಾವಣೆಗೆ ಮೊದಲು ಕೈಯಲ್ಲಿ ಕಾಸೇ ಇಲ್ಲದೆ ಕಾಂಗ್ರೆಸ್ ಪರದಾಟ ಪಡುವ ಸ್ಥಿತಿ ನಿರ್ಮಾಣ ಆಗಿತ್ತು. ಆದರೆ ಈ ವಿಚಾರವಾಗಿ ಈಗ ಕಾಂಗ್ರೆಸ್ ನಾಯಕರಿಗೆ ಗುಡ್ ನ್ಯೂಸ್ ಸಿಕ್ಕಿದೆ.
ಹೌದು, ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿ ಕಾಂಗ್ರೆಸ್ ಪಕ್ಷದ ಬ್ಯಾಂಕ್ ಖಾತೆಗಳ ಇದೀಗ ಸಕ್ರಿಯಗೊಳಿಸಿದೆ ಅಂತ ಕಾಂಗ್ರೆಸ್ ತಿಳಿಸಿದೆ. ಇನ್ನೂ ಆದಾಯ ತೆರಿಗೆ ಅಧಿಕಾರಿಗಳು ಪಕ್ಷದ ಮುಖ್ಯ ಬ್ಯಾಂಕ್ ಖಾತೆಗಳನ್ನ ಸ್ಥಗಿತಗೊಳಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಈ ಮೊದಲು ಗಂಭೀರ ಆರೋಪ ಮಾಡಿದ್ದರು. ಹಾಗೇ ಈ ವಿಚಾರವಾಗಿ ಬಿಜೆಪಿ ರಾಜಕಾರಣ ಮಾಡುತ್ತಿದೆ. ಕಾಂಗ್ರೆಸ್‌ಗೆ ಬೇಕು ಅಂತಲೇ ಈ ರೀತಿಯ ಸಂಕಷ್ಟ ಸ್ಥಿತಿ ಸೃಷ್ಟಿ ಮಾಡಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಆರೋಪ ಮಾಡಿದ್ದರು. ಆದರೆ ಈಗ ದಿಢೀರ್ ಫ್ರೀಜ್ ಆಗಿದ್ದ ಬ್ಯಾಂಕ್ ಖಾತೆಗಳಿಗೆ ಮತ್ತೆ ಜೀವ ಬಂದಿದೆಯಂತೆ.

ಕಾಂಗ್ರೆಸ್ ನಾಯಕರ ಮನವಿ ಏನಾಗಿತ್ತು?
ಬ್ಯಾಂಕ್ ಖಾತೆನ ಸ್ಥಗಿತಗೊಳಿಸುವ ಆದೇಶದ ವಿರುದ್ಧ ನ್ಯಾಯಮಂಡಳಿಯ ಎದುರು ಹಾಜರಾಗಿದ್ದ ಕಾಂಗ್ರೆಸ್ ಮುಖಂಡರು, ಮನವಿ ಸಲ್ಲಿಸಿದ್ದರು. ಪಕ್ಷಕ್ಕೆ ಈಗ ತನ್ನ ಬ್ಯಾಂಕ್ ಖಾತೆ ನಿರ್ವಹಿಸೋಕೆ ಅವಕಾಶ ನೀಡಿದೆ ಅಂತಾ ಹೇಳಲಾಗುತ್ತಿದೆ. ಈ ವಿಚಾರವಾಗಿ, ಅಂತಿಮ ನಿರ್ಧಾರ ತೆಗೆದುಕೊಳ್ಳುವ ಮೊದಲು ನ್ಯಾಯ ಮಂಡಳಿ ಈ ವಿಷಯದ ಕುರಿತು ವಿಚಾರಣೆ ನಡೆಸಲಿದೆ ಎನ್ನಲಾಗಿದೆ. ಪ್ರಮುಖ ಚುನಾವಣೆ ಸಂದರ್ಭದಲ್ಲಿ ಪಕ್ಷದ ಖಾತೆಗಳನ್ನ ಸ್ಥಗಿತಗೊಳಿಸಿದರೆ ಚುನಾವಣೆಯಲ್ಲಿ ಭಾಗವಹಿಸಲು ಪಕ್ಷಕ್ಕೆ ಕಷ್ಟವಾಗುತ್ತದೆ, ಎನ್ನುವ ವಿಚಾರವನ್ನ ನ್ಯಾಯಮಂಡಳಿಗೆ ತಿಳಿಸಿದ್ದಾಗಿ ಕಾಂಗ್ರೆಸ್ ಪಕ್ಷದ ಮುಖಂಡರು ತಿಳಿಸಿದ್ದರು.
Power drunk Modi Govt has frozen the accounts of the country’s largest Opposition party - the Indian National Congress - just before the Lok Sabha elections.
— Mallikarjun Kharge (@kharge) February 16, 2024
This is a deep assault on India's Democracy !
The UNCONSTITUTIONAL money collected by the BJP would be utilised by them…
ಅಸಲಿ ಕಹಾನಿ ಏನು?
ನಾಲ್ಕು ಪ್ರಮುಖ ಬ್ಯಾಂಕ್ ಖಾತೆ ಸ್ಥಗಿತಗೊಳಿಸಲಾಗಿದೆ ಅಂತ ಕಾಂಗ್ರೆಸ್ ಮುಖಂಡರು ಹೇಳಿದ್ದರು. ಹಾಗೇ ಆ ಬಳಿಕ ಒಂಬತ್ತು ಖಾತೆ ಸ್ಥಗಿತಗೊಳಿಸಲಾಗಿದೆ ಅಂತಾ ಕೂಡ ಆರೋಪ ಮಾಡಲಾಗಿತ್ತು. ಪಕ್ಷ ಕ್ರೌಡ್ ಫಂಡಿಂಗ್ ಮೂಲಕ ಪಡೆದ ಹಣ ಕೂಡ ಬಳಸಲು ಸಾಧ್ಯವಾಗುತ್ತಿಲ್ಲ ಅಂತಾ ಕಾಂಗ್ರೆಸ್ ಮುಖಂಡರು ಆರೋಪ ಮಾಡಿದ್ದರು. ಹಾಗೇ ದೇಶದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ಕಾಂಗ್ರೆಸ್ ನಾಯಕರು ಕೇಂದ್ರ ಸರ್ಕಾರದ ವಿರುದ್ಧ ಆರೋಪ ಮಾಡಿದ್ದರು. ಹೀಗಾಗಿ ದೇಶದಲ್ಲಿ ಈ ವಿಚಾರ ದೊಡ್ಡ ಸದ್ದು ಮಾಡಿತ್ತು.
#DemocracyFrozen
— Ajay Maken (@ajaymaken) February 16, 2024
On our petition, Income Tax Department and the Income Tax Appellate Tribunal (ITAT) has said that we have to ensure that Rs 115 crores have to be kept in the Banks. This 115 crore is the lien marked in the Bank Accounts.
We can spend an amount over and above…
ಕಾಂಗ್ರೆಸ್ ನಾಯಕರು ಈಗ ನಿರಾಳ
ಇನ್ನೇನು ಕೆಲವೇ ದಿನದಲ್ಲಿ ಲೋಕಸಭೆ ಚುನಾವಣೆ ಬರಲಿದೆ, ಹೀಗಾಗಿ ಕಾಂಗ್ರೆಸ್ ನಾಯಕರಿಗೆ ಕೂಡ ಚುನಾವಣೆ ನಡೆಸಲು ದುಡ್ಡಿನ ಅಗತ್ಯತೆ ಇದೆ. ಆದರೆ ಪಕ್ಷಕ್ಕೆ ಬಂದಿದ್ದ ದೇಣಿಗೆಯನ್ನೇ, ಲಾಕ್ ಮಾಡಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಆರೋಪ ಮಾಡಿದ್ದರು. ಆದರೆ ಈಗ ತಮ್ಮ ಬ್ಯಾಂಕ್ ಖಾತೆಗಳು ಮತ್ತೆ ಕಾರ್ಯ ನಿರ್ವಹಿಸುತ್ತಿವೆ ಎಂದಿದ್ದಾರೆ. ಈ ಮೂಲಕ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತಿಕ್ಕಾಟ ಮತ್ತಷ್ಟು ಜೋರಾಗುತ್ತಿದೆ. ಲೋಕಸಭೆ ಚುನಾವಣೆಗೆ ದಿನಾಂಕ ಘೋಷಣೆ ಮೊದಲೇ ಅಖಾಡದ ಕಾವು ಹೆಚ್ಚಾಗುತ್ತಿದೆ.












Click it and Unblock the Notifications