ಸೋನಿಯಾ ಗಾಂಧಿ ತಲೆದಂಡಕ್ಕೆ ಒತ್ತಡ ತೀವ್ರ: ಶತಮಾನಗಳ ಇತಿಹಾಸದ ಕಾಂಗ್ರೆಸ್ ಇಬ್ಬಾಗದತ್ತ?
2019ರ ಲೋಕಸಭಾ ಚುನಾವಣೆಯಲ್ಲೇ ಕಾಂಗ್ರೆಸ್ ಮುಗ್ಗರಿಸಿದಾಗ ಪಕ್ಷ ಬಸವಳಿದಿತ್ತು. ಇದಾದ ನಂತರ ನಡೆದ ಹಲವು ರಾಜ್ಯಗಳ ಅಸೆಂಬ್ಲಿ ಚುನಾವಣೆಯಲ್ಲಿ ಪಕ್ಷದ ನಿರಾಸಾದಾಯಕ ಪ್ರದರ್ಶನದ ನಂತರ ಗಾಂಧಿ ಕುಟುಂಬದ ತೆರವಿಗೆ ಪಕ್ಷದೊಳಗಿನ ಧ್ವನಿಗಳು ಏರ ತೊಡಗಿದವು.
ಪಂಚ ರಾಜ್ಯಗಳ ಚುನಾವಣೆಯಲ್ಲಿ ಪಕ್ಷದ ಕಳಪೆ ಪ್ರದರ್ಶನದ ನಂತರ ಕಾಂಗ್ರೆಸ್ ಇಬ್ಬಾಗದತ್ತ ಸಾಗುತ್ತಿದೆ. ಜಿ-23 ಎಂದೇ ಕರೆಯಲ್ಪಡುವ ಪಕ್ಷದ ಹಿರಿಯ ಸದಸ್ಯರನ್ನೊಳಗೊಂಡ ಗುಂಪು, ಹೈಕಮಾಂಡ್ ಹುದ್ದೆಯಿಂದ ಗಾಂಧಿ ಕುಟುಂಬ ಹೊರಗುಳಿಯಬೇಕು ಎನ್ನುವ ಒತ್ತಡವನ್ನು ದಿನದಿಂದ ದಿನಕ್ಕೆ ಹೆಚ್ಚು ಮಾಡತೊಡಗಿವೆ.
ಇತ್ತೀಚೆಗೆ ಮುಕ್ತಾಯಗೊಂಡ ಅಸೆಂಬ್ಲಿ ಚುನಾವಣೆಯಲ್ಲಿ ಪಂಜಾಬ್ ನಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿತು. ಉತ್ತರಾಖಾಂಡ್ ಮತ್ತು ಗೋವಾದಲ್ಲಿ ಸರಿಯಾದ ಕಾರ್ಯತಂತ್ರ ರೂಪಿಸಿದ್ದರೆ ಗದ್ದುಗೇರಬಹುದಿತ್ತು, ಆದರೆ, ಪಕ್ಷ ಸರಿಯಾದ ಹೆಜ್ಜೆಯನ್ನು ಇಟ್ಟಿಲ್ಲ ಎನ್ನುವುದು ಜಿ-23 ನಾಯಕರ ಆರೋಪ.
ಕಳೆದ ಎರಡ್ಮೂರು ದಿನಗಳಿಂದ ನಡೆಯುತ್ತಿರುವ ವಿದ್ಯಮಾನಗಳನ್ನು ಅವಲೋಕಿಸಿದಾಗ, ಶತಮಾನಗಳ ಇತಿಹಾಸವಿರುವ ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಸಮಸ್ಯೆಗಳು ಉಲ್ಬಣಗೊಳ್ಳುತ್ತಿದೆ. ಇದಕ್ಕೆ, ಸೂಕ್ತ ಸಮಯದಲ್ಲಿ ಪರಿಹಾರ ಕಂಡುಕೊಳ್ಳದೇ ಇದ್ದರೆ, ಪಕ್ಷ ಸ್ಪಷ್ಟವಾಗಿ ಇಬ್ಬಾಗದತ್ತ ಸಾಗಬಹುದು ಎಂದು ವ್ಯಾಖ್ಯಾನಿಸಲಾಗುತ್ತಿದೆ.

ಜಿ-23 ನಾಯಕರ ಪಟ್ಟಿಯಲ್ಲಿ ಮಂಚೂಣಿಯಲ್ಲಿ ಬರುವ ಗುಲಾಂ ನಬಿ ಆಜಾದ್
ಎರಡು ದಿನಗಳ ಹಿಂದೆ, ಮಾರ್ಚ್ ಹದಿನಾರರಂದು ಜಿ-23 ನಾಯಕರ ಪಟ್ಟಿಯಲ್ಲಿ ಮಂಚೂಣಿಯಲ್ಲಿ ಬರುವ ಗುಲಾಂ ನಬಿ ಆಜಾದ್ ಮನೆಯಲ್ಲಿ ಸಭೆಯನ್ನು ನಡೆಸಲಾಗಿತ್ತು. ಈ ಸಭೆಯಲ್ಲಿ ಕಪಿಲ್ ಸಿಬಲ್, ಆನಂದ್ ಶರ್ಮಾ, ಭೂಪಿಂದರ್ ಸಿಂಗ್ ಹೂಡಾ ಮುಂತಾದ ನಾಯಕರು ಭಾಗವಹಿಸಿದ್ದರು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸಮಾನ ಮನಸ್ಕರು ಒಂದು ಗೂಡಿದರೆ ಮಾತ್ರ ಬಿಜೆಪಿ ವಿರುದ್ದ ಸೆಣಸಲು ಸಾಧ್ಯ. ಆಯಕಟ್ಟಿನ ಪಕ್ಷದ ಹುದ್ದೆಗಳಲ್ಲಿ ಗಾಂಧಿ ಕುಟುಂಬದಿಂದ ಹೊರತಾದ ಯುವಕರಿಗೆ ಅವಕಾಶ ನೀಡಬೇಕು ಎನ್ನುವ ನಿರ್ಣಯವನ್ನು ತೆಗೆದುಕೊಳ್ಳಲಾಗಿತ್ತು.

ಮಣಿಶಂಕರ್ ಅಯ್ಯರ್, ಶಂಕರ್ ಸಿಂಗ್ ವಾಘೇಲಾ, ಕುಲದೀಪ್ ಶರ್ಮಾ
ಈ ಸಭೆ ನಡೆದದ್ದು ಒಂದು ಕಡೆಯಾದರೆ, ಸೋನಿಯಾ ಬಣದ ಕೆಲವು ನಾಯಕರು ಜಿ-23 ನಾಯಕರ ಸಭೆಯಲ್ಲಿ ಭಾಗವಹಿಸುವ ಮೂಲಕ, ಗಾಂಧಿ ಕುಟುಂಬದ ತೆಲೆನೋವನ್ನು ಇನ್ನಷ್ಟು ಹೆಚ್ಚಿಸಿದ್ದಾರೆ. ಇದೇ ಮೊದಲ ಬಾರಿಗೆ ಸೋನಿಯಾ ಕುಟುಂಬದ ವಿರುದ್ದ ಅಸಮಾಧಾನ ಹೊರಹಾಕಿದ ಮಣಿಶಂಕರ್ ಅಯ್ಯರ್, ಶಂಕರ್ ಸಿಂಗ್ ವಾಘೇಲಾ, ಕುಲದೀಪ್ ಶರ್ಮಾ ಮುಂತಾದ ಸೋನಿಯಾ ಪಾಳಯದಲ್ಲಿದ್ದ ನಾಯಕರು ಜಿ-23 ಸಭೆಯಲ್ಲಿ ಭಾಗವಹಿಸಿ, ಗುಲಾಂ ನಬಿ ಆಜಾದ್ ತಂಡಕ್ಕೆ ಬೆಂಬಲವನ್ನು ಸೂಚಿಸಿದ್ದಾರೆ.

ಭೂಪಿಂದರ್ ಸಿಂಗ್ ಹೂಡಾ ಅವರು ರಾಹುಲ್ ಅವರನ್ನು ಭೇಟಿಯಾಗಿದ್ದರು
ಪಕ್ಷದ ಆಂತರಿಕ ಸಮಸ್ಯೆಗಳು ಇದೇ ರೀತಿ ಮುಂದುವರಿದರೆ ಕಾಂಗ್ರೆಸ್ ಇಬ್ಬಾಗವಾಗುವುದು ನಿಶ್ಚಿತ ಎನ್ನುವುದನ್ನು ಅರಿತ ರಾಹುಲ್ ಗಾಂಧಿ, ಜಿ-23 ನಾಯಕರೊಬ್ಬರನ್ನು ಮಾತುಕತೆಗೆ ಕರೆದಿದ್ದರು. ಭೂಪಿಂದರ್ ಸಿಂಗ್ ಹೂಡಾ ಅವರು ರಾಹುಲ್ ಅವರನ್ನು ಭೇಟಿಯಾಗಿದ್ದರು ಎಂದು ಹೇಳಲಾಗುತ್ತಿದೆ. ಜಿ-23 ತಂಡದ ನಾಯಕರು ನೀಡುವ ಸಲಹೆಗಳನ್ನು ಮುಕ್ತವಾಗಿ ಸ್ವೀಕರಿಸಲಾಗುವುದು ಎನ್ನುವ ಭರವಸೆಯನ್ನು ರಾಹುಲ್ ಗಾಂಧಿಯವರು ಹೂಡಾಗೆ ನೀಡಿದ್ದಾರೆ ಎನ್ನುವ ಸುದ್ದಿಯಿದೆ. ಈ ಸಭೆಯಲ್ಲಿ ಆ ಬಣದಲ್ಲಿ ಗುರುತಿಸಿಕೊಂಡಿರುವ ಆನಂದ್ ಶರ್ಮಾ ಕೂಡಾ ರಾಹುಲ್ ಜೊತೆಗಿದ್ದರು.

ಮಲ್ಲಿಕಾರ್ಜುನ ಖರ್ಗೆ ಆಕ್ರೋಶ ಹೊರಹಾಕಿದ್ದಾರೆ
"ನನಗೆ ಬೇಕಿರುವುದು ಎಲ್ಲರನ್ನೂ ಒಳಗೊಂಡ ಕಾಂಗ್ರೆಸ್, ಆದರೆ ಸೋನಿಯಾ ಗಾಂಧಿ ಸುತ್ತ ಸುತ್ತುತ್ತಿರುವ ಕೆಲವು ನಾಯಕರಿಗೆ ಒಂದು ಮನೆಯ ಕಾಂಗ್ರೆಸ್ ಆಗಿರಬೇಕು ಎನ್ನುವುದು ಆಸೆ. ಇದಕ್ಕಾಗಿಯೇ ನಮ್ಮ ವಿರೋಧ"ಎಂದು ಕಪಿಲ್ ಸಿಬಲ್ ಹೇಳಿದ್ದಾರೆ. "ಹಿರಿಯರೆಂದು ಹೇಳಿಕೊಂಡು ಸುತ್ತುತ್ತಿರುವವರಿಗೆ ಚುನಾವಣೆ ಗೆಲ್ಲುವ ಶಕ್ತಿಯಿಲ್ಲ. ಮುಂದೆ ನಿಂತು ಪಕ್ಷಕ್ಕಾಗಿ ದುಡಿಯುವ ಕಾಳಜಿಯೂ ಇಲ್ಲ"ಎಂದು ಮಲ್ಲಿಕಾರ್ಜುನ ಖರ್ಗೆ ಆಕ್ರೋಶ ಹೊರಹಾಕಿದ್ದಾರೆ. ಸದ್ಯದ ಬೆಳವಣಿಗೆಗಳು ಕಾಂಗ್ರೆಸ್ ಪಕ್ಷಕ್ಕೆ ಆಶಾದಾಯಕವಲ್ಲ ಎನ್ನುವ ಮಾತುಗಳು ಪಕ್ಷದೊಳಗಿನಿಂದಲೇ ಕೇಳಿ ಬರುತ್ತಿದೆ.
-
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Viral Videlo: 2 ಗಂಟೆ ಸ್ಟ್ಯಾಚ್ಯೂ ರೀತಿ ನಿಂತ ಯುವಕ ವಿಡಿಯೋ ವೈರಲ್, ಭಾರತಕ್ಕೂ ಬಂತಾ ಅಮೆರಿಕದ ಜಾಂಬಿ ಡ್ರಗ್ಸ್ -
ಉದ್ಯೋಗ ಸಂದರ್ಶನ ಮಾಡಲು ಹೋದ CEOಗೆ ಬೆವರಿಳಿಸಿದ ಅಭ್ಯರ್ಥಿ, Viral ಆಯ್ತು ವಿಚಿತ್ರ ಕಥೆ -
Summer Camp: ನಟನ ಮೈಸೂರು ಸಂಸ್ಥೆಯಿಂದ ಮಕ್ಕಳಿಗೆ ಬೇಸಿಗೆ ಶಿಬಿರ 'ರಜಾಮಜಾ' ಆಯೋಜನೆ -
115 ರೂಪಾಯಿಯ ಪೊಂಗಲ್ಗೆ 273 ರೂ. ಬಿಲ್: ಸ್ವಿಗ್ಗಿ ವಿರುದ್ಧ ಸುಮಲತಾ ಅಂಬರೀಷ್ ಆಕ್ರೋಶ












Click it and Unblock the Notifications