ಚೀನಾ ಅತಿಕ್ರಮಣ: ಕಾಂಗ್ರೆಸ್ ಹಂಚಿಕೊಂಡ ನಕಲಿ ವಿಡಿಯೋಗಳ ಅಸಲಿಯತ್ತು ಬಿಚ್ಚಿಟ್ಟ ಸೇನೆ, ಕ್ಷಮೆಯಾಚಿಸಲು ರಿಜಿಜು ಆಗ್ರಹ
ಭಾರತ-ಚೀನಾ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ನಕಲಿ ವಿಡಿಯೋಗಳು ಇದೀಗ ಭಾರೀ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿವೆ. ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆ ಅತಿಕ್ರಮಣ ಮಾಡಿದೆ ಎಂದು ತೋರಿಸುವ ಒಂದಿಷ್ಟು ವಿಡಿಯೋಗಳನ್ನ ಕಾಂಗ್ರೆಸ್ ನಾಯಕರು ಹಂಚಿಕೊಂಡಿದ್ದರು. ಆದರೆ, ಈ ವಿಡಿಯೋಗಳು ನಕಲಿ ಹಾಗೂ ಎಐ ಬಳಸಿ ಸೃಷ್ಟಿಸಿರುವುದು ಎಂದು ಭಾರತೀಯ ಸೇನೆ ಸ್ಪಷ್ಟಪಡಿಸಿದೆ.
ಸೇನೆಯ ಸ್ಪಷ್ಟನೆಯ ಬೆನ್ನಲ್ಲೇ ಕೇಂದ್ರ ಸಚಿವ ಕಿರಣ್ ರಿಜಿಜು ಅವರು ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ದೇಶಕ್ಕೆ ಕ್ಷಮೆಯಾಚಿಸುವಂತೆ ಆಗ್ರಹಿಸಿದ್ದಾರೆ.

ಡೀಪ್‌ಫೇಕ್ ವಿಡಿಯೋ ಅಸಲಿಯತ್ತು ಬಯಲು: ಸೇನೆಯ ಸ್ಪಷ್ಟನೆ
ಬಿಹಾರದ ಕಾಂಗ್ರೆಸ್ ವಕ್ತಾರೆ ರಿತು ಚೌಧರಿ ಅವರು ಸೋಶಿಯಲ್ ಮೀಡಿಯಾದಲ್ಲಿ ಎರಡು ವಿಡಿಯೋಗಳನ್ನ ಹಂಚಿಕೊಂಡಿದ್ದರು. ಮೊದಲ ವಿಡಿಯೋದಲ್ಲಿ ಚೀನಾದ ವಾಹನಗಳು ಭಾರತದ ಗಡಿಯೊಳಗೆ ನುಸುಳಿವೆ ಎಂದು ಆರೋಪಿಸಲಾಗಿತ್ತು. ಆದರೆ, ಇದು ಸಿಕ್ಕಿಂನ ನಾಥುಲಾ ಪಾಸ್ ಬಳಿ ಚೀನಾದ ವಾಣಿಜ್ಯ ವಾಹನಗಳು ಅಧಿಕೃತ ಗಡಿ ವ್ಯಾಪಾರ ಮಾರ್ಗದಲ್ಲಿ ಸಂಚರಿಸುತ್ತಿರುವ ದೃಶ್ಯವಾಗಿದೆ. ಅಧಿಕೃತ ವ್ಯಾಪಾರ ಮಾರ್ಗದಲ್ಲಿನ ವಾಹನ ಸಂಚಾರವನ್ನ ಚೀನಾ ಸೇನೆಯ ನುಸುಳುವಿಕೆ ಎಂದು ತಪ್ಪಾಗಿ ಬಿಂಬಿಸಲಾಗಿದೆ ಎಂದು ಸೇನೆ ಸ್ಪಷ್ಟಪಡಿಸಿದೆ.
ಎರಡನೇ ವಿಡಿಯೋದಲ್ಲಿ ಲೆಫ್ಟಿನೆಂಟ್ ಜನರಲ್ ಗಿರೀಶ್ ಕಲಿಯಾ ಅವರು ಅರುಣಾಚಲ ಪ್ರದೇಶದಲ್ಲಿ ಚೀನಾ ನಿಯಂತ್ರಣ ಸಾಧಿಸಿದೆ ಹಾಗೂ ಸೇನೆಗೆ ಅಗತ್ಯ ಪೂರೈಕೆಗಳು ಸಿಗುತ್ತಿಲ್ಲ ಎಂದು ಹೇಳಿರುವಂತೆ ಬಿಂಬಿಸಲಾಗಿತ್ತು. ಆದರೆ ಇದು ಡೀಪ್‌ಫೇಕ್ ವಿಡಿಯೋ.
ಅಕ್ಟೋಬರ್ 27, 2023ರಂದು ಜಮ್ಮು ಮತ್ತು ಕಾಶ್ಮೀರದ ಕುಪ್ವಾರದಲ್ಲಿ ಗಡಿ ನಿಯಂತ್ರಣ ರೇಖೆಯ (LoC) ಒಳನುಸುಳುವಿಕೆ ಯತ್ನಗಳ ಕುರಿತು ಲೆಫ್ಟಿನೆಂಟ್ ಜನರಲ್ ಕಲಿಯಾ ನಡೆಸಿದ್ದ ಪತ್ರಿಕಾಗೋಷ್ಠಿಯ ಮೂಲ ದೃಶ್ಯಗಳನ್ನ ತಿರುಚಲಾಗಿದೆ. ಅವರು ಅರುಣಾಚಲ ಪ್ರದೇಶದ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ ಎಂದು ಭಾರತೀಯ ಸೇನೆ ಅಧಿಕೃತವಾಗಿ ತಿಳಿಸಿದೆ.
🚨 Detect the Deepfake❌ A digitally altered video is being circulated with fabricated remarks attributed to Lt Gen Girish Kalia, claiming that China has taken control of Asaphila, Longjou and Taksing Circle in Arunachal Pradesh and that the Indian Army has been denied essential supplies. The misleading video attempts to portray fabricated statements as a leaked admission by a senior Indian Army officer.✅ The video uses #SyntheticGeneratedInformation to falsely attribute remarks to Lt Gen Girish Kalia. The original footage relates to a press briefing delivered by then GOC 28 Infantry Division, Maj Gen Girish Kalia, in Kupwara, Jammu & Kashmir, on 27 October 2023. He addressed infiltration attempts across the Line of Control, reporting 10 foiled attempts, the elimination of 27 terrorists and the recovery of warlike stores and narcotics. He made no such statements about Chinese control over Arunachal Pradesh or denial of supplies to the Indian Army.📍 Original Statement 🔗: https://t.co/7vQf7VjJHd♻️ Disinformation Pattern: Old military briefing + Digitally manipulated remarks + False attribution + Fabricated territorial claims = Misleading military disinformation.⚠️ Verify the original speech before amplifying manipulated videos.#FactCheck #DetectTheDeepfake #IndianArmy #ArunachalPradesh #FakeNews@adgpi@easterncomd@Spearcorps@PIBFactCheck@GoI_MeitY@SpokespersonMoD
— INDIAN ARMY FACT CHECK (@MythbusterXX) October 25, 2026
ಕಾಂಗ್ರೆಸ್ ವಿರುದ್ಧ ಕಿರಣ್ ರಿಜಿಜು ಕಿಡಿ
ಸೇನೆಯ ಸ್ಪಷ್ಟನೆ ಹೊರಬೀಳುತ್ತಿದ್ದಂತೆ, ಅರುಣಾಚಲ ಪ್ರದೇಶದ ಸಂಸದರೂ ಆಗಿರುವ ಕೇಂದ್ರ ಸಚಿವ ಕಿರಣ್ ರಿಜಿಜು ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. "ಭಾರತೀಯ ಸೇನೆಯ ವರ್ಚಸ್ಸಿಗೆ ಮಸಿ ಬಳಿಯುವ ಉದ್ದೇಶದಿಂದ ನಕಲಿ ವಿಡಿಯೋ ಹರಡಿರುವ ಕಾಂಗ್ರೆಸ್ ಪಕ್ಷ ದೇಶಕ್ಕೆ ಕ್ಷಮೆಯಾಚಿಸಬೇಕು. ಇದು ದೇಶದ್ರೋಹದ ಕೃತ್ಯವಾಗಿದ್ದು, ನಮ್ಮ ಶತ್ರುಗಳು ಮಾಡುವ ನೀಚ ಕೃತ್ಯಗಳಿಗೆ ಸಮಾನವಾಗಿದೆ. ಕಾಂಗ್ರೆಸ್ ಪಕ್ಷವು ಭಾರತದ ಶತ್ರುಗಳ ಪರವಾಗಿ ಇಂತಹ ಕೀಳುಮಟ್ಟದ ಪ್ರಚಾರ ನಡೆಸುತ್ತಿದೆ," ಎಂದು ಅವರು ಕಿಡಿಕಾರಿದ್ದಾರೆ.
Congress Party must apologize to the nation for spreading fake AI video to tarnish the image of Indian Army.यह एक विश्वासघाती कृत्य है और हमारे दुश्मनों के घिनौने कामों के बराबर है। कांग्रेस पार्टी भारत के दुश्मनों का घटिया अभियान चला रही है। https://t.co/AXNSoPDCbH
— Kiren Rijiju (@KirenRijiju) October 26, 2026
ಸೇನಾ ವಿರೋಧಿ ಮನಸ್ಥಿತಿ: ಬಿಜೆಪಿ ವಾಗ್ದಾಳಿ
ಬಿಜೆಪಿ ನಾಯಕರು ಕೂಡ ಕಾಂಗ್ರೆಸ್ ನಡೆಯನ್ನು ಖಂಡಿಸಿದ್ದಾರೆ. ಬಿಜೆಪಿ ವಕ್ತಾರ ಸಿ.ಆರ್. ಕೇಶವನ್, "ನಮ್ಮ ವೀರ ಸಶಸ್ತ್ರ ಪಡೆಗಳಿಗೆ ಮಸಿ ಬಳಿಯಲು ಡೀಪ್‌ಫೇಕ್ ವಿಡಿಯೋವನ್ನ ಹಂಚಿಕೊಳ್ಳುವ ಮೂಲಕ ಕಾಂಗ್ರೆಸ್ ನಾಯಕರು ತಮ್ಮ ಸೇನಾ ವಿರೋಧಿ ಮನಸ್ಥಿತಿಯನ್ನ ಮತ್ತೆ ಸಾಬೀತುಪಡಿಸಿದ್ದಾರೆ. ನಮ್ಮ ಸಶಸ್ತ್ರ ಪಡೆಗಳ ಘನತೆಯನ್ನ ಕುಗ್ಗಿಸುವ ವಿಷಯದಲ್ಲಿ ಕಾಂಗ್ರೆಸ್ ಪದೇ ಪದೇ ಇಂತಹ ತಪ್ಪುಗಳನ್ನು ಮಾಡುತ್ತಿದೆ," ಎಂದು ಟೀಕಿಸಿದ್ದಾರೆ.
ವಿಡಿಯೋ ನಕಲಿಯಾದರೂ, ವಿಷಯ ಸತ್ಯ ಎಂದ NSUI
ಒಂದೆಡೆ ಸೇನೆ ವಿಡಿಯೋ ನಕಲಿ ಎಂದು ಸ್ಪಷ್ಟಪಡಿಸಿದ್ದರೂ, ಎನ್‌ಎಸ್‌ಯುಐ ಮುಖ್ಯಸ್ಥ ವಿನೋದ್ ಜಾಖಡ್ ಮಾತ್ರ ವಿಡಿಯೋದಲ್ಲಿ ಹೇಳಿರುವ ವಿಷಯ ಸತ್ಯ ಎಂದು ವಾದಿಸಿದ್ದಾರೆ. "ವಿಡಿಯೋವನ್ನು ತಿರುಚಿದ್ದರೂ, ಅದರಲ್ಲಿ ಹೇಳುತ್ತಿರುವ ವಿಷಯದಲ್ಲಿ ಯಾವುದೇ ತಪ್ಪಿಲ್ಲ. ದೆಹಲಿಯಲ್ಲಿ ಯುವಕರ ಪ್ರತಿಭಟನೆಯನ್ನು ಹತ್ತಿಕ್ಕಲು ಬಿಜೆಪಿ ಭದ್ರತಾ ಪಡೆಗಳನ್ನು ನಿಯೋಜಿಸುತ್ತಿದೆ. ಆದರೆ ಚೀನಾ ನಮ್ಮ ಭೂಮಿಯನ್ನ ಅತಿಕ್ರಮಿಸುತ್ತಿರುವ ಅರುಣಾಚಲ ಪ್ರದೇಶದಲ್ಲಿ ಏಕೆ ಪಡೆಗಳನ್ನು ನಿಯೋಜಿಸುತ್ತಿಲ್ಲ?" ಎಂದು ಪ್ರಶ್ನಿಸಿದ್ದಾರೆ.
ರಾಷ್ಟ್ರೀಯ ಭದ್ರತೆಯಂತಹ ಅತ್ಯಂತ ಸೂಕ್ಷ್ಮ ವಿಚಾರಗಳಲ್ಲಿ ನಕಲಿ ಮಾಹಿತಿಗಳ ಪ್ರಸಾರ ಹಾಗೂ ಅದಕ್ಕೆ ಸಂಬಂಧಿಸಿದ ರಾಜಕೀಯ ಕೆಸರೆರಚಾಟವು ತೀವ್ರ ಕಳವಳಕಾರಿ ಸಂಗತಿಯಾಗಿದೆ.


Click it and Unblock the Notifications
