ಆರೋಪ ಕೇಳಿ ಬಂದ ಬೆನ್ನಲ್ಲೇ ಆ್ಯಪ್ ಡಿಲೀಟ್ ಮಾಡಿದ ಕಾಂಗ್ರೆಸ್

ನವದೆಹಲಿ, ಮಾರ್ಚ್ 26: ತನ್ನ ಅಧಿಕೃತ ಆ್ಯಪ್ ವಿರುದ್ಧ ಆರೋಪ ಕೇಳಿ ಬಂದ ಬೆನ್ನಲ್ಲೇ ಕಾಂಗ್ರೆಸ್ ಗೂಗಲ್ ಪ್ಲೇ ಸ್ಟೋರ್ ನಿಂದ ಈ ಮೊಬೈಲ್ ಅಪ್ಲಿಕೇಶನ್ ನನ್ನು ಡಿಲೀಟ್ ಮಾಡಿದೆ.

ಕಾಂಗ್ರೆಸಿನ 'ಐಎನ್ ಸಿ' ಆ್ಯಪ್ ನ ಮಾಹಿತಿಗಳನ್ನು ಸಿಂಗಾಪುರದಲ್ಲಿರುವ ಸರ್ವರ್ ಗಳಿಗೆ ಕಳುಹಿಸಲಾಗಿದೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಬಿಜೆಪಿಯ ಅಮಿತ್ ಮಾಲ್ವಿಯಾ ಈ ಆರೋಪ ಮಾಡಿದ್ದರು.

ಈ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ವಿವಾದದ ಉಸಾಬರಿಯೇ ಬೇಡ ಎಂದು ಆ್ಯಪ್ ನ್ನೇ ಹಿಂಪಡೆಯಲಾಗಿದೆ.

ವಿವಾದ ಹಿನ್ನೆಲೆ

ಫೇಸ್ಬುಕ್ ಮಾಹಿತಿ ಕೇಂಬ್ರಿಡ್ಜ್ ಅನಾಲಿಟಿಕಾಗೆ ಸೋರಿಕೆಯಾದ ನಂತರ ಭಾರತದಲ್ಲೂ ವೈಯಕ್ತಿಕ ಮಾಹಿತಿಗಳ ಸೋರಿಕೆ ಸಂಬಂಧ ಚರ್ಚೆ ಆರಂಭವಾಗಿತ್ತು.

ಇದಾ ಬೆನ್ನಿಗೆ ಪ್ರಧಾನಿಯವರ ಅಧಿಕೃತ ಆ್ಯಪ್, 'ನಮೋ ಆ್ಯಪ್'ನಿಂದ ದತ್ತಾಂಶಗಳನ್ನು ಮೂರನೇ ವ್ಯಕ್ತಿಗೆ ಹಸ್ತಾಂತರಿಸಲಾಗಿದೆ ಎನ್ನುವ ಸ್ಪೋಟಕ ಸುದ್ದಿ ಹೊರಬಿದ್ದಿತ್ತು. ಈ ಸಂದರ್ಭದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿಯವರನ್ನು ತರಾಟೆಗೆ ತೆಗೆದುಕೊಂಡಿದ್ದರು.

ಭಾನುವಾರ ಟ್ಟೀಟ್ ಮಾಡಿದ್ದ ರಾಹುಲ್ ಗಾಂಧಿ, "ಹಾಯ್! ನನ್ನ ಹೆಸರು ನರೇಂದ್ರ ಮೋದಿ. ನಾನು ಭಾರತದ ಪ್ರಧಾನಮಂತ್ರಿ. ನೀವು ನನ್ನ ಅಧಿಕೃತ ಆ್ಯಪ್ ಗೆ ಸೈನ್ ಅಪ್ ಆಗುತ್ತಿದ್ದಂತೆ ನಿಮ್ಮೆಲ್ಲಾ ಮಾಹಿತಿಗಳನ್ನು ನಾನು ಅಮೆರಿಕಾದ ಕಂಪನಿಗಳಲ್ಲಿರುವ ನನ್ನ ಗೆಳೆಯರಿಗೆ ನೀಡುತ್ತೇನೆ," ಎಂದು ಟ್ಟೀಟ್ ಮಾಡಿದ್ದರು.

ಇದಕ್ಕೆ ತಿರುಗೇಟು ನೀಡಿದ್ದ ಬಿಜೆಪಿಯ ಐಟಿ ವಿಂಗ್ ಮುಖ್ಯಸ್ಥ ಅಮಿತ್ ಮಾಲ್ವಿಯಾ, "ಹಾಯ್! ನನ್ನ ಹೆಸರು ರಾಹುಲ್ ಗಾಂಧಿ. ನಾನು ಭಾರತದ ಅತೀ ಪುರಾತನ ಪಕ್ಷದ ಅಧ್ಯಕ್ಷ. ನೀವು ನಮ್ಮ ಅಧಿಕೃತ ಆ್ಯಪ್ ಗೆ ಸೈನ್ ಅಪ್ ಆಗುತ್ತಿದ್ದಂತೆ ನಾನು ನಿಮ್ಮೆಲ್ಲಾ ಮಾಹಿತಿಗಳನ್ನು ಸಿಂಗಾಪುರದಲ್ಲಿರುವ ನನ್ನ ಗೆಳೆಯರಿಗೆ ನೀಡುತ್ತೇನೆ," ಎಂದು ವ್ಯಂಗ್ಯವಾಡಿದ್ದರು.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಇದಾದ ಬೆನ್ನಿಗೆ ಕಾಂಗ್ರೆಸ್ ಈಗ ಆ್ಯಪ್ ನ್ನೇ ಡಿಲೀಟ್ ಮಾಡಿದ್ದು ನಮಗಿದರ ಉಸಾಬರಿಯೇ ಬೇಡ ಎಂಬ ತೀರ್ಮಾನಕ್ಕೆ ಬಂದಂತೆ ಕಾಣಿಸುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+