ಭಾರತಕ್ಕೆ ಅಭಿನಂದನೆ: ಕೊರೊನಾ ಲಸಿಕೆ ತುರ್ತು ಅನುಮತಿ ಬಗ್ಗೆ ಮೋದಿ ಮಾತು
ನವದೆಹಲಿ, ಜನವರಿ 03: ದೇಶದಲ್ಲಿ ಎರಡು ಕೊರೊನಾ ಲಸಿಕೆ ತುರ್ತು ಬಳಕೆಗೆ ಡಿಸಿಜಿಐ ಅನುಮತಿ ನೀಡಿದ್ದು, ಪ್ರಧಾನಿ ನರೇಂದ್ರ ಮೋದಿ ಭಾರತಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.
ಡಿಸಿಜಿಐ ಆಕ್ಸ್‌ಫರ್ಡ್‌ನ ಕೊರೊನಾ ಲಸಿಕೆ ಕೊವಿಶೀಲ್ಡ್ ಹಾಗೂ ಭಾರತ್ ಬಯೋಟೆಕ್‌ನ ಕೋವ್ಯಾಕ್ಸಿನ್ ಲಸಿಕೆ ತುರ್ತು ಬಳಕೆಗೆ ಅನುಮತಿ ನೀಡಿದೆ.
ಕೊವಿಶೀಲ್ಡ್, ಕೋವ್ಯಾಕ್ಸಿನ್ ಕೊರೊನಾ ಲಸಿಕೆ ತುರ್ತು ಬಳಕೆಗೆ ಗ್ರೀನ್ ಸಿಗ್ನಲ್
ತುರ್ತು ಬಳಕೆಗೆ ಅನುಮತಿ ನೀಡಿದ ಎರಡು ಕೊರೊನಾ ಲಸಿಕೆಗಳು ಭಾರತದಲ್ಲಿ ತಯಾರಿಸಲಾಗಿದೆ ಎನ್ನುವುದು ದೇಶಕ್ಕೆ ಹೆಮ್ಮೆಯ ವಿಚಾರ ಎಂದರು.
ಕೊರೊನಾ ಸೋಂಕಿನ ಜತೆ ಹೋರಾಟ ಮಾಡಲು ಮತ್ತಷ್ಟು ಬಲ ಬಂದಂತಾಗಿದೆ. ಸೆರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಹಾಗೂ ಭಾರತ್ ಬಯೋಟೆಕ್‌ನ ಲಸಿಕೆಗಳಿಗೆ ಡಿಸಿಜಿಐ ಅನುಮತಿ ನೀಡಿರುವುದು ಆರೋಗ್ಯಕರ ಮತ್ತು ಕೊರೊನಾ ಮುಕ್ತ ರಾಷ್ಟ್ರದ ಹಾದಿಯನ್ನು ವೇಗಗೊಳಿಸುತ್ತದೆ ಎಂದು ಅವರು ಹೇಳಿದರು.
ಹಾಗೆಯೇ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಕೊವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಕೊರೊನಾ ಲಸಿಕೆ ಬಳಕೆ ಮಾಡಲು ಅಡ್ಡಿಯಿಲ್ಲ ಎಂದು ಎಕ್ಸ್‌ಪರ್ಟ್ ಕಮಿಟಿಯು ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾಗೆ ಶಿಫಾರಸು ಮಾಡಿತ್ತು.
ಫೈಜರ್ ಮತ್ತು ಬಯೋಎನ್‌ಟೆಕ್ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಕೋವಿಶೀಲ್ಡ್ ಲಸಿಕೆ ಬಳಸಲು ವಿಶ್ವ ಆರೋಗ್ಯ ಸಂಸ್ಥೆ ಅನುಮೋದನೆ ನೀಡುತ್ತಿದ್ದಂತೆ ಇದೇ ವಾರದಲ್ಲಿ ಮೂರು ಬಾರಿ ಸಭೆ ನಡೆಸಿದ ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಷನ್ ನ ಸಬ್ಜೆಕ್ಟ್ ಎಕ್ಸಫರ್ಟ್ ಕಮಿಟಿಯು ಈಗ ಕೊವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಬಳಕೆ ಮಾಡಲು ಅಡ್ಡಿಯಿಲ್ಲ ಎಂದು ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಹೇಳಿತ್ತು.