3 ರಾಜ್ಯಗಳಲ್ಲಿ ಎಕ್ಸಿಟ್ ಪೋಲ್ ಗಣನೀಯವಾಗಿ ಮುಗ್ಗರಿಸಿದ್ದು ಹೀಗೆ..
Recommended Video

ಗುಜರಾತ್ ಮತ್ತು ಹಿಮಾಚಲ ಪ್ರದೇಶದ ಮತಗಟ್ಟೆ (ಎಕ್ಸಿಟ್ ಪೋಲ್) ಸಮೀಕ್ಷೆಗಳು ಹೊರಬಿದ್ದಿವೆ. ಸುಮಾರು ಎಂಟಕ್ಕೂ ಹೆಚ್ಚು ಸಮೀಕ್ಷೆಗಳು ಗುಜರಾತ್ ನಲ್ಲಿ ಕೇಸರಿ ಪ್ರಭಾವ ಮುಂದುವರಿಯುತ್ತದೆ, ಹಿಮಾಚಲ ಪ್ರದೇಶದಲ್ಲೂ ಕಮಲ ಅರಳಲಿದೆ ಎಂದು ಅಭಿಪ್ರಾಯ ವ್ಯಕ್ತ ಪಡಿಸಿವೆ.
ಮತಗಟ್ಟೆ ಸಮೀಕ್ಷೆಗಳು ಕರಾರುವಕ್ಕಾದ ಅಥವಾ ಅದಕ್ಕೆ ಹತ್ತಿರ ಇರುವಂತಹ ಫಲಿತಾಂಶವನ್ನು ನೀಡುತ್ತಾ? ಹೋದ ವರ್ಷದ ತಮಿಳುನಾಡು, 2017ರ ಪಂಜಾಬ್ ಮತ್ತು 2015ರಲ್ಲಿ ನಡೆದ ಬಿಹಾರದ ಅಸೆಂಬ್ಲಿ ಚುನಾವಣೆಯಲ್ಲಿ ವಿವಿಧ ಮಾಧ್ಯಮಗಳು ನೀಡಿದ್ದ ಮತಗಟ್ಟೆ ಸಮೀಕ್ಷೆಯಲ್ಲಿ ಹೊರಬಿದ್ದ ರಿಸಲ್ಟ್ ಏನು, ನೈಜ ಫಲಿತಾಂಶ ಬಂದಿದ್ದೇನು?
ಈ ಸಮೀಕ್ಷೆಗಳು ವೀಕ್ಷಕರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿರುವುದಕ್ಕೋ ಏನೋ, ಮಾಧ್ಯಮಗಳು ಪೈಪೋಟಿಗೆ ಬಿದ್ದಂತೆ ಐದು ಗಂಟೆಗೆ ಚುನಾವಣೆ ಮುಗಿಯುತ್ತಿದ್ದಂತೇ ಮತಗಟ್ಟೆ ವರದಿ ನೀಡಲು ಆರಂಭಿಸುತ್ತವೆ.
2015ರಲ್ಲಿ ನಡೆದ ಬಿಹಾರ ಚುನಾವಣೆಯಲ್ಲಿ ಬಹುತೇಕ ಎಲ್ಲಾ ಮತಗಟ್ಟೆ ಸಮೀಕ್ಷೆಗಳು (ಸಂಖ್ಯೆ ಸ್ವಲ್ಪ ಆಕಡೆ ಈಕಡೆ ಇರುವುದನ್ನು ಬಿಟ್ಟರೆ) ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿತ್ತು.
ಅದೇ ರೀತಿ 2016ರಲ್ಲಿ ನಡೆದ ತಮಿಳುನಾಡು ಅಸೆಂಬ್ಲಿ ಚುನಾವಣೆಯಲ್ಲಿ ಎಐಎಡಿಎಂಕೆ ಮತ್ತು ಡಿಎಂಕೆ ನಡುವೆ ತುರುಸಿನ ಸ್ಪರ್ಧೆ ಏರ್ಪಟ್ಟು, ಡಿಎಂಕೆ ಮುನ್ನಡೆ ಸಾಧಿಸಲಿದೆ ಎಂದಿತ್ತು. ಅದೇ ರೀತಿ, ಪಂಜಾಬ್ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್ ನಡುವೆ ತೀವ್ರ ಸ್ಪರ್ಧೆ ಇರಲಿದೆ ಎಂದು ಹೇಳಿತ್ತು. ಆದರೆ ಆಗಿದ್ದೇನು? ಮುಂದೆ ಓದಿ..

ವಿವಿಧ ಮಾಧ್ಯಮಗಳು ನೀಡಿದ್ದ ಮತಗಟ್ಟೆಯ ವರದಿ
- ಬಿಹಾರದ ಅಸೆಂಬ್ಲಿ ಚುನಾವಣೆಯಲ್ಲಿ ವಿವಿಧ ಮಾಧ್ಯಮಗಳು ನೀಡಿದ್ದ ಮತಗಟ್ಟೆಯ ವರದಿ ಹೀಗಿದೆ.
- ಎನ್ಡಿಟಿವಿ : ಬಿಜೆಪಿ ಮೈತ್ರಿಕೂಟ (120-130), ಜೆಡಿಯು ಮೈತ್ರಿಕೂಟ (105-115), ಇತರರು (5-7)
- ಎಬಿಪಿ-ನೀಲ್ಸನ್ : ಬಿಜೆಪಿ ಮೈತ್ರಿಕೂಟ (108), ಜೆಡಿಯು ಮೈತ್ರಿಕೂಟ (130), ಇತರರು (5)
- ಇಂಡಿಯಾ ಟುಡೇ-ಸಿಸಿರೋ : ಬಿಜೆಪಿ ಮೈತ್ರಿಕೂಟ (120), ಜೆಡಿಯು ಮೈತ್ರಿಕೂಟ (117), ಇತರರು (6)
- ನ್ಯೂಸ್ ನೇಶನ್ : ಬಿಜೆಪಿ ಮೈತ್ರಿಕೂಟ (117), ಜೆಡಿಯು ಮೈತ್ರಿಕೂಟ (122), ಇತರರು (10)
- ಸಿಎನ್ಎಸ್- ನ್ಯೂಸ್ ಎಕ್ಸ್ : ಬಿಜೆಪಿ ಮೈತ್ರಿಕೂಟ (93), ಜೆಡಿಯು ಮೈತ್ರಿಕೂಟ (132), ಇತರರು (18)
- ಟುಡೇಸ್ ಚಾಣಕ್ಯ : ಬಿಜೆಪಿ ಮೈತ್ರಿಕೂಟ (155), ಜೆಡಿಯು ಮೈತ್ರಿಕೂಟ (83), ಇತರರು (5)
- ಇಂಡಿಯಾ ಟಿವಿ - ಸಿವೋಟರ್ :ಬಿಜೆಪಿ ಮೈತ್ರಿಕೂಟ (111), ಜೆಡಿಯು ಮೈತ್ರಿಕೂಟ (122) ಇತರರು (10)
- ಆಜ್ ತಕ್ : ಬಿಜೆಪಿ ಮೈತ್ರಿಕೂಟ (120), ಜೆಡಿಯು ಮೈತ್ರಿಕೂಟ (117) ಇತರರು (6)
- ಬಿಹಾರದ ನೈಜ ಫಲಿತಾಂಶ ಬಂದದ್ದು ಹೀಗೆ (ಒಟ್ಟು ಸ್ಥಾನಗಳು - 248)
- ಎನ್ಡಿಎ ಮೈತ್ರಿಕೂಟ (ಬಿಜೆಪಿ, RLSP, ಎಲ್ಜೆಪಿ, HAM) - 58
- ಜೆಡಿಯು ಮೈತ್ರಿಕೂಟ ( ಆರ್ಜೆಡಿ, ಜೆಡಿಯು, ಕಾಂಗ್ರೆಸ್) - 178
- ಇತರರು - 07
- ಈ ವರ್ಷದ (ಫೆಬ್ರವರಿ) ಆದಿಯಲ್ಲಿ ನಡೆದ ಪಂಜಾಬ್ ಚುನಾವಣೆಯ ಮತಗಟ್ಟೆ ಸಮೀಕ್ಷೆ ಹೀಗಿತ್ತು.
- ಇಂಡಿಯಾ ಟಿವಿ - ಏಕ್ಸಿಸ್ : ಬಿಜೆಪಿ ಮೈತ್ರಿಕೂಟ (4-7), ಕಾಂಗ್ರೆಸ್ (62-71) ಆಮ್ ಆದ್ಮಿ ಪಕ್ಷ (42-51) ಇತರರು (0-2)
- ಟುಡೇಸ್ ಚಾಣಕ್ಯ : ಬಿಜೆಪಿ ಮೈತ್ರಿಕೂಟ (9), ಕಾಂಗ್ರೆಸ್ (54) ಆಮ್ ಆದ್ಮಿ ಪಕ್ಷ (54) ಇತರರು (0)
- ಇಂಡಿಯಾ ಟಿವಿ - ಸಿವೋಟರ್ : ಬಿಜೆಪಿ ಮೈತ್ರಿಕೂಟ (5-13), ಕಾಂಗ್ರೆಸ್ (41-49) ಆಮ್ ಆದ್ಮಿ ಪಕ್ಷ (59-67) ಇತರರು (0-3)
- ಇಂಡಿಯಾ ನ್ಯೂಸ್ - ಎಂಆರ್ಸಿ: ಬಿಜೆಪಿ ಮೈತ್ರಿಕೂಟ (7), ಕಾಂಗ್ರೆಸ್ (55) ಆಮ್ ಆದ್ಮಿ ಪಕ್ಷ (55) ಇತರರು (0)
- ಟೈಮ್ಸ್ ನೌ- ವಿಎಂಆರ್ : ಬಿಜೆಪಿ ಮೈತ್ರಿಕೂಟ (7), ಕಾಂಗ್ರೆಸ್ (48) ಆಮ್ ಆದ್ಮಿ ಪಕ್ಷ (61) ಇತರರು (0)
- ಪಂಜಾಬ್ ನೈಜ ಫಲಿತಾಂಶ ಹೊರಬಿದ್ದದ್ದು ಹೀಗೆ - (ಒಟ್ಟು ಸ್ಥಾನಗಳು - 117)
- ಬಿಜೆಪಿ ಮೈತ್ರಿಕೂಟ (ಬಿಜೆಪಿ, ಶಿರೋಮಣಿ ಅಕಾಲಿದಳ) : 18
- ಕಾಂಗ್ರೆಸ್ : 77
- ಆಮ್ ಆದ್ಮಿ ಪಕ್ಷ : 20
- ಇತರರು : 02
- ತಮಿಳುನಾಡು ಅಸೆಂಬ್ಲಿ ಚುನಾವಣೆಯಲ್ಲಿ ವಿವಿಧ ಮಾಧ್ಯಮಗಳು ನೀಡಿದ್ದ ಮತಗಟ್ಟೆಯ ಸಮೀಕ್ಷಾ ವರದಿ ಹೀಗಿದೆ.
- ಸಿವೋಟರ್ : ಎಐಎಡಿಎಂಕೆ (95), ಡಿಎಂಕೆ (130), PWF (05), ಇತರರು (04)
- ಇಂಡಿಯಾ ಟುಡೇ- ಏಕ್ಸಿಸ್ : ಎಐಎಡಿಎಂಕೆ (139), ಡಿಎಂಕೆ (78), PWF (15), ಇತರರು (02)
- ನ್ಯೂಸ್ ನೇಶನ್ : ಎಐಎಡಿಎಂಕೆ (97), ಡಿಎಂಕೆ (116), PWF (14), ಇತರರು (07)
- ಎಬಿಪಿ: ಎಐಎಡಿಎಂಕೆ (95), ಡಿಎಂಕೆ (132), PWF (15), ಇತರರು (07)
- ಚಾಣಕ್ಯ: ಎಐಎಡಿಎಂಕೆ (90), ಡಿಎಂಕೆ (149), PWF (0), ಇತರರು (04)
- ಎನ್ಡಿಟಿವಿ : ಎಐಎಡಿಎಂಕೆ (103), ಡಿಎಂಕೆ (120), PWF (0), ಇತರರು (11)
- ತಮಿಳುನಾಡು ನೈಜ ಫಲಿತಾಂಶ ಹೊರಬಿದ್ದದ್ದು ಹೀಗೆ (ಒಟ್ಟು ಸ್ಥಾನಗಳು - 232)
- ಎಐಎಡಿಎಂಕೆ : 134
- ಡಿಎಂಕೆ ಒಕ್ಕೂಟ (ಡಿಎಂಕೆ, ಕಾಂಗ್ರೆಸ್, ಮುಸ್ಲಿಂಲೀಗ್) : 98
- PWF (ಡಿಎಂಡಿಕೆ, ಕಮ್ಯೂನಿಸ್ಟ್) - 00
- ಇತರರು - 00

ಬಿಹಾರದಲ್ಲಿ ತಾಳೆಯಾಗದ ಮತಗಟ್ಟೆ ವರದಿ

ಪಂಜಾಬ್ ಚುನಾವಣೆಯ ಮತಗಟ್ಟೆ ಸಮೀಕ್ಷೆ

ಕಾಂಗ್ರೆಸ್ ಭರ್ಜರಿ ಜಯಭೇರಿ

ತಮಿಳುನಾಡು ಅಸೆಂಬ್ಲಿ ಚುನಾವಣೆ













Click it and Unblock the Notifications