ಕೊಚ್ಚಿ ಮೆಟ್ರೋ V/s ನಮ್ಮ ಮೆಟ್ರೋ: ಒಂದು ಹೋಲಿಕೆ

Posted By:
Subscribe to Oneindia Kannada

ಕೇರಳದ ಜನರು ಕಾತುರದಿಂದ ನಿರೀಕ್ಷಿಸುತ್ತಿದ್ದ ಕೊಚ್ಚಿ ಮೆಟ್ರೋ, ಇದೇ ತಿಂಗಳ 17ರಿಂದ ಕಾರ್ಯಾರಂಭ ಮಾಡಲಿದೆ.

ಈ ಬೃಹತ್ ಯೋಜನೆಯ ಮೊದಲ ಹಂತವು ಇದೀಗ ಪೂರ್ಣಗೊಂಡಿದ್ದು ಜೂನ್ 17ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ.

ಅಂದಹಾಗೆ, ಕೊಚ್ಚಿ ಮೆಟ್ರೋ ಬಗ್ಗೆ ಹಲವಾರು ಪ್ರಶಂಸೆಗಳು ಹರಿದುಬಂದಿವೆ. ಮೊದಲನೆಯದ್ದಾಗಿ ಅದು ನಿಗದಿತ ಅವಧಿಯಲ್ಲೇ ಮುಗಿದಿದೆ ಎಂದು. ದೊಡ್ಡ ಮಟ್ಟದ ಪ್ರಾಜೆಕ್ಟ್ ಗಳು ನಮ್ಮಲ್ಲಿ ಹೀಗೆ ನಿಗದಿತ ಅವಧಿಯೊಳಗೆ ಮುಗಿದರೆ ಅದು ನಿಜಕ್ಕೂ ದಾಖಲೆಯೇ ಸರಿ ಎಂಬಂಥ ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ ಇಂಥ ಪ್ರಶಂಸೆ ಸಹಜವಾಗಿಯೇ ಬಂದಿದೆ.

ಇಂತಿಪ್ಪ ಕೊಚ್ಚಿ ಮೆಟ್ರೋಕ್ಕೂ, ನಮ್ಮ ಬೆಂಗಳೂರಿನ ಮತ್ತೊಂದು ಹೆಮ್ಮೆಯಾಗಿರುವ ನಮ್ಮ ಮೆಟ್ರೋಕ್ಕೂ ಇರುವ ವ್ಯತ್ಯಾಸಗಳೇನು? ಕೊಚ್ಚಿ ಮೆಟ್ರೋ ರೈಲು ಮಾರ್ಗದ ವಿಶೇಷತೆಗಳೇನು ಎಂಬುದರ ಪಕ್ಷಿ ನೋಟ ಇಲ್ಲಿದೆ.

ಕೊಚ್ಚಿ ಮೆಟ್ರೋ, ಬೆಂಗಳೂರು ಮೆಟ್ರೋ ಒಂದು ಹೋಲಿಕೆ:

ಅಲ್ಲಿ ವೇಗ

ಅಲ್ಲಿ ವೇಗ

ಮೊದಲ ಹಂತದ ಯೋಜನೆ ನಿಗದಿತ ಅವಧಿಯಲ್ಲಿ ಮುಗಿದಿದೆ. 2012ರಲ್ಲಿ ಕೊಚ್ಚಿ ಮೆಟ್ರೋಕ್ಕೆ ಶಂಕು ಸ್ಥಾಪನೆ ಮಾಡಲಾಗಿತ್ತು. 2013ರ ಜೂನ್ ನಲ್ಲಿ ಕೊಚ್ಚಿ ಮೆಟ್ರೋನ ಮೊದಲ ಹಂತದ ಯೋಜನೆ ಶುರುವಾಗಿತ್ತು. ಅದಾಗಿ, ನಾಲ್ಕು ವರ್ಷಗಳಲ್ಲಿ ಅದು ಪೂರ್ಣಗೊಂಡಿದೆ. ಮೊದಲಿಗೆ, ಕೊಚ್ಚಿಯ ಅಲುವಾ ಪ್ರಾಂತ್ಯದಿಂದ ಪಳರಿವಾಟ್ಟಂವರೆಗಿನ ಸುಮಾರು 13.4 ಕಿ.ಮೀ.ವರೆಗಿನ ಮೆಟ್ರೋ ರೈಲು ಸಂಚಾರ ಆರಂಭಗೊಳ್ಳಲಿದೆ. ಇದೇ ವರ್ಷದ ಆಗಸ್ಟ್ ವೇಳೆಗೆ 5 ಕಿ.ಮೀ ದೂರದ ಪಳರಿವಾಟ್ಟಮ್ ನಿಂದ ಮಹಾರಾಜಾ ಕಾಲೇಜ್ ವರೆಗಿನ ರೈಲು ಸಂಚಾರ ಆರಂಭವಾಗಲಿದೆ. ಆದರೆ, ನಮ್ಮಲ್ಲಿ ಹಾಗಾಗಲಿಲ್ಲ. 2003ರಲ್ಲೇ ನಮ್ಮ ಮೆಟ್ರೋಗೆ ಶಂಕುಸ್ಥಾಪನೆ ನೆರವೇರಿಸಲಾಗಿತ್ತು. ಅದರಂತೆ, ಫೇಸ್ 1ರ ಕಾಮಗಾರಿ 2006ರಲ್ಲಿ ಆರಂಭಗೊಳ್ಳಬೇಕಿತ್ತು. ಆದರೆ, ಕಾಮಗಾರಿಕೆ ಹಣಕಾಸಿನ ನೆರವಿನ ವಿಚಾರದಲ್ಲಿ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಗಳ ನಡುವೆ ಪದೇ ಪದೇ ಸಭೆಗಳು ನಡೆದು, ಒಂದು ಒಮ್ಮತದ ನಿರ್ಧಾರ ಬೇಗನೇ ಸಾಧ್ಯವಾಗಲಿಲ್ಲವಾದ್ದರಿಂದ ಈ ಯೋಜನೆ ತಡವಾಗಿ ಆರಂಭವಾಯಿತು. ಇದಲ್ಲದೆ, ಕೆಲವಾರು ತಾಂತ್ರಿಕ ಅಡಚಣೆಗಳು, ಸುರಂಗ ಕೊರೆಯುವ ಯಂತ್ರಗಳಲ್ಲಿ ತಾಂತ್ರಿಕ ಸಮಸ್ಯೆಗಳು ಮುಂತಾದ ಹಲವಾರು ಅಡೆತಡೆಗಳನ್ನು ನಿವಾರಿಸಿಕೊಂಡು

ಮೆಟ್ರೋ ಉದ್ಘಾಟನೆ: ಪ್ರಧಾನಮಂತ್ರಿ ಕಚೇರಿಯ ಅಚ್ಚರಿಯ ನಿರ್ಧಾರ

ಇಲ್ಲಿ ನಿಧಾನ

ಇಲ್ಲಿ ನಿಧಾನ

ನಮ್ಮಲ್ಲಿ ಹಾಗಾಗಲಿಲ್ಲ. ಇದಕ್ಕೆ ಕಾರಣ ಅಲ್ಲಿಯದು ಪುಟ್ಟ ಪ್ರಾಜೆಕ್ಟ್. 2003ರಲ್ಲೇ ನಮ್ಮ ಮೆಟ್ರೋಗೆ ಶಂಕುಸ್ಥಾಪನೆ ನೆರವೇರಿಸಲಾಗಿತ್ತು. ಅದರಂತೆ, ಫೇಸ್ 1ರ ಕಾಮಗಾರಿ 2006ರಲ್ಲಿ ಆರಂಭಗೊಳ್ಳಬೇಕಿತ್ತು. ಆದರೆ, ಕಾಮಗಾರಿಕೆ ಹಣಕಾಸಿನ ನೆರವಿನ ವಿಚಾರದಲ್ಲಿ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಗಳ ನಡುವೆ ಪದೇ ಪದೇ ಸಭೆಗಳು ನಡೆದು, ಒಂದು ಒಮ್ಮತದ ನಿರ್ಧಾರ ಬೇಗನೇ ಸಾಧ್ಯವಾಗಲಿಲ್ಲವಾದ್ದರಿಂದ ಈ ಯೋಜನೆ ತಡವಾಗಿ ಆರಂಭವಾಯಿತು. ಇದಲ್ಲದೆ, ಸುರಂಗ ಕೊರೆಯುವ ಯಂತ್ರಗಳಲ್ಲಿ ತಾಂತ್ರಿಕ ಸಮಸ್ಯೆಗಳು ಎದುರಾಗಿದ್ದರಿಂದಾಗಿ ತಡವಾಯಿತು.

ಉದ್ಯೋಗಾವಕಾಶ

ಉದ್ಯೋಗಾವಕಾಶ

ಕೊಚ್ಚಿ ಮೆಟ್ರೋ ಸಂಸ್ಥೆಯಲ್ಲಿ ಹಲವಾರು ಮಂಗಳ ಮುಖಿಯರಿಗೆ ಉದ್ಯೋಗಾವಕಾಶ ನೀಡಿರುವುದು ಶ್ಲಾಘನೀಯ ವಿಚಾರ. ಬೆಂಗಳೂರು ಮೆಟ್ರೋದಲ್ಲಿ ಇಂಥದ್ದೊಂದು ಅನುಕೂಲ ಕಲ್ಪಿಸಲಾಗಿಲ್ಲ.

'ನಮ್ಮ ಮೆಟ್ರೋ' ಬಿಎಂಆರ್ ಸಿಎಲ್ ಉದ್ಯೋಗಕ್ಕೆ ಅರ್ಜಿ ಹಾಕಿ

ಡ್ರೈವರ್ ಲೆಸ್ ಟ್ರೈನ್

ಡ್ರೈವರ್ ಲೆಸ್ ಟ್ರೈನ್

ಅಂದಹಾಗೆ, ಕೊಚ್ಚಿ ಮೆಟ್ರೋ ರೈಲುಗಳು ಚಾಲಕ ರಹಿತ ರೈಲುಗಳು. ಇದು ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಭವಿಷ್ಯದ ಮುನ್ನುಡಿ. ಆದರೆ, ಬೆಂಗಳೂರು ಮೆಟ್ರೋ ರೈಲು ಸಂಚಾರ ಚಾಲಕ ಸಹಿತ ರೈಲುಗಳನ್ನು ಹೊಂದಿವೆ.

ಬೆಂಗಳೂರು ಮೆಟ್ರೋ ರೈಲು ಎಂಬ ಅದ್ಭುತ ಜಗತ್ತು, ಅಪರಿಚಿತ ಮುಖಗಳು....

ಪರಿಸರ ಸ್ನೇಹಿ ರೈಲು

ಪರಿಸರ ಸ್ನೇಹಿ ರೈಲು

ಕೊಚ್ಚಿ ಮೆಟ್ರೋಕ್ಕೆ ಸೋಲಾರ್ ಪ್ಯಾನೆಲ್ ಅಳವಡಿಸಲಾಗಿದ್ದು, ಅದರಿಂದ ಬರುವ ವಿದ್ಯುತ್ತನ್ನು ಅಲ್ಲಿ ರೈಲು ಓಡಿಸಲು ಬಳಸಲಾಗುತ್ತದೆ ಎಂದು ಹೇಳಲಾಗಿದೆ. ಇದೊಂದು ಪರಿಸರ ಸ್ನೇಹಿ ಹೆಜ್ಜೆ.
ಬೆಂಗಳೂರು ಮೆಟ್ರೋನಲ್ಲೂ ಅಂಥದ್ದೊಂದು ಯೋಜನೆಯನ್ನು ಕೈಗೆತ್ತಿಕೊಳ್ಳಬೇಕಿದೆ. ಸದ್ಯಕ್ಕೆ ಬೆಂಗಳೂರು ಮೆಟ್ರೋ 750 ವೋಲ್ಟ್ ಡಿಸಿ ವಿದ್ಯುತ್ ನಲ್ಲಿ ಓಡುತ್ತಿದೆ. ಬೆಂಗಳೂರಿನಲ್ಲೂ ಸೌರ ಫಲಕಗಳನ್ನು ಮೆಟ್ರೋಗೆ ಅಳವಡಿಸುವುದೊಳಿತು.

ವರ್ಟಿಕಲ್ ಗಾರ್ಡನ್

ವರ್ಟಿಕಲ್ ಗಾರ್ಡನ್

ಲಂಬಾಕಾರದ ಉದ್ಯಾನಗಳು (ವರ್ಟಿಕಲ್ ಗಾರ್ಡನ್) ಕೊಚ್ಚಿ ಮೆಟ್ರೋ ರೈಲು ಮಾರ್ಗಕ್ಕೆ ಮತ್ತಷ್ಟು ಅಂದ ಹೆಚ್ಚಿಸಿವೆ. ಪ್ರತಿ ನಾಲ್ಕು ಮೆಟ್ರೋ ಕಂಬಗಳಿಗೆ ಒಂದರಂತೆ ಇಲ್ಲಿ ವರ್ಟಿಕಲ್ ಗಾರ್ಡನ್ ರಚಿಸಲಾಗಿದೆ.

ನಮ್ಮಲ್ಲಿ ಬೆಂಗಳೂರಿನಲ್ಲಿಯೂ ವರ್ಟಿಕಲ್ ಗಾರ್ಡನ್ ಇದೆ. ಆದರೆ, ಎಲ್ಲಾ ಕಡೆ ಇಲ್ಲ. ಕೇವಲ ಆಯ್ದ ಸ್ಥಳಗಳಲ್ಲಿ ಮಾತ್ರ ಇವನ್ನು ಅಳವಡಿಸಿಕೊಳ್ಳಲಾಗಿದೆ. ಇದರ ಜತೆಗೆ, ವಿಜಯ ನಗರ ಮುಂತಾದ ಕಡೆಗಳಲ್ಲಿ ಮೆಟ್ರೋ ಕಂಬಗಳಿಗೆ ಅಲಂಕಾರ ಕಾರ್ಯ ನಡೆಯುತ್ತಿದೆ. ಎಂಜಿ ರೋಡ್ ನಲ್ಲಿರುವ ಮೆಟ್ರೋ ಸ್ಟೇಷನ್ ಬಳಿ ರಂಗೋಲಿ ಎಂಬ ರಂಗಮಂದಿರ ಕಟ್ಟಲಾಗಿದೆ. ಅಲ್ಲೂ ವರ್ಟಿಕಲ್ ಗಾರ್ಡನ್ ಇದೆ.

ಕಂಬದ ಮೇಲೊಂದು ಗಿಡವ ನೆಟ್ಟು.. ಏನಿದು 'ವರ್ಟಿಕಲ್ ಗಾರ್ಡನ್'?

ನಮ್ಮಲ್ಲಿ ಮಳೆ ಕೊಯ್ಲು ಇದೆ

ನಮ್ಮಲ್ಲಿ ಮಳೆ ಕೊಯ್ಲು ಇದೆ

ಇದು ಬೆಂಗಳೂರು ಮೆಟ್ರೋದ ವಿಶೇಷ. ಇದೂ ಒಂದು ಪರಿಸರ ಸ್ನೇಹಿ ಹೆಜ್ಜೆಯೇ. ಆದರೆ, ಈ ಸೌಲಭ್ಯ ಕೊಚ್ಚಿ ಮೆಟ್ರೋದಲ್ಲಿಲ್ಲ. ನಮ್ಮ ಮೆಟ್ರೋನ ಕೆಲವಾರು ನಿಲ್ದಾಣಗಳಲ್ಲಿ ಹಾಗೂ ಮಾರ್ಗಗಳಲ್ಲಿ ಮಳೆ ಕೊಯ್ದು ಅಳವಡಿಸಲಾಗಿದ್ದು ಅವನ್ನೇ ಮೆಟ್ರೋ ಸ್ಟೇಷನ್ ಗಳಲ್ಲಿ ಬಳಕೆ ಮಾಡಲಾಗುತ್ತಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Here is the comparison of New Kochi Metro Rail and Bengaluru's Namma Metro. The first phase will be opened to passengers in 2017.A 13.4 km (8.3 mi) section of the line from Aluva to Palarivattom will be opened to public on 17th June 2017 by Mr. Narendra modi, the Prime Minister of India.
Please Wait while comments are loading...