Breaking; 19 ಕೆಜಿ ವಾಣಿಜ್ಯ ಸಿಲಿಂಡರ್‌ಗಳ ಬೆಲೆ ಏರಿಕೆ
ನವದೆಹಲಿ, ಮೇ 01; ಮೇ ತಿಂಗಳ ಮೊದಲ ದಿನವೇ ಜನರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ. 19 ಕೆಜಿಯ ವಾಣಿಜ್ಯ ಸಿಲಿಂಡರ್‌ಗಳ ದರದಲ್ಲಿ ಏರಿಕೆಯಾಗಿತ್ತು. 2253 ರೂ. ಇದ್ದ ಸಿಲಿಂಡರ್ ದರ ಏರಿಕೆಯಾಗಿದೆ.
ಭಾನುವಾರ 19 ಕೆಜಿ ವಾಣಿಜ್ಯ ಬಳಕೆ ಸಿಲಿಂಡರ್ ದರವನ್ನು 2355 ರೂ.ಗಳಿಗೆ ಏರಿಕೆ ಮಾಡಲಾಗಿದೆ ಎಂದು ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ. ಈಗಾಗಲೇ ಬೆಲೆ ಏರಿಕೆ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ಮತ್ತೆ ಬಿಸಿ ತಟ್ಟಲಿದೆ.
ಸಾಮಾನ್ಯವಾಗಿ ತಿಂಗಳ ಮೊದಲ ದಿನ ಸಿಲಿಂಡರ್ ದರದಲ್ಲಿ ಪರಿಷ್ಕರಣೆಯಾಗುತ್ತದೆ. ಮೇ ತಿಂಗಳ ಮೊದಲ ದಿನವಾದ ಭಾನುವಾರ ವಾಣಿಜ್ಯ ಬಳಕೆ ಸಿಲಿಂಡರ್ ದರಗಳನ್ನು ಪರಿಷ್ಕರಣೆ ಮಾಡಲಾಗಿದೆ.

ತಿಂಗಳ ಮೊದಲ ದಿನವೇ ವಾಣಿಜ್ಯ ಸಿಲಿಂಡರ್‌ಗಳ ಬೆಲೆ 102 ರೂ. ಏರಿಕೆಯಾಗಿದೆ. ಏಪ್ರಿಲ್ 1ರಂದು ವಾಣಿಜ್ಯ ಸಿಲಿಂಡರ್ ಬೆಲೆ 250 ರೂ. ಏರಿಕೆಯಾಗಿತ್ತು. ಸಿಲಿಂಡರ್ ಬೆಲೆ ಪ್ರತಿ ತಿಂಗಳ ಮೊದಲ ದಿನ ಏರಿಕೆ ಮಾಡಲಾಗುತ್ತದೆ.
ಗೃಹ ಬಳಕೆ ಸಿಲಿಂಡರ್ ದರ ಮಾರ್ಚ್ 22ರಂದು 50 ರೂ. ಏರಿಕೆ ಕಂಡಿತ್ತು. ಆದರೆ ಮೇ ಮೊದಲ ದಿನ ಗೃಹ ಬಳಕೆಯ ಸಿಲಿಂಡರ್ ದರದಲ್ಲಿ ಯಾವುದೇ ಏರಿಕೆ ಮಾಡಿಲ್ಲ.












Click it and Unblock the Notifications