Get Updates
Get notified of breaking news, exclusive insights, and must-see stories!

ಕಾಮೆಡ್‌ ಕೆ ಯುಜಿಸಿಇಟಿ 2020 ಪರೀಕ್ಷೆ ಫಲಿತಾಂಶ ಪ್ರಕಟ

ನವದೆಹಲಿ, ಸೆಪ್ಟೆಂಬರ್ 03: ಕಾಮೆಡ್‌ ಕೆ ಯುಜಿಸಿಇಟಿ ಫಲಿತಾಂಶ ಪ್ರಕಟವಾಗಿದೆ. ಆಗಸ್ಟ್ 19ರಂದು ಪರೀಕ್ಷೆ ನಡೆದಿತ್ತು. 259 ಕೇಂದ್ರಗಳಲ್ಲಿ ದೇಶದ 160 ನಗರಗಳಿಂದ ಹಾಜರಾಗಿದ್ದರು.

ಒಟ್ಟು 61290 ಅಭ್ಯರ್ಥಿಗಳು ಎಂಜಿನಿಯರಿಂಗ್ ಯುಜಿ ಸೀಟುಗಳಿಗೆ ಅರ್ಜಿ ಸಲ್ಲಿಸಿದ್ದಾರೆ. ಅದರಲ್ಲಿ 43249 ಮಂದಿ ಆಗಸ್ಟ್ 19 ರಂದು ನಡೆದ ಪರೀಕ್ಷೆ ಭಾಗವಹಿಸಿದ್ದರು. ಕರ್ನಾಟಕದ 14,322 ಹಾಗೂ ಕರ್ನಾಟಕದ ಹೊರಗಡೆಯ 24,544 ಮಂದಿ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು.

ಆಗಸ್ಟ್ 23 ರಂದು ಆನ್ಸರ್ ಕೀ ಪ್ರಕಟಿಸಲಾಗಿತ್ತು. ಆಗಸ್ಟ್ 31 ರಂದು ಅಂತಿಮ ಆನ್ಸರ್ ಕೀ ಪ್ರಕಟಿಸಲಾಗಿತ್ತು.

COMEDK UGCET Result 2020 Announced- Here Is How To Download Rank Card

-5 ಸಾವಿರ ರ‍್ಯಾಂಕ್‌ ಹೋಲ್ಡರ್‌ಗಳ ಪೈಕಿ 1219 ಮಂದಿ ಶೇ.70 ರಷ್ಟು ಫಲಿತಾಂಶ ಪಡೆದಿದ್ದಾರೆ. ಎಂಟ್ರೆನ್ಸ್ ಟೆಸ್ಟ್‌ನಲ್ಲಿ ಶೇ. 56.67ರಷ್ಟು ಅಂಕ ಗಳಿಸಿದ್ದಾರೆ. ಅದರಲ್ಲಿ 3781 ಮಂದಿ ಶೇ. 56.67ಕ್ಕಿಂತ ಅಂಕ ಗಳಿಸಿದ್ದು ಶೇ.70ಕ್ಕಿಂತ ಕಡಿಮೆ ಇದ್ದಾರೆ.

-100 ರ‍್ಯಾಂಕ್‌ಹೋಲ್ಡರ್‌ಗಳಲ್ಲಿ 45 ಮಂದಿ ಕರ್ನಾಟಕದವರಿದ್ದಾರೆ. ಉಳಿದ 55 ಮಂದಿ ಬೇರೆ ಬೇರೆ ರಾಜ್ಯದವರಾಗಿದ್ದಾರೆ.
-1000ರದಲ್ಲಿ 346 ಮಂದಿ ಕರ್ನಾಟಕದ ರ‍್ಯಾಂಕ್‌ ಹೋಲ್ಡರ್‌ಗಳಿದ್ದಾರೆ.

-ಮೊದಲ ಹತ್ತು ರ‍್ಯಾಂಕ್‌ಗಳಲ್ಲಿ ಇಬ್ಬರು ಕರ್ನಾಟಕದವರಿದ್ದಾರೆ.
-ಅರ್ಹ ಅಭ್ಯರ್ಥಿಗಳ ರ‍್ಯಾಂಕ್‌ ಕಾರ್ಡ್ www.comedk.orgನಲ್ಲಿ ಲಭ್ಯವಾಗಲಿದೆ.
-ಓರ್ವ ಅಭ್ಯರ್ಥಿ 180ಕ್ಕೆ 160 ಅಂಕಗಳನ್ನು ಗಳಿಸಿದ್ದಾರೆ.

ರ‍್ಯಾಂಕ್‌ ಪಡೆದವರ ಪಟ್ಟಿ
-ರಕ್ಷಿತ್ ಎಂ-ಬೆಂಗಳೂರು
-ಸೌರವ್ ಕುಮಾರ್-ರಾಜಸ್ಥಾನ
-ಅನುಪಮಾ ಸಿನ್ಹ-ಬಿಹಾರ್
-ಮೇಘಾಂಶ್ ಮುಂಡ್ರಾ-ಜಾರ್ಖಂಡ್
-ಆರ್ಯನ್ ರಾಜ್-ಬಿಹಾರ್
-ಅಂಕಿತ್ ಭೂರನ್-ರಾಜಸ್ಥಾನ

ಫಲಿತಾಂಶ ನೋಡುವುದು ಹೇಗೆ?
-www.comedk.org ಲಾಗ್‌ಇನ್ ಆಗಬೇಕು
-ಅದರಲ್ಲಿ COMEDK UGCET Results 2020 ಲಿಂಕ್ ಕ್ಲಿಕ್ ಮಾಡಬೇಕು
-ಲಾಗ್‌ ಇನ್ ಆಗಿ
-ನಿಮ್ಮ ಫಲಿತಾಂಶ ಡಿಸ್‌ಪ್ಲೇ ಆಗಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+