Colonel Sophia Qureshi: ಹಿಂದೂ - ಮುಸ್ಲಿಂ ವಿಭಜನೆಯ ಸ್ಟ್ರಾಟರ್ಜಿಗೆ ಪ್ರತ್ಯುತ್ತರದ ರೂಪಕ ಕರ್ನಲ್ "ಸೋಫಿಯಾ ಖುರೇಷಿ"!

Colonel Sophia Qureshi: ಸೋಫಿಯಾ ಖುರೇಷಿ.. ಭಾರತೀಯ ಸೇನೆಯ ಮುಸ್ಲಿಂ ಮಹಿಳಾ ಅಧಿಕಾರಿ. ಹೌದು ಭಾರತೀಯ ಸೇನೆಯು ಪ್ರತೀಕಾರದ ಉತ್ತರವನ್ನು ಪಾಕಿಸ್ತಾನ ಹಾಗೂ ಪಾಕ್‌ನ ಉಗ್ರರಿಗೆ ನೀಡಿದೆ. ಸರಣಿ ಕ್ಷಿಪಣಿ ದಾಳಿಯ ಮೂಲಕ ಉಗ್ರರ ಅಡಗುತಾಣಗಳನ್ನು ಸರ್ವನಾಶ ಮಾಡಿದೆ. ಆಪರೇಷನ್‌ ಸಿಂಧೂರ ಕಾರ್ಯಾಚರಣೆಯಲ್ಲಿ ಇವರು ಸಹ ಭಾಗಿಯಾಗಿದ್ದರು. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರು ನಡೆಸಿದ ದಾಳಿಯ ಮುಖ್ಯ ಉದ್ದೇಶಗಳಲ್ಲಿ ಒಂದು ಭಾರತದಲ್ಲಿ ಹಿಂದೂ ಹಾಗೂ ಮುಸ್ಲಿಮರ ನಡುವೆ ವಿಭಜನೆಯನ್ನು ಸೃಷ್ಟಿ ಮಾಡಿ. ಭಾರತದಲ್ಲಿ ಕೋಮುಗಲಭೆಯನ್ನು ಹೆಚ್ಚಿಸುವುದು ಸಹ. ಭಾರತದಲ್ಲಿ ಏಪ್ರಿಲ್‌ 22ರಂದು ನಡೆದ ಉಗ್ರರ ದಾಳಿಯಲ್ಲಿ ಹಿಂದೂಗಳನ್ನೇ ಗುರಿಯಾಗಿಸಿಕೊಂಡು ಉಗ್ರರು ದಾಳಿ ಮಾಡಿದ್ದರು. ನೀವು ಹಿಂದೂ ಇಲ್ಲ ಮುಸ್ಲಿಮರೇ ಅಂತ ಪ್ರಶ್ನೆ ಮಾಡಲಾಗಿತ್ತು. ಹಿಂದೂ ಎಂದರೆ ಗುಂಡಿನ ದಾಳಿ ಮಾಡಲಾಗಿತ್ತು. ಭಾರತವು ಇದೀಗ ಪ್ರತೀಕಾರವನ್ನು ತೆಗೆದುಕೊಂಡಿದೆ.

ಇಂದು ಭಾರತೀಯ ಸೇನೆ ನೀಡಿದ ಪತ್ರಿಕಾಗೋಷ್ಠಿಯಲ್ಲಿ ಕರ್ನಲ್‌ ಸೋಫಿಯಾ ಖುರೇಷಿ ಹಾಗೂ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಪ್ರಮುಖರು. ಇವರ ಮೂಲಕವೇ ಭಾರತೀಯ ಸೇನೆಯು ಪಾಕ್‌ ಹಾಗೂ ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿರುವ 9 ಉಗ್ರರ ತಾಣಗಳ ಮೇಲೆ ಕ್ಷಿಪಣೆ ದಾಳಿಯನ್ನು ಮಾಡಿದೆ. ಬರಹಗಾರ ಚರಣ್ ಐವರ್ನಾಡು ಅವರು, ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಲಿಪಶುಗಳಿಗೆ ನ್ಯಾಯ ಒದಗಿಸಲು ಆಪರೇಷನ್ ಸಿಂಧೂರ್ - ಕರ್ನಲ್ ಸೋಫಿಯಾ ಖುರೇಷಿ 💕 ಎಂದು ಪೋಸ್ಟ್‌ ಮಾಡಿದ್ದಾರೆ. ಮುಂದುವರಿದು ಗುಜರಾತ್‌ ಮೂಲದ ಮುಸ್ಲಿಂ ಹೆಣ್ಣು ಮಗಳು. ಮತ್ತೆ, ಧರ್ಮ ಯಾಕೆ ಎಂದು ಕೇಳುವುದಕ್ಕೆ ಅರ್ಥ ಇಲ್ಲ... ಅಜ್ಜ ಸೈನಿಕ, ಅಪ್ಪ ಸೈನ್ಯದಲ್ಲಿ ಧಾರ್ಮಿಕ ಶಿಕ್ಷಕ. ಪತಿಯೂ ಸೈನಿಕ.

ವಿಂಗ್‌ ಕಮಾಂಡರ್‌ ವ್ಯೋಮಿಕಾ ಸಿಂಗ್‌ ಜೊತೆಗೆ ಪತ್ರಿಕಾ ಹೇಳಿಕೆ ನೀಡಿದ್ದು, ದೇಶಕ್ಕೊಂದು ದೊಡ್ಡ ಸಂದೇಶವನ್ನು ನೀಡಿದೆ ಎಂದು ಹೇಳಿದ್ದಾರೆ.

Colonel Sophia Qureshi Metaphor for Response to Hindu-Muslim Division Strategy Operation Sindoor

ಹಿರಿಯ ಪತ್ರಕರ್ತ ರಾಜಾರಾಂ ತಲ್ಲೂರು ಅವರು ಸಹ "ಈ ಡಿಟೇಲಿಂಗ್ - ಇಷ್ಟವಾಯಿತು..." ಎನ್ನುವ ಸಾಲುಗಳೊಂದಿಗೆ ಸುದೀರ್ಘವಾಗಿ ಭಾರತೀಯ ಸೇನೆ ಹಾಗೂ ಭಾರತ ಆಪರೇಷನ್‌ ಸಿಂಧೂರ ಕಾರ್ಯಾಚರಣೆಯನ್ನು ಹೇಗೆ ನಿಭಾಯಿಸಿದೆ ಎನ್ನುವುದನ್ನು ವಿವರಿಸಿದ್ದಾರೆ.

ಭಾರತೀಯ ಸೇನೆ ತನ್ನ ಪಾಡಿಗೆ ತನ್ನ ಕೆಲಸವನ್ನು ಬಹಳ ತಂತ್ರಗಾರಿಕೆಯೊಂದಿಗೆ, ನಿಖರವಾಗಿ, ಫಲಿತಾಂಶ ಸಹಿತ ಮಾಡಿ ಮುಗಿಸಿದೆ. ಮಾತ್ರವಲ್ಲ, ತನ್ನ ಈ ಕಾರ್ಯಾಚರಣೆಯ ಬಗ್ಗೆ ದೇಶದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ, ದೇಶದಿಂದ ಹೊರಗೆ ಜಗತ್ತಿಗೆ ಕಳುಹಿಸಬೇಕಾಗಿರುವ ಸಂದೇಶವನ್ನು ಗೊಂದಲಕ್ಕೆಡೆಯಿಲ್ಲದಂತೆ ಕಳುಹಿಸುವಲ್ಲಿ ವಹಿಸಿದ ಎಚ್ಚರ ಕೂಡ ಶ್ಲಾಘನಾರ್ಹ.

Colonel Sophia Qureshi Metaphor for Response to Hindu-Muslim Division Strategy Operation Sindoor

ಇಂತಹ ಸೇನಾಕಾರ್ಯಾಚರಣೆಯ ಸುದ್ದಿಗಳನ್ನು ಸಾಂಪ್ರದಾಯಿಕವಾಗಿ ನೀಡುವುದು ಭಾರತ ಸರ್ಕಾರದ ರಕ್ಷಣಾ ಇಲಾಖೆ (MoD) ಮತ್ತು ಸೇನೆಯ ವಕ್ತಾರರು. ನಿನ್ನೆ ತಡರಾತ್ರಿಯ ಕಾರ್ಯಾಚರಣೆಯ ಬಳಿಕ, ಇಂದು ಬೆಳಗ್ಗೆ ಪ್ರೆಸ್ ಬ್ರೀಫಿಂಗ್ ಇದೆ ಎಂದು ಪ್ರಕಟಿಸಿದ್ದು, ಎಂದಿನಂತೆ MoD. ಆದರೆ, ಬ್ರೀಫಿಂಗ್ ವೇಳೆ ಅಚ್ಚರಿ ಕಾದಿತ್ತು ಎಂದು ಹೇಳಿದ್ದಾರೆ.

ಮುಂದುವರಿದು, ಮಾಧ್ಯಮ ಬ್ರೀಫಿಂಗ್ ಹೊಣೆ ಹೊತ್ತದ್ದು MOD ಅಧಿಕಾರಿಗಳಲ್ಲ, ಬದಲಾಗಿ ದೇಶದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ. ಅವರು ಈ ಹಿಂದೆ ಚೀನಾಕ್ಕೆ ಭಾರತದ ರಾಯಭಾರಿ ಆಗಿದ್ದವರು. ಇದು ಬಲುದೊಡ್ಡ ಸಂದೇಶ. ಏಕೆಂದರೆ, ನಡೆದಿರುವುದು ಯುದ್ಧ ಅಲ್ಲ, ಬದಲಾಗಿ ದೇಶದ ಭದ್ರತೆಯನ್ನು ಭೇದಿಸಿ, ದೇಶಕ್ಕೆ ಹಾನಿ ಮಾಡಿದ ಭಯೋತ್ಪಾದಕರ ಮೂಲಸ್ಥಾನಗಳ ಮೇಲೆ, ಅವರನ್ನು ಶಿಕ್ಷಿಸುವುದಕ್ಕಾಗಿ ನಡೆದ ಪ್ರತಿ ದಾಳಿ. ಶತ್ರು ದೇಶದ ಸಿವಿಲಿಯನ್, ಮಿಲಿಟರಿ ನೆಲೆಗಳು ಈ ದಾಳಿಯ ಗುರಿ ಅಲ್ಲ. ಹಾಗಾಗಿ, ಇಲ್ಲಿ ಯುದ್ಧದ ಪ್ರಶ್ನೆ ಏಳುವುದಿಲ್ಲ. ಈ ಕಾರಣಕ್ಕಾಗಿ, ಜಗತ್ತಿಗೆ ಈ ಸಂದೇಶ ಸಾರಲು ವಿದೇಶಾಂಗ ಕಾರ್ಯದರ್ಶಿಗಳು ಸಮರ್ಪಕವಾದ ಆಯ್ಕೆ.

ನಡೆದಿರುವ ಕಾರ್ಯಾಚರಣೆಗಳನ್ನು ವಿವರಿಸಿದ್ದು, ಕರ್ನಲ್ ಸೋಫಿಯಾ ಖುರೇಷಿ ಮತ್ತು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಎಂಬ ಇಬ್ಬರು ಮಹಿಳಾ ಸೇನಾಧಿಕಾರಿಗಳು. ಸಾಮಾನ್ಯವಾಗಿ ಭೂಸೇನೆಯ ಹಿರಿಯ ಅಧಿಕಾರಿಯೊಬ್ಬರು ಇಂತಹವನ್ನು ನಿಭಾಯಿಸುವುದು ವಾಡಿಕೆ. ಆದರೆ, 2020ರಲ್ಲಿ ಸೇನೆಯ ಮೂರೂ ವಿಭಾಗಗಳನ್ನು ಏಕತ್ರಗೊಳಿಸಿ, "ಚೀಫ್ ಆಫ್ ಡಿಫೆನ್ಸ್ ಸ್ಟಾಫ್" ಎಂಬ ಮೂರೂ ಪಡೆಗಳ ಮುಖ್ಯಸ್ಥರ ಹುದ್ದೆ (ಈಗ ಈ ಹುದ್ದೆಯಲ್ಲಿರುವವರು ಜ| ಅನಿಲ್ ಚೌಹಾಣ್) ನೇಮಕ ಆದ ಬಳಿಕ, ಸೇನಾಪಡೆಗಳ ನಡುವಿನ "ಥಿಯೇಟರೈಸೇಷನ್" ಸಮನ್ವಯ ಮುಪ್ಪುರಿಗೊಳ್ಳತೊಡಗಿದೆ. ಈ ಪ್ರಕ್ರಿಯೆಯ ಫಲಿತಾಂಶವಾಗಿ ಕಾರ್ಪ್ಸ್ ಆಫ್ ಸಿಗ್ನಲ್ಸ್‌ (ಮಿಲಿಟರಿ ಸಂವಹನ) ಪಡೆಯ ಕರ್ನಲ್ ದರ್ಜೆಯ ಅಧಿಕಾರಿ ಮತ್ತು ವಾಯಪಡೆಯ ಹೆಲಿಕಾಪ್ಟರ್ ಪೈಲಟ್ ಆಗಿರುವ ವಿಂಗ್ ಕಮಾಂಡರ್ ಇಬ್ಬರೂ ಒಂದೇ ಸ್ವರದಲ್ಲಿ ತಮ್ಮ ಸೇನಾಪಡೆಗಳ ಕಾರ್ಯಾಚರಣೆಯನ್ನು ಜಗತ್ತಿಗೆ ವಿವರಿಸುವುದು ಸಾಧ್ಯವಾಯಿತು ಎಂದಿದ್ದಾರೆ.

ವಿವರಣೆ ನೀಡಿದ ಬಳಿಕ, ವಿದೇಶಾಂಗ ಕಾರ್ಯದರ್ಶಿಗಳು, ಪತ್ರಕರ್ತರ ಪ್ರಶ್ನೆಗಳಿಗೂ ಅವಕಾಶ ನೀಡದೇ, ಈಗಿನ್ನೂ ಪರಿಸ್ಥಿತಿ "ಬೆಳವಣಿಗೆಯ ಹಂತದಲ್ಲಿದೆ" ಎಂದು ಹೇಳಿ ಗೋಷ್ಠಿಯನ್ನು ಮುಗಿಸಿದ್ದು ಕೂಡ - ಇದೆಲ್ಲವೂ ಸುಯೋಜಿತ ಎಂಬುದನ್ನು ಖಚಿತಪಡಿಸುತ್ತದೆ.

ತನ್ನ ಕಾರ್ಯಾಚರಣೆಯನ್ನು ಇಷ್ಟೊಂದು ಸ್ಪಷ್ಟತೆಯಿಂದ, ಫಲಿತಾಂಶ ಸಹಿತ ಪ್ರಸ್ತುತಪಡಿಸಿದ ಮತ್ತು ಸೇನೆಯ ಕುರಿತು ದೇಶದ ಜನರ ವಿಶ್ವಾಸವನ್ನು ಮತ್ತೊಮ್ಮೆ ಸಾಬೀತುಪಡಿಸಿದ ಭಾರತೀಯ ಸೇನಾಪಡೆಗಳಿಗೆ "ಸಲ್ಯೂಟ್!" ಎಂದು ಹೇಳಿದ್ದಾರೆ. ಇನ್ನು ಇದೀಗ ಈ ಪೋಸ್ಟ್‌ ಭಾರೀ ವೈರಲ್ ಆಗುತ್ತಿದೆ.

ಬರಹಗಾರ ಹರೀಶ್ ಗಂಗಾಧರ್ ಅವರು, ಪಾಕಿಸ್ತಾನ ಮೊದಲಿನಿಂದಲೂ ಎಲ್ಲವನ್ನೂ ನಿರಾಕರಿಸುತ್ತಲೇ ಬಂದಿದೆ. ಕಾರ್ಗಿಲ್ ದಾಳಿ ಮಾಡಿಲ್ಲ ಅನ್ನುತ್ತೆ, ಮುಂಬೈ ದಾಳಿಯಲ್ಲಿ ತನ್ನ ಕೈವಾಡ ಇಲ್ಲ ಅನ್ನುತ್ತೆ, ಭಯೋತ್ಪಾದಕರ ತರಬೇತಿ ಮತ್ತು ಅಡಗುದಾಣಗಳು ಪಾಕ್ ಆಕ್ರಮಿತ ಕಾಶ್ಮೀರದಲ್ಲಿಲ್ಲ ಅಂತ ಹೇಳುತ್ತೆ. ಆದ್ರೆ ಅವರ ಹೇಳಿಕಗಳನ್ನು ನಂಬುವವರಿಲ್ಲ. ಒಸಾಮಾ ಬಿನ್ ಲಾಡೆನ್ ಅಭೂತಬಾದ್ ಸೇನಾ ನೆಲೆಯ ಬಳಿಯೇ ಇದ್ದ ಎಂಬುದು ಜಗತ್ತಿಗೇ ತಿಳಿದ ಬಳಿಕ ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನಕ್ಕೆ ಮತ್ತಾವ ಕ್ರೆಡಿಬಿಲಿಟಿಯೂ ಉಳಿದಿಲ್ಲ.

ಪೆಹೆಲ್ಗಾಮ್ ನರಮೇಧದ ಬಳಿಕ ಭಾರತ ಬಹಳ ತಾಳ್ಮೆ, ಸಂಯಮ ಮತ್ತು ನಿಖರ ರೆಸ್ಪಾನ್ಸ್ ನೀಡಿದೆ. ದಾಳಿಯ ನಂತರ ಭಾರತ ಸರ್ಕಾರ ನೀಡಿದ ಪತ್ರಿಕಾ ಪ್ರಕಟಣೆಯನ್ನು ನಾವೊಮ್ಮೆ ಗಮನಿಸಬೇಕು. ಒಂದು ಜವಾಬ್ದಾರಿಯುತ, ಶಾಂತಿ ಬಯಸುವ ರಾಷ್ಟ್ರ ನಮ್ಮದು ಎಂಬುದನ್ನು ಭಾರತ ಮತ್ತೊಮ್ಮೆ ಸಾಬೀತುಪಡಿಸಿದೆ.

ಆಪರೇಷನ್ ಹೆಸರು ಆಕ್ರಮಣಕಾರಿಯಾಗಿರದೆ "ಆಪರೇಷನ್ ಸಿಂಧೂರ" ಎಂದಾಗಿದೆ. ಪೆಹೆಲ್ಗಾಮ್‌ನಲ್ಲಿ ತಮ್ಮ ಪ್ರಿಯಕರರನ್ನು ಕಳೆದುಕೊಂಡ ಹೆಣ್ಣುಮಕ್ಕಳಿಗೆ ಘನತೆ, ಗೌರವ ಸೂಚಿಸುವ ಹೆಸರಿದಾಗಿರಬಹುದು. ಇಪ್ಪತೈದು ಮುಗ್ಧ ಭಾರತೀಯರನ್ನು ಮತ್ತು ಒಬ್ಬ ನೇಪಾಳಿಯನ್ನು ಬರ್ಬರವಾಗಿ ಕೊಂದ ಹಿನ್ನಲೆಯಲ್ಲಿ ಈ ಹೆಜ್ಜೆಯನ್ನಿಡಲಾಗಿದೆ ಎಂದು ಸ್ಪಷ್ಟಪಡಿಸಿರುವ ಭಾರತ

"ನಮ್ಮ ನಡೆ ನಿರ್ದಿಷ್ಟ, ವಿವೇಚನಾಭರಿತ ಮತ್ತು ಉದ್ವಿಗ್ನತೆ ಹೆಚ್ಚಿಸುವ ಉದ್ದೇಶವಲ್ಲದ್ದು - Our actions have been focused, measured and non- escalatory in nature." ಎಂದು ಹೇಳಿದೆ. ಮುಂದುವರೆದು ಭಾರತ ಈ ದಾಳಿಗಳನ್ನು ಪಾಕಿಸ್ತಾನದ ಸೇನೆ ನೆಲಗಳ ಮೇಲೆ ಮಾಡಿಲ್ಲ ಮತ್ತು ದಾಳಿಯ ನೆಲೆಗಳ ಆಯ್ಕೆ ಮತ್ತು ವಿಧಾನವನ್ನು ಸಾಕಷ್ಟು ಸಂಯಮವಹಿಸಿ (considerable restraint) ನಿರ್ಧರಿಸಲಾಗಿದೆ ಎಂದು ಭಾರತ ವಿವರ ನೀಡಿದೆ.

ಈ ಪತ್ರಿಕಾ ಹೇಳಿಕೆಯಲ್ಲಿ ಸರ್ಕಾರ ಬಳಸಿರುವ ಭಾಷೆಯ ಬಗ್ಗೆ ನನಗೆ ಅಪಾರ ಹೆಮ್ಮೆಯಿದೆ. ಪ್ರತಿ ಪದವೂ ಅಳೆದು ತೂಗಿ ಬಳಸಲಾಗಿದೆ ಅದರಲ್ಲಿರುವ ಸ್ಪಷ್ಟ ಪದಗಳು ನಮ್ಮ ನಿಲುವುಗಳನ್ನು ತಣ್ಣಗೆ ಹೇಳಿಬಿಡುತ್ತವೆ- "ಭಾರತಕ್ಕೆ ಅಗಾಧ ಸಂಯಮವಿದೆ. ಆದರೆ ಈ ಸಂಯಮವನ್ನು ಪರೀಕ್ಷೆ ಮಾಡಬೇಡಿ. ನಮ್ಮನ್ನು ಕೆಣಕಿದರೆ ನಾವು ತಾಳಬಹುದಾದ ಉಗ್ರ ರೂಪದ ಒಂದು ಝಲಕ್ ಇಂದು ನೋಡಿದ್ದೀರಿ. ಎಚ್ಚರ!" ಎಂಬಂತಿದೆ ಪ್ರೆಸ್ ರಿಲೀಸ್. ಹ್ಯಾಟ್ಸ್ ಆಫ್ ಟು ದ ಭಾರತ ಸರ್ಕಾರ. ಭಾರತ ಸರ್ಕಾರ ನೀಡಿದ ಪತ್ರಿಕಾ ಹೇಳಿಕೆಯಷ್ಟೇ ನಮಗೆ ಮುಖ್ಯವಾಗಬೇಕು. ಮಾಧ್ಯಮಗಳು ಬಿತ್ತರಿಸುವ ಸುದ್ದಿಗಳಲ್ಲ. Nobody needs a full scale War.... ಎಂದು ಹೇಳೀದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+