Weather Alert: ಶೀತ ಅಲೆ, ದಟ್ಟವಾದ ಮಂಜು; ಶಾಲೆಗಳಿಗೆ ರಜೆ ಘೋಷಣೆ

2024ರಲ್ಲಿ ವಿಪರೀತ ಬಿಸಿಲು, ಶಾಖದ ಅಲೆಗೆ ತತ್ತರಿಸಿದ್ದ ಭಾರತದ ಹಲವು ಭಾಗಗಳಲ್ಲಿ ಬಳಿಕ ಭಾರಿ ಮಳೆಯಿಂದಾಗಿ ಪ್ರವಾಹ ಉಂಟಾಗಿತ್ತು. ಈಗ ಚಳಿ ದೇಶದ ಜನರನ್ನು ನಡುಗಿಸುತ್ತಿದೆ. ಅದರಲ್ಲೂ ಉತ್ತರ ಭಾರತದಲ್ಲಿ ಶೀತದ ಅಲೆಯಿಂದಾಗಿ ಜನ ತತ್ತರಿಸಿದ್ದಾರೆ. ಕೆಲವು ಸ್ಥಳಗಳಲ್ಲಿ ನೀರು ಮಂಜುಗಡ್ಡೆಯಾಗುವ ಮಟ್ಟಕ್ಕೆ ತಾಪಮಾನ ಕಡಿಮೆಯಾಗಿದ್ದು, ದಟ್ಟ ಮಂಜು ಆವರಿಸಿದ್ದ ಕಾರಣ ವಿಮಾನ, ರೈಲು ಮತ್ತು ರಸ್ತೆ ಸಂಚಾರಕ್ಕೂ ಅಡಚಣೆಯಾಗಿದೆ.

ದೆಹಲಿ-ಎನ್‌ಸಿಆರ್ ಸೇರಿದಂತೆ ಕೆಲವು ಪ್ರದೇಶಗಳಲ್ಲಿ ತೀವ್ರ ಮಂಜು ಆವರಿಸಿದ್ದರಿಂದ ಜನ ಜೀವನ ಅಸ್ತವ್ಯಸ್ತವಾಗಿದೆ. ಶುಕ್ರವಾರ ಮತ್ತು ಶನಿವಾರ ಮಂಜು ದಟ್ಟವಾಗಿ ಕವಿದ ಪರಿಣಾಮ ಗೋಚರತೆ ಪ್ರಮಾಣ ಶೂನ್ಯಕ್ಕೆ ಇಳಿದಿದ್ದರಿಂದ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಿತ್ತು.

cold wave dense fog north india schools closed these parts

ಉತ್ತರ ಭಾರತದ ಹಲವು ಕಡೆ ಜನವರಿ 2 ಮತ್ತು 3ರಂದು ಪರಿಸ್ಥಿತಿ ಸುಧಾರಿಸಿದ್ದರೂ ಸಹ ಭಾನುವಾರ ದೆಹಲಿಯಲ್ಲಿ ಮೂರನೇ ದಿನ ಕೂಡ ದಟ್ಟ ಮಂಜು ಆವರಿಸಿತ್ತು. 3.5 ಗಂಟೆಗಳ ಕಾಲ ತೀವ್ರ ಮಂಜು ಕವಿದ ಕಾರಣ ಗೋಚರತೆ ಕಡಿಮೆಯಾಗಿತ್ತು. ದೆಹಲಿಯಲ್ಲಿ ಭಾನುವಾರ ಗರಿಷ್ಠ ತಾಪಮಾನ 18.6 ಡಿಗ್ರಿ ಸೆಲ್ಸಿಯಸ್ ಇದ್ದರೆ, ಕನಿಷ್ಠ 9.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಎಂದು ಐಎಂಡಿ ತಿಳಿಸಿದೆ.

ಸೋಮವಾರ ಮಳೆ ಮುನ್ಸೂಚನೆ

ಹವಾಮಾನ ವರದಿಯ ಪ್ರಕಾರ ಸೋಮವಾರ ಮೋಡ ಕವಿದ ವಾತಾವರಣ ಇರುವ ಸೂಚನೆ ಇದ್ದು, ಗುಡುಗು ಸಹಿತ ಹಗುರವಾದ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಿದೆ.

ಜಾರ್ಖಂಡ್‌ನಲ್ಲಿ ಶಾಲೆಗಳಿಗೆ ರಜೆ

ಜಾರ್ಖಂಡ್‌ನಲ್ಲಿ ಶೀತ ಅಲೆಯ ಹೊಡೆತ ಹೆಚ್ಚಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಜನವರಿ 7 ರಿಂದ 13ನೇ ತಾರೀಕಿನವರೆಗೆ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಶೀತ ಅಲೆಗಳ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರಿ, ಅನುದಾನಿತ, ಖಾಸಗಿ ಸೇರಿದಂತೆ ಎಲ್ಲಾ ಶಾಲೆಗಳಿಗೆ ರಜೆ ಘೋಷಣೆ ಮಾಡಿ ಸರ್ಕಾರ ಆದೇಶಿಸಿದೆ.

ಕಾಶ್ಮೀರದಲ್ಲಿ ಹಿಮಪಾತ

ಜಮ್ಮು ಮತ್ತು ಕಾಶ್ಮೀರದ ಬೇಸಿಗೆಯ ರಾಜಧಾನಿ ಶ್ರೀನಗರದಲ್ಲಿ ಸತತ ಎರಡನೇ ದಿನ ಕೂಡ ತಾಪಮಾನ ಮೈನಸ್‌ಗೆ ತಲುಪಿದೆ. ಕಾಶ್ಮೀರದ ಬಹುತೇಕ ಕಡೆಗಳಲ್ಲಿ ಭಾನುವಾರ ಕೂಡ ಹಿಮಪಾತ ಮುಂದುವರೆದಿದೆ. ಉತ್ತರ ಕಾಶ್ಮೀರದ ಬಂಡಿಪೋರಾ, ಬಾರಾಮುಲ್ಲಾ ಮತ್ತು ಕುಪ್ವಾರ ಜಿಲ್ಲೆಗಳ ಹಲವಾರು ಪ್ರದೇಶಗಳಲ್ಲಿ ಮತ್ತು ಮಧ್ಯ ಕಾಶ್ಮೀರದ ಬುದ್ಗಾಮ್ ಮತ್ತು ಗಂದರ್‌ಬಾಲ್ ಜಿಲ್ಲೆಗಳ ಕೆಲವು ಹಿಮಪಾತವಾಗಿದೆ ಎಂದು ವರದಿಯಾಗಿದೆ.

ಪಂಜಾಬ್, ಹರಿಯಾಣ ನಡುಗಿಸಿದ ಚಳಿ

ಭಾನುವಾರ ಹರಿಯಾಣ ಮತ್ತು ಪಂಜಾಬ್‌ನ ಅನೇಕ ಸ್ಥಳಗಳಲ್ಲಿ ಶೀತ ಹವಾಮಾನ ಮತ್ತು ಮಂಜು ಕವಿದ ವಾತಾವರಣವಿತ್ತು. ಹರಿಯಾಣದಲ್ಲಿ ಕರ್ನಾಲ್‌ನಲ್ಲಿ 8 ಡಿಗ್ರಿ ಸೆಲ್ಸಿಯಸ್, ಅಂಬಾಲಾದಲ್ಲಿ 8.3 ಡಿಗ್ರಿ ಸೆಲ್ಸಿಯಸ್, ಹಿಸಾರ್‌ನಲ್ಲಿ 8.8 ಡಿಗ್ರಿ ಸೆಲ್ಸಿಯಸ್, ಭಿವಾನಿಯಲ್ಲಿ 8.9 ಡಿಗ್ರಿ ಸೆಲ್ಸಿಯಸ್, ಗುರುಗ್ರಾಮ್‌ನಲ್ಲಿ 9.3 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.

ಬಿಹಾರದಲ್ಲಿ ಕೂಡ ಶೀತ ಅಲೆಯ ಅಬ್ಬರಕ್ಕೆ ಜನ ನಡುಗಿದ್ದಾರೆ. ಹಲವು ಸ್ಥಳಗಳಲ್ಲಿ ಕನಿಷ್ಠ ತಾಪಮಾನ 10 ಡಿಗ್ರಿ ಸೆಲ್ಸಿಯಸ್‌ಗೆ ಕಡಿಮೆಯಾಗಿದೆ. ಪಾಟ್ನಾದಲ್ಲಿ ತೀವ್ರ ಚಳಿಯ ಕಾರಣ 8 ನೇ ತರಗತಿವರೆಗಿನ ಎಲ್ಲಾ ಶಾಲೆಗಳು, ರಾಜ್ಯ ರಾಜಧಾನಿಯಲ್ಲಿ ಪ್ರಿಸ್ಕೂಲ್‌ಗಳು, ಅಂಗನವಾಡಿ ಕೇಂದ್ರಗಳು ಮತ್ತು ಕೋಚಿಂಗ್ ಸೆಂಟರ್‌ಗಳು ಸೇರಿದಂತೆ ಖಾಸಗಿ ಮತ್ತು ಸರ್ಕಾರಿ ಶಾಲೆಗಳಿಗೆ ಜನವರಿ 6ರಿಂದ ಜನವರಿ 11 ರವರೆಗೆ ರಜೆ ಘೋಷಣೆ ಮಾಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+