ತೆಂಗು ಕೃಷಿಯಲ್ಲಿ ಐತಿಹಾಸಿಕ ಸಾಧನೆ.. 14 ಲಕ್ಷ ರೂ.ಗೂ ಅಧಿಕ ಆದಾಯ ಗಳಿಸಿ ಮಾದರಿಯಾದ ರೈತನ ಯಶಸ್ಸಿನ ಸೀಕ್ರೆಟ್

Coconut: ಸಾಮಾನ್ಯವಾಗಿ ಸಣ್ಣ ಪ್ರಮಾಣದಲ್ಲಿ ಕೃಷಿ ಮಾಡಿ ದಾಖಲೆಯ ಆದಾಯ ಗಳಿಸುತ್ತಿರುವ ಕಥೆಗಳನ್ನು ಕೇಳುತ್ತಲೇ ಇರುತ್ತೇವೆ. ಹಾಗೆಯೇ ಇದೀಗ ಇಲ್ಲೊಬ್ಬ ರೈತರೊಬ್ಬರು ಬರೀ ತೆಂಗಿನ ಕಾಯಿಯಲ್ಲೇ ಲಕ್ಷ.. ಲಕ್ಷ ಸಂಪಾದನೆ ಮಾಡಿ ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ. ಈ ಕುರಿತ ಇಂಟರೆಸ್ಟಿಂಗ್ ಸ್ಟೋರಿಯನ್ನ ಇಲ್ಲಿ ನೀಡಲಾಗಿದೆ ಕಣ್ಣಾಡಿಸಿ.

ಸಾಂಪ್ರದಾಯಿಕ ಕೃಷಿಗೆ ವೈಜ್ಞಾನಿಕ ಹಾಗೂ ನೈಸರ್ಗಿಕ ಪದ್ಧತಿಗಳನ್ನು ಅಳವಡಿಸಿಕೊಂಡರೆ ತೆಂಗು ಕೃಷಿಯು ಅತ್ಯಂತ ಲಾಭದಾಯಕ ಉದ್ಯಮವಾಗಬಲ್ಲದು ಎಂಬುದನ್ನು ಕೋಝಿಕ್ಕೋಡ್ ಜಿಲ್ಲೆಯ ಚಕ್ಕಿಟ್ಟಪಾರ ಪ್ರದೇಶದ ಕೃಷಿಕ ಕೆ.ಕೆ. ಕ್ಸೇವಿಯರ್ ಸಾಬೀತುಪಡಿಸಿದ್ದಾರೆ. ಕೇರಳ ಸರ್ಕಾರದ ಪ್ರತಿಷ್ಠಿತ 'ಕೇರ ಕೇಸರಿ' ಪ್ರಶಸ್ತಿ ಪುರಸ್ಕೃತರಾಗಿರುವ ಅವರು ತಮ್ಮ ಮೂರುವರೇ (3.5) ಎಕರೆ ಭೂಮಿಯಲ್ಲಿ ತೆಂಗಿನ ಕೃಷಿ ಮಾಡಿ ಭಾರಿ ಆದಾಯ ಗಳಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

Coconut Farming Success Story Kerala Farmer Earns Up to 14 55 Lakh Annually from 97 Coconut Trees

ಒಂದು ತೆಂಗಿನ ಮರದಿಂದ ಸಿಗುವ ಕಾಯಿಗಳು

ಸಾಮಾನ್ಯವಾಗಿ ಒಂದು ಉತ್ತಮ ತೆಂಗಿನ ಮರದಿಂದ ವರ್ಷಕ್ಕೆ 100ರಿಂದ 150 ತೆಂಗಿನಕಾಯಿಗಳು ಸಿಗುತ್ತವೆ. ಆದರೆ ಕ್ಸೇವಿಯರ್ ಅವರ ತೋಟದಲ್ಲಿನ ಪ್ರತಿಯೊಂದು ತೆಂಗಿನ ಮರದಿಂದ ವರ್ಷಕ್ಕೆ ಸರಾಸರಿ 500 ತೆಂಗಿನಕಾಯಿಗಳು ಲಭ್ಯವಾಗುತ್ತವೆ. ಜೈವಿಕ ಗೊಬ್ಬರಗಳ ಬಳಕೆ, ಮಣ್ಣಿನ ತೇವಾಂಶ ನಿರ್ವಹಣೆ ಹಾಗೂ ಸೂಕ್ತ ಆರೈಕೆಯೇ ಈ ಉತ್ತಮ ಇಳುವರಿಗೆ ಪ್ರಮುಖ ಕಾರಣವಾಗಿದೆ ಎನ್ನಲಾಗುತ್ತಿದೆ.

ತೆಂಗು ಬೆಳೆಗಾರ ಹೇಳಿದ್ದೇನು?

ಈ ಕುರಿತು ಮಾತನಾಡಿರುವ ಕ್ಸೇವಿಯರ್' 'ರಾಸಾಯನಿಕ ಗೊಬ್ಬರಗಳ ಬದಲಿಗೆ ಜೈವಿಕ ಪದ್ಧತಿಗೆ ಹೆಚ್ಚಿನ ಆದ್ಯತೆ ನೀಡಿರುವ ಅವರು, ತೆಂಗಿನ ಮರಗಳ ಬುಡಕ್ಕೆ ಸರಿಯಾದ ಸಮಯದಲ್ಲಿ ನೈಸರ್ಗಿಕ ಪೋಷಕಾಂಶಗಳನ್ನು ನೀಡಲಾಗುತ್ತದೆ. ಮಳೆಗಾಲ ಹಾಗೂ ಬೇಸಿಗೆಯಲ್ಲಿ ಮಣ್ಣಿನ ಫಲವತ್ತತೆ ಹಾಳಾಗದಂತೆ ಕೈಗೊಳ್ಳುವುದರಿಂದ ಮರಗಳು ಸಮೃದ್ಧಿಯಾಗಿ ಬೆಳೆದು ಉತ್ತಮ ಫಸಲು ನೀಡುತ್ತಿವೆ,' ಎಂದ ಹೇಳಿದ್ದಾರೆ.

ಯುವ ರೈತರಿಗೆ ಕಿವಿಮಾತು

'ತೋಟದಲ್ಲಿ ಹೆಚ್ಚು ಇಳುವರಿ ನೀಡುವ ಉತ್ತಮ ತಳಿಯ ತೆಂಗಿನ ಸಸಿಗಳನ್ನು ನೆಟ್ಟು ಬೆಳೆಸಲಾಗಿದೆ. ಜೊತೆಗೆ ಕೃಷಿ ಇಲಾಖೆ ಹಾಗೂ ವಿಜ್ಞಾನಿಗಳ ಸೂಕ್ತ ಮಾರ್ಗದರ್ಶನವನ್ನು ಪಡೆದುಕೊಳ್ಳಲಾಗುತ್ತಿದೆ. ಕೇವಲ ಸಾಂಪ್ರದಾಯಿಕ ಶೈಲಿಯಲ್ಲಿ ಕೃಷಿ ಮಾಡಿ ನಷ್ಟ ಅನುಭವಿಸುವ ಬದಲು, ಆಧುನಿಕ ನಿರ್ವಹಣಾ ವಿಧಾನಗಳನ್ನು ಅಳವಡಿಸಿಕೊಂಡರೆ ಉತ್ತಮ ಆದಾಯ ಗಳಿಸಬಹುದು,' ಎಂದು ಕ್ಸೇವಿಯರ್ ಯುವ ರೈತರಿಗೆ ಕಿವಿಮಾತು ಹೇಳಿದ್ದಾರೆ.

ವರ್ಷಕ್ಕೆ ಸಿಗಲಿದೆ ದಾಖಲೆಯ ಆದಾಯ

ಮುಂದುವರೆದು ಮಾತನಾಡಿದ ಅವರು,' ಸದ್ಯ ಮಾರುಕಟ್ಟೆಯಲ್ಲಿ ತೆಂಗಿನಕಾಯಿ, ಕೊಬ್ಬರಿ ಹಾಗೂ ಇದರ ಇತರ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆಯಿದೆ. ಆದ್ದರಿಂದ ತೆಂಗು ಕೃಷಿ ಕೈಹಿಡಿಯುತ್ತಿದೆ,' ಅಂತಲೂ ತಿಳಿಸಿದ್ದಾರೆ. ಇನ್ನೂ ಇವರು ವರ್ಷಕ್ಕೆ ಎಷ್ಟು ಮರಗಳಿಂದ ಎಷ್ಟು ತೆಂಗಿನ ಕಾಯಿಗಳನ್ನ ಪಡೆಯುತ್ತಾರೆ ಹಾಗೂ ಇದರಿಂದ ಸಿಗುವ ಲಾಭದ ಕುರಿತು ಮಾಹಿತಿಯನ್ನ ಇಲ್ಲಿ ನೀಡಲಾಗಿದೆ ತಿಳಿಯಿರಿ.

ಕ್ಸೇವಿಯರ್ ಪ್ರಕಾರ, ಅವರ ತೋಟದಲ್ಲಿ ಒಂದು ತೆಂಗಿನ ಮರಕ್ಕೆ ವರ್ಷಕ್ಕೆ 500 ಕಾಯಿಗಳಂತೆ 97 ಮರಗಳಿಂದ ಒಟ್ಟು 48,500 ತೆಂಗಿನ ಕಾಯಿಗಳು ಸಿಗುತ್ತವೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಒಂದು ಕಾಯಿಯ ಬೆಲೆ 30 ರೂಪಾಯಿ ಇದ್ದರೆ, ಒಟ್ಟು ಆದಾಯ ಸುಮಾರು 14,55,000 ರೂಪಾಯಿ ಆಗುತ್ತದೆ. 20 ರೂಪಾಯಿ ಇದ್ದರೆ ಒಟ್ಟು ಆದಾಯ ₹9,70,000 ಆಗುತ್ತದೆ. ಒಟ್ಟಿನಲ್ಲಿ ಹೇಳುವುದಾದರೆ ತೆಂಗಿನ ಪ್ರತಿ ಭಾಗಕ್ಕೂ ಡಿಮ್ಯಾಂಡ್‌ ಇರುವುದರಿಂದ ಬೆಳೆಗಾರರಿಗೆ ಬಂಪರ್ ಲಾಟರಿ ಹೊಡೆದಂತಾಗಿದೆ ಎಂದು ಹೇಳಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+