ಶಂಕಿತ ಬೋಟ್ ಮಯನ್ಮಾರ್‌ನಿಂದ ಎಲ್ಲಿಗೆ ಹೊರಟಿತ್ತು?
ಬೆಂಗಳೂರು, ಜುಲೈ, 19: ಭಾರತದ ಕರವಾಳಿ ಭದ್ರತಾ ಪಡೆ( ಐಸಿಜಿ) ಮಯನ್ಮಾರ್ ಕಡೆಯಿಂದ ಬರುತ್ತಿದ್ದ ಶಂಕಿತ ಬೋಟ್ ವೊಂದನ್ನು ವಶಕ್ಕೆ ಪಡೆದಿದೆ. ಅಂಡಮಾನ್ ಸಮೀಪ ನಿರಂತರ ಎರಡು ಗಂಟೆಗಳ ಕಾಲ ಬೋಟ್ ಬೆನ್ನತ್ತಿದ ಭದ್ರತಾ ಪಡೆ ಅಂತಿಮವಾಗಿ ಸೆರೆಹಿಡಿದಿದೆ.
ಭದ್ರತಾ ಪಡೆಯ ರಾಜ್ ಕಮಲ್ ಮತ್ತು ಭಿಕಾಜಿ ಕಾಮಾ ಸಮುದ್ರದಲ್ಲಿ ಪಹರೆಯಲ್ಲಿದ್ದಾಗ ಅಪರಿಚಿತ ಬೋಟ್ ಕಣ್ಣಿಗೆ ಬಿದ್ದಿದೆ. ಸಂಪರ್ಕ ಬೆಳೆಸಲು ಯತ್ನ ಮಾಡಿದಾಗ ಬೋಟ್ ಯಾವುದೇ ಪ್ರತಿಕ್ರಿಯೆ ನೀಡದೇ ಮುಂದಕ್ಕೆ ಓಡಲು ಆರಂಭಿಸಿದೆ. ಅನುಮಾನಗೊಂಡ ಪಡೆ ಬೋಟ್ ಬೆನ್ನು ಹತ್ತಿದೆ.[ಕರ್ನಾಟಕದ ಕರಾವಳಿ ಮೇಲೆ ಐಸಿಜಿಎಸ್ ಶೂರ್ ಕಣ್ಗಾವಲು]

ಅಂತಿಮವಾಗಿ ನಾರ್ಕೊಂಡಮ್ ಬಳಿ ಶಂಕಿತ ಹಗಡನ್ನು ದಸ್ತಗಿರಿ ಮಾಡಲಾಗಿದೆ. ಬೋಟ್ ಗೆ ಯಾವ ನೋಂದಣಿ ಸಂಖ್ಯೆಯೂ ಇಲ್ಲ. ಅಥವಾ ಯಾವ ದೇಶದ ಬಾವುಟವನ್ನು ಹೊಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೈನಿಕರು ಹೇಳುವಂತೆ ಬೋಟ್ ನ್ನು ಮಾನವ ಕಳ್ಳ ಸಾಗಾಟಕ್ಕೆ ಬಳಸಲಾಗುತ್ತಿತ್ತು. ಬೋಟ್ ನಿಂದ 11 ಜನ ಸಿಬ್ಬಂದಿಯನ್ನು ಮತ್ತು ಪುರುಷ ಮತ್ತು ಮಹಿಳೆಯರಿಗೆ ಸಂಬಂಧಿಸಿದ ಬಟ್ಟೆಗಳನ್ನು ವಶಕ್ಕೆ ಪಡೆಯಲಾಗಿದೆ. ಬೋಟ್ ಸದ್ಯ ಪೋರ್ಟ್ ಬ್ಲೇರ್ ನಲ್ಲಿದ್ದು ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ.












Click it and Unblock the Notifications