ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಲ್ಲಿದ್ದಲು ಕೊರತೆ ಬಿಕ್ಕಟ್ಟು ಮುಂದಿನ ವಾರಗಳಲ್ಲಿ ಸ್ಥಿರಗೊಳ್ಳಲಿದೆ:CCL

|
Google Oneindia Kannada News

ನವದೆಹಲಿ, ಅಕ್ಟೋಬರ್ 12: ಕಲ್ಲಿದ್ದಲು ಕೊರತೆ ಸಮಸ್ಯೆ ಮುಂದಿನ ವಾರಗಳಲ್ಲಿ ಸ್ಥಿರಗೊಳ್ಳಲಿದೆ ಎಂದು ಸೆಂಟ್ರಲ್ ಕೋಲ್‌ಫೀಲ್ಡ್ಸ್ ಲಿಮಿಟೆಡ್(ಸಿಸಿಎಲ್) ಹೇಳಿದೆ.

ದೇಶದಲ್ಲಿ ಕಲ್ಲಿದ್ದಲು ದಾಸ್ತಾನು ಕೊರತೆಯ ವರದಿಗಳ ನಡುವೆ, ಮುಂದಿನ ಒಂದೆರಡು ವಾರಗಳಲ್ಲಿ ಸಮಸ್ಯೆಯನ್ನು ಸ್ಥಿರಗೊಳಿಸಲಾಗುವುದು ಎಂದಿದ್ದಾರೆ.

ಏನಿದು ಬಿಕ್ಕಟ್ಟು: ಕಲ್ಲಿದ್ದಲು ಇಲ್ಲದೇ ಕತ್ತಲೆಯತ್ತ ಸಾಗುತ್ತಿದೆಯಾ ಭಾರತ?ಏನಿದು ಬಿಕ್ಕಟ್ಟು: ಕಲ್ಲಿದ್ದಲು ಇಲ್ಲದೇ ಕತ್ತಲೆಯತ್ತ ಸಾಗುತ್ತಿದೆಯಾ ಭಾರತ?

ಸಿಸಿಎಲ್‌ನ ಸಂದರ್ಭದಲ್ಲಿ ಇದು 1.95 ಮಿಲಿಯನ್ ಮತ್ತು ಭಾರತ್ ಕೋಕಿಂಗ್ ಕೋಲ್ ಲಿಮಿಟೆಡ್(ಬಿಸಿಸಿಎಲ್) ನಲ್ಲಿ ಇದು 6.5 ಲಕ್ಷ ಟನ್ ಆಗಿದೆ. ಈ ಸ್ಟಾಕ್ ಮಟ್ಟದಿಂದ ಮತ್ತು ಮುಂಗಾರು ಮುಗಿದ ನಂತರ ಉತ್ಪಾದನೆ ಹೆಚ್ಚಾಗುತ್ತದೆ. ಸ್ಟಾಕ್ ಒಂದೇ ರೀತಿ ಉಳಿದಿದೆ, ನಾವು ಏನು ಉತ್ಪಾದಿಸಿದರೂ ಅದು ವಿದ್ಯುತ್ ಸ್ಥಾವರಕ್ಕೆ ರವಾನೆಯಾಗುತ್ತದೆ ಎಂಬ ವಿಶ್ವಾಸ ನನಗಿದೆ ಎಂದರು.

Coal Shortage Problem Will Be Stabilized In 1-2 Weeks: CCL

ಮುಂಗಾರು ಮುಗಿದ ನಂತರ, ಮುಂದಿನ ಒಂದು ವಾರದಲ್ಲಿ ಅದು ಸ್ಥಿರಗೊಳ್ಳುತ್ತದೆ ಎಂದು ನನಗೆ ತುಂಬಾ ವಿಶ್ವಾಸವಿದೆ. ದುರ್ಗಾ ಪೂಜೆಯ ನಂತರ, ಇದು ಮತ್ತಷ್ಟು ಹೆಚ್ಚಾಗಲಿದೆ. ಕಳೆದ 3-4 ದಿನಗಳಲ್ಲಿ ವಿದ್ಯುತ್ ಸ್ಥಾವರಗಳು ಕಲ್ಲಿದ್ದಲನ್ನು ಪಡೆಯಲಿವೆ.

1.6 ಮಿಲಿಯನ್‌ ಅವಶ್ಯಕತೆ ಇದ್ದರೆ ಸುಮಾರು 1.55 ಮಿಲಿಯನ್‌ ನಷ್ಟು ಪೂರೈಸಲಾಗುತ್ತಿದೆ. ಮುಂಬರುವ ಒಂದು ಅಥವಾ ಎರಡು ವಾರಗಳಲ್ಲಿ ಅದನ್ನು ಸ್ಥಿರಗೊಳಿಸಲಾಗುವುದು ಎಂದು ನನಗೆ ತುಂಬಾ ವಿಶ್ವಾಸವಿದೆ ಎಂದು ಹೇಳಿದರು.

ಪ್ರಸ್ತುತ ಕಲ್ಲಿದ್ದಲು ದಾಸ್ತಾನು ಸ್ಥಿತಿಯ ಬಗ್ಗೆ ಕೇಳಿದ ಪ್ರಶ್ನೆಗೆ ಕೋಲ್ ಇಂಡಿಯಾ ಸ್ಟಾಕ್ ಕನಿಷ್ಠ 20 ದಿನಗಳವರೆಗೆ ಇರುತ್ತದೆ ಎಂದು ಪಿಎಂ ಪ್ರಸಾದ್ ಹೇಳಿದ್ದಾರೆ.

ದೇಶದಲ್ಲಿ ಅಂತಹ ಯಾವುದೇ ಬಿಕ್ಕಟ್ಟು ಇಲ್ಲ. ಖಂಡಿತವಾಗಿಯೂ ಕಲ್ಲಿದ್ದಲು ಸಂಗ್ರಹವು ಕಡಿಮೆ ಮಟ್ಟದಲ್ಲಿದೆ. ಏಕೆಂದರೆ ಈ ವರ್ಷ ವಿದ್ಯುತ್ ಉತ್ಪಾದನೆಯು ಅಧಿಕವಾಗಿದೆ. ಹೆಚ್ಚಿನ ಬೆಳವಣಿಗೆ ಇದಕ್ಕೆ ಕಾರಣವಾಗಿದೆ. ನಾವು ಹಣಕಾಸಿನ ವರ್ಷದ ಮೊದಲಾರ್ಧದಲ್ಲಿ ಕಳೆದ ವರ್ಷಕ್ಕಿಂತ ಹೆಚ್ಚು 53 ಮಿಲಿಯನ್ ಟನ್‌ಗಳನ್ನು ಪೂರೈಸಿದ್ದೇವೆ ಎಂದು ಸಿಸಿಎಲ್ ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಪಿಎಂ ಪ್ರಸಾದ್ ಹೇಳಿದ್ದಾರೆ.

ದೇಶದಲ್ಲಿ ಕಲ್ಲಿದ್ದಲು ಪೂರೈಕೆಯಲ್ಲಿನ ವ್ಯತ್ಯಯದಿಂದ ವಿದ್ಯುತ್‌ ಕೊರತೆಯ ಆತಂಕ ಹುಟ್ಟಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಸೋಮವಾರ ಇಂಧನ ಸಚಿವರು ಹಾಗೂ ಕಲ್ಲಿದ್ದಲು ಸಚಿವರ ಜತೆ ಸಭೆ ನಡೆಸಿದ್ದಾರೆ.

ತಮ್ಮ ಸಂಪುಟ ಸಹೋದ್ಯೋಗಿಗಳಾದ ಇಂಧನ ಸಚಿವ ಆರ್‌.ಕೆ. ಸಿಂಗ್‌ ಹಾಗೂ ಕಲ್ಲಿದ್ದಲು ಸಚಿವ ಪ್ರಲ್ಹಾದ್‌ ಜೋಶಿ ಜತೆಗಿನ ಸಭೆಯಲ್ಲಿ ಕಲ್ಲಿದ್ದಲು ಮತ್ತು ಇಂಧನ ಇಲಾಖೆಯ ಹಿರಿಯ ಅಧಿಕಾರಿಗಳು, ಸರಕಾರಿ ಸ್ವಾಮ್ಯದ ಕಲ್ಲಿದ್ದಲು ದೈತ್ಯ ಎನ್‌ಟಿಪಿಸಿ ಲಿ.ನ ಅಧಿಕಾರಿಗಳು ಭಾಗವಹಿಸಿದ್ದರು.

ಭಾರತ ಕಲ್ಲಿದ್ದಲನ್ನು ಅತೀ ಹೆಚ್ಚು ಉಪಯೋಗಿಸುವ ಎರಡನೇ ದೇಶವಾಗಿದೆ. ಇತ್ತೀಚೆಗೆ ಚೀನಾದಲ್ಲೂ ಈ ಸಮಸ್ಯೆ ತಲೆದೋರಿತ್ತು. ನೆರೆಯ ದೇಶದ ಸಮಸ್ಯೆ ಎಷ್ಟೊಂದು ಭೀಕರವಾಗಿತ್ತೆಂದರೆ, ಹಲವು ಫ್ಯಾಕ್ಟರಿಗಳು ಉತ್ಪಾದನೆ ಸ್ಥಗಿತಗೊಳಿಸಿದ್ದವು. ಇದರಿಂದ ಜಾಗತಿಕ ಮಟ್ಟದ ಸರಕುಗಳ ಪೂರೈಕೆ ಸರಣಿಯಲ್ಲಿಯೇ ಭಾರಿ ವ್ಯತ್ಯಯವಾಗಿತ್ತು.

ದೇಶದ ವಿದ್ಯುತ್‌ ಉತ್ಪಾದನೆಯಲ್ಲಿ ಉಷ್ಣ ವಿದ್ಯುತ್‌ ಸ್ಥಾವರಗಳ ಪಾಲು ಶೇ. 70ರಷ್ಟಿದೆ. ಜತೆಗೆ ಒಟ್ಟು ಕಲ್ಲಿದ್ದಲು ಬೇಡಿಕೆಯ ಶೇ. 75ರಷ್ಟನ್ನು ದೇಶದಲ್ಲೇ ಉತ್ಪಾದನೆ ಮಾಡಲಾಗುತ್ತದೆ. ಉಳಿದುದನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತದೆ.

'ಕೇಂದ್ರ ಸರಕಾರ ಸಾಕಷ್ಟು ಕಲ್ಲಿದ್ದಲು ದಾಸ್ತಾನು ಇದೆ' ಎಂದು ಪ್ರತಿಪಾದಿಸುತ್ತಿದೆಯಾದರೂ ರಾಜ್ಯಗಳು ಕಗ್ಗತಲ್ಲೆಯ ರಾತ್ರಿಯ ಎಚ್ಚರಿಕೆ ನೀಡಿವೆ. ದೇಶದ ಕಲ್ಲಿದ್ದಲು ಆಧಾರಿತ ಉಷ್ಣ ವಿದ್ಯುತ್‌ ಸ್ಥಾವರಗಳಲ್ಲಿ 72 ಲಕ್ಷ ಟನ್‌ ಕಲ್ಲಿದ್ದಲ ಸಂಗ್ರಹವಿದೆ. ಇದು ನಾಲ್ಕು ದಿನಗಳಿಗೆ ಸಾಕು ಎಂದು ಕಲ್ಲಿದ್ದಲು ಇಲಾಖೆ ಭಾನುವಾರ ತನ್ನ ಹೇಳಿಕೆಯಲ್ಲಿ ತಿಳಿಸಿತ್ತು.

English summary
Amid the reports of shortage of coal stock in the country the Central Coalfields Limited said that in the coming one or two weeks the problem will be stabilized.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X