ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋಲ್ಡನ್ ಚಾರಿಯೇಟ್: ಟಿಕೆಟ್ ದರ ಇಳಿಕೆಗೆ ಸಚಿವಾಲಯಕ್ಕೆ ಬೊಮ್ಮಾಯಿ ಪತ್ರ

|
Google Oneindia Kannada News

ಚಿಕ್ಕಬಳ್ಳಾಪುರ, ಜನವರಿ 06: ರಾಜ್ಯದ ಐಷಾರಾಮಿ ಎಕ್ಸ್‌ಪ್ರೆಸ್ ಗೋಲ್ಡನ್ ಚಾರಿಯಟ್‌ ರೈಲಿನ ಟಿಕೆಟ್ ದರ ಕಡಿಮೆ ಮಾಡುವುದು, ಹೆಚ್ಚಿನ ಟ್ರಿಪ್‌ ನಿಯೋಜಿಸಿವುದು ಮತ್ತು ಹೆಚ್ಚಿನ ಪ್ರವಾಸಿಗರನ್ನು ಸೆಳೆಯಲು ಸಾಗಾಣೆ ಶುಲ್ಕ ಕಡಿಮೆ ಮಾಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರೈಲ್ವೇ ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ.

ಮುಖ್ಯಮಂತ್ರಿಗಳು ಸುಮಾರು ಐದು ತಿಂಗಳ ಹಿಂದೆ ಪ್ರವಾಸೋದ್ಯಮ ಇಲಾಖೆ ಮತ್ತು ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ (ಐಆರ್‌ಸಿಟಿಸಿ)ಕ್ಕೆ ಪತ್ರ ಬರೆದು ಮನವಿ ಮಾಡಿದ್ದಾರೆ. 2018 ರಲ್ಲಿ ನಡೆದ ಪರಿಷ್ಕೃತ ಒಪ್ಪಂದದ ಪ್ರಕಾರ ರೈಲ್ವೆ ಇಲಾಖೆ ಹಾಗೂ ಕರ್ನಾಟಕವು 50:50 ಅನುಪಾತದ ಆದಾಯ ಹಂಚಿಕೆ ಆದಾರದಲ್ಲಿ ರೈಲಿನ ನಿರ್ವಹಣೆ ಮಾಡಲಾಗುತ್ತಿದೆ. ಆದರೆ ಈ ರೈಲನ್ನು ಇಲಾಖೆಯು ಭಾರತ್ ಗೌರವ್ ವಿಭಾಗದಲ್ಲಿ ಪಟ್ಟಿ ಸೇರಿದ್ದರಿಂದ ಐಆರ್‌ಸಿಟಿಸಿ ಸಾಗಾಣಿಕೆ (ಹಮಾಲಿ) ಶುಲ್ಕವನ್ನು ಹೆಚ್ಚಿಸಿದೆ.

Vande Bharat Express: ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಮೇಲೆ ಪಶ್ಚಿಮ ಬಂಗಾಳದಲ್ಲಿ ಕಲ್ಲು ತೂರಾಟ Vande Bharat Express: ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಮೇಲೆ ಪಶ್ಚಿಮ ಬಂಗಾಳದಲ್ಲಿ ಕಲ್ಲು ತೂರಾಟ

ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಇಲಾಖೆ (ಕೆಎಸ್‌ಟಿಡಿಸಿ) ಹಿರಿಯ ಅಧಿಕಾರಿಯೊಬ್ಬರು ಮಾತನಾಡಿ, 2018 ರ ಒಪ್ಪಂದ ನಂತರ ಎರಡನೇ ಬಾರಿಗೆ ರೈಲ್ವೆಯ ಸಾಗಣೆ ಶುಲ್ಕದ ನಿಯಮಗಳನ್ನು ಬದಲಾಯಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮಕ್ಕೆ ಪೂರಕವಾಗಿ ಈ ರೈಲಿನ ನಿರ್ವಹಣೆ ಮಾಡುತ್ತಿರುವ ಐಆರ್‌ಸಿಟಿಸಿಗೆ ಶುಲ್ಕ ಹೆಚ್ಚಳದ ಪ್ರಕಾರ, ನಾವು ವರ್ಷಕ್ಕೆ ಸುಮಾರು 2 ಕೋಟಿ ರೂ.ಗಳನ್ನು ಸಾಗಣೆ ಶುಲ್ಕವಾಗಿ ಪಾವತಿಸಬೇಕಾಗುತ್ತದೆ ಎಂದರು.

ಒಪ್ಪಂದ ಮುಂದುವರಿದರೆ ಹೆಚ್ಚು ಶುಲ್ಕ ಪಾವತಿ

ಒಪ್ಪಂದ ಮುಂದುವರಿದರೆ ಹೆಚ್ಚು ಶುಲ್ಕ ಪಾವತಿ

ಇಷ್ಟೇ ಅಲ್ಲದೇ 50:50 ಹಂಚಿಕೆಯ ಹಿಂದಿನ ಒಪ್ಪಂದವನ್ನು ಮುಂದುವರೆಸಿದ್ದೇ ಆದಲ್ಲಿ ಪ್ರತಿ ಕೋಚ್‌ಗೆ ಪ್ರತಿ ಕಿಲೋ ಮೀಟರ್‌ಗೆ ಸುಮಾರು 900 ರೂ. ರೈಲ್ವೆಗೆ ವೇರಿಯಬಲ್ ಸಾಗಣೆ ಶುಲ್ಕಗಳು. 50:50 ಹಂಚಿಕೆಯ ಹಿಂದಿನ ಒಪ್ಪಂದವನ್ನು ಮುಂದುವರಿಸಿದರೆ ನಾವು (ರಾಜ್ಯ) ಸುಮಾರು 56 ಲಕ್ಷ ರೂ. ಶುಲ್ಕ ನೀಡಬೇಕಾಗುತ್ತದೆ. ಸದ್ಯ ಐದು ರಾತ್ರಿ ಆರು ದಿನಗಳ ಈ ರೈಲಿನ ಪ್ರಯಾಣ ಪ್ರತಿ ವ್ಯಕ್ತಿಗೆ 4,740 ಡಾಲರ್ ಇದೆ ಎಂದು ತಿಳಿಸಿದರು.

ಐಶಾರಾಮಿ ರೈಲುಗಳತ್ತ ಪ್ರಯಾಣಿಕರ ಒಲವು

ಐಶಾರಾಮಿ ರೈಲುಗಳತ್ತ ಪ್ರಯಾಣಿಕರ ಒಲವು

ಗೋಲ್ಡನ್ ಚಾರಿಯೇಟ್‌ನಲ್ಲಿ ರೈಲಿನಲ್ಲಿ 18 ಕೋಚ್‌ಳಿವೆ. ಅದರಲ್ಲಿ 11 ಕೋಚ್‌ಗಳು ಅತಿಥಿ ಪ್ರಯಾಣಕ್ಕೆ ಮೀಸಲಿವೆ. ಎರಡು ರೆಸ್ಟೋರೆಂಟ್‌ಗಳು, ಒಂದು ಬಾರ್, ಎರಡು ಪವರ್ ಕಾರ್‌ಗಳು ಮತ್ತು ಒಂದು ಆರೋಗ್ಯ ಕೋಚ್ ಇದೆ. ಐಷಾರಾಮಿ ಎಕ್ಸ್‌ಪ್ರೆಸ್ ಕನಿಷ್ಠ 14 ಕೋಚ್‌ಗಳನ್ನು ಹೊಂದಿರಬೇಕು ಎಂಬ ನಿಯಮವಿದೆ. ಇತರ ದೇಶಗಳಿಗೆ ಹೋಲಿಸಿದರೆ ಭಾರತೀಯರು ಸಹ ಈಗೀಗ ಐಶಾರಾಮಿ ರೈಲುಗಳಲ್ಲಿ ಹೆಚ್ಚು ಪ್ರಯಾಣಿಸುತ್ತಿದ್ದಾರೆ. ಹೋಟೆಲ್‌ಗಳು ಮತ್ತು ರೆಸಾರ್ಟ್‌ಗಳಲ್ಲಿ ಹೆಚ್ಚು ಸಮಯ ಕಳೆಯಲು ಬಯಸುತ್ತಾರೆ ಎಂದು ಸಮೀಕ್ಷೆಗಳು ಬಹಿರಂಗಪಡಿಸಿವೆ ಎಂದು ಕೆಎಸ್‌ಟಿಡಿಸಿ ಅಧಿಕಾರಿಗಳು ಹೇಳಿದರು.

ಪ್ರವಾಸಿಗರನ್ನು ಸೆಳೆಯಲು ಐಆರ್‌ಸಿಟಿಸಿ ವಿಭಿನ್ನ ಪ್ರಯತ್ನ

ಪ್ರವಾಸಿಗರನ್ನು ಸೆಳೆಯಲು ಐಆರ್‌ಸಿಟಿಸಿ ವಿಭಿನ್ನ ಪ್ರಯತ್ನ

ಕರ್ನಾಟಕಕ್ಕೆ ಹೆಚ್ಚಿನ ಪ್ರವಾಸಿಗರನ್ನು ಸೆಳೆಯಲು ಇತ್ತೀಚೆಗೆ ಹೆಚ್ಚು ಜನಪ್ರಿಯವಾಗಿರುವ ಜಿ20 ಶೃಂಗಸಭೆಯ ಆಯೋಜನೆಯಿಂದಾಗಿ ಐಆರ್‌ಸಿಟಿಸಿ ಪ್ಯಾಲೇಸ್ ಆನ್ ವೀಲ್ಸ್, ಭಾರತದ ಗೋಲ್ಡನ್ ಟ್ರಯಾಂಗಲ್‌ ಹಾಗೂ ಮಹಾರಾಜ ಎಕ್ಸ್‌ಪ್ರೆಸ್ ನತ್ತ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸಲು ಪ್ರಯತ್ನಿಸುತ್ತಿದ್ದೇವೆ. ಮದುವೆ ಇನ್ನಿತರ ಕಾರ್ಯಕ್ರಮಗಳಿಗೆ ಬೇಡಿಕೆಗೆ ಅನುಗುಣವಾಗಿ ಈ ಐಶಾರಾಮಿ ರೈಲುಗಳು ಕಾರ್ಯ ನಿವರ್ಹಿಸುತ್ತವೆ ಎಂದು ಐಆರ್‌ಸಿಟಿಸಿ ಜಂಟಿ ಪ್ರಧಾನ ವ್ಯವಸ್ಥಾಪಕ ಅನುಪ್ ಕುಮಾರ್ ಹೇಳಿದರು.

ಚಿಕ್ಕಮಗಳೂರು, ಬಂಡೀಪುರ ಸೇರ್ಪಡೆ

ಚಿಕ್ಕಮಗಳೂರು, ಬಂಡೀಪುರ ಸೇರ್ಪಡೆ

ಐಆರ್‌ಸಿಟಿಸಿ ಈ ರೈಲುಗಳ ನಿರ್ವಹಣೆ ಜವಾಬ್ದಾರಿ ವಹಿಸಿಕೊಂಡ ನಂತರ ಒಳಗಾಂಗಣ ಚಿನ್ನ ವರ್ಣ ಸೇರಿದಂತೆ ವಿವಿಧ ವರ್ಣಗಳಲ್ಲಿ ಕಂಗೊಳಿಸುತ್ತಿವೆ. ಪ್ರತಿ ರಾಜವಂಶದೊಂದಿಗೆ, ಬೋಗಿಗಳ ಒಳಾಂಗಣ ಅಲಂಕಾರ ಇನ್ನಷ್ಟು ಸುಂದರಗೊಂಡಿದೆ. ಪ್ರೈಡ್ ಆಫ್ ಕರ್ನಾಟಕ ಸರ್ಕ್ಯೂಟ್‌ನಲ್ಲಿ ಬಂಡೀಪುರ, ಚಿಕ್ಕಮಗಳೂರು ಸೇರ್ಪಡೆಯಾಗಿದೆ. ಅದೇ ರೀತಿ, ಜ್ಯುವೆಲ್ಸ್ ಆಫ್ ಸೌತ್ ಸರ್ಕ್ಯೂಟ್‌ನಲ್ಲಿ, ಪ್ರಧಾನಿ ನರೇಂದ್ರ ಮೋದಿಯವರ ಆಶಯದಂತೆ ಮಹಾಬಲಿಪುರಂ ಅನ್ನು ಸೇರಿಸಲಾಗಿದೆ. ಈ ಸೇರ್ಪಡೆಗೊಂಡ ಪ್ರಯಾಣದ ಕುರಿತು ಹೆಚ್ಚು ಪ್ರಚಾರ ಮಾಡಲಾಗುತ್ತಿದೆ ಎಂದು ಐಆರ್‌ಸಿಟಿಸಿ ಮೂಲಗಳು ತಿಳಿಸಿವೆ.

English summary
CM Bommai wrote a letter to Railway Ministry for reduce ticket and haulage rates of Golden Chariot express train.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X