Cloud Burst in Shimla: ಶಿಮ್ಲಾದಲ್ಲಿ ಮೆಘಾಸ್ಪೋಟ: 40 ಮಂದಿ ನಾಪತ್ತೆ- ಕೊಚ್ಚಿಹೋದ ಮಾರುಕಟ್ಟೆ- ಭಯಾನಕ ವಿಡಿಯೋ ವೈರಲ್
ಶಿಮ್ಲಾ ಆಗಸ್ಟ್ 1: ಆಗಸ್ಟ್ ತಿಂಗಳ ಆರಂಭದಲ್ಲೇ ಶಿಮ್ಲಾದಲ್ಲಿ ಜನ ನಿದ್ದೆಗೆಟ್ಟಿದ್ದಾರೆ. ಮಳೆ ಹೆಚ್ಚಾದ ಪರಿಣಾಮ ಅಲ್ಲಲ್ಲಿ ಗುಡ್ಡ ಕುಸಿತ ಪ್ರವಾಹದಂತಹ ಸ್ಥಿತಿ ನಿರ್ಮಾಣವಾಗಿದ್ದು ಹಲವೆಡೆ ಜನ ಜೀವನ ಬೀದಿಪಾಲಾಗಿದೆ. ಹಿಮಾಲಯದಲ್ಲಿ ಒಂದರ ಹಿಂದೆ ಒಂದರಂತೆ ಮೂರು ಸ್ಥಳಗಳಲ್ಲಿ ಮೆಘಾಸ್ಫೋಟ ಸಂಭವಿಸಿದೆ. ಇದರಿಂದಾಗಿ 40 ಮಂದಿ ನಾಪತ್ತೆಯಾಗಿದ್ದು, ಒಂದು ಮೃತದೇಹ ಮಾತ್ರ ಪತ್ತೆಯಾಗಿದೆ.
ಹಿಮಾಚಲದ ಕುಲು, ಮಂಡಿ ಮತ್ತು ಶಿಮ್ಲಾದಲ್ಲಿ ಮೋಡ ಮುಸುಕಿದ ವಾತಾವರಣದೊಂದಿಗೆ ಧಾರಾಕಾರ ಮಳೆಯಾಗುತ್ತಿದೆ. ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಗೆ ಮಣ್ಣು ಸಡಿಲಗೊಂಡಿದೆ. ಇದರಿಂದಾಗಿ ಮೆಘಾಸ್ಪೋಟ ಸಂಭವಿಸಿದ್ದು ಹಲವು ಮನೆಗಳು, ಶಾಲೆಗಳು, ಆಸ್ಪತ್ರೆಗಳಿಗೆ ಹಾನಿಯಾಗಿದೆ.
#कुल्लु: बीते रात हुई भारी बारिश से नदी नालों का जलस्तर बढ़ने से मलाणा में पॉवर प्रोजेक्ट 1 का डैम फटा।
— DD News Himachal (@DDNewsHimachal) August 1, 2024
▫️डैम फटने से पार्वती नदी में आई भारी बाढ़ , भुंतर के आसपास लोगों के लिए अलर्ट किया जारी।#himachalnews #kulluflood #Landslide #cloudburst #Flashflood #malana pic.twitter.com/CPnoNDyHIP
ಈ ಮೂರೂ ಸ್ಥಳಗಳಲ್ಲಿ ಸುಮಾರು 40 ಮಂದಿ ನಾಪತ್ತೆಯಾಗಿದ್ದಾರೆ. ಮಾರುಕಟ್ಟೆಯೊಂದರಲ್ಲಿ ಒಂದು ಮೃತದೇಹ ಮಾತ್ರ ಪತ್ತೆಯಾಗಿದೆ. ಇಲ್ಲಿನ 35 ಜನರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದ್ದು, ಮೇಘಸ್ಫೋಟದ ನಂತರ ಇಂದು ಮಂಡಿ ಪ್ರದೇಶದ ಎಲ್ಲಾ ಶಾಲೆಗಳು ಮತ್ತು ಶಿಕ್ಷಣ ಸಂಸ್ಥೆಗಳನ್ನು ಬಂದ್ ಮಾಡಿ ಎಂದು ಡಿಸಿ ಆದೇಶ ಹೊರಡಿಸಿದ್ದಾರೆ.

ಶುಕ್ರವಾರದಿಂದ ರಾಜ್ಯದ ವಿವಿಧೆಡೆ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಬುಧವಾರ 'ಯೆಲ್ಲೋ' ಅಲರ್ಟ್ ಘೋಷಿಸಿತ್ತು. ಮುನ್ಸೂಚನೆಯಂತೆ ರಾಜ್ಯದಲ್ಲಿ ಆಗಸ್ಟ್ 6ರವರೆಗೆ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಅಲ್ಲದೆ ಇತ್ತೀಚಿನ ಮಳೆಯಿಂದಾಗಿ 48 ರಸ್ತೆಗಳು ಬಂದ್ ಆಗಿದ್ದು, ವಿದ್ಯುತ್ ಸೇವೆಗೆ ತೊಂದರೆಯಾಗಿದೆ. ಹೀಗಾಗಿ ಜನ ಆತಂಕದಲ್ಲಿ ದಿನ ದೂಡುವಂತಹ ಸ್ಥಿತಿ ನಿರ್ಮಾಣವಾಗಿದೆ.
ಸಹಾಯದ ಭರವಸೆ ನೀಡಿದ ಜೆಪಿ ನಡ್ಡಾ
ಬಿಜೆಪಿಯ ಹಿರಿಯ ನಾಯಕ ಜಗತ್ ಪ್ರಕಾಶ್ ನಡ್ಡಾ ಅವರು ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಅವರೊಂದಿಗೆ ಮಾತನಾಡಿ ಪರಿಸ್ಥಿತಿ ಬಗ್ಗೆ ಮಾಹಿತಿಯನ್ನು ಪಡೆದುಕೊಂಡಿದ್ದಾರೆನ್ನುವ ಮಾಹಿತಿ ಲಭ್ಯವಾಗಿದೆ. ಅವರು ಮೋದಿ ಸರ್ಕಾರದಿಂದ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡುವ ಭರವಸೆ ನೀಡಿದ್ದಾರೆ. ಜೆಪಿ ನಡ್ಡಾ ಅವರು ಮಾಜಿ ಮುಖ್ಯಮಂತ್ರಿ ಮತ್ತು ಎಲ್‌ಒಪಿ ಜೈರಾಮ್ ಠಾಕೂರ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷರೊಂದಿಗೆ ಮಾತನಾಡಿ, ಎಲ್ಲಾ ಬಿಜೆಪಿ ಕಾರ್ಯಕರ್ತರಿಗೆ ಪರಿಹಾರ ಕಾರ್ಯದಲ್ಲಿ ತೊಡಗುವಂತೆ ಸೂಚಿಸಿದ್ದಾರೆ.
आज हिमाचल प्रदेश के विभिन्न क्षेत्रों में बादल फटने के कारण हुए भारी नुकसान से आम जनजीवन प्रभावित होने का दुःखद समाचार मिला।
— Jagat Prakash Nadda (@JPNadda) August 1, 2024
लगातार हो रहे प्राकृतिक आपदाओं के संदर्भ में राज्य के मुख्यमंत्री श्री सुखविंदर सिंह सुक्खू से फोन पर विस्तृत बात कर जानकारी प्राप्त की और आदरणीय…
ಕಣ್ಣೆದುರು ಕೊಚ್ಚಿ ಹೋದ ತರಕಾರಿ ಮಾರುಕಟ್ಟೆ
ಕುಲುವಿನ ಮಣಿಕರಣ್ ಭುಂತರ್ ರಸ್ತೆಯಲ್ಲಿರುವ ಶಾಟ್ ಸಬ್ಜಿ ಮಂಡಿ (ತರಕಾರಿ ಮಾರುಕಟ್ಟೆ) ಕಟ್ಟಡ ನೀರಿನಲ್ಲಿ ಕೊಚ್ಚಿ ಹೋಗಿದ್ದು, ಈ ಭಯಾನಕ ದೃಶ್ಯ ಕ್ಯಾಮರಾಗಳಲ್ಲಿ ಸೆರೆಯಾಗಿದೆ. ಇಡೀ ಕಟ್ಟಡ ನೀರಿನಲ್ಲಿ ಕೊಚ್ಚಿ ಹೋಗಿದ್ದು ಇಲ್ಲಿನ ಪರಿಸ್ಥಿತಿ ತುಂಬಾ ಕೆಟ್ಟದಾಗಿದೆ. ಅಲ್ಲದೆ, ಜಿಲ್ಲೆಯ ಹಲವೆಡೆ ಭಾರೀ ಮಳೆಯಾಗುತ್ತಿದ್ದು ನೀರು ನುಗ್ಗಿ ಪ್ರವಾಹದಂತ ಸ್ಥಿತಿ ನಿರ್ಮಾಣವಾಗಿದೆ.

ಮಂಗಳವಾರ ಕುಲುವಿನಲ್ಲಿ ಮೆಘಾಸ್ಫೋಟ
ಮೊನ್ನೆ ಮಂಗಳವಾರ ಕುಲುವಿನಲ್ಲಿ ಮೆಘಾಸ್ಪೋಟ ಸಂಭವಿಸಿತ್ತು. ಕುಲು ಜಿಲ್ಲೆಯ ತೋಷ್ ನಾಲಾದಲ್ಲಿ ಮೆಘಾಸ್ಫೋಟದಿಂದ ಉಂಟಾದ ಹಠಾತ್ ಪ್ರವಾಹದಲ್ಲಿ ಸೇತುವೆ ಮತ್ತು ಮೂರು ತಾತ್ಕಾಲಿಕ ಶೆಡ್‌ಗಳು ಕೊಚ್ಚಿಹೋಗಿವೆ. ಮಣಿಕರಣ್‌ನ ತೋಶ್ ಪ್ರದೇಶದಲ್ಲಿ ಬೆಳಗ್ಗೆ ಈ ಘಟನೆ ನಡೆದಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಕುಲು ಉಪ ಆಯುಕ್ತ ತೋರುಲ್ ಎಸ್ ರವೀಶ್ ಹೇಳಿದ್ದಾರೆ.
ಮಂಡಿಯಲ್ಲಿ 40 ಮಂದಿ ನಾಪತ್ತೆ
ಹಿಮಾಚಲದ ಮಂಡಿಯಲ್ಲಿ ಮಳೆ ಕಾರಣ ಪರಿಸ್ಥಿತಿ ಹದಗೆಟ್ಟಿದೆ. ಇಲ್ಲಿ ಮಳೆ ನೀರಿಗೆ 40 ಮಂದಿ ಪ್ರವಾಹಕ್ಕೆ ಕೊಚ್ಚಿ ಹೋಗಿದ್ದಾರೆ. ಅಲ್ಲದೆ ಹವಾಮಾನ ಇಲಾಖೆ ಹಿಮಾಚಲ ಪ್ರದೇಶದ ಹಲವು ಜಿಲ್ಲೆಗಳಲ್ಲಿ ಮುಂದಿನ ಕೆಲವು ಗಂಟೆಗಳಲ್ಲಿ ಭಾರೀ ಮಳೆಯಾಗುವ ಎಚ್ಚರಿಕೆಯನ್ನು ನೀಡಿದೆ.

ಉತ್ತರಾಖಂಡದಲ್ಲೂ ಭಾರೀ ಮಳೆ
ಉತ್ತರಾಖಂಡದಲ್ಲಿ ಕಳೆದ 24 ಗಂಟೆಗಳಿಂದ ನಿರಂತರ ಭಾರೀ ಮಳೆಯಾಗುತ್ತಿದೆ. ಮಲೆನಾಡಿನಿಂದ ಬಯಲು ಸೀಮೆಯವರೆಗೆ ಕಣ್ನಾಯಿಸಿದಲೆಲ್ಲಾ ಮಳೆ ನೀರು ಮಾತ್ರ ಕಾಣಸಿಗುತ್ತಿದೆ. ಪರ್ವತದ ಹಲವು ಸ್ಥಳಗಳಲ್ಲಿ ಪರಿಸ್ಥಿತಿ ತೀರಾ ಹದಗೆಟ್ಟಿದ್ದು ರಾಜ್ಯದ ಎಲ್ಲಾ ನದಿಗಳ ನೀರಿನ ಮಟ್ಟ ನಿರಂತರವಾಗಿ ಹೆಚ್ಚುತ್ತಿದೆ. ಮಳೆಗೆ ಚರಂಡಿಗಳು, ಗದ್ದೆಗಳು ನೀರು ತುಂಬಿ ಉಕ್ಕಿ ಹರಿಯುತ್ತಿವೆ. ತೆಹ್ರಿ ಜಿಲ್ಲೆಯ ಘನ್ಸಾಲಿಯಲ್ಲಿ ಮಳೆ ಕಾರಣ ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು ಒಬ್ಬರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.












Click it and Unblock the Notifications