Get Updates
Get notified of breaking news, exclusive insights, and must-see stories!

ಮುಂದಿನ ಸುಪ್ರೀಂಕೋರ್ಟ್‌ ಸಿಜೆಐ ನ್ಯಾಯಮೂರ್ತಿ ಸಂಜಯ್ ಖನ್ನಾ, ಪರಿಚಯ

ನವದೆಹಲಿ, ಅಕ್ಟೋಬರ್ 17: ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಧನಂಜಯ ವೈ. ಚಂದ್ರಚೂಡ್ ಕೇಂದ್ರ ಕಾನೂನು ಸಚಿವಾಲಯಕ್ಕೆ ಪತ್ರವೊಂದನ್ನು ಬರೆದಿದ್ದಾರೆ. ನ್ಯಾಯಮೂರ್ತಿ ಸಂಜಯ್ ಖನ್ನಾ ಅವರು ಮುಂದಿನ ಮುಖ್ಯ ನ್ಯಾಯಮೂರ್ತಿಗಳಾಗಬೇಕು ಎಂದು ಶಿಫಾರಸು ಮಾಡಿದ್ದಾರೆ. ಧನಂಜಯ ವೈ. ಚಂದ್ರಚೂಡ್ ನವೆಂಬರ್ 9, 2022ರಂದು ಅಧಿಕಾರವಹಿಸಿಕೊಂಡಿದ್ದರು. ನವೆಂಬರ್ 10ರಂದು ವಯೋನಿವೃತ್ತಿ ಕಾರಣಕ್ಕೆ ಅವರ ಅವಧಿ ಪೂರ್ಣಗೊಳ್ಳಲಿದೆ.

ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳು 65 ವರ್ಷಕ್ಕೆ ವಯೋ ನಿವೃತ್ತಿ ಹೊಂದುತ್ತಾರೆ. ಮುಖ್ಯ ಮುಖ್ಯ ನ್ಯಾಯಮೂರ್ತಿಗಳು ನಿವೃತ್ತರಾಗುವ ಮೊದಲು ತಮ್ಮ ಸ್ಥಾನಕ್ಕೆ ಯಾರು ನೇಮಕವಾಗಬೇಕು ಎಂದು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುತ್ತಾರೆ. ಸುಪ್ರೀಂಕೋರ್ಟ್‌ನ 2ನೇ ಹಿರಿಯ ನ್ಯಾಯಮೂರ್ತಿಗಳನ್ನು ಶಿಫಾರಸು ಮಾಡಲಿದ್ದು, ಕೇಂದ್ರ ಸರ್ಕಾರ ಅದಕ್ಕೆ ಒಪ್ಪಿಗೆ ನೀಡಲಿದೆ.

CJI DY Chandrachud Proposes Justice Sanjiv Khanna As Successor Who Is Sanjiv Khanna

ಹಾಲಿ ಮುಖ್ಯ ನ್ಯಾಯಮೂರ್ತಿ ಧನಂಜಯ ವೈ. ಚಂದ್ರಚೂಡ್ ಕೇಂದ್ರ ಕಾನೂನು ಸಚಿವಾಲಯಕ್ಕೆ ಪತ್ರ ಬರೆದಿದ್ದು ಸುಪ್ರೀಂಕೋರ್ಟ್‌ನ ಎರಡನೇ ಹಿರಿಯ ನ್ಯಾಯಮೂರ್ತಿಗಳಾದ ಸಂಜಯ್ ಖನ್ನಾ ಹೆಸರನ್ನು ಮುಂದಿನ ಮುಖ್ಯ ನ್ಯಾಯಮೂರ್ತಿ ಹುದ್ದೆಗೆ ಶಿಫಾರಸು ಮಾಡಿದ್ದಾರೆ. ದೇಶದ 51ನೇ ಮುಖ್ಯ ನ್ಯಾಯಮೂರ್ತಿಯಾಗಲಿರುವ ಸಂಜಯ್ ಖನ್ನಾ ಅವರು 6 ತಿಂಗಳ ಅವಧಿ ಹೊಂದಿದ್ದು, ಬಳಿಕ ಅವರು ನಿವೃತ್ತರಾಗಲಿದ್ದಾರೆ.

ಎರಡು ವರ್ಷಗಳ ಕಾಲ ಸೇವೆ: ಅಕ್ಟೋಬರ್ 9ರಂದು ಭೂತಾನ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮುಖ್ಯ ನ್ಯಾಯಮೂರ್ತಿ ಧನಂಜಯ ವೈ. ಚಂದ್ರಚೂಡ್, "ನನ್ನ ಮನಸ್ಸು ಭವಿಷ್ಯ ಮತ್ತು ಭೂತಕಾಲದ ಬಗ್ಗೆ ಭಯ ಮತ್ತು ಆತಂಕಗಳಿಂದ ತುಂಬಿದೆ. ಯೋಜಿಸಿದ್ದನ್ನು ಸಾಧಿಸಲಾಯಿತೇ?. ಇತಿಹಾಸವು ಅಧಿಕಾರಾವಧಿಯನ್ನು ಹೇಗೆ ನಿರ್ಣಯಿಸುತ್ತದೆ ಎಂಬ ಪ್ರಶ್ನೆಗಳ ಬಗ್ಗೆ ಮನಸ್ಸು ಯೋಚಿಸುತ್ತಿದೆ" ಎಂದು ಹೇಳಿದರು.

"ಸ್ವಲ್ಪ ದುರ್ಬಲನಾಗಿದ್ದಕ್ಕಾಗಿ ನನ್ನನ್ನು ಕ್ಷಮಿಸಿ. ಎರಡು ವರ್ಷಗಳ ಕಾಲ ದೇಶಕ್ಕೆ ಸೇವೆ ಸಲ್ಲಿಸಿದ್ದೇನೆ. ಈ ವರ್ಷದ ನವೆಂಬರ್‌ನಲ್ಲಿ ಮುಖ್ಯ ನ್ಯಾಯಮೂರ್ತಿ ಹುದ್ದೆಯ ಅವಧಿ ಅಂತ್ಯಗೊಳ್ಳುತ್ತಿದೆ. ನನ್ನ ಮನಸ್ಸು ಅತಿಯಾಗಿ ಚಿಂತಿಸುತ್ತಿದೆ. ನನ್ನೊಳಗಿನ ಹಲವು ಪ್ರಶ್ನೆಗಳಿಗೆ ನಾನು ಉತ್ತರ ಕಂಡುಕೊಂಡಿದ್ದೇನೆ" ಎಂದರು.

"ನನ್ನ ಎರಡು ವರ್ಷದ ವೃತ್ತಿ ಜೀವನದಲ್ಲಿ ನನ್ನ ಗ್ರಹಿಕೆಗಳ ಪ್ರಕಾರ ಉತ್ತಮ ಪ್ರಯತ್ನವನ್ನು ನಾನು ಮಾಡಿದ್ದೇನೆ. ಇತಿಹಾಸ ನನ್ನ ಅವಧಿಯನ್ನು ಹೇಗೆ ನೋಡುತ್ತದೆ?, ನಾನು ವಿಭಿನ್ನವಾದ ಏನನ್ನಾದರೂ ಮಾಡಿದ್ದೇನೆಯೇ?, ಭವಿಷ್ಯಕ್ಕೆ ನಾನು ಹಾಕಿಕೊಡುತ್ತಿರುವ ದಾರಿ ಏನು? ಎಂದು ಚಿಂತಿಸುತ್ತಿದ್ದೇನೆ" ಎಂದು ಮುಖ್ಯ ನ್ಯಾಯಮೂರ್ತಿಗಳು ಹೇಳಿದರು.

ನ್ಯಾಯಮೂರ್ತಿ ಸಂಜಯ್ ಖನ್ನಾ: ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಲಿರುವ ನ್ಯಾಯಮೂರ್ತಿ ಸಂಜಯ್ ಖನ್ನಾ 1983ರಲ್ಲಿ ದೆಹಲಿ ಬಾರ್ ಕೌನ್ಸಿಲ್‌ನಲ್ಲಿ ನೋಂದಣಿ ಮಾಡಿಕೊಂಡರು. ಜಿಲ್ಲಾ ನ್ಯಾಯಾಲಯಗಳಲ್ಲಿ ವೃತ್ತಿಯನ್ನು ಆರಂಭಿಸಿದರು. ಟ್ರಿಬ್ಯುನಲ್ ಮತ್ತು ದೆಹಲಿ ಹೈಕೋರ್ಟ್‌ಗಳಲ್ಲಿ ವೃತ್ತಿಯನ್ನು ಮಾಡಿದರು.

ನ್ಯಾಯಮೂರ್ತಿ ಸಂಜಯ್ ಖನ್ನಾ ಆದಾಯ ತೆರಿಗೆ ಇಲಾಖೆಯ ಸೀನಿಯರ್ ಸ್ಟಾಡಿಂಗ್ ಕೌನ್ಸಿಲ್ ಆಗಿ ಕಾರ್ಯ ನಿರ್ವಹಣೆ ಮಾಡಿದರು. ದೆಹಲಿ ಹೈಕೋರ್ಟ್‌ನಲ್ಲಿ ವಿವಿಧ ಪ್ರಕರಣಗಳಲ್ಲಿ ಅಮೆಕಸ್ ಕ್ಯುರಿಯಾಗಿ, ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ವಾದ ಮಂಡಿಸಿದರು. 2005ರಲ್ಲಿ ದೆಹಲಿ ಹೈಕೋರ್ಟ್ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡರು. 2006ರಲ್ಲಿ ಕಾಯಂ ನ್ಯಾಯಮೂರ್ತಿಗಳಾದರು.

ದೆಹಲಿ ನ್ಯಾಯಾಂಗ ಅಕಾಡೆಮಿ , ದೆಹಲಿ ಇಂಟರ್ನ್ಯಾಷನಲ್ ಆರ್ಬಿಟ್ರೇಶನ್ ಸೆಂಟರ್ ಮತ್ತು ಜಿಲ್ಲಾ ನ್ಯಾಯಾಲಯದ ಮಧ್ಯಸ್ಥಿಕೆ ಕೇಂದ್ರದ ಮುಖ್ಯಸ್ಥರು, ಜಡ್ಜ್‌ ಇನ್‌ಚಾರ್ಜ್ ಆಗಿಯೂ ನ್ಯಾಯಮೂರ್ತಿ ಸಂಜಯ್ ಖನ್ನಾ ಕಾರ್ಯ ನಿರ್ವಹಣೆ ಮಾಡಿದ್ದಾರೆ. ಯಾವುದೇ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗದೇ ಅವರು 2019ರ ಜನವರಿ 18ರಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾದರು.

ಸುಪ್ರೀಂಕೋರ್ಟ್‌ನ ಎರಡನೇ ಹಿರಿಯ ನ್ಯಾಯಮೂರ್ತಿಯಾಗಿರುವ ಸಂಜಯ್ ಖನ್ನಾ ಅವರು ಪ್ರಸ್ತುತ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರಾಗಿದ್ದಾರೆ ಮತ್ತು ಭೋಪಾಲ್‌ನ ರಾಷ್ಟ್ರೀಯ ನ್ಯಾಯಾಂಗ ಅಕಾಡೆಮಿಯ ಆಡಳಿತ ಸಲಹೆಗಾರರಾಗಿದ್ದಾರೆ.

ನ್ಯಾಯಮೂರ್ತಿ ಸಂಜಯ್ ಖನ್ನಾ ಸೆಂಟ್ರಲ್ ವಿಸ್ತಾ ಯೋಜನೆ ಕುರಿತು ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ನಡೆಯುತ್ತಿದ್ದ ಪೀಠದಲ್ಲಿದ್ದರು. ಸಂವಿಧಾನದ 370ನೇ ವಿಧಿ ಕುರಿತ ಅರ್ಜಿಯ ವಿಚಾರಣೆ ನಡೆಸಿದ ಸಂವಿಧಾನಿಕ ಪೀಠದಲ್ಲಿದ್ದರು. ಚುನಾವಣಾ ಬಾಂಡ್ ಕುರಿತು ವಿಚಾರಣೆ ನಡೆಸಿದ ಪೀಠದಲ್ಲಿಯೂ ಇದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+