ದೆಹಲಿ ವಾಯು ಮಾಲಿನ್ಯ ನಿವಾರಣೆಗೆ ಚೀನಾ ಸಾಥ್
ನವದೆಹಲಿ, ಡಿಸೆಂಬರ್ 18: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯ ಹೆಚ್ಚಾಗಿದೆ. ಇಲ್ಲಿನ ಕಳಪೆ ಗುಣಮಟ್ಟದ ಗಾಳಿ ಜನರಿಗೆ ತೊಂದರೆ ನೀಡುತ್ತಿದೆ. ಚಳಿಗಾಲದಲ್ಲಿ ಅಪಾಯಕಾರಿ ವಾತಾವರಣ ನಿರ್ಮಾಣವಾಗಿದೆ. ಈ ಮಾಲಿನ್ಯ ಸಮಸ್ಯೆ ನಿವಾರಣೆಗೆ ಭಾರತದೊಂದಿಗೆ ಚೀನಾ ದೇಶ ಕೈಜೋಡಿಸುವುದಾಗಿ ತಿಳಿಸಿದೆ. ಚೀನಾದಲ್ಲಿ ತಾನು ಕೈಗೊಂಡ ಯಶಸ್ವಿ ಕ್ರಮಗಳ ಬಗ್ಗೆ ಮಾರ್ಗದರ್ಶನ ಮಾಡಿ ಹಂತ ಹಂತವಾಗಿ ದೆಹಲಿ ಮಾಲಿನ್ಯ ನಿಯಂತ್ರಿಸುವುದಾಗಿ ಬುಧವಾರ ತಿಳಿಸಿದೆ.
ದೆಹಲಿ ವಾಯು ಮಾಲಿನ್ಯದ ಹೋರಾಟವನ್ನು ಹಂಚಿಕೊಳ್ಳುವುದಾಗಿ ಭಾರತದಲ್ಲಿನ ಚೀನೀ ರಾಯಭಾರ ಕಚೇರಿಯ ವಕ್ತಾರ ಯು ಜಿಂಗ್ ಅವರು ತಿಳಿಸಿದ್ದಾರೆ. ಈ ಸಂಬಂಧ ಎಕ್ಸ್ ಪೋಸ್ಟ್ ಮಾಡಿ 'Shred Struggle' ಎಂದು ಅವರು ಬರೆದುಕೊಂಡಿದ್ದಾರೆ. ಭಾರತಕ್ಕೆ ಸಹಾಯ ಮಾಡಲು ಚೀನಾ ಸಿದ್ಧವಾಗಿದೆ. ನಿರಂತರ ಪ್ರಯತ್ನದಿಂದ ಕ್ರಮೇಣ ಇಲ್ಲಿನ ಕಳಪೆ ಗಾಳಿ ಗುಣಮಟ್ಟದ ವಾತಾವರಣ ತಗ್ಗಿಸಬಹುದೆಂದು ತಿಳಿಸಿದರು.

ಚೀನಾ ವಕ್ತಾರರು ದೆಹಲಿಯ ಗಾಳಿಯ ಗುಣಮಟ್ಟದ ಮಟ್ಟವನ್ನು ಬೀಜಿಂಗ್‌ನ ವಾಯು ಗುಣಮಟ್ಟಕ್ಕೆ ಹೋಲಿಕೆ ಮಾಡಿದೆ. ಬೀಜಿಂಗ್‌ನಲ್ಲಿ ಕೈಗೊಂಡ ಕ್ರಮಗಳಿಂದ ಅಲ್ಲಿ ಗಾಳಿ ಗುಣಮಟ್ಟ ಸೂಚ್ಯಂಕ (AQI) ಕಳಪೆ ಮಟ್ಟದಿಂದ 68ಕ್ಕೆ ಇಳಿದಿದೆ. ಇದು "ತೃಪ್ತಿದಾಯಕ" ಗಾಳಿ ಮಟ್ಟವೆಂದು ಪರಿಗಣಿಸಲಾಗಿದೆ. ಆದರೆ ದೆಹಲಿಯ AQI 447 ರಷ್ಟಿದೆ. ಇದನ್ನು ಭಾರತದ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) "ತೀರಾ ಕಳಪೆ" ಎಂದು ಪರಿಗಣಿಸಿದೆ. ಬೀಜಿಂಗ್ ನೀತಿಗಳನ್ನು ಅನುರಿಸಿದರೆ ದೆಹಲಿ ವಾತಾವರಣದಲ್ಲಿ ಸುಧಾರಣೆ ತರಬಹುದೆಂದು ಚೀನಾ ಭರವಸೆ ನೀಡಿದೆ.
ಚೀನಾ ಸರ್ಕಾರ ಬೀಜಿಂಗ್‌ನಲ್ಲಿ ಹೇಗೆ ವಾಯು ಮಾಲಿನ್ಯವನ್ನು ನಿವಾರಿಸಿತು. ಹೇಗೆಲ್ಲ ಹೋರಾಟ ನಡೆಸಿತ್ತು, ಕೈಗೊಂಡ ಕ್ರಮಗಳು, ವಾಯು ಮಾಲಿನ್ಯವನ್ನು ಹಂತ ಹಂತವಾಗಿ ಹೇಗೆ ನಿಭಾಯಿಸಲಾಯಿತು ಎಂಬುದನ್ನು ಸರಣಿಯಾಗಿ ಹಂಚಿಕೊಳ್ಳಲಾಗುವುದು. ಭಾರತಕ್ಕೆ ಮಾರ್ಗದರ್ಶನ ಮಾಡಲಾಗುವುದು ಎಂದು ಚೀನಿ ವಕ್ತಾರರು ಹೇಳಿದರು.
ವಾಯುಮಾಲಿನ್ಯ ತಡೆಗೆ ಚೀನಾ ಕೈಗೊಂಡ ಕ್ರಮಗಳು
ದೆಹಲಿಯಂತೆ ಚೀನಾದಲ್ಲಿ ಸಹ ವರ್ಷಗಳಿಂದ ತೀವ್ರ ವಾಯು ಮಾಲಿನ್ಯ ಉಂಟಾಗುತ್ತಿತ್ತು. ಅದರ ನಿವಾರಣೆಗೆ ಚೀನೀ ಸರ್ಕಾರ ಸಾಕಷ್ಟು ಹೋರಾಟ ನಡೆಸಿತ್ತು. ಬೀಜಿಂಗ್‌ನಂತಹ ಪ್ರಮುಖ ನಗರಗಳಲ್ಲಿ ಅಪಾರ ಹೊಗೆ, ಕಡಿಮೆ ಗೋಚರತೆ ನಿರ್ಮಾಣವಾಗಿತ್ತು. ಜನರ ಆರೋಗ್ಯದ ಕುರಿತು ಕಳವಳ ವ್ಯಕ್ತವಾಗಿತ್ತು. ಎಚ್ಚೆತ್ತ ಸರ್ಕಾರ ಕಳೆದೊಂದು ದಶಕದಲ್ಲಿ ಕಟ್ಟುನಿಟ್ಟಾದ ಕ್ರಮಗಳನ್ನು ಜಾರಿಗೆ ತಂದಿತು. 2013 ರಲ್ಲಿ ಚೀನಾ ವಾಯು ಮಾಲಿನ್ಯ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕ್ರಿಯಾ ಯೋಜನೆ ಆರಂಭಿಸಿತು. ಈ ಮೂಲಕ ಬೀಜಿಂಗ್ ನಲ್ಲಿ ಮರಳಿ ತೃಪ್ತಿಕರ ಗುಣಮಟ್ಟದ ಗಾಳಿ ದಾಖಲಾಗುವಂತೆ ಮಾಡುವಲ್ಲಿ ಯಶಸ್ವಿ ಆಯಿತು.
UN-Habitat ವರದಿ ಪ್ರಕಾರ, ಸೂಕ್ತ ಕ್ರಮಗಳ ಜಾತಿ ಬಳಿಕ ಬೀಜಿಂಗ್ ಶೇಕಡಾ 50-60ರಷ್ಟು ಮಾಲಿನ್ಯದಲ್ಲಿ ತಗ್ಗಿತು. ಇದಕ್ಕಾಗಿ ಕಲ್ಲಿದ್ದಲು ಬಳಕೆಯನ್ನು ತೀವ್ರವಾಗಿ ಕಡಿಮೆ ಮಾಡಲಾಯಿತು. 2012 ರಲ್ಲಿ ಸುಮಾರು 21.8 ಮಿಲಿಯನ್ ಟನ್‌ಗಳಷ್ಟು ಕಲ್ಲಿದ್ದಲು ಬಳಕೆ ಇತ್ತು. ಗರಿಷ್ಠ ಪ್ರಮಾಣದಲ್ಲಿ ಕಲ್ಲಿದ್ದಲು ಬಳಕೆ ಕಡಿಮೆ ಮಾಡಲಾಯಿತು. ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರಗಳನ್ನು ಬಂದ್ ಮಾಡಲಾಯಿತು.
Both China and India know the struggle with air pollution amid rapid urbanization 🌫️📊.
— Yu Jing (@ChinaSpox_India) December 15, 2025
🌫️➡️🌤️ While the challenge remains complex, China’s sustained efforts over the past decade have delivered noticeable improvements.
📌 In the coming days, we’ll share a bite-sized series… pic.twitter.com/0ZG4Rl8ISD
ಮಾಲಿನ್ಯಕಾರಕ ವಾಹನಗಳ ವಿರುದ್ಧ ಕ್ರಮ
ಬೀಜಿಂಗ್‌ನಲ್ಲಿ ವಾಹನ ಸಂಚಾರದಿಂದ ಉಂಟಾಗುತ್ತಿದ್ದ ಮಾಲಿನ್ಯದ ಪ್ರಮಾಣವು ಹೆಚ್ಚಿತ್ತು. ಸಾರಿಗೆ ಅಧಿಕಾರಿಗಳು ಹೆಚ್ಚು ಹೊಗೆ ಹೊರಸೂಸುವ ಮತ್ತು ಹಳೆಯ ವಾಹನಗಳ ವಿರುದ್ಧ ಕಠಿಣ ಕ್ರಮ ಜಾರಿಗೊಳಿಸಿದರು. ಇದರಿಂದ ಮಾಲಿನ್ಯಕಾರಕ ವಾಹನಗಳು ರಸ್ತೆಗೆ ಇಳಿಯಲೇ ಇಲ್ಲ. ದೊಡ್ಡ ದೊಡ್ಡ ಕೈಗಾರಿಕೆಗಳ ತಪಾಸಣೆಯನ್ನು ಹೆಚ್ಚಿಸಲಾಯಿತು. ಪ್ರಾದೇಶಿಕವಾಗಿ ಸರ್ಕಾರ ಸಮನ್ವಯ ಸಾಧಿಸಿದ್ದು, ಮಾಲಿನ್ಯ ತಗ್ಗಿಸುವಲ್ಲಿ ನಿರ್ಣಾಯಕ ಪಾತ್ರವಹಿಸಿತು. ಹೀಗೆ ನಿರಂತರ ಕ್ರಮಗಳ ಮೂಲಕ ಬೀಜಿಂಗ್ ನಲ್ಲಿ ಕಳೆದ ವರ್ಷ 290 ದಿನಗಳ ಉತ್ತಮ ಗಾಳಿ ದಾಖಲಾಗಿದೆ.
ಇಂಥದ್ದೆ ಕ್ರಮಗಳನ್ನು ದೆಹಲಿಯಲ್ಲಿ ಜಾರಿಗೊಳಿಸಲು ಭಾರತಕ್ಕೆ ಚೀನಾ ಮಾರ್ಗದರ್ಶನ ಮಾಡಲಿದೆ. ಕ್ರಮೇಣ ದೆಹಲಿಯು ಸಹ ಬೀಜಿಂಗ್ ನಂತೆ ಭವಿಷ್ಯದಲ್ಲಿ ಬದಲಾಗಲಿದೆ. ಇದಕ್ಕೆ ಒಂದಷ್ಟು ಸಮಯ ಹಿಡಿಯುತ್ತದೆ. ಚೀನಾ ನಿಯಮಗಳನ್ನು ಹೇಗೆಲ್ಲ ಜಾರಿಗೆ ಬರಲಿದೆ ಎಂಬುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.












Click it and Unblock the Notifications