Chhattisgarh Election: ಗಿರಿಶಿಖರಗಳ ನಾಡಲ್ಲಿ ಗೆಲುವು ಯಾರಿಗೆ? ಕಾಂಗ್ರೆಸ್ VS ಬಿಜೆಪಿ ಬಲಾಬಲ ಹೇಗಿದೆ?
ಅದು ನಕ್ಸಲರ ನಾಡು ವರ್ಷಕ್ಕೆ ಏನಿಲ್ಲ ಅಂದ್ರೂ ಹಲವಾರು ಬಾಂಬ್ ಸ್ಫೋಟವಾಗುತ್ತೆ. ನೂರಾರು ಜನರು ಸಾಯುತ್ತಾರೆ. ಅಲ್ಲಿನ ಜನರಿಗೆ ಪ್ರಕೃತಿಯ ಆಶೀರ್ವಾದ ಇದೆ, ಸಂಪತ್ತು ಭರಿತ ನೆಲವೂ ಇದೆ. ಆದರೆ ನೆಮ್ಮದಿಯಾಗಿ ಬದುಕುವ ಅವಕಾಶವೇ ಸಿಕ್ಕಿಲ್ಲ. ಈ ರಾಜ್ಯದ ಅಧಿಕಾರ ಯಾರ ಕೈಗೆ ಸಿಕ್ಕರೂ, ನಕ್ಸಲರ ಅಟ್ಟಹಾಸಕ್ಕೆ ಬ್ರೇಕ್ ಬೀಳುತ್ತಿಲ್ಲ. ಯಾವುದು ಆ ರಾಜ್ಯ? ಅನ್ನೋ ಪ್ರಶ್ನೆಗೆ ಈಗಾಗಲೇ ನಿಮಗೆ ಉತ್ತರ ಸಿಕ್ಕಿರಬಹುದು.
ಹೌದು, ಹಿಂಸಾಚಾರದಿಂದ ಕುಖ್ಯಾತಿ ಪಡೆದ ಛತ್ತೀಸ್‌ಗಢ ರಾಜ್ಯದ ವಿಧಾನಸಭೆ ಚುನಾವಣೆ ಈಗ ಅಂತಿಮ ಹಂತಕ್ಕೆ ಬಂದು ತಲುಪಿದೆ. ಈಗಾಗಲೇ ಮೊದಲ ಹಂತದ ಚುನಾವಣೆಯು ಛತ್ತೀಸ್‌ಗಢ ರಾಜ್ಯದಲ್ಲಿ ಮುಗಿದು, 2ನೇ ಹಂತದ ಮತದಾನಕ್ಕೆ ಛತ್ತೀಸ್‌ಗಢ ರಾಜ್ಯ ಸಜ್ಜಾಗಿ ನಿಂತಿದೆ. ಗೆದ್ದೇ ಗೆಲ್ಲಬೇಕೆಂಬ ಒಂದೇ ಮಂತ್ರದೊಂದಿಗೆ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ಛತ್ತೀಸ್‌ಗಢದಲ್ಲಿ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಈಗ ಛತ್ತೀಸ್‌ಗಢದ ಅಂತಿಮ ಸಮೀಕ್ಷೆ ಹೊರಬಿದ್ದಿದ್ದು, ಚುನಾವಣಾ ಪೂರ್ವ ಸಮೀಕ್ಷೆಗಳ ಪ್ರಕಾರ ಕಾಂಗ್ರೆಸ್ ಅಥವಾ ಬಿಜೆಪಿ.? ಇಬ್ಬರಲ್ಲಿ ಯಾರು ಅಧಿಕಾರ ಹಿಡಿಯಬಹುದು ಹೇಳಿ..?

ಛತ್ತೀಸ್‌ಗಢ ರಾಜ್ಯದ ಅಧಿಕಾರ ಈ ಪಕ್ಷಕ್ಕೆ!
ಈಗಿನ ಸಮೀಕ್ಷೆ ಪ್ರಕಾರ ಕಾಂಗ್ರೆಸ್ ಭರ್ಜರಿ 53 ರಿಂದ 55 ಸ್ಥಾನಗಳನ್ನು ಗೆಲ್ಲಬಹುದು ಅಂತಿದೆ ವರದಿ. ಹಾಗೂ ಬಿಜೆಪಿ ಪಕ್ಷ ಇಲ್ಲಿ 34 ರಿಂದ 36 ಸ್ಥಾನ ಪಡೆಯುವ ಸಾಧ್ಯತೆ ಇದೆ. ಕಾಂಗ್ರೆಸ್ ಮತ್ತು ಬಿಜೆಪಿ ಹೊರತುಪಡಿಸಿ, ಬೇರೆ ಬೇರೆ ಪಕ್ಷಗಳು ಹಾಗೂ ಪಕ್ಷೇತರರು ಅಷ್ಟಾಗಿ ಸಂಚಲನ ಸೃಷ್ಟಿಸುವ ಸಾಧ್ಯತೆ ತುಂಬಾ ಕಡಿಮೆ. 'ಜನ್‌ಮತ್ ಪೋಲ್ಸ್' ನಡೆಸಿರುವ ಸಮೀಕ್ಷೆಯಂತೆ ಈ ಮಾಹಿತಿ ನೀಡಲಾಗಿದ್ದು, ಒಟ್ಟು 90 ವಿಧಾನಸಭೆ ಕ್ಷೇತ್ರಗಳನ್ನ ಹೊಂದಿರುವ ಛತ್ತೀಸ್‌ಗಢ ವಿಧಾನಸಭೆ ಚುನಾವಣೆ ತೀವ್ರ ಕುತೂಹಲ ಕೆರಳಿಸಿದೆ.
ಉಚಿತಗಳ ಆಶ್ವಾಸನೆ ನೀಡಿದೆ ಬಿಜೆಪಿ
ಹಲವು ಸಮೀಕ್ಷೆ ಅಳೆದು, ತೂಗಿ ಲೆಕ್ಕಾಚಾರ ಹಾಕಿ ಹೇಳುವುದಾದ್ರೆ ಕಾಂಗ್ರೆಸ್ ಮತ್ತೊಮ್ಮೆ ಅಧಿಕಾರ ಹಿಡಿಯುವುದು ಪಕ್ಕಾ ಆಗುತ್ತಿದೆ. ಆದ್ರೆ ಕೊನೇ ಕ್ಷಣದವರೆಗೆ ಬಿಜೆಪಿ ನಾಯಕರು ಇಲ್ಲಿ ಪೈಪೋಟಿ ನೀಡುತ್ತಿದ್ದು, ಅಂತಿಮ & ಅಧಿಕೃತ ಫಲಿತಾಂಶವು ಬರುವ ತನಕ ಕಾದು ನೋಡಬೇಕಿದೆ. ಈಗಾಗಲೇ ಬಿಜೆಪಿ ಕೂಡ ತನ್ನ ಪ್ರಣಾಳಿಕೆ ಮೂಲಕ ಮತದಾರರಿಗೆ ಭಾರಿ ದೊಡ್ಡ ಉಚಿತ ಉಡುಗೊರೆಗಳ ಆಶ್ವಾಸನೆ ನೀಡಿದೆ.
Chhattisgarh assembly Election 2023
— Janmat polls (@Janmatpolls) November 10, 2023
Total-(90)
Congress✋ =53-55
BJP 🌷=34-36
ಈ ಮೂಲಕ ಛತ್ತೀಸ್‌ಗಢ ಚುನಾವಣೆ ಅಖಾಡ ಮತ್ತಷ್ಟು ರಂಗೇರಿದೆ. ಜಿದ್ದಾಜಿದ್ದಿನ ಪೈಪೋಟಿ ನಡುವೆಯು ಕಾಂಗ್ರೆಸ್ ಮತ್ತೊಮ್ಮೆ ಅಂದ್ರೆ ಈಗ 2ನೇ ಬಾರಿಗೆ ಛತ್ತೀಸ್‌ಗಢ ರಾಜ್ಯದಲ್ಲಿ ಅಧಿಕಾರ ಹಿಡಿಯುವುದು ಬಹುತೇಕ ಪಕ್ಕಾ. ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ, ಛತ್ತೀಸ್‌ಗಢ, ಮಿಜೋರಾಂ ರಾಜ್ಯಗಳಿಗೆ ಚುನಾವಣೆ ನಡೆಯುತ್ತಿದೆ. ಆದರೆ ಈ ಪೈಕಿ ಉಳಿದ 4 ರಾಜ್ಯ ಒಂದು ಲೆಕ್ಕವಾದರೆ, ಛತ್ತೀಸ್‌ಗಢ ಚುನಾವಣೆ ಇನ್ನೊಂದು ಲೆಕ್ಕ. ಛತ್ತೀಸ್‌ಗಢ ಮಾತ್ರ, ಇಡೀ ದೇಶದ ಗಮನ ಸೆಳೆಯುತ್ತಿದೆ.












Click it and Unblock the Notifications