ಚೆನ್ನೈ; ದೀಪಾವಳಿ ಬೋನಸ್ ಆಗಿ ಸಿಬ್ಬಂದಿಗೆ ಕಾರು, ಬೈಕ್ ಗಿಫ್ಟ್ ನೀಡಿದ ಮಾಲೀಕ!

ಚೆನ್ನೈ, ಅ.17: ದೀಪಾವಳಿ ಹಬ್ಬದ ಸೀಸನ್ ಶುರುವಾಗಿದೆ. ಈಗಾಗಲೇ ತಮ್ಮ ಕಂಪನಿಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ವಾರ್ಷಿಕ ಬೋನಸ್ ಮತ್ತು ಗಿಫ್ಟ್ ನೀಡುವುದು ನಡೆಯುತ್ತಿದೆ. ಆದರೆ, ಚೆನ್ನೈನ ಈ ಮಾಲೀಕ ತನ್ನ ಸಿಬ್ಬಂದಿಗೆ ನೀಡಿರುವ ಗಿಫ್ಟ್‌ಗಳು ಎಂಥವರನ್ನು ಅಚ್ಚರಿಗೆ ನೂಕುತ್ತವೆ.

ಹೌದು, ದೀಪಾವಳಿ ಹಬ್ಬ ಸಮೀಪಿಸುತ್ತಿರುವಂತೆಯೇ ಚೆನ್ನೈ ಮೂಲದ ಉದ್ಯಮಿಯೊಬ್ಬರು ತಮ್ಮ ಸಿಬ್ಬಂದಿ ಮತ್ತು ಸಹೋದ್ಯೋಗಿಗಳಿಗೆ 1.2 ಕೋಟಿ ರೂಪಾಯಿ ಮೌಲ್ಯದ ಕಾರು ಮತ್ತು ಬೈಕ್‌ಗಳನ್ನು ಉಡುಗೊರೆಯಾಗಿ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಚೆನ್ನೈ ಮೂಲದ ಆಭರಣ ಬ್ರ್ಯಾಂಡ್ , ಚಲ್ಲಾನಿ ಜ್ಯುವೆಲ್ಲರಿ ಮಾಲೀಕ ಭಾನುವಾರ ದೀಪಾವಳಿ ಉಡುಗೊರೆಯಾಗಿ ಸಿಬ್ಬಂದಿಗೆ 10 ಕಾರುಗಳು ಮತ್ತು 20 ಬೈಕ್‌ಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.

Chennai jewellery shop owner gifted cars, bikes to his staff as Diwali gifts

ಚಲ್ಲಾನಿ ಜ್ಯುವೆಲ್ಲರಿ ಮಾಲೀಕರಾದ ಜಯಂತಿ ಲಾಲ್, ತಮ್ಮ ಸಿಬ್ಬಂದಿ ತನ್ನ ಎಲ್ಲಾ ಏರಿಳಿತಗಳಲ್ಲಿ ಜೊತೆಯಾಗುವ ಮೂಲಕ ಬೆಂಬಲವಾಗಿ ನಿಂತಿದ್ದಾರೆ. ಈ ಉಡುಗೊರೆಗಳು ಅವರಿಗೆ ಮತ್ತಷ್ಟು ಉತ್ತಮ ಕೆಲಸ ಮಾಡಲು ಅವರನ್ನು ಪ್ರೋತ್ಸಾಹಿಸುತ್ತದೆ ಎಂದು ಹೇಳಿದ್ದಾರೆ.

"ನಾವು 10 ಜನರಿಗೆ ಕಾರುಗಳನ್ನು ಮತ್ತು 20 ಜನರಿಗೆ ಬೈಕ್‌ಗಳನ್ನು ನೀಡುತ್ತಿದ್ದೇವೆ" ಎಂದು ಜಯಂತಿ ಲಾಲ್ ಮಾಹಿತಿ ನೀಡಿದ್ದಾರೆ.

ಉದ್ಯಮಿ ಇಂತಹ ಉಡುಗೊರೆಗಳೊಂದಿಗೆ ತನ್ನ ಸಿಬ್ಬಂದಿಯನ್ನು ಬೆರಗುಗೊಳಿಸಿದ್ದು ಇದೇ ಮೊದಲಲ್ಲ, ವರದಿಗಳ ಪ್ರಕಾರ, ಅವರು ಈ ಹಿಂದೆ ಎಂಟು ಕಾರುಗಳು ಮತ್ತು 18 ಬೈಕ್‌ಗಳನ್ನು ಉಡುಗೊರೆಯಾಗಿ ನೀಡಿದ್ದರು ಎನ್ನಲಾಗಿದೆ.

Chennai jewellery shop owner gifted cars, bikes to his staff as Diwali gifts

"ಅವರು ಕೇವಲ ಸಿಬ್ಬಂದಿಯಲ್ಲ, ನನ್ನ ಕುಟುಂಬ. ಹಾಗಾಗಿ, ಅವರಿಗೆ ಅಂತಹ ಆಶ್ಚರ್ಯಗಳನ್ನು ನೀಡುವ ಮೂಲಕ ಅವರನ್ನು ನನ್ನ ಕುಟುಂಬದಂತೆಯೇ ಎಂದು ತಿಳಿದಿದ್ದೇನೆ. ಅವರಿಗೆ ಉಡುಗೊರೆಗಳನ್ನು ನೀಡಿದ ನಂತರ ನಾನು ತುಂಬ ಸಂತೋಷಪಡುತ್ತೇನೆ. ಪ್ರತಿಯೊಬ್ಬ ಮಾಲೀಕರು ತಮ್ಮ ಸಿಬ್ಬಂದಿ ಮತ್ತು ಸಹೋದ್ಯೋಗಿಗಳಿಗೆ ಉಡುಗೊರೆಗಳನ್ನು ನೀಡುವ ಮೂಲಕ ಗೌರವಿಸಬೇಕು" ಎಂದು ಚಲ್ಲಾನಿ ಜ್ಯುವೆಲ್ಲರಿ ಮಾಲೀಕರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+