Chennai cyclone michaung: ಮುಳುಗಿದ ವಿಮಾನ ನಿಲ್ದಾಣ, ಆಟಿಕೆ ಸಾಮಾನುಗಳಂತೆ ತೇಲಾಡುತ್ತಿರುವ ಕಾರುಗಳು
ಆಟಿಕೆಯಂತೆ ತೇಲಾಡುತ್ತಿರುವ ವಾಹನಗಳು.... ಹಾರಿ ಹೋಗುತ್ತಿರುವ ಗಿಡ ಮರಗಳು... ಮುಳುಗಿದ ವಿಮಾನ ನಿಲ್ದಾಣ.. ಇಂಥಹ ಭಯಾನಕ ದೃಶ್ಯಗಳು ಕಂಡು ಬಂದಿದ್ದು ಬೇರೆಲ್ಲೂ ಅಲ್ಲ ಚೆನ್ನೈನಲ್ಲಿ. ಮಿಚುವಾಂಗ್ ಚಂಡಮಾರುತದಿಂದಾಗಿ ಕಳೆದ ಕೆಲ ದಿನಗಳಿಂದ ಚೆನ್ನೈನಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಜನಜೀವನವೇ ಅಸ್ತವ್ಯಸ್ತಗೊಂಡಿದೆ. ಸಾಕಪ್ಪ ಈ ಮಳೆ! ಅನ್ನೋ ಸ್ಥಿತಿಗೆ ಜನ ಬಂದು ತಲುಪಿದ್ದಾರೆ. ಈ ವಿಡಿಯೋಗಳು ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಅಷ್ಟಕ್ಕೂ ಮಿಚುವಾಂಗ್ ಚಂಡಮಾರುತ ಉಂಟು ಮಾಡಿದ ಪರಿಣಾಮ ಒಂದೆರೆಡಲ್ಲ. ಈ ಡಿಸೆಂಬರ್ 3 ರಂದು ನೈರುತ್ಯ ಬಂಗಾಳ ಕೊಲ್ಲಿಯಲ್ಲಿ ಮಿಚುವಾಂಗ್ ಚಂಡಮಾರುತ ರೂಪುಗೊಂಡಿದ್ದು ಚೆನ್ನೈನಲ್ಲಿ ಬೆಂಬಿಡದೇ ಮಳೆಯಾಗುತ್ತಿದೆ.

ಇದು ಅದೆಷ್ಟು ಬಲಶಾಲಿಯಾಗಿದೆ ಅಂದರೆ ಬೃಹತ್ ಮರ ಗಿಡಗಳೇ ಕಾಗದಂತೆ ಹಾರಿ ಹೋಗುತ್ತಿವೆ. ಮಳೆ ನೀರಿನ ರಬಸಕ್ಕೆ ವಾಹನಗಳು ಕೊಚ್ಚಿ ಹೋಗುತ್ತಿದ್ದರೆ ಇತ್ತ ಚೆನ್ನೈ ವಿಮಾನ ನಿಲ್ದಾಣದಲ್ಲಿ ಮೊಣಕಾಲು ಮುಟ್ಟುವಷ್ಟು ಮಳೆ ನೀರು ತುಂಬಿ ಹೋಗಿದೆ.
ಜೊತೆಗೆ ನಾಳೆಯೂ ಚೆನ್ನೈ, ಕಾಂಚೀಪುರಂ ಮತ್ತು ಚೆಂಗಲ್ಪಟ್ಟು ಜಿಲ್ಲೆಗಳಲ್ಲಿ ಮಧ್ಯಂತರ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
Situation at #Chennai Airport. Many flights are diverted to Bengaluru & Trichy#ChennaiRains #CycloneMichuang #ChennaiRain #ChennaiFloods https://t.co/9RYw137Ed8 pic.twitter.com/5gTMKMKQvc
— Karnataka Weather (@Bnglrweatherman) December 4, 2023
ಮಿಚುವಾಂಗ್ ಚಂಡಮಾರುತ ಚೆನ್ನೈ ಮತ್ತು ಮಚಲಿಪಟ್ಟಣಂ ಮೂಲಕ ಡಿಸೆಂಬರ್ 4 ಮಧ್ಯಾಹ್ನ ಉತ್ತರ ತಮಿಳುನಾಡು ಕರಾವಳಿಗೆ ಅಪ್ಪಳಿಸಲಿದೆ. ಜೊತೆಗೆ ಇದು ಭೂಕುಸಿತವನ್ನು ಉಂಟುಮಾಡುವ ಭೀತಿ ಕೂಡ ಇದೆ. ಮಿಚುವಾಂಗ್ ಚಂಡಮಾರುತ ಬಂಗಾಳಕೊಲ್ಲಿಯಲ್ಲಿ ರೂಪುಗೊಂಡ ವರ್ಷದ ನಾಲ್ಕನೇ ಅತ್ಯಂತ ಬೆಚ್ಚಗಿನ ಚಂಡಮಾರುತವಾಗಿದೆ.
ಈ ಚಂಡಮಾರುತದಿಂದಾಗಿ ಗಂಟೆಗೆ 90-100 ಕಿಮೀ ವೇಗದಲ್ಲಿ ಗಾಳಿ ಬೀಸುತ್ತಿದ್ದು ಚೆನ್ನೈನಲ್ಲಿ ಹೆಚ್ಚಿನ ಹಾನಿಯನ್ನುಂಟುಮಾಡುವ ಸಾಧ್ಯತೆಯಿದೆ. ಅದನ್ನು ಎದುರಿಸಲು ಪಾಲಿಕೆಯು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ.
Stay safe #Chennai 🙏. Brutally smashing rains with gusty winds over the city due to #CycloneMichuang being close to the coast
— Karnataka Weather (@Bnglrweatherman) December 4, 2023
Don't venture out unless in an emergency#ChennaiRains #ChennaiRain pic.twitter.com/cMlwX7IwSO
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (NDMA) ಪ್ರಕಾರ, ಕ್ಷಿಪ್ರ ಮತ್ತು ಸಾಮಾನ್ಯವಾಗಿ ವಿನಾಶಕಾರಿ ಗಾಳಿಯ ಪ್ರಸರಣದಿಂದ ರೂಪಗೊಂಡ ಕಡಿಮೆ ಒತ್ತಡದ ಪ್ರದೇಶದ ಸುತ್ತಲಿನ ವಾತಾವರಣದ ಅಡಚಣೆಗಳಿಂದ ಚಂಡಮಾರುತಗಳು ಉಂಟಾಗುತ್ತವೆ. ಚಂಡಮಾರುತಗಳು ಸಾಮಾನ್ಯವಾಗಿ ಹಿಂಸಾತ್ಮಕ ಬಿರುಗಾಳಿ ಮತ್ತು ಕೆಟ್ಟ ಹವಾಮಾನದಿಂದ ಕೂಡಿರುತ್ತವೆ.
ಮಿಚುವಾಂಗ್ ಎಂಬ ಹೆಸರು ಹೇಗೆ ಬಂತು?
ಮ್ಯಾನ್ಮಾರ್ ನೀಡಿದ ಶಿಫಾರಸಿನ ಪ್ರಕಾರ, ಚಂಡಮಾರುತಕ್ಕೆ ಮಿಚುವಾಂಗ್ ಎಂದು ಹೆಸರಿಸಲಾಗಿದೆ. ಈ ಮಿಚುವಾಂಗ್ ಶಕ್ತಿಯನ್ನು ಪ್ರತಿನಿಧಿಸುತ್ತದೆ. ಚಂಡಮಾರುತವು ಬಂಗಾಳಕೊಲ್ಲಿಯಲ್ಲಿ ರೂಪುಗೊಳ್ಳುವ ನಾಲ್ಕನೇ ಮತ್ತು 2023 ರಲ್ಲಿ ಹಿಂದೂ ಮಹಾಸಾಗರದಲ್ಲಿ ರೂಪುಗೊಳ್ಳುವ 6 ನೇ ಚಂಡಮಾರುತವಾಗಿದೆ.
Understand this is Chennai airport today.
— Tarun Shukla (@shukla_tarun) December 4, 2023
The sea seems to have taken it over.
And the most lowly paid staff in an airline typically are out braving it all. 👏👍#ChennaiRains pic.twitter.com/vJWNTmtTez
ಮಿಚುವಾಂಗ್ ಚಂಡಮಾರುತ ಡಿಸೆಂಬರ್ 04 ರ ಸಂಜೆ ಆಂಧ್ರಪ್ರದೇಶದ ಮಚಲಿಪಟ್ಟಣಂ ಮತ್ತು ಉತ್ತರ ತಮಿಳುನಾಡಿನ ಚೆನ್ನೈ ನಡುವೆ ಭಾರತದ ಪೂರ್ವ ಕರಾವಳಿಯನ್ನು ದಾಟುವ ನಿರೀಕ್ಷೆಯಿದೆ. ಜೊತೆಗೆ ಇದು ಪೂರ್ವ ಕರಾವಳಿ ರಾಜ್ಯಗಳ ಮೇಲೆ ಪರಿಣಾಮ ಬೀರುವುದಿಲ್ಲ ಎಂದು IMD ತಿಳಿಸಿದೆ.
ಇನ್ನೂ ಚೆನ್ನೈನ ಹಲವಾರು ತಗ್ಗು ಪ್ರದೇಶಗಳಿಗೆ ಮಳೆ ನೂರು ನುಗ್ಗಿ, ಸಂಚಾರಕ್ಕೆ ಅಡಚಣೆಯಾಗಿದೆ. ಹಗಲು ರಾತ್ರಿ ಜನ ಅಂಗೈಯಲ್ಲಿ ಜೀವ ಹಿಡಿದುಕೊಂಡು ಕುಳಿತುಕೊಳ್ಳುವಂತ ಸ್ಥಿತಿ ನಿರ್ಮಾಣವಾಗಿದೆ. ಜೊತೆಗೆ ವಿಮಾನ ಸೇರಿದಂತೆ ಹಲವಾರು ರೈಲುಗಳ ಸಂಚಾರ ರದ್ದುಗೊಳಿಸಲಾಗಿದೆ. ಜೊತೆಗೆ ಇಂದಿನಿಂದ ಆಂಧ್ರಪ್ರದೇಶ ಹಾಗೂ ತಮಿಳುನಾಡಿನ ಚೆನ್ನೈನಲ್ಲಿ ಹೆಚ್ಚು ಮಳೆಯಾಗಲಿದೆ ಎಂದು ಹವಮಾನ ಇಲಾಖೆ ಎಚ್ಚರಿಕೆಯನ್ನು ನೀಡಿದೆ.












Click it and Unblock the Notifications