Metro Train: 12 ಅಂತಸ್ತಿನ ಕಟ್ಟಡದೊಳಗೆ ನುಗ್ಗಿ ಪಾಸಾಗಲಿದೆ ಮೆಟ್ರೋ ರೈಲು- ಎಲ್ಲಿ? ಮಾಹಿತಿ, ವಿವರ
ಬೆಂಗಳೂರು, ಜನವರಿ 03: ಬೆಂಗಳೂರು, ಚೆನ್ನೈ ಹಾಗೂ ಚೀನಾ ದೇಶದ ಮಹಾನಗರಗಳಲ್ಲಿ ಮೆಟ್ರೋ ವಿಶಿಷ್ಟ ಸೇವೆ ಸಲ್ಲಿಸುತ್ತಿದೆ. ಇದೀಗ ರಸ್ತೆ, ಮೇಲ್ಸೇತುವೆಗಳಂತೆ ವಾಣಿಜ್ಯ/ಅಪಾರ್ಟ್‌ಮೆಂಟ್ ಕಟ್ಟಡದೊಳಗೆ ಮೆಟ್ರೋ ರೈಲು ಓಡಿಸುವ ಯೋಜನೆಯನ್ನು ಸಿಎಂಆರ್ಎಲ್ ರೂಪಿಸಿದೆ. ಆಶ್ಚರ್ಯ, ವೆನಿಸಿದರೂ ಇದು ಸತ್ಯ. ಪ್ಲಾನ್ ಪ್ರಕಾರ ಮುಂದಿನ ಕೆಲವೇ ವರ್ಷಗಳಲ್ಲಿ ಬಹುಮಹಡಿ ಕಟ್ಟಡದೊಳಗೆ ಮೆಟ್ರೋ ರೈಲುಗಳು ಓಡಲಿವೆ.
ಚೀನಾದಂತಹ ಮುಂದುವರಿದ ರಾಷ್ಟ್ರಗಳ ಮಹಾನಗರಗಳಲ್ಲಿ ರಸ್ತೆಗಳಲ್ಲಂತೆ ಕಟ್ಟಡವೊಂದರ ಮೂಲಕ ಮೆಟ್ರೋ ಹಾದು ಹೋಗುವುದನ್ನು ನೀವು ನೋಡಿರುತ್ತಿದೆ. ಅದೇ ಮುಂದಿನ ದಿನಗಳಲ್ಲಿ ಚೆನ್ನೈನಲ್ಲಿ ಇಂತಹದ್ದೆ ರೀತಿಯಲ್ಲಿ ಮೆಟ್ರೋ ರೈಲುಗಳು ಸುಮಾರು 12 ಅಂತಸ್ತಿನ ಕಟ್ಟಡದೊಳಗಿನಿಂದ ಮೆಟ್ರೋಗಳು ಸಂಚರಿಸಲಿವೆ.

ಈ ನಿಟ್ಟಿನಲ್ಲಿ ಚೆನ್ನೈ ಮೆಟ್ರೋ ರೈಲ್ ಲಿಮಿಟೆಡ್ (CMRL) ಆರಂಭಿಸಿರುವ ಮೆಟ್ರೋ ಕಾಮಗಾರಿ ಮುಂದಿನ ಹಂತ IIರಲ್ಲಿ ಬಹುಮಹಡಿ ಕಟ್ಟಡಗಳಲ್ಲಿ ಮೆಟ್ರೋ ಓಡಿಸಲು ಪ್ಲಾನ್ ಮಾಡಿಕೊಂಡಿದೆ. ಅದರ ಪ್ರಕಾರ ಚೈನ್ನ ನಗರದ ಮೂರು ಸ್ಥಳಗಳಲ್ಲಿ ರೈಲು 12 ಅಂತಸ್ತಿನ ಕಟ್ಟಡದ ಮೂಲಕ ಹಾದು ಹೋಗುತ್ತವೆ.
ಮೂರು ಕಡೆಯ ಕಟ್ಟಡದೊಳಗೆ ಮೆಟ್ರೋ ಓಡಿಸಲು ಪ್ಲಾನ್
ಇನ್ನೂ ಚಾಲಕ ರಹಿತ ಮೆಟ್ರೋ ರೈಲುಗಳು ನಗರದ ತಿರುಮಂಗಲಂ, ಕೊಯಂಬೇಡು ಮತ್ತು ತಿರುಮಾಯಿಲೈನಲ್ಲಿ 12 ಅಂತಸ್ತಿನ ಕಟ್ಟಡದ ಮೂಲಕ ಹಾದು ಹೋಗುತ್ತವೆ. ಅಲ್ಲಿ ನಿಲ್ದಾಣಗಳು ಮೂರನೇ ಮಹಡಿಯಲ್ಲಿರುತ್ತವೆ ಮತ್ತು ಉಳಿದವು ವಾಣಿಜ್ಯ ಮತ್ತು ಕಚೇರಿ ಸ್ಥಳಗಳಾಗಿವೆ ಎಂದು ಮೂರು ಸ್ಥಳಗಳ ಮಾಹಿತಿಯನ್ನು CMRL ನೀಡಿದೆ.
ಚೆನ್ನೈನ ತಿರುಮಂಗಲಂ ವ್ಯಾಪ್ತಿಯಲ್ಲಿ ಒಟ್ಟು 12 ಅಂತಸ್ತಿನ ಕಟ್ಟಡ ನಿರ್ಮಾಣ ಹಂತದಲ್ಲಿದೆ. ಇದೇ ಪ್ರದೇಶದಲ್ಲಿ ಮೇಲ್ಸೇತುವೆ ಬಳಿ 450 ಮೀಟರ್ ಉದ್ದದ ಭೂಮಿ ಮತ್ತು ಮೂರು ಮನೆಗಳನ್ನು CMRL ಸ್ವಾಧೀನಪಡಿಸಿಕೊಂಡಿದೆ. ಈ ಏಲ್ಸೇತುವೆ ಮತ್ತು ಮೆಟ್ರೋ ನಿಲ್ದಾಣದೊಂದಿಗೆ ಸಮಗ್ರ ವಾಕ್‌ವೇ ನಿರ್ಮಿಸಲು ಮೊದಲು ಯೋಚಿಸಲಾಗಿತ್ತು. ಆದರೆ ಈ ಬಗ್ಗೆ ಮತ್ತೊಮ್ಮೆ ಅಧ್ಯಯನ ನಡೆಸಲಾಗುತ್ತಿದೆ ಎಂದು ಮೆಟ್ರೋ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಉಪನಗರಗಳವರೆಗೆ ಮೆಟ್ರೋ ವಿಸ್ತರಣೆ ಕಾಮಗಾರಿ
ಚೆನ್ನೈ ಮಹಾನಗರದಿಂದ ಉಪನಗರಗಳಿಗೆ ಮೆಟ್ರೋ ಸಂಪರ್ಕ ಕಲ್ಪಿಸುವ ಕಾಮಗಾರಿಗಳು ಭರದಿಂದ ಸಾಗಿವೆ. ಈ ಮಧ್ಯೆ ಕಾಮಗಾರಿ ಎರಡನೇ ಹಂತದಲ್ಲಿ ಬಹು ಅಂತಸ್ಥಿನ ಕಟ್ಟಡಗಳ ಮಧ್ಯೆ ಮೆಟ್ರೋ ಓಡಿಸಲು ಸಿಎಂಆರ್‌ಎಲ್ ತೀರ್ಮಾನಿಸಿದೆ. ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ.

ಇನ್ನೂ ಎರಡನೇ ಹಂತದ ಮೆಟ್ರೋ ಯೋಜನೆಯನ್ನು 119 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಕೈಗೊಳ್ಳಲಾಗಿದೆ. ಈ ಯೋಜನೆಯನ್ನು ಒಟ್ಟು 69,000 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಮಾಧವರಂ-ಸಿರುಚೆರಿ, ಪೂನಮಲ್ಲೆ-ವಿವೇಕಾನಂದ ಇಲ್ಲಂ, ಮತ್ತು ಮಾಧವರಂನಿಂದ ಶೋಲಿಂಗನಲ್ಲೂರು ಎಂಬ ಮೂರು ಮಾರ್ಗಗಳಲ್ಲಿ ಅನುಷ್ಠಾನಕ್ಕೆ ತರಲಾಗುತ್ತದೆ.
ಮೆಟ್ರೋ-ಬಸ್ ನಿಲ್ದಾಣ ಹತ್ತಿರವಿರುವಂತೆ ವಿನ್ಯಾಸ
ಚೆನ್ನೈ ನಿವಾಸಿಗಳಿಗೆ ಅನುಕೂಲವಾಗುವಂತೆ ಸಿಎಂಆರ್‌ಎಲ್ ಪ್ಲಾನ್ ಅನ್ನು ವಿನ್ಯಾಸಗೊಳಿಸುತ್ತಿದೆ. ಅಂದರೆ ಮೆಟ್ರೋ 2ನೇ ಹಂತದಲ್ಲಿ ಮೆಟ್ರೋ ನಿಲ್ದಾಣಗಳಿಂದ ಕೆಲವೇ ಮೀಟರ್‌ಗಳಷ್ಟು ನಡೆದುಕೊಂಡು ಸಿಟಿ ಬಸ್ ನಿಲ್ದಾಣಕ್ಕೆ ಹೋಗಬೇಕಿರುತ್ತದೆ. ಇದನ್ನು ತಪ್ಪಿಸಲು ಸಜ್ಜಾಗಿರುವ ಸಿಎಂಆರ್‌ಎಲ್ ಎಂಟಿಸಿ ಹಾಗೂ ಮೆಟ್ರೋ ಮಧ್ಯೆ ಹತ್ತೀರವೇ ಇರುವಂತೆ ನೋಡಿಕೊಳ್ಳುತ್ತಿದೆ. ಅಂದರೆ ಮೆಟ್ರೋದ ಎಲ್ಲ ನಿಲ್ದಾಣಗಳು ಬಸ್ ನಿಲ್ದಾಣದಿಂದ 50 ರಿಂದ 100 ಮೀಟರ್ ಒಳಗೆ ಇರುವಂತೆ ಯೋಜನೆ ರೂಪಿಸಿದೆ.
ಎರಡನೇ ಹಂತದ ಮೆಟ್ರೋ ಯೋಜನೆಗೆ ಬಳಸಿಕೊಳ್ಳಲು ಮೂರು ಬೋಗಿಗಳ ಇರುವ ಚಾಲಕ ರಹಿತ ರೈಲುಗಳ ಮೊದಲ ಸೆಟ್ ಇದೇ ವರ್ಷ ಆಗಸ್ಟ್ 2024 ಹೊತ್ತಿಗೆ ಸಿಗುವ ನಿರೀಕ್ಷೆ ಇದೆ. ಸಿಎಂಆರ್‌ಎಲ್ ಹೇಳುವ ಪ್ರಕಾರ 2015 ಜೂನ್ ನಿಂದ 2023 ಡಿಸೆಂಬರ್ 31 ರವರೆಗೆ 25 ಕೋಟಿಗೂ ಹೆಚ್ಚು ಪ್ರಯಾಣಿಕರು ಮೆಟ್ರೋದಲ್ಲಿ ಸಂಚರಿಸಿದ್ದಾರೆ.
ಸದ್ಯ ಮೆಟ್ರೋ ಎರಡನೇ ಹಂತ ಕೆಲಸ ಪೂರ್ಣಗೊಂಡಲ್ಲಿ ಚೆನ್ನೈನಲ್ಲಿ ಮೆಟ್ರೋದಲ್ಲಿ ಸಂಚರಿಸುವವರ ಸಂಖ್ಯೆ ಇನ್ನಷ್ಟು ಹೆಚ್ಚಾಗಲಿದೆ.












Click it and Unblock the Notifications