5 Beer Launch: ಕಿಕ್ ಏರಿಸಲು ಬಿಡುಗಡೆಯಾದ 5 ಬಿಯರ್ ಬ್ರ್ಯಾಂಡ್‌ಗಳು ಇವು, ಪಟ್ಟಿ
ಬೆಂಗಳೂರು, ಫೆಬ್ರವರಿ 07: 2024ರ ಹೊಸ ವರ್ಷವನ್ನು ಮದ್ಯಪ್ರಿಯರು ಸದಾ ಹೊಸ ಹುಮ್ಮಸ್ಸಿನಿಂದಲೇ ಆರಂಭಿಸುತ್ತಾರೆ. ತರಹೇವಾರಿ ಬಿಯರ್, ವಿಸ್ಕಿಗಳನ್ನು ಅನುಭವಿಸಲು ಇದೊಂದು ಸುದಿನವನ್ನಾಗಿ ಪರಿಗಣಿಸುತ್ತಾರೆ. ಅದಕ್ಕೆಂದೆ ಹೊಸ ವರ್ಷದ ಆರಂಭಿಕ ತಿಂಗಳಲ್ಲಿ ವಿವಿಧ ಐದು ಬಿಯರ್ ಗಳು ಮಾರುಕಟ್ಟೆಗೆ ಪರಿಚಯಗೊಂಡಿವೆ.
ಬೀಯರ್ ಪ್ರಿಯರಿಗೆ ಇಷ್ಟವಾಗುವ ಈ ನವೀನ ಮತ್ತು ಹೊಸದಾಗಿ ಪ್ರಾರಂಭಿಸಲಾದ ಬ್ರೂಗಳು ಉತ್ತಮ ಅನುಭವ ನೀಡುತ್ತಿವೆ. ಹಾಗಾದರೆ ಅನ್ವೇಷಿಸಿದ ಫ್ರಾಸ್ಟಿ ಡ್ರಾಫ್ಟ್‌ಗಳಿಂದ ಜಿನ್-ಪ್ರೇರಿತ ಮಿಶ್ರಣಗಳಿಂದ ಕೂಡಿವೆ. ಪ್ರತಿ ಬಿಯರ್ ಅಭಿಮಾನಿಗಳಿಗಾಗಿ ಅನ್ವೇಷಿಸಿ ಬಿಡುಗಡೆ ಮಾಡಿದ 5 ಬಿಯರ್‌ಗಳ ಪಟ್ಟಿ, ಮಾಹಿತಿ ಇಲ್ಲಿದೆ.

* ಟ್ಯೂಬೋರ್ಗ್ ಐಸ್ ಡ್ರಾಫ್ಟ್: ದಿ ಆರ್ಕ್ಟಿಕ್ ಚಿಲ್ ಕ್ವೆಂಚರ್
ಟುಬೋರ್ಗ್ ಐಸ್ ಡ್ರಾಫ್ಟ್ ಮದ್ಯ ಪ್ರಿಯರಿಗೆ ಸ್ಕ್ಯಾಂಡಿನೇವಿಯನ್ ಸಂವೇದನೆಯು ಪ್ರತಿ ಸಿಪ್ ಕುಡಿಯುವಾಗ ಆರ್ಕ್ಟಿಕ್ ಸಾಹಸದ ಅನುಭವ ನೀಡುತ್ತದೆ. ಇದರಲ್ಲಿನ ಐಸ್ ತಾಪಮಾನದಲ್ಲಿ ಹೆಚ್ಚು ಆನಂದ ನೀಡುತ್ತದೆ. ಜತೆಗೆ ರಿಫ್ರೆಶ್ ಫ್ಲೇವರ್ ಪ್ರೊಫೈಲ್ ಹೊಂದಿರುವ ಈ ಟ್ಯೂಬೋರ್ಗ್ ಬೀಯರ್ ಚಳಿಗಾಲದಲ್ಲಿ ಮದ್ಯಪ್ರೀಯರಿಗೆ ಹೊಸ ಅನುಭವ ನೀಡುತ್ತದೆ. ವೆರೈಟಿ ಬಿಯರ್ ಕುಡಿಯಲು ಯತ್ನಿಸುವವರಿಗೆ ಇದೊಂದು ಉತ್ತಮ ಅನುಭವ ನೀಡುವುದರಲ್ಲಿ ಎರಡು ಮಾತಿಲ್ಲ ಎಂದು ವರದಿ ತಿಳಿಸಿದೆ.
* ಬಿರಾ 91 ಗ್ರೇಟರ್ ಐಪಿಎ
ಮದ್ಯ ಜಿನ್ ಜತೆಗೆ ಗ್ರೇಟರ್ ಬಿರಾ 91 ಗ್ರೇಟರ್ ಬೆರೆತಾಗ ಹೊಸತೊಂದು ರುಚಿಯನ್ನು ಸೃಷ್ಟಿಸುತ್ತದೆ. ಹೊಸ ಪಡೆಯುವವರಿಗೆ ಈ ಬಿಯರ್ ಸಹಕಾರಿಯಾಗಲಿದೆ. ಸ್ನೇಹಿತರ ಜತೆ ಹ್ಯಾಪಿ ಕ್ಷಣಗಳನ್ನು ಅನುಭವಿಸಲು ಬಯಸುವವರು ಇದನ್ನು ಟ್ರೈ ಮಾಡಬಹುದು.

ಇದನ್ನು ಕುಡಿಯುವ ಜುನಿಪರ್, ಕೊತ್ತಂಬರಿ ಮತ್ತು ಸಿಟ್ರಸ್ ಗಳ ಪರಿಪೂರ್ಣ ಮಿಶ್ರಣದ ರುಚಿ ಗೊತ್ತಾಗುತ್ತದೆ. ಗ್ರೇಟರ್ ಐಪಿಎ ಸಾಂಪ್ರದಾಯಿಕ ಬಿಯರ್ ಗಡಿಗಳನ್ನು ಮೀರಿದೆ. ಏಲ್‌ನಲ್ಲಿ ಸ್ವಲ್ಪ ಜಿನ್ ಅನ್ನು ಇಷ್ಟಪಡುವವರಿಗೆ ಸೂಕ್ತವಾದ ರಿಫ್ರೆಶ್ ಟ್ವಿಸ್ಟ್ ಅನ್ನು ಒದಗಿಸುತ್ತದೆ. ಒಂದೇ ಬಾಟಲಿಯಲ್ಲಿ ಸಿಗುವ ಅತ್ಯುತ್ತಮ ಮದ್ಯದ ಪಟ್ಟಿಗೆ ಸೇರ್ಪಡೆಯಾಗಿದೆ.
* ಸಿಕ್ಸ್ ಫೀಲ್ಡ್ಸ್ ಬ್ಲಾಂಚೆ: ಪ್ರತಿ ಸೀಪ್‌ನಲ್ಲಿ ಖುಷಿ ಹೇಗಿದೆ?
ಬಿಯರ್ ಸಿಕ್ಸ್ ಫೀಲ್ಡ್ಸ್ ಬ್ಲಾಂಚೆ ಸೇವನೆಯು ಸ್ವಪ್ನಮಯ ತಂಗಾಳಿಯಲ್ಲಿ ತೇಲಿದ ಅನುಭವ ನೀಡುತ್ತದೆ. ಇದರ ಸೇವನೆಯು ಹುಟ್ಟುವ ಸೂರ್ಯನ ಚುಂಬನದಂತೆ ಭಾಸವಾಗುತ್ತದೆ. ಈ ಬಿಯರ್ ಬೆಲ್ಜಿಯನ್ ಶೈಲಿಯ ಗೋಧಿಯ ಸುವಾಸನೆ ಹೊಂದಿದೆ. ಇದು ಸಿಟ್ರಸ್, ಕೊತ್ತಂಬರಿ ಮಿಶ್ರಣದ ವಾಸನೆ ಘಮಘಮಿಸುತ್ತದೆ. ಸಿಕ್ಸ್ ಫೀಲ್ಡ್ಸ್ ಬ್ಲಾಂಚೆ ವಿಶೇಷ ರುಚಿಯ ಅನುಭವ ನೀಡುವ ಬಿಯರ್ ಆಗಿದ್ದು, ಈವರೆಗೆ ಕುಡಿದ ಬಿಯರ್‌ಗಿಂತಲೂ ವಿಶೇಷವಾಗಿದೆ ಎಂಬುದು ಸಾಬೀತಾಗಿದೆ. ಕುಡಿಯುತ್ತಿದ್ದಂತೆ ಮನಸ್ಸಿನಲ್ಲಿ ಪ್ರಶಾಂತತೆ ಆವರಿಸಿದ ಅನುಭವ ಎದುರಾಗುವಂತೆ ಭಾಸವಾಗುತ್ತದೆ.
* ಲೋನ್ ವುಲ್ಫ್ಸ್ ಆಲ್ಫಾ - ಮಾವ್ರಿಕ್
ಪಾನೀಯ ಉದ್ಯಮದ ಅತ್ಯುನ್ನತ ಸ್ಥಾನಕ್ಕೆ ವೇಗವಾಗಿ ಏರಿಸಿದ ಎಂಪಿ ಸಿಂಗ್ ಅವರ ಓಂಕಾರ ಬೆವರೇಜಸ್ & ಹಾಸ್ಪಿಟಾಲಿಟಿ ಪ್ರೈವೇಟ್ ಲಿಮಿಟೆಡ್ ಈ ಲೋನ್ ವುಲ್ಫ್ಸ್ ಆಲ್ಫಾ ಮಾವ್ರಿಕ್ ಬಿಯರ್ ಪರಿಚಯಿಸಿದೆ. ಸಿಂಗ್ ಅವರ ಮಾರ್ಗದರ್ಶನ ಮತ್ತು ಅನುಭವಿ ಉದ್ಯಮ ತಜ್ಞರ ತಂಡದಿಂದ ಈ ಬಿಯರ್ ಉತ್ಪಾದನೆ ಮಾಡಲಾಗುತ್ತಿದೆ.
ಲೋನ್ ವುಲ್ಫ್ ಅಸಾಧಾರಣ ಗುಣಮಟ್ಟ ಹೊಂದಿದೆ. ಇದು ಅನೇಕ ಬಿಯರ್ ಪ್ರಿಯರ ರುಚಿ, ಅನುಭವ ಗಮನದಲ್ಲಿಟ್ಟುಕೊಂಡು ಉತ್ಪಾದಿಸಲಾಗಿದೆ. ಇದು ಇತರ ಬಿಯರ್‌ಗಳಲ್ಲಿಯೇ ನಾವೀನ್ಯತೆ ಮತ್ತು ಪರಿಮಳ ವೈವಿಧ್ಯತೆಗೆ ಸಾಕ್ಷಿ ಆಗಿದೆ ಎಂದು ಕಂಪನಿ ವಿಶ್ವಾಸ ವ್ಯಕ್ತಪಡಿಸಿದರು.
ಮಾವ್ರಿಕ್ ಸ್ಟ್ರಾಂಗ್ ವೈವಿಧ್ಯಯವಾಗಿದ್ದು, ಚೂರು ಕಹಿ ಅನುಭವ ನೀಡುತ್ತದೆ. ಇದರಲ್ಲಿ 6-8% ಆಲ್ಕೋಹಾಲ್ ಅಂಶ ಇದೆ. ಇನ್ನೂ Mavrick Blonde Lager, ತನ್ನದೇ ಆದ ವಿಶಿಷ್ಠತೆ ಹೊಂದಿದೆ. ಇದು ಆಹ್ಲಾದಕರ ಅನುಭವ ನೀಡಲಿದ್ದು, ಇದರಲ್ಲಿ ಕೇವಲ 5% ಆಲ್ಕೋಹಾಲ್ ಅಂಶ ಇದೆ. ಇದು ಶೇಕಡಾ 100% ಮಾಲ್ಟೆಡ್ ಬಿಯರ್ ಆಗಿದ್ದು, ಬಿಯರ್ ಪ್ರಿಯರಿಗೆ ಹೆಚ್ಚು ಇಷ್ಟವಾಗುವ ಪಟ್ಟಿಗಳಿಗೆ ಸೇರುತ್ತದೆ. ಇದು ಸದ್ಯ ದೆಹಲಿ ಎನ್‌ಸಿಆರ್, ಹರಿಯಾಣ, ಚಂಡೀಗಢ ರಾಜ್ಯಗಳಲ್ಲಿ ಲಭ್ಯವಿದೆ ಎಂದು ಮೂಲಗಳು ತಿಳಿಸಿವೆ.
* ಬಿರಾ 91 ಬ್ಲಾಂಡ್: ಸಮ್ಮರ್ ಲಾಜರ್
ತಂಪಾದ (ಚಿಲ್ಡ್) ಬಿರಾ 91 ಬ್ಲಾಂಡ್ ಸೇವನೆಯು ಬಿಸಿಲು-ಬೇಸಿಗೆ ವೇಳೆ ಉಲ್ಲಾಸ ಅನುಭವ ಒದಗಿಸುತ್ತದೆ. ಈ ಗೋಲ್ಡನ್-ಹ್ಯೂಡ್ ಬ್ರೂ ಮಾಲ್ಟ್ ಇದು ಕಹಿ ಅನುಭವ ನೀಡದ ಸಮತೋಲಿತ ಬಿಯರ್ ಆಗಿದೆ. ಬೀಚ್‌ನಲ್ಲಿ ಓಡಾಡುವವರಿಗೆ ಇದೊಂದು ಉತ್ತಮ ಜೊತೆಗಾರ ಅನ್ನಬಹುದು. ಬಿಸಿಲಿನ ಸಂದರ್ಭದಲ್ಲಿ ಕಂಪನಿ ನೀಡುವ ಬಿಯರ್‌ಗಳಲ್ಲಿ ಇದು ಒಂದಾಗಿದೆ. ವಿಶ್ರಾಂತಿ ಮತ್ತು ಆನಂದದಾಯಕ ಸಮಯಕ್ಕಾಗಿ ಬಿರಾ 91 ಬ್ಲಾಂಡ್ ಸೇವೆ ಅತ್ಯುತ್ತಮ ಸ್ನೇಹಿತ ಎನ್ನಲಾಗುತ್ತಿದೆ.
ಹೊಸದಾಗಿ ಬಿಡುಗಡೆಯಾದ ಈ ಮೇಲಿನ ಬಿಯರ್‌ಗಳು ಕೇವಲ ಪಾನೀಯಗಳಲ್ಲ. 2024 ರಲ್ಲಿ ಬಿಯರ್ ಪ್ರಿಯರಿಗೆ ಅತ್ಯುತ್ತಮ ರೋಮಾಂಚಕಾರಿ ಜಗತ್ತಿಗೆ ಕೊಂಡೊಯ್ಯಬಲ್ಲ ಪಾನೀಯಗಳಾಗಿವೆ.
ಈ ಹೊಸ ಬಿಯರ್‌ಗಳ ರುಚಿಯನ್ನು ನೀವು ಸವಿಯಲು ನಿಮ್ಮ ಹತ್ತಿರದ ಬಾರ್‌ಗೆ ಭೇಟಿ ನೀಡಬಹುದು. ಅನೇಕ ಬಿಯರ್‌ಗಳ ಪೈಕಿ ಈ ಹೊಸ ಬಿಯರ್‌ಗಳಿಂದ ವಿನೂತನ ಅನುಭವ ಪಡೆಯಬಹುದು.
ಬಿಡುಗಡೆಯಾದ ಈ ಮೇಲಿನ ಬಿಯರ್‌ಗಳು ಹೊಸ ವರ್ಷಕ್ಕೆ ಮಾತ್ರ ಸಿಮೀತವಾಗಿರದೇ ಸರ್ವಕಾಲಕ್ಕೂ ಪ್ರೀಯವಾಗುವಂತಿದೆ.












Click it and Unblock the Notifications