• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಮಿತ್ ಶಾ ಹೆಸರನ್ನು ಮೊದಲು ಬದಲಿಸಿ: ಮುಖ್ಯಮಂತ್ರಿ ಯೋಗಿಗೆ ಸವಾಲ್

|

ಲಕ್ನೋ, ನ 11: ಉತ್ತರಪ್ರದೇಶದ ಪ್ರಮುಖ ನಗರಗಳ ಹೆಸರನ್ನು ಬದಲಿಸುತ್ತಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಮೊದಲು ಅವರದ್ದೇ ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ಹೆಸರನ್ನು ಮೊದಲು ಬದಲಿಸಿಕೊಳ್ಳಲಿ ಎಂದು ಆಲಿಗಢ ಮುಸ್ಲಿ ವಿವಿಯ ಪ್ರೊಫೆಸರ್ ವ್ಯಂಗ್ಯವಾಡಿದ್ದಾರೆ.

ಅಮಿತ್ ಶಾ ಹೆಸರಿನ 'ಶಾ' ಹಿಂದೂ ಮೂಲದ್ದಲ್ಲ ಅದು ಪರ್ಷಿಯನ್ ಮೂಲದ್ದು. ಹಾಗಾಗಿ, ಹಿಂದೂ ಸಂಪ್ರದಾಯಕ್ಕೆ ತಕ್ಕಂತೆ ಹೊಂದುವ ಹೆಸರನ್ನು ಅಮಿತ್ ಶಾ ಬದಲಿಸಿಕೊಳ್ಳಲು ನಿಮ್ಮ ಅಧ್ಯಕ್ಷರಿಗೆ ಹೇಳಿ ಎಂದು ಪ್ರೊ. ಇರ್ಫಾನ್ ಹಬೀಬ್ ಯೋಗಿ ಆದಿತ್ಯನಾಥ್ ಗೆ ಸವಾಲು ಹಾಕಿದ್ದಾರೆ.

ಫೈಜಾಬಾದ್ ಇನ್ನು ಮುಂದೆ ಅಯೋಧ್ಯಾ: ಯೋಗಿಯಿಂದ ಮತ್ತಷ್ಟು ಹೆಸರು ಬದಲು

ಕ್ಷೇತ್ರದ ಅಭಿವೃದ್ದಿಗೆ ಆದ್ಯತೆ ನೀಡುವ ಬದಲು, ಮರುನಾಮಕರಣ ಮಾಡಲು ಹೊರಟರೆ ಏನು ಪ್ರಯೋಜನ? ಉತ್ತರಪ್ರದೇಶ ಸರಕಾರ ಜನರಿಗಾಗಿ ಕೆಲಸ ಮಾಡುತ್ತಿದೆಯೋ ಅಥವಾ ಆರ್ ಎಸ್ ಎಸ್ ಸಂಘಟನೆಗಾಗಿ ಕೆಲಸ ಮಾಡುತ್ತಿದೆಯೋ ಎನ್ನುವುದನ್ನು ಸರಕಾರ ಮೊದಲು ಸ್ಪಷ್ಟಪಡಿಸಲಿ.

ಗುಜರಾತ್ ಹೆಸರು ಕೂಡಾ ಮೂಲ ಭಾರತದ್ದಲ್ಲ, ಅದು ಕೂಡಾ ಪರ್ಷಿಯನ್ ಸಂಸ್ಕೃತಿಯಿಂದ ಬಂದಿದ್ದು. ಗುಜರಾತ್ ನ ಮೂಲ ಹೆಸರು ಗುಜರಾತ್ರ ಎಂದು, ಅಲ್ಲಿನ ಬಿಜೆಪಿ ಸರಕಾರ ಅದನ್ನೂ ಬದಲಿಸಲಿ ಎಂದು ಪ್ರೊ. ಹಬೀಬ್ ಲೇವಡಿ ಮಾಡಿದ್ದಾರೆ.

ಆಗ್ರಾ ಸೇರಿದಂತೆ ಉತ್ತರಪ್ರದೇಶ ನಗರಗಳ ಹೆಸರು ಬದಲಾಯಿಸಿ

ಇತ್ತೀಚೆಗೆ, ಯೋಗಿ ಸರಕಾರ ಕೆಲವು ಜಿಲ್ಲೆಗಳಿಗೆ ಮರುನಾಮಕರಣ ಮಾಡಿ ಆದೇಶ ಹೊರಡಿಸಿದ್ದರು. ಇದು ವ್ಯಾಪಕ ಚರ್ಚೆಗೊಳಗಾಗಿತ್ತು. ಇದರ ಬೆನ್ನಲ್ಲೇ, ಬಿಜೆಪಿ ಮುಸ್ಲಿಂ ಮುಖಂಡರ ಹೆಸರನ್ನೂ ಬದಲಿಸುವಂತೆ, ಕೆಲವರು ಆಗ್ರಹಿಸಿದ್ದಾರೆ. ಮುಂದೆ ಓದಿ..

ನಗರಗಳ ಮರುನಾಮಕರಣ ನಿರ್ಧಾರ

ನಗರಗಳ ಮರುನಾಮಕರಣ ನಿರ್ಧಾರ

ಉತ್ತರಪ್ರದೇಶ ಸರಕಾರದ ನಗರಗಳ ಮರುನಾಮಕರಣ ನಿರ್ಧಾರದ ಬಗ್ಗೆ ಮಾತನಾಡುತ್ತಿದ್ದ ಆಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಗೌರವ ಪ್ರೊಫೆಸರ್ ಇರ್ಫಾನ್ ಹಬೀಬ್, ಹೆಸರು ಬದಲಾಯಿಸುವ ಹುನ್ನಾರ ರಾಷ್ಟ್ರೀಯ ಸ್ವಯಂಸೇವಕ ಸಂಘಟನೆಯದ್ದು. ಹೆಸರು ಬದಲಾಯಿಸಿದರೆ, ಕ್ಷೇತ್ರದ ಅಭಿವೃದ್ದಿಯಾಗುತ್ತದೆಯೇ? ಬಲಪಂಥೀಯ ಧೋರಣೆಯಿಂದ ಎಷ್ಟು ದಿನ ಅಧಿಕಾರದಲ್ಲಿ ಇರಲು ಸಾಧ್ಯ ಎಂದು ಹಬೀಬ್, ಸಿಎಂ ಯೋಗಿ ವಿರುದ್ದ ಕಿಡಿಕಾರಿದ್ದಾರೆ.

ಆಗ್ರಾ ನಗರವನ್ನು ಅಗ್ರವಾನ್ ಎಂದು ಕರೆಯಲಾಗುತ್ತಿತ್ತು

ಆಗ್ರಾ ನಗರವನ್ನು ಅಗ್ರವಾನ್ ಎಂದು ಕರೆಯಲಾಗುತ್ತಿತ್ತು

ಐದು ಸಾವಿರ ವರ್ಷಗಳ ಹಿಂದೆ ಆಗ್ರಾ ನಗರವನ್ನು ಅಗ್ರವಾನ್ ಎಂದು ಕರೆಯಲಾಗುತ್ತಿತ್ತು. ಹಾಗಾಗಿ, ಆಗ್ರಾ ನಗರದ ಹೆಸರನ್ನೂ ಬದಲಿಸಬೇಕು. ಇಲ್ಲಿ ವಾಸಿಸುವ ಹೆಚ್ಚಿನವರು ಅಗರವಾಲ್ ಸಮುದಾಯದವರು. ಆಗ್ರಾ ಎನ್ನುವ ಪದದಲ್ಲಿ ಅರ್ಥವೇ ಇಲ್ಲ. ಹೆಸರು ಬದಲಿಸುವಂತೆ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಲಿದ್ದೇನೆ - ಆಗ್ರಾ ಉತ್ತರ ಕ್ಷೇತ್ರದ ಬಿಜೆಪಿ ಶಾಸಕ ಜಗನ್ ಪ್ರಸಾದ್ ಗರ್ಗ್.

ಯೋಗಿ ಆದಿತ್ಯನಾಥ ಯಾರ್ಯಾರ ಹೆಸರು ಬದಲಾಯಿಸಿದ್ದಾರೆ ಗೊತ್ತಾ?

ಸುಹೇಲ್ದೇವ್ ಭಾರತೀಯ ಸಮಾಜ್ ಪಾರ್ಟಿ

ಸುಹೇಲ್ದೇವ್ ಭಾರತೀಯ ಸಮಾಜ್ ಪಾರ್ಟಿ

ಭಾರತೀಯ ಜನತಾ ಪಕ್ಷದಲ್ಲಿರುವ ಮೂವರು ಮುಸ್ಲಿಂ ಮುಖಂಡರಾದ, ಪಕ್ಷದ ವಕ್ತಾರ ಶಹನಾಜ್ ಹುಸೇನ್, ಕೇಂದ್ರ ಸಚಿವ ಮುಕ್ತಾರ್ ಅಬ್ಬಾಸ್ ನಕ್ವಿ ಮತ್ತು ಉತ್ತರಪ್ರದೇಶ ಸರಕಾರದಲ್ಲಿ ಸಚಿವರಾಗಿರುವ ಮೊಹ್ಸಿನ್ ರಾಜ್ ಅವರ ಹೆಸರನ್ನು ಮೊದಲು ಬದಲಿಸಿಕೊಳ್ಲಲು ಹೇಳಿ ಎಂದು ಸುಹೇಲ್ದೇವ್ ಭಾರತೀಯ ಸಮಾಜ್ ಪಾರ್ಟಿಯ ಮುಖ್ಯಸ್ಥ ಓಮ್ ಪ್ರಕಾಶ್ ರಾಜಭರ್, ಯೋಗಿ ಮತ್ತು ಅಮಿತ್ ಶಾ ಅವರಲ್ಲಿ ಒತ್ತಾಯಿಸಿದ್ದಾರೆ.

ಎಲ್ಲಾ ಕಪ್ಪುಹಣ ರಿಸರ್ವ್ ಬ್ಯಾಂಕಿಗೆ ವಾಪಸ್ ಬಂತಾ

ಎಲ್ಲಾ ಕಪ್ಪುಹಣ ರಿಸರ್ವ್ ಬ್ಯಾಂಕಿಗೆ ವಾಪಸ್ ಬಂತಾ

ಅಪನಗದೀಕರಣದ ವಿಚಾರದಲ್ಲಿ ಪ್ರಧಾನಿ ಮೋದಿ ವಿರುದ್ದ ಹರಿಹಾಯ್ದ ರಾಜಭರ್, ಭ್ರಷ್ಟಾಚಾರವನ್ನು ತಡೆಗಟ್ಟಬೇಕು ಎನ್ನುವುದು ಪ್ರಧಾನಿಯವರ ಗುರಿಯಾಗಿದ್ದರೆ, ಎರಡು ಸಾವಿರ ಮತ್ತು ಐನೂರು ರೂಪಾಯಿಯ ನೋಟನ್ನು ಯಾಕೆ ಮತ್ತೆ ಚಾಲನೆಗೆ ತರಬೇಕಾಗಿತ್ತು. ಅಪನಗದೀಕರಣದಿಂದ ಎಲ್ಲಾ ಕಪ್ಪುಹಣ ರಿಸರ್ವ್ ಬ್ಯಾಂಕಿಗೆ ವಾಪಸ್ ಬಂತಾ ಎಂದು ರಾಜಭರ್, ಮೋದಿಯನ್ನು ಪ್ರಶ್ನಿಸಿದ್ದಾರೆ.

ಭಾರತದ ಯಾವೆಲ್ಲ ನಗರಗಳ ಹೆಸರು ಬದಲಾಗಿದೆ? ಚಿತ್ರ ಮಾಹಿತಿ

ಪ್ರಯಾಗ್ ರಾಜ್, ಅಯೋಧ್ಯಾ

ಪ್ರಯಾಗ್ ರಾಜ್, ಅಯೋಧ್ಯಾ

ಇತ್ತೀಚೆಗೆ ಯೋಗಿ ಆದಿತ್ಯನಾಥ್ ಸರಕಾರ ಅಲಹಾಬಾದ್ ಜಿಲ್ಲೆಯನ್ನು ಪ್ರಯಾಗ್ ರಾಜ್ ಎಂದು ಫೈಜಾಬಾದ್ ಜಿಲ್ಲೆಯನ್ನು ಅಯೋಧ್ಯಾ ಜಿಲ್ಲೆಯೆಂದು ಮರುನಾಮಕರಣ ಮಾಡಿತ್ತು. ಮೊಘಲ್ ಸರಾಯ್ ರೈಲ್ವೆ ನಿಲ್ದಾಣವನ್ನು ದೀನ್ ದಯಾಳ್ ಉಪಾಧ್ಯಾಯ ಎಂದು ಮರುನಾಮಕರಣ ಮಾಡಿತ್ತು. ಇದರ ಬೆನ್ನಲ್ಲೇ, ಅಹಮದಾಬಾದ್ ಹೆಸರನ್ನು ಬದಲಾಯಿಸಲೂ ನಾವು ಸಿದ್ದ ಎಂದು ಗುಜರಾತ್ ಸರಕಾರ ತಿಳಿಸಿತ್ತು.

English summary
Change BJP National President Amit Shah too, Aligarh Muslim VV professor Irfan Habib demands UP CM Yogi Adityanath. In Amit Shah name 'Shah' is original of Persian and Gujarat name also, please change that first, then go for City name changing.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X