Chandrayaan 3: ಆ 20 ನಿಮಿಷಗಳ ಪ್ರಯಾಣವೇ ನಿರ್ಣಾಯಕ!

ಚಂದ್ರನ ದಕ್ಷಿಣ ಧ್ರುವದಲ್ಲಿ ಚಂದ್ರಯಾನ 3 ನಿಗದಿತ ಸಾಫ್ಟ್ ಲ್ಯಾಂಡಿಂಗ್ ಮಾಡಲು ಕ್ಷಣಗಣನೆ ಆರಂಭವಾಗಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಆಗಸ್ಟ್ 23ರ ಬುಧವಾರ ಚಂದ್ರನ ಅಂಗಳದಲ್ಲಿ ಭಾರತದ ಉಪ್ರಗ್ರಹ ನೌಕೆ ಇಳಿಯಲಿದ್ದು, ಇತಿಹಾಸ ಸೃಷ್ಟಿಸಲಿದೆ.

ಜುಲೈ 14ರಂದು ಶ್ರೀಹರಿಕೋಟಾದ ಸತೀಶ್ ಧವನ್ ಸ್ಪೇಸ್ ಸೆಂಟರ್ ನಿಂದ ಉಡಾವಣೆಯಾದ ಚಂದ್ರಯಾನ 3 ಉಪಗ್ರಹ ನೌಕೆ 40 ದಿನಗಳ ಸುಧೀರ್ಘ ಪ್ರಯಾಣದ ನಂತರ ಚಂದ್ರನ ಅಂಗಳದಲ್ಲಿ ಇಳಿಯಲಿದೆ. ಚಂದ್ರನ ಮೇಲ್ಮೈನಲ್ಲಿ ಸಾಫ್ಟ್ ಲ್ಯಾಂಡಿಂಗ್ ಮಾಡುವ ಕೊನೆಯ 20 ನಿಮಿಷಗಳೇ ನಿರ್ಣಾಯಕವಾಗಲಿದೆ.

Chandrayaan 3: The Most Important Part of Vikram Landers Journey - The Last 20 Minutes

ಈ 20 ನಿಮಿಷಗಳಲ್ಲಿ ನೌಕೆ ಸುರಕ್ಷಿತವಾಗಿ ಚಂದ್ರನ ಮೇಲೆ ಸಾಫ್ಟ್‌ ಲ್ಯಾಂಡಿಂಗ್ ಮಾಡಿದರೆ ಭಾರತ ಚಂದ್ರನ ಮೇಲೆ ಯಶಸ್ವಿಯಾಗಿ ಬಾಹ್ಯಾಕಾಶ ನೌಕೆ ಇಳಿಸಿದ ನಾಲ್ಕನೇ ರಾಷ್ಟ್ರವಾಗಲಿದೆ. ಯುನೈಟೆಡ್ ಸ್ಟೇಟ್ಸ್, ರಷ್ಯಾ ಮತ್ತು ಚೀನಾ ಮಾತ್ರ ಇದರಲ್ಲಿ ಯಶಸ್ವಿಯಾಗಿದೆ. ಆದರೆ, ಚಂದ್ರನ ದಕ್ಷಿಣ ಧ್ರುವದಲ್ಲಿ ಯಾವ ರಾಷ್ಟ್ರವೂ ನೌಕೆಯನ್ನು ಇಳಿಸಿಲ್ಲ, ರಷ್ಯಾದ ಪ್ರಯತ್ನ ಕೂಡ ವಿಫಲವಾಗಿದ್ದು, ಭಾರತಕ್ಕೆ ಸುವರ್ಣವಾಕಾಶ ಸಿಕ್ಕಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿ ಬಾಹ್ಯಾಕಾಶ ನೌಕೆ ಇಳಿಸಿದ ಮೊದಲ ದೇಶ ಎನ್ನುವ ಹೆಗ್ಗಳಿಕೆ ಭಾರತದ್ದಾಗಲಿದೆ.

ತಜ್ಞರು ಹೇಳಿರುವ ಪ್ರಕಾರ, ಕೊನೆಯ 20 ನಿಮಿಷಗಳು ಬಾಹ್ಯಾಕಾಶ ನೌಕೆಯು ಚಂದ್ರನಲ್ಲಿ ಮೃದುವಾಗಿ ಇಳಿಯುತ್ತದೆ. ಇಸ್ರೋದ ಮಿಷನ್ ವಿಜ್ಞಾನಿಗಳು ಲ್ಯಾಂಡಿಂಗ್ ಅನ್ನು ಒಂದು ದಿನ ಮುಂಚಿತವಾಗಿ ಪ್ರೋಗ್ರಾಮ್ ಮಾಡುತ್ತಿದ್ದರೆ, ಕೊನೆಯ ಕೆಲವು ನಿಮಿಷಗಳು ಸ್ವಾಯತ್ತ ಚಲನೆಯಾಗಿರುತ್ತವೆ.

ನಿಗದಿತ ಸಮಯಕ್ಕೆ ಲ್ಯಾಂಡಿಂಗ್

ಇಸ್ರೋ ಚಂದ್ರಯಾನ-3 ಮಿಷನ್, ಆಗಸ್ಟ್ 23 ರಂದು ಚಂದ್ರನ ಮೇಲ್ಮೈಯಲ್ಲಿ ಮೃದುವಾಗಿ ಇಳಿಯಲು ಸಮಯ ನಿಗದಿಪಡಿಸಲಾಗಿದೆ. ನಿಗದಿತ ಸಮಯಕ್ಕೆ ಸರಿಯಾಗಿ ಇಳಿಯಲಿದೆ. "ಸಿಸ್ಟಮ್‌ಗಳು ನಿಯಮಿತ ತಪಾಸಣೆಗೆ ಒಳಗಾಗುತ್ತಿವೆ, ಸುಗಮ ನೌಕಾಯಾನ ಮುಂದುವರಿಯುತ್ತಿದೆ" ಎಂದು ಬಾಹ್ಯಾಕಾಶ ಸಂಸ್ಥೆ ಇಸ್ರೋ ಟ್ವೀಟ್ ಮಾಡಿದೆ.

ಸುಮಾರು 70 ಕಿಮೀ ಎತ್ತರದಿಂದ ಲ್ಯಾಂಡರ್ ಪೊಸಿಷನ್ ಡಿಟೆಕ್ಷನ್ ಕ್ಯಾಮೆರಾ (ಎಲ್‌ಪಿಡಿಸಿ) ಸೆರೆಹಿಡಿದ ಚಂದ್ರನ ಚಿತ್ರಗಳ ವೀಡಿಯೊವನ್ನು ಬಾಹ್ಯಾಕಾಶ ಸಂಸ್ಥೆ ಹಂಚಿಕೊಂಡಿದೆ, ಇಸ್ರೋ. "ಎಲ್‌ಪಿಡಿಸಿ ಚಿತ್ರಗಳು ಲ್ಯಾಂಡರ್ ಮಾಡ್ಯೂಲ್ ಅನ್ನು ಆನ್‌ಬೋರ್ಡ್ ಚಂದ್ರನ ಉಲ್ಲೇಖ ನಕ್ಷೆಯೊಂದಿಗೆ ಹೊಂದಿಸುವ ಮೂಲಕ ಅದರ ಸ್ಥಾನವನ್ನು (ಅಕ್ಷಾಂಶ ಮತ್ತು ರೇಖಾಂಶ) ನಿರ್ಧರಿಸಲು ಸಹಾಯ ಮಾಡುತ್ತದೆ" ಎಂದು ಅದು ಹೇಳಿದೆ.

ಆಗಸ್ಟ್ 23ಕ್ಕೆ ತಪ್ಪಿದರೆ 27ಕ್ಕೆ ಲ್ಯಾಂಡಿಂಗ್!

ಹಿರಿಯ ಇಸ್ರೋ ವಿಜ್ಞಾನಿಗಳ ಪ್ರಕಾರ, ದಿನದ ಪರಿಸ್ಥಿತಿಗಳು "ಅನುಕೂಲಕರ"ವಾಗಿದ್ದರೆ ಮಾತ್ರ ಇಸ್ರೋ ಲ್ಯಾಂಡಿಂಗ್‌ ಪ್ರಕ್ರಿಯೆಯನ್ನು ಮುಂದುವರಿಯುತ್ತದೆ. ಇಲ್ಲವೇ ಆಗಸ್ಟ್ 27ರಂದು ಹೊಸ ಪ್ರಯತ್ನ ನಡೆಸಲು ನಿರ್ಧರಿಸಲಾಗಿದೆ.

ಚಂದ್ರಯಾನ-3 ಚಂದ್ರನ ಮೇಲೆ ಇಳಿಯುವ ಎರಡು ಗಂಟೆಗಳ ಮೊದಲು, ಲ್ಯಾಂಡರ್ ಮಾಡ್ಯೂಲ್‌ನ ಆರೋಗ್ಯ ಮತ್ತು ಚಂದ್ರನ ಮೇಲಿನ ಪರಿಸ್ಥಿತಿಗಳ ಆಧಾರದ ಮೇಲೆ ಆ ಸಮಯದಲ್ಲಿ ಅದನ್ನು ಇಳಿಸುವುದು ಸೂಕ್ತವೇ ಅಥವಾ ಬೇಡವೇ ಎಂಬುದರ ಕುರಿತು ನಾವು ನಿರ್ಧಾರ ತೆಗೆದುಕೊಳ್ಳುತ್ತೇವೆ. ಒಂದು ವೇಳೆ, ಯಾವುದೇ ಅಂಶವು ಅನುಕೂಲಕರವಾಗಿಲ್ಲ ಎಂದು ತೋರಿದರೆ, ನಾವು ಆಗಸ್ಟ್ 27 ರಂದು ಮಾಡ್ಯೂಲ್ ಅನ್ನು ಚಂದ್ರನ ಮೇಲೆ ಇಳಿಸುತ್ತೇವೆ ಎಂದು ಇಸ್ರೋದ ಬಾಹ್ಯಾಕಾಶ ಅಪ್ಲಿಕೇಶನ್ ಕೇಂದ್ರದ ನಿರ್ದೇಶಕ ನಿಲೇಶ್ ಎಂ ದೇಸಾಯಿ ಸುದ್ದಿ ಸಂಸ್ಥೆ ಎಎನ್‌ಐ ಗೆ ತಿಳಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+