ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಂದ್ರಯಾನ-2: ಜುಲೈ 22ರಂದು ಬಾಹುಬಲಿಯ ಉಡಾವಣೆ

|
Google Oneindia Kannada News

ಶ್ರೀಹರಿಕೋಟ, ಜುಲೈ 18: ತಾಂತ್ರಿಕ ಕಾರಣಗಳಿಂದ ಕೊನೆಯ ಕ್ಷಣದಲ್ಲಿ ರದ್ದುಗೊಂಡಿದ್ದ ಚಂದ್ರಯಾನ-2 ಉಡಾವಣೆಗೆ ಅಧಿಕೃತ ದಿನಾಂಕ ನಿಗದಿಯಾಗಿದೆ. ಜುಲೈ 22 ರಂದು ಮಧ್ಯಾಹ್ನ 2:43ಕ್ಕೆ ರಾಕೆಟ್ ಉಡಾವಣೆಯಾಗಲಿದೆ ಎಂದು ಇಸ್ರೋ ಟ್ವೀಟ್ ಮಾಡಿದೆ.

ಈ ಮೊದಲು ಜುಲೈ 15ರಂದು ಚಂದ್ರಯಾನ-2 ಉಡಾವಣೆಯಾಗಬೇಕಿತ್ತು ಆದರೆ ಕೊನೆಯ ಕ್ಷಣದಲ್ಲಿ ರದ್ದುಗೊಳಿಸಲಾಗಿತ್ತು.

ಚಂದ್ರಯಾನ 2: ಜುಲೈ 21-22 ರಂದು ಬಾಹುಬಲಿಯ ಮರುಉಡಾವಣೆ?ಚಂದ್ರಯಾನ 2: ಜುಲೈ 21-22 ರಂದು ಬಾಹುಬಲಿಯ ಮರುಉಡಾವಣೆ?

ಚಂದ್ರನ ಕಕ್ಷೆಗೆ ಉಪಗ್ರಹದ ನಿಖರವಾದ ಪ್ರವೇಶವನ್ನು ಖಚಿತಪಡಿಸಿಕೊಳ್ಳಲು ಜುಲೈ 15 ನಸುಕಿನ ಜಾವ 2 ಗಂಟೆ 51 ನಿಮಿಷವನ್ನು ಉಡಾವಣೆಗೆ ಆಯ್ಕೆ ಮಾಡಿಕೊಳ್ಳಲಾಗಿತ್ತು. ಸೆಪ್ಟೆಂಬರ್ 6 ರಂದು ಎರಡು ಚಂದ್ರನ ಕುಳಿಗಳಾದ ಮ್ಯಾಂಜಿನಸ್ ಸಿ ಮತ್ತು ಸಿಂಪೆಲಿಯಸ್ ಎನ್ ನಡುವಿನ ಎತ್ತರದ ಬಯಲಿನಲ್ಲಿ ಯೋಜಿತ ಸ್ಥಳದಲ್ಲಿ ನಿಖರವಾಗಿ ಇಳಿಯಲು ಲ್ಯಾಂಡರ್ ವಿಕ್ರಮ್ ಗೆ ಇದು ಸಹಾಯ ಮಾಡುತ್ತದೆ.

Chandrayaan 2 launch on July 22

ಚಂದ್ರನ ಸುತ್ತ ಧ್ರುವೀಯ ಕಕ್ಷೆಗೆ ಪ್ರವೇಶಿಸಲು ಟಿ +17ನ್ನು ಎಲ್ ಟಿಟಿಇ ಸಿದ್ದಪಡಿಸಿದ್ದು ಇದು ಕಕ್ಷೆಯ ಲೆಕ್ಕಾಚಾರದ ಇಂಧನ ದಕ್ಷತೆಯನ್ನು ಖಚಿತಪಡಿಸುವುದಲ್ಲದೆ, ಮಿಷನ್ ಯಶಸ್ವಿಯಾಗುವಂತೆ ಮಾಡುತ್ತದೆ ಎಂದು ಅವರು ಹೇಳಿದರು.

ತಾಂತ್ರಿಕ ದೋಷದಿಂದ ಚಂದ್ರಯಾನ-2 ರಾಕೆಟ್ ಉಡಾವಣೆ ರದ್ದುತಾಂತ್ರಿಕ ದೋಷದಿಂದ ಚಂದ್ರಯಾನ-2 ರಾಕೆಟ್ ಉಡಾವಣೆ ರದ್ದು

ಜುಲೈ 20ರ ನಂತರ ಉಡಾವಣೆಯನ್ನು ಮುಂದೂಡಿದರೆ ಲ್ಯಾಂಡರ್‌ನ ಪ್ರತ್ಯೇಕತೆಯನ್ನು ವಿಳಂಬಗೊಳಿಸುತ್ತದೆ, ಜೊತೆಗೆ ಹೆಚ್ಚಿನ ಇಂಧನ ಅಗತ್ಯವಿರುತ್ತದೆ.ಇದರಿಂದ ಚಂದ್ರಯಾನ-2 ಉಪಗ್ರಹದ ಜೀವಿತಾವಧಿ ಕಕ್ಷೆಯಲ್ಲಿ ಕಡಿಮೆಯಾಗಬಹುದು. ಲ್ಯಾಂಡರ್ ಮತ್ತು ರೊಬೊಟಿಕ್ ರೋವರ್ ಕೇವಲ 14 ದಿನಗಳ ಕಾರ್ಯಾಚರಣೆ ಅವಧಿಯನ್ನು ಹೊಂದಿರುತ್ತದೆ.

English summary
Chandrayaan 2 launch on July 22, Chandrayaan-2 launch, which was called off due to a technical snag on July 15, is now rescheduled at 2:43 pm on Monday (July 22), Isro said in a tweet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X