ಲೋಕಸಭೆ ಚುನಾವಣೆ 2019: ಕಾಂಗ್ರೆಸ್‌ಗೆ ಚಂದ್ರಬಾಬು ನಾಯ್ಡು ಬಲ?

ಹೈದರಾಬಾದ್, ಸೆಪ್ಟೆಂಬರ್ 09: ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದ ಸಖ್ಯದಿಂದ ಹೊರಬಂದಿರುವ ಆಂಧ್ರ ಪ್ರದೇಶದ ಆಡಳಿತಾರೂಢ ತೆಲುಗುದೇಶಂ ಪಕ್ಷ ಈಗ ಕಾಂಗ್ರೆಸ್‌ ನಾಯಕತ್ವದ ಯುಪಿಎ ಮೈತ್ರಿ ಕೂಟ ಸೇರುವ ಸೂಚನೆ ನೀಡಿದೆ.

ಕಾಂಗ್ರೆಸ್‌ ಜೊತೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಅಭಿಪ್ರಾಯ ಸಂಗ್ರಹಿಸಿ ವರದಿ ನೀಡುವಂತೆ ತೆಲುಗುದೇಶಂ ಪಕ್ಷದ ಮುಖಂಡ, ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಪಕ್ಷದ ಮುಖಂಡ ಎಲ್.ರಾಮಣ್ಣ ಅವರಿಗೆ ಸೂಚಿಸಿದ್ದಾರೆ.

ಎಲ್.ರಾಮಣ್ಣ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿರುವ ಚಂದ್ರಬಾಬು ನಾಯ್ಡು, ಜನಾಭಿಪ್ರಾಯ, ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸುವ ಜೊತೆಗೆ, ಮೈತ್ರಿಯಿಂದ ಆಗಬಹುದಾದ ಸಾಧಕ-ಭಾದಕಗಳ ಬಗ್ಗೆ ವರದಿ ಸಲ್ಲಿಸುವಂತೆ ಹೇಳಿದ್ದಾರೆ. ಎಲ್.ರಾಮಣ್ಣ ಅವರು ನೀಡುವ ವರದಿಗೆ ಅಂಕಿತ ತಾವು ಸೂಚಿಸುವುದಾಗಿ ಭರವಸೆಯನ್ನೂ ಕೊಟ್ಟಿದ್ದಾರೆ.

ಬಿಜೆಪಿ ಸೇರಲಿದ್ದಾರೆ ಕೆ.ಸಿ.ಆರ್‌

ಬಿಜೆಪಿ ಸೇರಲಿದ್ದಾರೆ ಕೆ.ಸಿ.ಆರ್‌

ಆಂಧ್ರ ಪ್ರದೇಶದಿಂದಲೇ ವಿಭಜನೆಯಾದ ತೆಲಂಗಾಣದ ಮುಖ್ಯಮಂತ್ರಿ ಕೆ.ಸಿ.ಆರ್ ಅವರು ಎನ್‌ಡಿಎ ಮೈತ್ರಿ ಕೂಟ ಸೇರುವ ಸಾಧ್ಯತೆ ದಟ್ಟವಾಗಿದೆ. ಇದೇ ಹೊತ್ತಿನಲ್ಲಿ ಚಂದ್ರಬಾಬು ನಾಯ್ಡು ಕಾಂಗ್ರೆಸ್ ಸೇರುತ್ತಿರುವುದು ಅವಳಿ-ಜವಳಿ ರಾಜ್ಯಗಳ ರಾಜಕೀಯವನ್ನು ಕುತೂಹಲ ಭರಿತಗೊಳಿಸಿದೆ.

ಟಿಪಿಸಿಸಿ ನಿರ್ಧಾರಕ್ಕೆ ಬಿಟ್ಟಿರುವ ರಾಹುಲ್

ಟಿಪಿಸಿಸಿ ನಿರ್ಧಾರಕ್ಕೆ ಬಿಟ್ಟಿರುವ ರಾಹುಲ್

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸಹ ತೆಲುಗುದೇಶಂ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವ ವಿಚಾರವನ್ನು ಆಂಧ್ರಪ್ರದೇಶದ ತೆಲುಗದೇಶಂ ಕಾಂಗ್ರೆಸ್ ಕಮಿಟಿಗೆ ಬಿಟ್ಟಿದ್ದಾರೆ. ಈಗಾಗಲೇ ತೆಲುಗುದೇಶಂ ಪಕ್ಷದ ಎಲ್.ರಾಮಣ್ಣ ಅವರು ಟಿಪಿಸಿಸಿಯ ಅಧ್ಯಕ್ಷ ಉತ್ತಮ ಕುಮಾರ್ ರೆಡ್ಡಿ ಅವರೊಂದಿಗೆ ಈ ಬಗ್ಗೆ ಮಾತುಕತೆ ನಡೆಸಿದ್ದಾರೆ.

ಎನ್‌ಡಿಎ ಮೈತ್ರಿಯಿಂದ ಹೊರಬಂದಿರುವ ತೆಲುಗುದೇಶಂ

ಎನ್‌ಡಿಎ ಮೈತ್ರಿಯಿಂದ ಹೊರಬಂದಿರುವ ತೆಲುಗುದೇಶಂ

ಆಂಧ್ರ ಪ್ರದೇಶಕ್ಕೆ ಕೇಂದ್ರ ಸರ್ಕಾರವು ಸೂಕ್ತ ಅನುದಾನವನ್ನು ನೀಡಲಿಲ್ಲ ಎಂದು ಕೆಲವು ತಿಂಗಳುಗಳ ಹಿಂದೆಯಷ್ಟೆ ತೆಲುಗುದೇಶಂ ಪಕ್ಷವು ಎನ್‌ಡಿಎ ಮೈತ್ರಿಕೂಟದಿಂದ ಹೊರಬಂದಿತ್ತು. ಎನ್‌ಡಿಎನಿಂದ ಹೊರಬಂದ ನಂತರ ಲೋಕಸಭೆಯಲ್ಲಿ ಎನ್‌ಡಿಎ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಲು ಕಾಂಗ್ರೆಸ್‌ ಪಕ್ಷವು ತೆಲುಗುದೇಶಂ ಪಕ್ಷಕ್ಕೆ ಬೆಂಬಲ ನೀಡಿತ್ತು. ಆ ನಂತರ ಈ ಎರಡು ಪಕ್ಷಗಳ ನಡುವೆ ವಿಶ್ವಾಸ ಹೆಚ್ಚಾಗಿತ್ತು.

ಕಾಂಗ್ರೆಸ್‌ ಬಲ ದೊರಕಲಿದೆ

ಕಾಂಗ್ರೆಸ್‌ ಬಲ ದೊರಕಲಿದೆ

ತೆಲುಗುದೇಶಂ ಪಕ್ಷವು ಯುಪಿಎ ಜೊತೆಗೆ ಮೈತ್ರಿ ಆದರೆ ಕಾಂಗ್ರೆಸ್‌ಗೆ ಹೆಚ್ಚಿನ ಬಲ ದೊರೆಯಲಿದೆ. ಮಹಾಘಟಬಂದನ್‌ಗೆ ಹೆಚ್ಚಿನ ಬಲ ದೊರೆಯಲಿದೆ. ನೆರೆಯ ತೆಲಂಗಾಣದಲ್ಲಿ ಟಿಆರ್‌ಎಸ್‌ ಪಕ್ಷವು ಬಿಜೆಪಿ ಬೆಂಬಲ ನೀಡಿದಲ್ಲಿ ಕಾಂಗ್ರೆಸ್‌ಗೆ ಆಗಬಹುದಾದ ಹಿನ್ನಡೆಯನ್ನು ಈ ಮೈತ್ರಿ ಸರಿದೂಗಿಸಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+