• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆಂಧ್ರದಲ್ಲಿ ಸಿಬಿಐಗೆ ನಿರ್ಬಂಧ: ಚಂದ್ರಬಾಬು ನಾಯ್ಡು ನಿರ್ಧಾರದ ಹಿಂದಿನ ಅಸಲಿಯತ್ತೇನು?

|

ಆಂಧ್ರ ಪ್ರದೇಶದಲ್ಲಿ ಕೇಂದ್ರ ತನಿಖಾ ದಳಕ್ಕೆ (ಸಿಬಿಐ) ಇದ್ದ 'ಸಾಮಾನ್ಯ ಸಮ್ಮತಿ' (ಫ್ರೀ ಪಾಸ್) ಯನ್ನು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹಿಂದಕ್ಕೆ ಪಡೆದಿದ್ದಾರೆ. ಚಂದ್ರಬಾಬು ನಿರ್ಧಾರದ ಬೆನ್ನಲ್ಲೇ, ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಕೂಡಾ ಅವರ ರಾಜ್ಯದಲ್ಲಿ ನಿರ್ಬಂಧ ಹೇರಿದ್ದಾರೆ.

ಕೇಂದ್ರದ ಮೋದಿ ಸರಕಾರ ಸಿಬಿಐ ಅನ್ನು ದುರಪಯೋಗ ಪಡೆಸಿಕೊಳ್ಳುತ್ತಿದೆ ಎನ್ನುವುದು ಚಂದ್ರಬಾಬು ಆರೋಪವಾದರೂ, ತಮ್ಮಾಪ್ತನ ಮನೆಯ ಮೇಲೆ ನಡೆದ ಆದಾಯ ತೆರಿಗೆ ದಾಳಿ ಮತ್ತು ಮುಂದಾಗಬಹುದಾದ ತನಿಖೆಗಳನ್ನು ತಪ್ಪಿಸಿಕೊಳ್ಳಲು ನಾಯ್ಡು ಈ ನಿರ್ಧಾರಕ್ಕೆ ಬಂದಿದ್ದಾರಾ ಎನ್ನುವ ಚರ್ಚೆ ಸದ್ಯ ಭರದಿಂದ ಸಾಗುತ್ತಿದೆ.

ಎನ್ಡಿಎ ಮೈತ್ರಿಕೂಟದಿಂದ ಚಂದ್ರಬಾಬು ನೇತೃತ್ವದ ತೆಲುಗುದೇಶಂ ಹೊರಕ್ಕೆ ಬಂದ ನಂತರ, ಮೋದಿ ವಿರುದ್ದ ಕೆಂಡಕಾರುತ್ತಲೇ ಬರುತ್ತಿರುವ ನಾಯ್ಡು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳುವುದು ಬಹುತೇಕ ಖಚಿತ.

ಅನುಮತಿ ಪಡೆಯದೆ ರಾಜ್ಯಕ್ಕೆ ಸಿಬಿಐ ಕಾಲಿಡುವಂತಿಲ್ಲ: ಆಂಧ್ರ ಸರ್ಕಾರದ ಸೂಚನೆ

ಸಿಬಿಐಗೆ ನೀಡುವ ಸಾಮಾನ್ಯ ಸಮ್ಮತಿಯನ್ನು ಹೆಚ್ಚಾಗಿ ಪ್ರತೀ ರಾಜ್ಯಗಳು ವರ್ಷ ವರ್ಷ ನವೀಕರಣ ಮಾಡುತ್ತದೆ. ಕಳೆದ ಮೂರು ತಿಂಗಳ ಹಿಂದೆ, ಅಂದರೆ ಆಗಸ್ಟ್ ತಿಂಗಳಲ್ಲಿ (ಆ 3, 2018) ರಿನೀವ್ ಮಾಡಿದ್ದ ಚಂದ್ರಬಾಬುಗೆ, ಇದ್ದಕ್ಕಿದ್ದಂತೆಯೇ ಸಿಬಿಐ ಮೇಲೆ ಅಪನಂಬಿಕೆ ಬರಲು ಕಾರಣವೇನು ಎನ್ನುವುದಿಲ್ಲಿ ಪ್ರಶ್ನೆ.

ಸಿಬಿಐ ಕಾನೂನಿನ ಪ್ರಕಾರ, ದೆಹಲಿ ವ್ಯಾಪ್ತಿಯನ್ನು ಹೊರತು ಪಡಿಸಿ, ಮಿಕ್ಕೆಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ, ಆಯಾಯ ಸರಕಾರದ ಸಾಮಾನ್ಯ ಸಮ್ಮತಿ ಸಿಬಿಐಗೆ ಅವಶ್ಯಕ. ಈ ಕಾನೂನನ್ನು (ದೆಹಲಿ ವಿಶೇಷ ಪೊಲೀಸ್ establishment ಆಕ್ಟ್ - 1946), ಆಧಾರವಾಗಿ ಇಟ್ಟುಕೊಂಡು, ಚಂದ್ರಬಾಬು, ಸಿಬಿಐಗೆ ರಾಜ್ಯ ಪ್ರವೇಶಿಸಲು ನಿರ್ಬಂಧ ಹೇರಿದ್ದಾರೆ. ನಾಯ್ಡು ನಿರ್ಧಾರದ ಹಿಂದಿನ ಅಸಲಿಯತ್ತೇ ಬೇರೆ? ಮುಂದೆ ಓದಿ..

ಎಸ್ ಎಂ ಕೃಷ್ಣ ಮುಖ್ಯಮಂತ್ರಿಯಾಗಿದ್ದ ಅವಧಿ

ಎಸ್ ಎಂ ಕೃಷ್ಣ ಮುಖ್ಯಮಂತ್ರಿಯಾಗಿದ್ದ ಅವಧಿ

2001ರಲ್ಲಿ ಅಂದರೆ, ಎಸ್ ಎಂ ಕೃಷ್ಣ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲೂ ಕರ್ನಾಟಕದಲ್ಲಿ ಒಮ್ಮೆ ಸಿಬಿಐಗೆ ನೀಡಿದ್ದ ಸಾಮಾನ್ಯ ಸಮ್ಮತಿಯನ್ನು ಹಿಂದಕ್ಕೆ ಪಡೆಯಲಾಗಿತ್ತು. ನಂತರ, ಕೇಂದ್ರದಲಿ ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾದ ನಂತರ, ಕೃಷ್ಣ, ಸಿಬಿಐಗೆ ವಿಧಿಸಲಾಗಿದ್ದ ನಿರ್ಬಂಧವನ್ನು ಹಿಂದಕ್ಕೆ ಪಡೆದಿದ್ದರು. ಅಂದಿನಿಂದ ಕರ್ನಾಟಕದಲ್ಲಿ, ಸಿಬಿಐಗೆ ಫ್ರೀ ಪಾಸ್ ವರ್ಷವರ್ಷ ನವೀಕರಣವಾಗುತ್ತಿದೆ.

ಸಿಬಿಐ ವಿವಾದ: ಅಲೋಕ್ ವರ್ಮಾ ವಿರುದ್ಧ ಮಿಶ್ರ ಮಾಹಿತಿ ವರದಿ

ತೆಲಂಗಾಣ ಕಾಂಗ್ರೆಸ್ ಕಮಿಟಿಯ ಕಾರ್ಯಾಧ್ಯಕ್ಷ ರೇವಂತ್ ರೆಡ್ಡಿ

ತೆಲಂಗಾಣ ಕಾಂಗ್ರೆಸ್ ಕಮಿಟಿಯ ಕಾರ್ಯಾಧ್ಯಕ್ಷ ರೇವಂತ್ ರೆಡ್ಡಿ

ಮೊದಲಿಗೆ ಮಾಜಿ ತೆಲುಗುದೇಶಂ ಮುಖಂಡ ಮತ್ತು ಈಗಿನ ತೆಲಂಗಾಣ ಕಾಂಗ್ರೆಸ್ ಕಮಿಟಿಯ ಕಾರ್ಯಾಧ್ಯಕ್ಷ ರೇವಂತ್ ರೆಡ್ಡಿಯ ಮನೆ, ಕಚೇರಿಯ ಮೇಲೆ, ವೋಟಿಗಾಗಿ ನೋಟು ವಿಚಾರದಲ್ಲಿ, ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದರು. ರೇವಂತ್ ರೆಡ್ಡಿ ವಿಚಾರಣೆಯ ವೇಳೆ, ಸಿಕ್ಕ ಮಾಹಿತಿಯ ಪ್ರಕಾರ, ಐಟಿ ಅಧಿಕಾರಿಗಳು ಕೂಡಲೇ, ತೆಲುಗುದೇಶಂ ಮುಖಂಡರ ಹಿಂದೆ ಬಿದ್ದಿದ್ದರು.

ಮುಖ್ಯಸ್ಥರಿಲ್ಲದೆ ನಾವಿಕನಿಲ್ಲದ ದೋಣಿಯಂತಾದ ಸಿಬಿಐ

ರಾಜ್ಯದ ಶಿಕ್ಷಣ ಸಚಿವ ಗಂಟಾ ಶ್ರೀನಿವಾಸ್

ರಾಜ್ಯದ ಶಿಕ್ಷಣ ಸಚಿವ ಗಂಟಾ ಶ್ರೀನಿವಾಸ್

ರೇವಂತ್ ರೆಡ್ಡಿಯವರ ಮೇಲೆ ಐಟಿ ದಾಳಿ ನಡೆದ ನಂತರ, ಐಟಿ ಅಧಿಕಾರಿಗಳು ತೆಲುಗುದೇಶಂ ಮುಖಂಡರಾದ ಪಿ ನಾರಾಯಣ, ಸಿ ಎಂ ರಮೇಶ್ ಮತ್ತು ಬೀಡಾ ಮಸ್ತಾನ್ ರಾವ್ ಅವರ ಮನೆ, ಕಚೇರಿ ಮೇಲೆ ದಾಳಿ ನಡೆಸಿತ್ತು. ಇದರ ಜೊತೆಗೆ, ಐಟಿ ಅಧಿಕಾರಿಗಳ ಮುಂದಿನ ಟಾರ್ಗೆಟ್, ರಾಜ್ಯದ ಶಿಕ್ಷಣ ಸಚಿವ ಗಂಟಾ ಶ್ರೀನಿವಾಸ್ ಎಂದೇ ಹೇಳಲಾಗಿತ್ತು. ಇದರಲ್ಲಿ ಶ್ರೀನಿವಾಸ್ ಮತ್ತು ರಮೇಶ್, ಸಿಎಂ ನಾಯ್ಡು ಅವರ ಪರಮಾಪ್ತರು.

ಡಿ.ಕೆ.ಸುರೇಶ್‌ಗೆ ಬಿಜೆಪಿ ಮುಖಂಡರು ನೀಡಿದ್ದಾರಂತೆ ಆಫರ್‌

ವಿಶಾಖಪಟ್ಟಣಂನಲ್ಲಿರುವ ಗಣಿಗಾರಿಕೆ ಮತ್ತು ರಿಯಲ್ ಎಸ್ಟೇಟ್ ಸಂಸ್ಥೆ

ವಿಶಾಖಪಟ್ಟಣಂನಲ್ಲಿರುವ ಗಣಿಗಾರಿಕೆ ಮತ್ತು ರಿಯಲ್ ಎಸ್ಟೇಟ್ ಸಂಸ್ಥೆ

ಬೆನ್ನು ಬೆನ್ನಲ್ಲೇ ಐಟಿ ದಾಳಿ ಮುಂದುವರಿಸಿದ್ದ ಇಲಾಖೆ, ವಿಶಾಖಪಟ್ಟಣಂನಲ್ಲಿರುವ ಗಣಿಗಾರಿಕೆ ಮತ್ತು ರಿಯಲ್ ಎಸ್ಟೇಟ್ ಸಂಸ್ಥೆಗಳ ಮೇಲೆ ದಾಳಿ ನಡೆಸಿತ್ತು. ಇದರ ಜೊತೆಗೆ, ಇಬ್ಬರು ಚಾರ್ಟರ್ಡ್ ಅಕೌಂಟೆಂಟ್ ಅವರ ಮನೆಯ ಮೇಲೂ ದಾಳಿ ನಡೆಸಿ, ಭಾರೀ ಪ್ರಮಾಣದಲ್ಲಿ ದಾಖಲೆ ಪತ್ರಗಳನ್ನು ವಶ ಪಡಿಸಿಕೊಂಡಿತ್ತು. ಇವರೆಲ್ಲಾ, ತೆಲುಗುದೇಶಂ ಪಕ್ಷದ ಜೊತೆ ನಂಟು ಹೊಂದಿದ್ದವರು ಎನ್ನುವ ಮಾಹಿತಿಯಿದೆ. ಇದಾದ ನಂತರವೂ, ಐಟಿ ದಾಳಿ ಮುಂದುವರಿದಿತ್ತು.

ನಾಯ್ಡು ಕೂಡಾ ತನಿಖೆ ಎದುರಿಸಬೇಕಾಗಿ ಬರಬಹುದಿತ್ತು

ನಾಯ್ಡು ಕೂಡಾ ತನಿಖೆ ಎದುರಿಸಬೇಕಾಗಿ ಬರಬಹುದಿತ್ತು

ಐಟಿ ದಾಳಿಗೆ ಒಳಗಾಗಿದ್ದ ಗಂಟಾ ಶ್ರೀನಿವಾಸ್ ಮತ್ತು ಸಿ ಎಂ ರಮೇಶ್, ಸಿಎಂ ಚಂದ್ರಬಾಬು ನಾಯ್ಡು ಅವರ ಪರಮಾಪ್ತರು. ಇವರಿಬ್ಬರ ಮೇಲೆ ಶೀಘ್ರವೇ ಸಿಬಿಐ ತನಿಖೆ ಶುರುವಾಗುವ ಸಾಧ್ಯತೆಯಿತ್ತು ಎನ್ನುವ ಮಾಹಿತಿಯಿದೆ. ಒಂದು ವೇಳೆ ತನಿಖೆ ಆರಂಭವಾಗಿದ್ದೇ ಆದಲ್ಲಿ, ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಕೂಡಾ ವಿಚಾರಣೆಗೆ ಹಾಜರಾಗುವ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು. ಸಾರ್ವತ್ರಿಕ ಚುನಾವಣಾ ಹೊಸ್ತಿಲಲ್ಲಿ, ಮುಜುಗರ ತಪ್ಪಿಸಿಕೊಳ್ಳಲು, ಸಿಬಿಐಗೆ ನಾಯ್ಡು ನಿರ್ಬಂಧ ಹೇರಿದ್ದಾರೆ ಎನ್ನುವ ಮಾತೂ ಚಾಲನೆಯಲ್ಲಿದೆ.

English summary
Andhra Pradesh government has withdrawn ‘general consent’ given to the CBI, restricting its activities in the state. What is the reason behind on this, Is CM Chandrababu Naidu taken this as precautionary step in view of general election 2019?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X