ಚಂಡೀಗಢ: ಯುವತಿ ಮೇಲೆ 40 ಮಂದಿಯಿಂದ ಅತ್ಯಾಚಾರ
ಚಂಡೀಗಢ, ಜು.20: ಗೆಸ್ಟ್‌ಹೌಸ್ ಒಂದರಲ್ಲಿ ಯುವತಿಯನ್ನು ಕಟ್ಟಿಹಾಕಿ ನಾಲ್ಕು ದಿನಗಳ ಕಾಲ ಸತತ 40 ಮಂದಿ ಯುವತಿಯೋರ್ವಳ ಮೇಲೆ ಅತ್ಯಾಚಾರ ಮಾಡಿರುವ ಘಟನೆ ಹರಿಯಾಣದಲ್ಲಿ ನಡೆದಿದೆ.
40 ಕಾಮುಕರು ಯುವತಿಯ ಮೇಲೆ 4 ದಿನಗಳ ಕಾಲ ಅತ್ಯಾಚಾರ ನಡೆಸಿದ್ದರು. ಅತ್ಯಾಚಾರ ಮಾಡಿದ ಆರೋಪಿಯೊಬ್ಬ ನನ್ನ ಪತಿಯ ಪರಿಚಯದವನಾಗಿದ್ದ. ಆತ ಗೆಸ್ಟ್ ಹೌಸ್ನಲ್ಲಿ ಕೆಲಸ ಕೊಡಿಸುವ ಭರವಸೆ ನೀಡಿದ್ದ. ಹಾಗಾಗಿ ನಾನು ಅಲ್ಲಿ ತೆರಳಿದ್ದಾಗ ಆತ ನನ್ನನ್ನು ಗೆಸ್ಟ್‌ಹೌಸ್‌ನಲ್ಲಿ ಕೂಡಿ ಹಾಕಿ ನಾಲ್ಕು ದಿನಗಳವರೆಗೆ ಒಟ್ಟು 40 ಜನರು ಅತ್ಯಾಚಾರ ನಡೆಸಿದ್ದಾರೆ ಎಂದು ಯುವತಿ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ಹರಿಯಾಣದ ಪಂಚಕುಲದಲ್ಲಿರುವ ಮೋರ್ನಿ ಹಿಲ್ಸ್‌ನಲ್ಲಿರುವ ಗೆಸ್ಟ್‌ಹೌಸ್‌ನಲ್ಲಿ ಜು.15ರಿಂದ 18ರವರೆಗೆ ಯುವತಿಯ ಮೇಲೆ ನಿರಂತರವಾಗಿ ಅತ್ಯಾಚಾರವೆಸಗಿದ್ದಾರೆ. ಈ ಕುರಿತು 22 ವರ್ಷದ ಯುವತಿ ಚಂಡೀಗಢದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಘಟನೆ ಸಂಬಂಧ ಪೊಲೀಸರು ಗೆಸ್ಟ್ಹೌಸ್ನ ಇಬ್ಬರು ಸಿಬ್ಬಂದಿಯನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಉಳಿದ ಆರೋಪಿಗಳಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications