ಹೆಣ್ಣು ಮಗುವಿಗೆ ಜನ್ಮ ನೀಡಿದ ಚಂಡೀಗಢದ ಅತ್ಯಾಚಾರ ಸಂತ್ರಸ್ತೆ

Posted By:
Subscribe to Oneindia Kannada

ಚಂಡೀಗಢ, ಆಗಸ್ಟ್ 17: ತನ್ನ ಚಿಕ್ಕಪ್ಪನಿಂದಲೇ ಅತ್ಯಾಚಾರಕ್ಕೊಳಗಾಗಿದ್ದ ಚಂಡೀಗಢದ ಹತ್ತು ವರ್ಷದ ಅಪ್ರಾಪ್ತ ಬಾಲಕಿ, ಇಂದು(ಆಗಸ್ಟ್ 17) ಹೆಣ್ಣು ಮಗುವಿಗೆ ಜನ್ಮನೀಡಿದ್ದಾಳೆ.

ಹತ್ತು ವರ್ಷದ ಅತ್ಯಾಚಾರ ಸಂತ್ರಸ್ತೆ ಗರ್ಭಪಾತ ಮಾಡಿಸುವಂತಿಲ್ಲ: ಸುಪ್ರೀಂ

ಸಿಸೆರಿಯನ್ ಮೂಲಕ ಮಗುವನ್ನು ಹೊರತೆಗೆಯಲಾಗಿದ್ದು, ತಾಯಿ-ಮಗು ಸುರಕ್ಷಿತವಾಗಿದ್ದಾರೆಂದು ವೈದ್ಯರು ಹೇಳಿದ್ದಾರೆ.

Chandigarh: 10 year old rape victim delivered a girl child

ಬಾಲಕಿ ಗರ್ಭವತಿಯಾಗಿ 32 ತಿಂಗಳು ತುಂಬಿದ್ದ ಸಮಯದಲ್ಲಿ ಗರ್ಭಪಾತ ಮಾಡಿಸುವ ಕುರಿತು ಬಾಲಕಿಯ ಕುಟುಂಬ ಕೋರ್ಟ್ ಮೊರೆಹೋಗಿತ್ತು. ಆದರೆ ವೈದ್ಯಕೀಯ ದಾಖಲೆಗಳನ್ನು ಪರಿಶೀಲಿಸಿದ ಕೋರ್ಟು, ಗರ್ಭಪಾತ ಮಾಡಿಸುವುದದರಿಂದ ತಾಯಿಯ ಆರೋಗ್ಯಕ್ಕೇ ಸಮಸ್ಯೆಯಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಜುಲೈ 28 ರಂದು ಇವರ ಮನವಿಯನ್ನು ತಿರಸ್ಕರಿಸಿತ್ತು.

ಬಾಲಕಿಯ ಮೇಲೆ ಹಲವು ಸಮಯದಿಂದ ಅತ್ಯಾಚಾರ ಎಸಗುತ್ತಿದ್ದ ಚಿಕ್ಕಪ್ಪ, ಆಕೆ ಗರ್ಭವತಿಯಾಗುವಂತೆ ಮಾಡಿದ್ದ. ಕುಟುಂಬದಲ್ಲಿ ಯಾರೊಂದಿಗೂ ಈ ಕುರಿತು ಚರ್ಚಿಸದಂತೆ ತಾಕೀತು ಹಾಕಿದ್ದ.

ಆದರೆ ಒಂದು ದಿನ ಈ ಬಾಲಕಿ, ಹೊಟ್ಟೆ ನೋವೆಂದು ಆಸ್ಪತ್ರೆ ಸೇರಿದಾಗಲೇ, ಈಕೆ ಗರ್ಭಿಣಿ ಎಂಬ ಆಘಾತಕಾರಿ ವಿಷಯ ಕುಟುಂಬ ವರ್ಗಕ್ಕೆ ತಿಳಿದಿದ್ದು, ಅಷ್ಟರಲ್ಲೇ ಸಮಯ ಮೀರಿದ್ದರಿಂದ ಗರ್ಭಪಾತಕ್ಕೂ ಅವಕಾಶವಿರಲಿಲ್ಲ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The 10 year old girl who is a minor rape victim from Chandigarh, whose abortion plea was turned down by the supreme court has delivered a girl child in Chandigarh.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ