ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗರ್ಭಕಂಠದ ಕ್ಯಾನ್ಸರ್‌ಗೆ ಲಸಿಕೆ: ಈ ರೋಗ ಎಷ್ಟು ಅಪಾಯಕಾರಿ?

|
Google Oneindia Kannada News

ದೆಹಲಿ, ಸೆಪ್ಟೆಂಬರ್ 01: 'ಗರ್ಭಕಂಠದ ಕ್ಯಾನ್ಸರ್‌ಗೆ ಲಸಿಕೆ ಕೆಲವೇ ತಿಂಗಳುಗಳಲ್ಲಿ ಲಭ್ಯವಾಗಲಿದೆ. ಅದನ್ನು ಮೊದಲು ನಮ್ಮ ದೇಶಕ್ಕೆ ಮತ್ತು ನಂತರ ಜಗತ್ತಿಗೆ ನೀಡುತ್ತೇವೆ. 200-400 ರ ನಡುವೆ ಬೆಲೆ ಇರಬಹುದು ಆದರೆ ಬೆಲೆಗಳು ಇನ್ನೂ ಅಂತಿಮಗೊಂಡಿಲ್ಲ. 2 ವರ್ಷಗಳಲ್ಲಿ 200 ಮಿಲಿಯನ್ ಡೋಸ್ ತಯಾರಿಸಲು ಸಿದ್ಧತೆ ನಡೆಯುತ್ತಿದೆ' ಎಂದು ಸೀರಮ್ ಇನ್‌ಸ್ಟಿಟ್ಯೂಟ್ ಸಿಇಒ, ಅದರ್ ಪೂನಾವಾಲಾ ಹೇಳಿದರು.

ಕ್ಯಾನ್ಸರ್ ಎಂಬುವುದೇ ಮಾರಕ ರೋಗ, ಇದರಲ್ಲಿ ಅನೇಕ ವಿಧಗಳಿವೆ, ಅದರಲ್ಲೊಂದು ಗರ್ಭಕಂಠದ ಕ್ಯಾನ್ಸರ್. ಮಹಿಳೆಯರನ್ನು ಕಾಡುವ ಈ ಕ್ಯಾನ್ಸರ್ ತುಂಬಾನೇ ಅಪಾಯಕಾರಿ. ಗರ್ಭಾಶಯ ಮತ್ತು ಯೋನಿಯನ್ನು ಸಂಪರ್ಕಿಸುವ ಗರ್ಭಕಂಠದಲ್ಲಿ ಜೀವಕೋಶಗಳಲ್ಲಿ ಬದಲಾವಣೆಯಾದಾಗ ಗರ್ಭಕಂಠದ ಕ್ಯಾನ್ಸರ್ ಉಂಟಾಗುವುದು. ಇದನ್ನು ಪ್ರಾರಂಭದಲ್ಲಿಯೇ ಗುರುತಿಸಿದರೆ ಗುಣಪಡಿಸಬಹುದು. ಆದರೆ ದುರಾದೃಷ್ಟವಶಾತ್‌ ಹೆಚ್ಚಿನವರಿಗೆ ಪ್ರಾರಂಭದಲ್ಲಿ ಇದರ ಲಕ್ಷಣಗಳು ತಿಳಿಯುವುದೇ ಇಲ್ಲ. ಹೀಗಾಗಿ ಜೀವಕ್ಕೆ ಅಪಾಯ ಉಂಟಾಗುವುದು. ಈ ಅಪಾಯಕಾರಿ ರೋಗಗಕ್ಕೆ ಸದ್ಯ ಲಸಿಕೆ ಕಂಡು ಹಿಡಿಯಲಾಗಿರುವು ಸಂತಸದ ವಿಷಯ. ಅಂದಹಾಗೆ ಗರ್ಭಕಂಠದ ಕ್ಯಾನ್ಸರ್‌ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಪಡೆದುಕೊಳ್ಳೋಣ.

ಕೆಲವೇ ತಿಂಗಳುಗಳಲ್ಲಿ ಗರ್ಭಕೋಶ ಕ್ಯಾನ್ಸರ್ ಲಸಿಕೆ ಬಿಡುಗಡೆ, ಬೆಲೆ ₹200-400: ಅದಾರ್ ಪೂನವಾಲಾಕೆಲವೇ ತಿಂಗಳುಗಳಲ್ಲಿ ಗರ್ಭಕೋಶ ಕ್ಯಾನ್ಸರ್ ಲಸಿಕೆ ಬಿಡುಗಡೆ, ಬೆಲೆ ₹200-400: ಅದಾರ್ ಪೂನವಾಲಾ

ಹಣ್ಣು ಮತ್ತು ತರಕಾರಿಗಳ ಸೇವನೆಗೆ ಕಡಿವಾಣ

ಹಣ್ಣು ಮತ್ತು ತರಕಾರಿಗಳ ಸೇವನೆಗೆ ಕಡಿವಾಣ

ಹೆಚ್‌ಐವಿ ಇರುವ ಮಹಿಳೆಯರಿಗೆ ಗರ್ಭಕಂಠದ ಕ್ಯಾನ್ಸರ್ನ ಅಪಾಯ ಹೆಚ್ಚು ಅಲ್ಲದೆ ಕೆಲವೊಂದು ಜೀವನಶೈಲಿ ಕೂಡ ಗರ್ಭಕಂಠದ ಕ್ಯಾನ್ಸರ್ ಅಪಾಯ ಹೆಚ್ಚಿಸುತ್ತದೆ. ಬೇಗನೆ ಋತುಮತಿಯಾಗುವುದು, ಧೂಮಪಾನ, ಗರ್ಭನಿರೋಧಕ ಮಾತ್ರೆಗಳು, ಮೆನೋಪಾಸ್‌ ನಿಧಾನವಾಗುವುದು. ಒಂದಕ್ಕಿಂತ ಹೆಚ್ಚಿನವರ ಜೊತೆ ಲೈಂಗಿಕ ಚಟುವಟಿಕೆಯಲ್ಲಿ ಭಾಗಿಯಾಗುವುದು ಇವೆಲ್ಲಾ ಗರ್ಭಕಂಠದ ಕ್ಯಾನ್ಸರ್ ಅಪಾಯ ಹೆಚ್ಚಿಸುವುದು. ಆಹಾರಶೈಲಿ ಕೂಡ ಗರ್ಭಕಂಠದ ಕ್ಯಾನ್ಸರ್‌ಗೆ ಕಾರಣವಾಗಬಹುದು. ಒಬೆಸಿಟಿ ಇರುವ ಮಹಿಳೆಯರಲ್ಲಿ ಗರ್ಭಕಂಠದ ಕ್ಯಾನ್ಸರ್ ಬೆಳೆಯಬಹುದು ಯಾರು ಹಣ್ಣು ಮತ್ತು ತರಕಾರಿಗಳನ್ನು ಕಡಿಮೆ ತಿನ್ನುತ್ತಾರೋ ಅವರಲ್ಲಿ ಗರ್ಭಕಂಠದ ಕ್ಯಾನ್ಸರ್ ಕಂಡು ಬರುವ ಸಾಧ್ಯತೆ ಹೆಚ್ಚು.

ಮುಟ್ಟಿನ ನಂತರ ರಕ್ತ ಕಲೆ

ಮುಟ್ಟಿನ ನಂತರ ರಕ್ತ ಕಲೆ

ಮುಟ್ಟಿನ ನಂತರ ಕೂಡ ಆಗಾಗ ಸ್ವಲ್ಪ ರಕ್ತ ಕಲೆ ಕಂಡು ಬರುವುದು, ಲೈಂಗಿಕ ಕ್ರಿಯೆ ಬಳಿಕ ರಕ್ತಸ್ರಾವ, ಬಿಳುಪು ಹೋಗುವುದು ಹೆಚ್ಚುವುದು, ಲೈಂಗಿಕ ಕ್ರಿಯೆ, ಮೆನೋಪಾಸ್ ಆದ ಬಳಿಕ ಕೂಡ ರಕ್ತಸ್ರಾವವಾಗುವುದು, ಜನನೇಂದ್ರೀಯ ಭಾಗದಲ್ಲಿ ತುರಿಕೆ ಕಂಡು ಬರುವುದು, ತಲೆಸುತ್ತು, ಆಗಾಗ ಮೂತ್ರ ವಿಸರ್ಜನೆ, ಕೆಳಹೊಟ್ಟು ಉಬ್ಬುವುದು ಇವೆಲ್ಲಾ ಗರ್ಭಕಂಠ ಕ್ಯಾನ್ಸರ್‌ ಲಕ್ಷಣಗಳಾಗಿವೆ.

ರೋಗ ನಿರೊಧಕ ಶಕ್ತಿ ಹೆಚ್ಚಿಸಿಕೊಳ್ಳುವುದು

ರೋಗ ನಿರೊಧಕ ಶಕ್ತಿ ಹೆಚ್ಚಿಸಿಕೊಳ್ಳುವುದು

* ಲಸಿಕೆ ಪಡೆಯುವುದು: ಸಿಡಿಸಿ ಮಹಿಳೆಯರು ಗರ್ಭಕಂಠ ಕ್ಯಾನ್ಸರ್ ನಿಯಂತ್ರಣಕ್ಕೆ ಲಸಿಕೆ ಪಡೆಯುವುದು ಒಳ್ಳೆಯದೆಂದು ಸಲಹೆ ನೀಡಿದೆ.

* ಧೂಮಪಾನ ವರ್ಜಿಸಿ: ಧೂಮಪಾನದ ಅಭ್ಯಾಸವಿದ್ದರೆ ಅದನ್ನು ಬಿಡುವುದರಿಂದ ದೇಹದಲ್ಲಿ ರೋಗ ನಿರೊಧಕ ಶಕ್ತಿ ಹೆಚ್ಚುವುದು.

* ಪ್ರತಿದಿನ ವ್ಯಾಯಾಮ ಮಾಡಿ: ಪ್ರತಿದಿನ ವ್ಯಾಯಾಮ ಮಾಡುವುದರಿಂದ ದೇಹದಲ್ಲಿ ಶಕ್ತಿ ಹೆಚ್ಚುವುದು, ರೋಗ ನಿರೋಧಕ ಶಕ್ತಿ ಚೆನ್ನಾಗಿರುತ್ತದೆ.

* ಗರ್ಭನಿರೋಧಕ ಮಾತ್ರೆಗಳನ್ನು ತೆಗೆದುಕೊಳ್ಳಬೇಡಿ: ಗರ್ಭನಿರೋಧಕ ಮಾತ್ರೆಗಳಿಂದ ಗರ್ಭಕಂಠದ ಕ್ಯಾನ್ಸರ್ ಅಪಾಯವಿರುವುದರಿಂದ ಮಾತ್ರೆ ಬದಲಿಗೆ ಇತರ ಗರ್ಭನಿರೋಧಕ ಮಾತ್ರೆಗಳನ್ನು ಬಳಸಿ.

*ಒಂದಕ್ಕಿಂತ ಹೆಚ್ಚು ಜನರೊಂದಿಗೆ ಲೈಂಗಿಕ ಸಂಪರ್ಕ ಅಪಾಯಕಾರಿ

* ನಿಯಮಿತ ಪರೀಕ್ಷೆ ಮಾಡಿಸಿ.

* ಹಣ್ಣು, ತರಕಾರಿಗಳನ್ನು ಹೆಚ್ಚಾಗಿ ಸೇವಿಸಿ.

ಲಸಿಕೆ ಪಡೆಯುವ ವಿಧಾನ

ಲಸಿಕೆ ಪಡೆಯುವ ವಿಧಾನ

ಗರ್ಭಕಂಠದ ಕ್ಯಾನ್ಸರ್‌ ಆರಂಭದ ಹಂತದಲ್ಲಿ ಪತ್ತೆಯಾದರೆ ಬೇಗನೆ ಗುಣಪಡಿಸಬಹುದು. ಆದರೆ ಕ್ಯಾನ್ಸರ್ 2ನೇ ಅಥವಾ 3ನೇ ಹಂತಕ್ಕೆ ಹೋದರೆ ಕೀಮೋ ಥೆರಪಿ ಅಥವಾ ರೇಡಿಯೋ ಥೆರಪಿ ಮಾಡಿಸಬೇಕಾಗುತ್ತದೆ. ಸದ್ಯ ಇದಕ್ಕೆ ಲಸಿಕೆ ಕಂಡು ಹಿಡಿಯಲಾಗಿದೆ. ಇದು ಹೇಗೆ ಪಡೆಯುವುದು? ಯಾವ ಹಂತದಲ್ಲಿ ಪಡೆಯಬೇಕು ಎನ್ನುವ ಬಗ್ಗೆ ಇನ್ನಷ್ಟ ತಿಳಿಬೇಕಿದೆ.

English summary
'Cervical cancer vaccine to be available within months. We will give it first to our country and then to the world. 200-400 may be priced but the prices are not finalized yet. Preparations are underway to manufacture 200 million doses in 2 years,' said Serum Institute CEO, Adar Poonawalla.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X