ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್‌ ಲಸಿಕೆ ನೀತಿಯಲ್ಲಿ ಕೇಂದ್ರದ ಯು-ಟರ್ನ್ ಹೇಗೆ ಸ್ಪಷ್ಟ ಮಾರ್ಗಸೂಚಿ ಸೃಷ್ಟಿಸಿದೆ? - ಇಲ್ಲಿದೆ ವಿವರ

|
Google Oneindia Kannada News

ನವದೆಹಲಿ, ಜೂ.08: ಕೇಂದ್ರ ಸರ್ಕಾರವು 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಕೊರೊನಾ ಲಸಿಕೆಯನ್ನು ಘೋಷಿಸಿದ ನಂತರ ಈಗ ಮತ್ತೆ ನರೇಂದ್ರ ಮೋದಿ ನೇತೃತ್ವದ ಲಸಿಕೆ ಅಭಿಯಾನದ ಬಗ್ಗೆ ಬಿಸಿ ಬಿಸಿ ಚರ್ಚೆ ಆರಂಭವಾಗಿದೆ. ಲಸಿಕೆ ಮಾರ್ಗಸೂಚಿ 2.0 ಮೇ 1 ರಂದು ಪ್ರಾರಂಭವಾಗಿದೆ. ಈ ಸಂದರ್ಭದಲ್ಲಿ ಖಾಸಗಿ ಆಸ್ಪತ್ರೆಗಳು ಲಸಿಕೆ ತಯಾರಿಕಾ ಸಂಸ್ಥೆಗಳಿಂದ ಲಸಿಕೆ ಖರೀದಿಸಿ, ಜನರಿಂದ ಹಣ ಪಡೆದು ಲಸಿಕೆ ಹಾಕಲು ಅವಕಾಶ ನೀಡಲಾಗಿದೆ. ಈ ವೇಳೆ ಲಸಿಕೆ ಹಾಕಿಸುವ ಜವಾಬ್ದಾರಿಯನ್ನು ಸಂಪೂರ್ಣವಾಗಿ ರಾಜ್ಯ ಸರ್ಕಾರದ ಮೇಲೆ ಹೊರೆಸಿ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ನ ಕೆಂಗಣ್ಣಿಗೂ ಗುರಿಯಾಗಿತ್ತು.

ಈ ಎಲ್ಲಾ ಬೆಳವಣಿಗೆಯ ಬೆನ್ನಲ್ಲೇ ಸೋಮವಾರ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ 18 ವರ್ಷ ಮೇಲ್ಪಟ್ಟವರಿಗೆಲ್ಲರಿಗೂ ಕೇಂದ್ರದಿಂದ ಉಚಿತ ಕೊರೊನಾ ಲಸಿಕೆ ನೀಡಲಾಗುವುದು ಎಂದು ಘೋಷಿಸಿದ್ದಾರೆ. ಇನ್ನು ಈ ಪರಿಷ್ಕೃತ ಲಸಿಕೆ ಮಾರ್ಗಸೂಚಿ 3.0 ಯು ಲಸಿಕೆ ಮಾರ್ಗಸೂಚಿ 1.0 ರಂತಿದೆ. ಕೇಂದ್ರ ಸರ್ಕಾರವು ಲಸಿಕೆ ಡೋಸ್‌ಗಳನ್ನು ಖರೀದಿಸಿ ಉಚಿತವಾಗಿ ರಾಜ್ಯಗಳಿಗೆ ನೀಡಲಿದೆ.

18 ವರ್ಷ ಮೇಲ್ಪಟ್ಟವರಿಗೆಲ್ಲರಿಗೂ ಕೇಂದ್ರದಿಂದ ಉಚಿತ ಕೊರೊನಾ ಲಸಿಕೆ18 ವರ್ಷ ಮೇಲ್ಪಟ್ಟವರಿಗೆಲ್ಲರಿಗೂ ಕೇಂದ್ರದಿಂದ ಉಚಿತ ಕೊರೊನಾ ಲಸಿಕೆ

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ರಾಜ್ಯಗಳಿಗೆ ಲಸಿಕೆ ಖರೀದಿಯು ಹಲವು ಬಿಕ್ಕಟ್ಟು, ತೊಂದರೆಗೆ ಕಾರಣವಾದ ಸಂದರ್ಭ ಹಲವಾರು ರಾಜ್ಯಗಳು ಕೇಂದ್ರ ಸರ್ಕಾರವೇ ಲಸಿಕೆ ಖರೀದಿಗೆ ರಾಜ್ಯಗಳಿಗೆ ಹಂಚಬೇಕು ಎಂದು ಆಗ್ರಹಿಸಿದ್ದವು. ಈಗ ಕೇಂದ್ರದ ಈ ಉಚಿತ ಕೊರೊನಾ ಲಸಿಕೆ ನಿರ್ಧಾರವು, ರಾಜ್ಯಗಳ ಒತ್ತಡ ಹಾಗೂ ಸುಪ್ರೀಂ ಕೋರ್ಟ್‌ನ ಚಾಟಿ ಏಟಿನ್ನು ಆಧರಿಸಿ ಹೊರಬಂದಿದೆ ಎಂದು ಪ್ರತಿಪಕ್ಷಗಳು ಹೇಳುತ್ತಿದೆ. ಸುಪ್ರೀಂ ಕೋರ್ಟ್ ಸುಪ್ರೀಂ ಕೋರ್ಟ್ 18-44 ವಯಸ್ಸಿನವರಿಗೆ ನಡೆಯುತ್ತಿರುವ ಲಸಿಕೆ ಅಭಿಯಾನ ಅನಿಯಂತ್ರಿತ ಎಂದು ಹೇಳಿತ್ತು. ಹಾಗೆಯೇ ಕೇಂದ್ರ ಸರ್ಕಾರವು ಲಸಿಕೆ ನೀತಿಯಲ್ಲಿ ಹೊಡೆದ ಯುಟರ್ನ್ ಈಗ ಲಸಿಕೆ ವಿಚಾರದಲ್ಲಿ ಸ್ಪಷ್ಟವಾದ ಮಾರ್ಗಸೂಚಿಯನ್ನು ಸೃಷ್ಟಿಸಿದೆ.

 ಜೂನ್‌ 1 ರಂದೇ ಉಚಿತ ಲಸಿಕೆಗೆ ಅಸ್ತು ಎಂದಿದ್ದ ಮೋದಿ

ಜೂನ್‌ 1 ರಂದೇ ಉಚಿತ ಲಸಿಕೆಗೆ ಅಸ್ತು ಎಂದಿದ್ದ ಮೋದಿ

ಜೂ. 21ರ ಬಳಿಕ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಕೊರೊನಾ ಲಸಿಕೆ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಹೇಳಿದ್ದರು. ಆದರೆ ಕೇಂದ್ರದ ಉಚಿತ ಲಸಿಕೆಗೆ ಜೂನ್ 1 ರಂದೇ ಪ್ರಧಾನಿ ನರೇಂದ್ರ ಮೋದಿ ಅನುಮತಿ ನೀಡಿದ್ದರು ಎಂದು ಸರ್ಕಾರದ ಮೂಲಗಳು ತಿಳಿಸಿದೆ. ಆರೋಗ್ಯ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಈ ಬಗ್ಗೆ ಮಾತನಾಡಿ, "ಜಾಗತಿಕ ಟೆಂಡರ್ ಹೊರತಾಗಿಯೂ ಲಸಿಕೆಗಳನ್ನು ಸಂಗ್ರಹಿಸುವಲ್ಲಿ ಹೆಚ್ಚಿನ ರಾಜ್ಯಗಳು ಈಗಾಗಲೇ ವಿಫಲವಾಗಿವೆ. ಮೇ 31 ರಂದು ವಿಕೇಂದ್ರೀಕೃತ ಮಾದರಿಯು ಒಂದು ತಿಂಗಳು ಪೂರೈಸಿದೆ. ಜೂನ್ 3 ರಂದು ಸುಪ್ರೀಂ ಕೋರ್ಟ್ ವಿಚಾರಣೆ ನಡೆದಿದೆ. ಆ ಹೊತ್ತಿಗಾಗಲೇ ಮತ್ತೆ ಲಸಿಕೆ ನಿಯಮ ಬದಲಾವಣೆಯ ಕಾರ್ಯ ಮುಗಿದಾಗಿತ್ತು" ಎಂದು ಹೇಳಿದ್ದಾರೆ.

 ಡಿಸೆಂಬರ್ 31 ರವರೆಗಿನ ಯೋಜನೆ

ಡಿಸೆಂಬರ್ 31 ರವರೆಗಿನ ಯೋಜನೆ

ಬಜೆಟ್‌ನಲ್ಲಿ ಮೀಸಲಿಟ್ಟ 35,000 ಕೋಟಿ ರೂ.ಗಳಿಗೆ ಹೋಲಿಸಿದರೆ ಕೇಂದ್ರವು ಸುಮಾರು 45,000 ಕೋಟಿ ರೂ. ವ್ಯಯ ಮಾಡಲು ಹೆಜ್ಜೆ ಮುಂದಿರಿಸಿದೆ. ಆದರೆ 2021-22ರ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ 4,000 ಕೋಟಿ ರೂ. ವ್ಯಯಿಸಲಾಗಿದೆ. ಇನ್ನು ಈ ಹೊಸ ಮಾರ್ಗಸೂಚಿಯು ಸಂಪೂರ್ಣ ಗೊಂದಲವನ್ನು ಬಗೆಹರಿಸಿದ ಸ್ಪಷ್ಟತೆಯನ್ನು ನೀಡುತ್ತದೆ. ಮೊದಲನೆಯದಾಗಿ, ಲಸಿಕೆ ಡೋಸ್‌ ಎಲ್ಲಿಂದ ಪಡೆಯಲಾಗುವುದು ಮತ್ತು ಎಷ್ಟು ಎಂದು ಕೇಂದ್ರವು ಸ್ಪಷ್ಟವಾಗಿ ಘೋಷಿಸಿದೆ. ಭಾರತದಲ್ಲಿ ಅಂದಾಜು ವಯಸ್ಕರ ಜನಸಂಖ್ಯೆ 94 ಕೋಟಿ ಇದ್ದು 188 ಕೋಟಿ ಲಸಿಕೆ ಡೋಸ್‌ ಅಗತ್ಯವಿದೆ. ಜನವರಿ 16 ರಿಂದ ಮೊದಲ ಡೋಸ್‌ ನೀಡಿದ ದಿನದಿಂದ ಜುಲೈ 31 ರವರೆಗೆ ಒಟ್ಟು 53.6 ಕೋಟಿ ಲಸಿಕೆಗಳು ಲಭ್ಯವಿರಲಿದೆ ಎಂದು ಕೇಂದ್ರ ಸರ್ಕಾರವು ತಿಳಿಸಿದೆ. ಇದರಲ್ಲಿ 23 ಕೋಟಿ ಲಸಿಕೆ ಡೋಸೆಜ್‌ ಅನ್ನು ಈವರೆಗೆ ತಲುಪಿಸಲಾಗಿದೆ. ಜನವರಿ 16 ರಿಂದ ಡಿಸೆಂಬರ್ 31 ರವರೆಗೆ 187.2 ಕೋಟಿ ಡೋಸ್‌ ಲಸಿಕೆ ರಾಜ್ಯಗಳಿಗೆ ನೀಡುವ ಗುರಿಯನ್ನು ಸರ್ಕಾರ ಹೊಂದಿದೆ. ಆಗಸ್ಟ್ 1 ರಿಂದ ಡಿಸೆಂಬರ್ 31 ರವರೆಗೆ ಸುಮಾರು 133.6 ಕೋಟಿ ಡೋಸ್‌ ಲಸಿಕೆ ತಲುಪಿಸಲಾಗುತ್ತದೆ. ಪ್ರತಿದಿನ ಸುಮಾರು 90 ಲಕ್ಷ ಲಸಿಕೆಗಳನ್ನು ನೀಡಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ.

ಹದಗೆಟ್ಟ ಲಸಿಕೆ ವ್ಯವಸ್ಥೆ: ಗ್ರಾಮಗಳಲ್ಲಿ ಕೋವಿಡ್‌ ಸೋಂಕು ಹೆಚ್ಚಳಹದಗೆಟ್ಟ ಲಸಿಕೆ ವ್ಯವಸ್ಥೆ: ಗ್ರಾಮಗಳಲ್ಲಿ ಕೋವಿಡ್‌ ಸೋಂಕು ಹೆಚ್ಚಳ

 ಲಸಿಕೆ ಎಲ್ಲಿಂದ ಬರುತ್ತದೆ?

ಲಸಿಕೆ ಎಲ್ಲಿಂದ ಬರುತ್ತದೆ?

ಕಳೆದ ಒಂದು ತಿಂಗಳಲ್ಲಿ ರಾಜ್ಯಗಳು ಲಸಿಕೆಗಳನ್ನು ಸಂಗ್ರಹಿಸಲು ಹೆಣಗಾಡುತ್ತಿವೆ. ದೇಶದಲ್ಲಿ ಭವಿಷ್ಯದ ಲಸಿಕೆ ಲಭ್ಯತೆಯ ಚಿತ್ರಣವೇ ಗೊಂದಲಮಯವಾಗಿತ್ತು. ಹಲವಾರು ರಾಜ್ಯಗಳು ಉಚಿತ ಲಸಿಕೆಯನ್ನು ಘೋಷಿಸಿದ್ದರೂ ಲಸಿಕೆ ಲಭಿಸದೆ ಬಿಕ್ಕಟ್ಟಿಗೆ ಸಿಲುಕಿತ್ತು. ರಾಜ್ಯಗಳು ಒಂದು ತಿಂಗಳಿನಿಂದ ಲಸಿಕೆ ಸರಬರಾಜಿಗೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದು ಕೇಂದ್ರ ಸರ್ಕಾರ ಕೊನೆಗೂ ಮೌನ ಮುರಿದಿದೆ. ಐದು ತಿಂಗಳ ಅವಧಿಯಲ್ಲಿ ಅಂದರೆ ಜುಲೈನಿಂದ ಡಿಸೆಂಬರ್‌ವರೆಗೆ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) 50 ಕೋಟಿ ಡೋಸ್‌ಗಳನ್ನು, ಭಾರತ್ ಬಯೋಟೆಕ್ 38.6 ಕೋಟಿ, ಬಿಐಒ-ಇ 30 ಕೋಟಿ ಮತ್ತು ಝಿಡೋಸ್‌ ಕ್ಯಾಡಿಲಾ ಐದು ಕೋಟಿಗಳನ್ನು ನೀಡಲಿದೆ ಎಂದು ಕೇಂದ್ರ ಹೇಳಿದೆ. ಹಾಗೆಯೇ 10 ಕೋಟಿ ಡೋಸ್ ಸ್ಪುಟ್ನಿಕ್ ವಿ ಲಸಿಕೆ ಬರಲಿದೆ.

 ಒಂದು ಡೋಸ್‌ ಲಸಿಕೆಗೆ ತಗಲುವ ವೆಚ್ಚವೆಷ್ಟು?

ಒಂದು ಡೋಸ್‌ ಲಸಿಕೆಗೆ ತಗಲುವ ವೆಚ್ಚವೆಷ್ಟು?

ಮೇ ತಿಂಗಳಲ್ಲಿ ಜಾರಿಗೆ ಬಂದ ಮಾರ್ಗಸೂಚಿ 2.0 ಗೊಂದಲಮಯ ಲಸಿಕೆ ಬೆಲೆ ನಿಯಮವನ್ನು ಸೃಷ್ಟಿಸಿತ್ತು. ಈ ವಿಚಾರದಲ್ಲೇ ರಾಜ್ಯ ಸರ್ಕಾರ ಹಾಗೂ ವಿಪಕ್ಷಗಳು ಕೇಂದ್ರ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದವು. ಈಗ ಸರ್ಕಾರದ ಹೊಸ ಮಾರ್ಗಸೂಚಿಯು ಈ ಸಮಸ್ಯೆಯನ್ನು ಪರಿಹರಿಸಿದೆ. ಜುಲೈ 31 ರವರೆಗಿನ ಎಲ್ಲಾ 53.6 ಕೋಟಿ ಲಸಿಕೆಗಳಿಗೆ ಕೇಂದ್ರ ಸರ್ಕಾರವು ಈ ಮೊದಲಿನಂತೆ ಕೇವಲ 150 ರೂ. ನಿಗದಿ ಮಾಡಿದೆ. ಜುಲೈ 31 ರ ನಂತರ, ನೀತಿ ಆಯೋಗ ಸದಸ್ಯ ಡಾ.ವಿ.ಕೆ.ಪೌಲ್‌ ನೇತೃತ್ವದ ವಿಶೇಷ ಸಮಿತಿಯು ಲಸಿಕೆಗಳಿಗೆ ಬೆಲೆಯನ್ನು ನಿಗದಿ ಮಾಡಲಿದೆ. ಲಸಿಕೆಗಳಿಗೆ ಭಾರತವು ಪಾವತಿಸುವ ಒಟ್ಟಾರೆ ಬೆಲೆಯನ್ನು ಈ ಮೂಲಕ ಕಡಿಮೆಗೊಳಿಸಬಹುದಾಗಿದೆ ಎಂದು ಹೇಳಲಾಗಿದೆ.

ದಕ್ಷಿಣ ಭಾರತಕ್ಕಿಂತ ಉತ್ತರದಲ್ಲಿ 2 ಪಟ್ಟು ವೇಗದಲ್ಲಿ ಕೋವಿಡ್‌ ಇಳಿಕೆ- ಸಮೀಕ್ಷೆಯಿಂದ ಬಹಿರಂಗದಕ್ಷಿಣ ಭಾರತಕ್ಕಿಂತ ಉತ್ತರದಲ್ಲಿ 2 ಪಟ್ಟು ವೇಗದಲ್ಲಿ ಕೋವಿಡ್‌ ಇಳಿಕೆ- ಸಮೀಕ್ಷೆಯಿಂದ ಬಹಿರಂಗ

 ಹಳೆಯ ಮಾರ್ಗಸೂಚಿ VS ಹೊಸ ಮಾರ್ಗಸೂಚಿ

ಹಳೆಯ ಮಾರ್ಗಸೂಚಿ VS ಹೊಸ ಮಾರ್ಗಸೂಚಿ

ಲಸಿಕೆ ಮಾರ್ಗಸೂಚಿ 2.0 ರಲ್ಲಿ ರಾಜ್ಯ ಸರ್ಕಾರವೇ ಲಸಿಕೆಯನ್ನು ಖರೀದಿ ಮಾಡಬೇಕಾಗಿತ್ತು. ಆದರೆ ಈಗ ಕೇಂದ್ರವು ರಾಜ್ಯಗಳಿಗೆ ನೀಡಲಾಗುವು ಲಸಿಕೆ ಕೋಟಾದ ಆಧಾರದಲ್ಲಿ ಉತ್ಪಾದಕರಿಂದ ಲಸಿಕೆ ಖರೀದ ಮಾಡಲಿದೆ. ಈ ಹಿಂದೆ, ಕೇಂದ್ರವು ಭಾರತದಲ್ಲಿ ತಯಾರಿಸಿದ ಶೇ. 50 ರಷ್ಟು ಲಸಿಕೆಗಳನ್ನು ಖರೀದಿಸುತ್ತಿದ್ದರೆ, ರಾಜ್ಯಗಳು ಮತ್ತು ಖಾಸಗಿ ಆಸ್ಪತ್ರೆಗಳು ತಲಾ ಶೇ.25 ಲಸಿಕೆ ಡೋಸ್‌ಗಳನ್ನು ಖರೀದಿ ಮಾಡಬೇಕಾಗಿತ್ತು. ಆದರೆ ಈಗ ಕೇಂದ್ರ ಸರ್ಕಾರವು ಲಭ್ಯವಿರುವ ಶೇ. 75ರಷ್ಟು ಲಸಿಕೆ ಸ್ಟಾಕ್‌ ಖರೀದಿ ಮಾಡಿ ಅದನ್ನು ರಾಜ್ಯಗಳಿಗೆ ಉಚಿತವಾಗಿ ನೀಡಲಿದೆ. ಈ ಹಿಂದೆ ಕೇಂದ್ರವು 45+ ವಯೋಮಾನದವರಿಗೆ ಮತ್ತು ಮುಂಚೂಣಿ / ಆರೋಗ್ಯ ಕಾರ್ಯಕರ್ತರಿಗೆ ದೇಶಾದ್ಯಂತ ಸರ್ಕಾರಿ ಕೇಂದ್ರಗಳಲ್ಲಿ ಉಚಿತ ಲಸಿಕೆಗಳನ್ನು ನೀಡುತ್ತಿತ್ತು. ಈಗ, 18 ವರ್ಷಕ್ಕಿಂತ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಸರ್ಕಾರಿ ಕೇಂದ್ರಗಳಲ್ಲಿ ಉಚಿತ ಲಸಿಕೆ ದೊರೆಯಲಿದೆ.

ಈ ನಡುವೆ ಖಾಸಗಿ ಆಸ್ಪತ್ರೆಗಳಲ್ಲೂ ಜನರು ಲಸಿಕೆ ಪಡೆಯಲು ಅವಕಾಶ ನೀಡಲಾಗಿದೆ. ಖಾಸಗಿ ಆಸ್ಪತ್ರೆಗಳಿಗೆ ಶೇ. 25 ರಷ್ಟು ಲಸಿಕೆಗಳನ್ನು ನೀಡಲು ಅವಕಾಶ ನೀಡುವ ಮೂಲಕ, ಸಬ್ಸಿಡಿ ನೀಡಲು ಹಾಗೂ ಸರ್ಕಾರಿ ಆರೋಗ್ಯ ವ್ಯವಸ್ಥೆಯ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಕೇಂದ್ರವು ಪ್ರಯತ್ನಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಲಸಿಕೆ ಸೇವಾ ಶುಲ್ಕ 150 ರೂ. ಮಾತ್ರ ನಿಗದಿ ಮಾಡಿರುವ ಕೇಂದ್ರವು ಲಸಿಕೆಯಿಂದ ಅತಿ ಹೆಚ್ಚು ಲಾಭ ಗಳಿಸುವುದಕ್ಕೆ ಅಂತ್ಯ ಹಾಡಿದೆ. ಇದು ಲಸಿಕೆ ಬೆಲೆ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಪರಿಣಾಮವಾಗಿದೆ ಎಂದು ವರದಿಯಾಗಿದೆ. ಇನ್ನು ''ಲಸಿಕೆ ಅಭಿಯಾನದಲ್ಲಿ ಖಾಸಗಿ ರಂಗವು ಕೈಜೋಡಿಸಬಹುದು. ಇತರರಿಗೆ ಸಹಾಯ ಮಾಡಲು ಶಕ್ತರಾದವರು ಸಹಾಯ ಮಾಡುವ ಮೂಲಕ ಉಚಿತ ಲಸಿಕೆ ಚಾಲನೆಯ ಮೇಲಿನ ಒತ್ತಡವನ್ನು ಕಡಿಮೆ ಮಾಡಬಹುದು" ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

 ವಿದೇಶಿ ಲಸಿಕೆಗಳು ಯಾವುದು, ಖರೀದಿ ಹೇಗೆ?

ವಿದೇಶಿ ಲಸಿಕೆಗಳು ಯಾವುದು, ಖರೀದಿ ಹೇಗೆ?

ವಿದೇಶಿ ಕಂಪನಿಗಳಾದ ಫಿಜರ್, ಮಾಡರ್ನಾ ಮತ್ತು ಜಾನ್ಸನ್ ಮತ್ತು ಜಾನ್ಸನ್‌ನೊಂದಿಗೆ ಕೇಂದ್ರವು ಮಾತುಕತೆ ನಡೆಯುತ್ತಿದೆ. ಈ ನಡುವೆ ಜಿನೋವಾ ಲಸಿಕೆ ಮತ್ತು ಭಾರತ್ ಬಯೋಟೆಕ್‌ನ ಮೂಗಿನ ಸ್ಪ್ರೇ ಪ್ರಯೋಗ ವರದಿಗಳಿಗಾಗಿಯೂ ಕೇಂದ್ರ ಕಾಯುತ್ತಿದೆ. ಈ ಕಂಪನಿಗಳು ಪಟ್ಟಿ ಮಾಡಿದ ನಷ್ಟ ಪರಿಹಾರ ಸಮಸ್ಯೆ ಸೇರಿದಂತೆ ಎಲ್ಲಾ ಷರತ್ತುಗಳನ್ನು ಆರೋಗ್ಯ ಸಚಿವಾಲಯ ಮತ್ತು ಇತರ ಕೆಲವು ಇಲಾಖೆಗಳು ಅಧ್ಯಯನ ಮಾಡುತ್ತಿವೆ ಎಂದು ಮೂಲಗಳು ತಿಳಿಸಿವೆ.

 ಕಡಿಮೆ ಲಸಿಕೆ ವ್ಯರ್ಥ: ಕೇರಳ, ಪಶ್ಚಿಮ ಬಂಗಾಳಕ್ಕೆ ಕೇಂದ್ರದ ಶ್ಲಾಘನೆ

ಕಡಿಮೆ ಲಸಿಕೆ ವ್ಯರ್ಥ: ಕೇರಳ, ಪಶ್ಚಿಮ ಬಂಗಾಳಕ್ಕೆ ಕೇಂದ್ರದ ಶ್ಲಾಘನೆ

ಲಸಿಕೆ ಕೊರತೆಯ ನಡುವೆಯೇ ಲಸಿಕೆ ವ್ಯರ್ಥವಾಗುತ್ತಿರುವುದು ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ. ಅಮೂಲ್ಯವಾದ ಜೀವ ಉಳಿಸುವ ಲಸಿಕೆಗಳು ವ್ಯರ್ಥವಾಗುತ್ತಿವೆ ಮತ್ತು ಹಲವಾರು ಭಾಗಗಳಲ್ಲಿ ಜನರು ಲಸಿಕೆಗಾಗಿ ಹೆಣಗಾಡುತ್ತಿದ್ದಾರೆ ಎಂದು ರಾಜ್ಯಗಳ ಮೇಲೆ ವಾಗ್ದಾಳಿ ನಡೆಸಿತ್ತು. ಆದರೆ ಈ ಸಂದರ್ಭದಲ್ಲೇ ಕೇರಳ ಮತ್ತು ಪಶ್ಚಿಮ ಬಂಗಾಳದಂತಹ ರಾಜ್ಯದಲ್ಲಿ ಆಡಳಿತ ಹೊಂದಿರುವ ಪಕ್ಷಗಳೊಂದಿಗಿನ ರಾಜಕೀಯ ಭಿನ್ನಾಭಿಪ್ರಾಯಗಳ ಹೊರತಾಗಿಯೂ, ಸರಬರಾಜು ಮಾಡಿದ ಲಸಿಕೆಯನ್ನು ಸಮರ್ಥವಾಗಿ ಬಳಸಿಕೊಳ್ಳು ಎರಡು ಸರ್ಕಾರಗಳು ಮಾಡಿದ ಪ್ರಯತ್ನವನ್ನು ಕೇಂದ್ರವು ಶ್ಲಾಘಿಸಿತ್ತು.

ಆರೋಗ್ಯ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು "ಕೇರಳ ಮತ್ತು ಬಂಗಾಳವು ಹೆಚ್ಚು ಪರಿಣಾಮಕಾರಿ ಲಸಿಕೆ ಅಭಿಯಾನ ನಿರ್ವಹಿಸುತ್ತಿದೆ. ಹಲವು ರಾಜ್ಯಗಳಲ್ಲಿ ಪ್ರತಿ ಬಾಟಲಿಯ 10 ಡೋಸ್‌ಗಳನ್ನು ಮಾತ್ರ ನೀಡುತ್ತಿದ್ದರೆ, ಈ ರಾಜ್ಯಗಳಲ್ಲಿ ಲಸಿಕೆ ವ್ಯರ್ಥವಾಗದಂತೆ 11 ಡೋಸ್‌ಗಳನ್ನು ನೀಡಲಾಗುತ್ತಿದೆ. ಛತ್ತೀಸ್‌ಗಢದಲ್ಲಿ ಶೇ. 15, ಜಾರ್ಖಂಡ್‌ನಲ್ಲಿ ಶೇ. 33 ರಷ್ಟು ಲಸಿಕೆ ವ್ಯರ್ಥವಾಗಿದೆ" ಎಂದು ಹೇಳಿದ್ದರು.

(ಒನ್‌ಇಂಡಿಯಾ ಸುದ್ದಿ)

English summary
How Centre's U-turn in Covid-19 vaccine policy creates a clear roadmap? : Explained in kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X