18-45 ವಯಸ್ಸಿನ 59 ಕೋಟಿ ಮಂದಿಗೆ 122 ಕೋಟಿ ಡೋಸ್ ಲಸಿಕೆ ಅಗತ್ಯ: ಕೇಂದ್ರ

ನವದೆಹಲಿ, ಮೇ 02: ದೇಶದಲ್ಲಿ ಕೊರೊನಾ ಲಸಿಕೆ ಮೂರನೇ ಹಂತದ ಅಭಿಯಾನ ಶುರುವಾಗಿದೆ. ಈಗ 18-45 ವರ್ಷದೊಳಗಿನವರಿಗೆ ಲಸಿಕೆ ನೀಡಲಾಗುತ್ತಿದೆ.

ಹೊಸ ಕೋವಿಡ್-19 ಲಸಿಕೆ ನೀತಿಯ ಅಡಿಯಲ್ಲಿ 18-45 ವಯಸ್ಸಿನ 59 ಕೋಟಿ ಮಂದಿಗೆ ಲಸಿಕೆ ನೀಡುವುದಕ್ಕೆ 122 ಕೋಟಿ ಲಸಿಕೆ ಡೋಸ್ ಅಗತ್ಯ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ಪ್ರಮಾಣ ಪತ್ರ ಸಲ್ಲಿಸಿದೆ.

ಮೊದಲ ಆದ್ಯತೆ ಆರೋಗ್ಯ ಕಾರ್ಯಕರ್ತರಿಗೆ ಇರಲಿದೆ. 2021 ರ ಮಧ್ಯ ವರ್ಷದ ವೇಳೆಗೆ 18-45 ವಯಸ್ಸಿನ 59 ಕೋಟಿ ಮಂದಿ ಇದ್ದಾರೆ. ಇವರಿಗೆ ಲಸಿಕೆ ನೀಡುವುದಕ್ಕೆ 122 ಕೋಟಿ ಲಸಿಕೆಯ ಅಗತ್ಯವಿದೆ. ಈ ಪೈಕಿ ಒಂದಷ್ಟು ಲಸಿಕೆಗಳು ಪೋಲಾಗುವುಗದನ್ನು ತಪ್ಪಿಸುವ ಸಾಧ್ಯತೆ ಕಡಿಮೆ ಎಂದು ಹೇಳಿದೆ.

 Centre Says 122 Cr Doses Needed To Inoculate 59 Crore People In 18-45 Age Group

ಕೋವಿಶೀಲ್ಡ್, ಕೋವ್ಯಾಕ್ಸಿನ್ ಗಳನ್ನು ಹೊರತುಪಡಿಸಿದ ಲಸಿಕೆಗಳನ್ನು ಖರೀದಿಸುವುದಕ್ಕೆ ಕ್ರಮ ಕೈಗೊಂಡಿದ್ದು, ವಿದೇಶದಲ್ಲಿ ತಯಾರಾದ ಕೋವಿಡ್-19 ಲಸಿಕೆಗಳ ಅನುಮತಿ ಪ್ರಕ್ರಿಯೆಯನ್ನು ತ್ವರಿತಗೊಳಿಸಿದೆ ಎಂದು ಕೇಂದ್ರ ಸುಪ್ರೀಂ ಕೋರ್ಟ್ ಗೆ ಮಾಹಿತಿ ನೀಡಿದೆ.

ಅತ್ಯಂತ ಕಡಿಮೆ ಅವಧಿಯಲ್ಲಿ ಶೇ.100 ರಷ್ಟು ಲಸಿಕೆ ಅಭಿಯಾನವನ್ನು ತಲುಪುವುದು ತನ್ನ ಆದ್ಯತೆಯಾಗಿದೆ. ಲಭ್ಯವಿರುವ ಸಂಪನ್ಮೂಲಗಳು ಹಾಗೂ ಲಸಿಕೆ ಡೋಸ್ ಗಳನ್ನು ಗಮದಲ್ಲಿಟ್ಟುಕೊಂಡು ಈ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುತ್ತಿದೆ ಎಂದು ಪ್ರಮಾಣಪತ್ರದಲ್ಲಿ ತಿಳಿಸಲಾಗಿದೆ.

Recommended Video

      ಕೊರೊನಾದಿಂದ ಜನ ಸಾಯ್ತಿಲ್ಲ ಸರ್ಕಾರದ ವ್ಯವಸ್ಥೆಯಿಂದ ಜನ ಸಾಯ್ತಿದ್ದಾರೆ | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+