ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಲಸಿಕಾ ಕಾರ್ಯಾಚರಣೆಗೆ ಕೇಂದ್ರದಿಂದ ಮಾರ್ಗಸೂಚಿ ಪ್ರಕಟ

|
Google Oneindia Kannada News

ನವದೆಹಲಿ, ಡಿಸೆಂಬರ್ 15: ಕೊರೊನಾ ವೈರಸ್ ಲಸಿಕೆ ವಿತರಣೆಗೆ ಭಾರತದಲ್ಲಿ ಸಿದ್ಧತೆ ನಡೆಸಲಾಗುತ್ತಿದೆ. ಲಸಿಕೆಗಳ ಸಂಗ್ರಹಣೆ, ವಿತರಣೆಗೆ ಕ್ರಮ ವಹಿಸಲಾಗಿದೆ. ಈ ನಿಟ್ಟಿನಲ್ಲಿ ಸಾಮೂಹಿಕ ಲಸಿಕಾ ಕಾರ್ಯಕ್ರಮಕ್ಕೆ ಕೇಂದ್ರ ಸರ್ಕಾರವು ಮಾರ್ಗಸೂಚಿಗಳನ್ನು ಹೊರಡಿಸಿದೆ.

ಈ ಹಿಂದೆ ಸೆರಂ ಇನ್ ಸ್ಟಿಟ್ಯೂಟ್ ನ ಸಿಇಒ ಅದಾರ್ ಪೂನವಲ್ಲಾ, 2021ರ ಜನವರಿಯಲ್ಲಿ ಲಸಿಕೆ ಕಾರ್ಯಕ್ರಮ ಆರಂಭಗೊಂಡು ಅಕ್ಟೋಬರ್ ವೇಳೆಗೆ ಜನಜೀವನವು ಸಹಜ ಸ್ಥಿತಿಗೆ ಬರುವುದಾಗಿ ತಿಳಿಸಿದ್ದರು. ಜನವರಿಯಲ್ಲಿ ದೇಶದಾದ್ಯಂತ ಲಸಿಕೆ ವಿತರಣೆಗೆ ಸಿದ್ಧತೆ ನಡೆಯುತ್ತಿರುವ ಬೆನ್ನಲ್ಲೇ ಕೇಂದ್ರ ಮಾರ್ಗಸೂಚಿಗಳನ್ನು ಹೊರಡಿಸಿದೆ.

 ಕೇಂದ್ರದಿಂದ ಮಾರ್ಗಸೂಚಿ

ಕೇಂದ್ರದಿಂದ ಮಾರ್ಗಸೂಚಿ

ಕೊರೊನಾ ಸಾಮೂಹಿಕ ಲಸಿಕಾ ಕಾರ್ಯಕ್ರಮಕ್ಕೆ ಕೇಂದ್ರವು ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಕೋವಿಡ್ 19 ಲಸಿಕೆ ಕಾರ್ಯಾಚರಣೆಯ ಮಾರ್ಗಸೂಚಿಗಳಲ್ಲಿ ಪ್ರಮುಖವಾಗಿ ಪ್ರತಿದಿನ ಏಕಕಾಲದಲ್ಲಿ 100 ರಿಂದ 200 ಮಂದಿಗೆ ಕೊರೊನಾ ಲಸಿಕೆ ನೀಡುವಂತೆ ಸೂಚಿಸಲಾಗಿದೆ. ಮಾರ್ಗಸೂಚಿಯ ಅನ್ವಯ ಸಾಮೂಹಿಕ ಲಸಿಕಾ ಕಾರ್ಯಕ್ರಮವನ್ನು ನಡೆಸುವಂತೆ ನಿರ್ದೇಶಿಸಿದೆ.

ಕೊರೊನಾ ಲಸಿಕೆ ನೀಡಲು ಯಾವ್ಯಾವ ಜಾಗಗಳನ್ನು ಆರಿಸಿಕೊಳ್ಳಲಾಗುತ್ತಿದೆ?ಕೊರೊನಾ ಲಸಿಕೆ ನೀಡಲು ಯಾವ್ಯಾವ ಜಾಗಗಳನ್ನು ಆರಿಸಿಕೊಳ್ಳಲಾಗುತ್ತಿದೆ?

 ಮಾರ್ಗಸೂಚಿಗಳು ಇಂತಿವೆ...

ಮಾರ್ಗಸೂಚಿಗಳು ಇಂತಿವೆ...

  1. ಲಸಿಕೆ ನೀಡುವ ಜಾಗದಲ್ಲಿ ಹೆಸರು ನೋಂದಾಯಿಸಲು ಜನರಿಗೆ ಅವಕಾಶವಿಲ್ಲ. ಈ ಮುನ್ನವೇ ನೋಂದಣಿ ಮಾಡಿಸುವುದು ಕಡ್ಡಾಯವಾಗಿದೆ.
  2. 12 ಫೋಟೊಗಳು, ಗುರುತಿನ ದಾಖಲೆಗಳು, ಚುನಾವಣಾ ಗುರುತಿನ ಚೀಟಿ, ಆಧಾರ್ ಕಾರ್ಡ್, ಚಾಲನಾ ಪರವಾನಗಿ, ಪಾಸ್ ಪೋರ್ಟ್, ಪೆನ್ಷನ್ ದಾಖಲೆ ಎಲ್ಲವೂ ಹೆಸರು ನೋಂದಣಿಗೆ ಅವಶ್ಯಕವಾಗಿದೆ.
  3. ಲಸಿಕೆ ನೀಡುವ ಮುನ್ನ 30 ನಿಮಿಷಗಳ ಕಾಲ ಒಬ್ಬರನ್ನು ನಿಗಾದಲ್ಲಿರಿಸಲಾಗುತ್ತದೆ.
  4. ಲಸಿಕಾ ಉತ್ಪಾದಕರು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ನೇರ ವಿತರಣೆ ಮಾಡುತ್ತಾರೆ. ಹಲವು ಲಸಿಕೆಗಳು ಮಿಶ್ರಣವಾಗುವುದನ್ನು ತಡೆಯಲು ಈ ಕ್ರಮವನ್ನು ಕೈಗೊಳ್ಳಲಾಗಿದೆ.
  5. ಕೊರೊನಾ ಲಸಿಕೆ ನೀಡುವ ಒಂದು ತಂಡದಲ್ಲಿ ಐವರು ಇರುತ್ತಾರೆ.
  6. ಪ್ರತಿ ದಿನ ನೂರು ಮಂದಿಗೆ ಲಸಿಕೆ ನೀಡುವಂತೆ ಯೋಜನೆ ರೂಪಿಸಲಾಗಿದೆ.
  7. ಲಸಿಕೆ ನೀಡುವ ಜಾಗದಲ್ಲಿ ಮೂರು ಪ್ರತ್ಯೇಕ ಕೊಠಡಿಗಳಿದ್ದು, ಕಾಯುವ ಕೊಠಡಿ, ನಿಗಾ ಕೊಠಡಿ, ಲಸಿಕೆ ಕೊಠಡಿ ಎಂದು ವಿಭಾಗಿಸಲಾಗಿರುತ್ತದೆ. ಜನದಟ್ಟಣೆ ನಿಯಂತ್ರಣಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ.
  8. ಲಸಿಕೆ ನೀಡುವ ಜಾಗ ವಿಶಾಲವಾಗಿದ್ದರೆ, ಇನ್ನಷ್ಟು ಮಂದಿಗೆ ಲಸಿಕೆ ನೀಡಲು ಅವಕಾಶ ಮಾಡಿಕೊಟ್ಟು, ಮತ್ತೊಬ್ಬರು ಅಧಿಕಾರಿಯನ್ನು ನಿಯೋಜಿಲಾಗುತ್ತದೆ.
  9. ಲಸಿಕೆಗಳನ್ನು ತೆರೆದಿಡದಂತೆ ಸೂಕ್ತವಾದ ಸ್ಥಳದಲ್ಲಿ ಶೇಖರಣೆ ಮಾಡಬೇಕಿದೆ.
  10. ಲಸಿಕೆಗಳ ಕೆರಿಯರ್ ಗಳನ್ನು ತೆಗೆಯದಂತೆ, ಲಸಿಕೆ ನೀಡುವ ಸಂದರ್ಭ ಮಾತ್ರ ಬಳಸುವಂತೆ ಕ್ರಮ ಕೈಗೊಳ್ಳಲಾಗಿದೆ.
 ಕೋವಿನ್ ಆಪ್ ನಲ್ಲಿ ನೋಂದಣಿ ಮಾಡಿಕೊಳ್ಳುವುದು ಹೇಗೆ?

ಕೋವಿನ್ ಆಪ್ ನಲ್ಲಿ ನೋಂದಣಿ ಮಾಡಿಕೊಳ್ಳುವುದು ಹೇಗೆ?

ಲಸಿಕೆ ಪಡೆಯುವ ಮುನ್ನ co-WIN ಆಪ್ ಅನ್ನು ಮೊಬೈಲ್ ನಲ್ಲಿ ಮೊದಲು ಡೌನ್ ಲೋಡ್ ಮಾಡಿಕೊಳ್ಳಬೇಕು. ನಂತರ ಸೂಕ್ತ ವಿವರಗಳನ್ನು ನೋಂದಾಯಿಸಬೇಕಿದೆ. ವಿವರ ನೀಡುತ್ತಿದ್ದಂತೆ ಲಸಿಕೆ ಲಭ್ಯವಾಗುವ ದಿನಾಂಕ ಮತ್ತು ಸಮಯವು ದೊರೆಯುತ್ತದೆ.

ನಮ್ಮ ಲಸಿಕೆ ಸಾಮರ್ಥ್ಯ ಪ್ರಬಲವಾಗಿದೆ: ವಿಶ್ವಸಂಸ್ಥೆಗೆ ಭಾರತದ ಮಾಹಿತಿನಮ್ಮ ಲಸಿಕೆ ಸಾಮರ್ಥ್ಯ ಪ್ರಬಲವಾಗಿದೆ: ವಿಶ್ವಸಂಸ್ಥೆಗೆ ಭಾರತದ ಮಾಹಿತಿ

 ಯಾರಿಗೆ ಮೊದಲ ಲಸಿಕೆ?

ಯಾರಿಗೆ ಮೊದಲ ಲಸಿಕೆ?

ಕೇಂದ್ರ ಸರ್ಕಾರವು, ಮೊದಲು ಆರೋಗ್ಯ ಕಾರ್ಯಕರ್ತರಿಗೆ, ಕೋವಿಡ್ ವಿರುದ್ಧ ಹೋರಾಟದಲ್ಲಿರುವ ಮುಂಚೂಣಿ ಕಾರ್ಯಕರ್ತರಿಗೆ, ಐವತ್ತು ವರ್ಷ ಮೇಲ್ಪಟ್ಟವರಿಗೆ ಹಾಗೂ ವಿವಿಧ ಆರೋಗ್ಯ ಸಮಸ್ಯೆಗಳನ್ನು ಹೊಂದಿರುವ, 50ಕ್ಕಿಂತ ಕಡಿಮೆ ವಯಸ್ಸಿನವರಿಗೆ ಅವಶ್ಯಕತೆಗಳಿಗೆ ತಕ್ಕಂತೆ ಲಸಿಕೆ ನೀಡುವುದಾಗಿ ತಿಳಿಸಿದೆ.

English summary
Centre issues guidelines for corona vaccination drive. Many preparations are underway to mass vaccination in country. Here is all you need to know in kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X