ವಿಬಿಜಿ ರಾಮ್ ಜಿ ಕಾಯ್ದೆಯ ಕರಡು ನಿಯಮ ಪ್ರಕಟಿಸಿದ ಕೇಂದ್ರ ಸರ್ಕಾರ

ಕೇಂದ್ರ ಸರ್ಕಾರವು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (MGNREGA) ಯೋಜನೆಗೆ ಪರ್ಯಾಯವಾಗಿ ಜಾರಿಗೆ ತರಲಿರುವ ವಿಕಸಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಆಜೀವಿಕಾ ಮಿಷನ್ (ಗ್ರಾಮೀಣ) ಕಾಯ್ದೆ, 2025ರ ಕರಡು ನಿಯಮಗಳನ್ನು ಶನಿವಾರ ಸಾರ್ವಜನಿಕರ ಪರಿಶೀಲನೆಗೆ ಹಾಗೂ ಪ್ರತಿಕ್ರಿಯೆಗಾಗಿ ಪ್ರಕಟಿಸಿದೆ. ಈ ಹೊಸ ಕಾಯ್ದೆಯು ಮುಂಬರುವ ಜುಲೈ 1 ರಿಂದ ದೇಶಾದ್ಯಂತ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಅಧಿಕೃತವಾಗಿ ಜಾರಿಗೆ ಬರಲಿದೆ ಎಂದು ಸರ್ಕಾರ ಅಧಿಸೂಚನೆಯಲ್ಲಿ ತಿಳಿಸಿದೆ.

ಈ ಕಾಯ್ದೆಯ ಸೆಕ್ಷನ್ 33 ಹಾಗೂ ಇತರ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಕರಡು ನಿಯಮಗಳನ್ನು ರೂಪಿಸಲಾಗಿದ್ದು, ಅಂತಿಮಗೊಳಿಸುವ ಮುನ್ನ ಪಾಲುದಾರರೊಂದಿಗೆ ಸಮಾಲೋಚನೆ ನಡೆಸಲು ಅನುಕೂಲವಾಗುವಂತೆ ಸಾರ್ವಜನಿಕ ಡೊಮೇನ್‌ನಲ್ಲಿ (Public domain) ಇರಿಸಲಾಗಿದೆ. ಉದ್ದೇಶಿತ ನಿಯಮಗಳಲ್ಲಿ ಹಲವು ಮಹತ್ವದ ಅಂಶಗಳನ್ನು ಸೇರಿಸಲಾಗಿದೆ. ಪರಿವರ್ತನಾ ನಿಬಂಧನೆಗಳು, ರಾಷ್ಟ್ರೀಯ ಮಟ್ಟದ ಸ್ಟೀರಿಂಗ್ ಸಮಿತಿ, ಕೇಂದ್ರ ಗ್ರಾಮೀಣ ಉದ್ಯೋಗ ಖಾತರಿ ಮಂಡಳಿಯ ರಚನೆ, ಆಡಳಿತಾತ್ಮಕ ವೆಚ್ಚಗಳ ನಿರ್ವಹಣೆ, ಕುಂದುಕೊರತೆ ನಿವಾರಣಾ ವ್ಯವಸ್ಥೆ, ಕಾರ್ಮಿಕರ ವೇತನ ಪಾವತಿ ಹಾಗೂ ನಿರುದ್ಯೋಗ ಭತ್ಯೆ ನೀಡಿಕೆ ಕುರಿತಾದ ಸಮಗ್ರ ಮಾಹಿತಿಯನ್ನು ಇದು ಒಳಗೊಂಡಿದೆ. ಶಾಸಕಾಂಗವಿಲ್ಲದ ಕೇಂದ್ರಾಡಳಿತ ಪ್ರದೇಶಗಳ ವೆಚ್ಚವೂ ಸೇರಿದಂತೆ ಸಾಮಾನ್ಯ ಹಂಚಿಕೆಗಿಂತ ಹೆಚ್ಚು ಮಾಡಲಾದ ವೆಚ್ಚಗಳ ನಿರ್ವಹಣೆ ಕುರಿತು ನಿಯಮಾವಳಿಗಳನ್ನು ವಿವರಿಸಲಾಗಿದೆ.

Centre Issues Draft Rules

ಗ್ರಾಮೀಣಾಭಿವೃದ್ಧಿ ಸಚಿವಾಲಯದ ಹಿರಿಯ ಅಧಿಕಾರಿಗಳು ಈ ಬಗ್ಗೆ ಮಾಹಿತಿ ನೀಡಿದ್ದು, "ದೇಶಾದ್ಯಂತ ಹೊಸ ಕಾಯ್ದೆಯನ್ನು ಸಮರ್ಪಕವಾಗಿ ಜಾರಿಗೊಳಿಸಲು ಸಾಂಸ್ಥಿಕ, ಆಡಳಿತಾತ್ಮಕ, ಆರ್ಥಿಕ ಹಾಗೂ ಆಡಳಿತಾತ್ಮಕ ಚೌಕಟ್ಟನ್ನು ಸ್ಥಾಪಿಸುವ ಪ್ರಮುಖ ಉದ್ದೇಶದಿಂದ ಈ ನಿಯಮಗಳನ್ನು ರೂಪಿಸಲಾಗಿದೆ" ಎಂದು ತಿಳಿಸಿದ್ದಾರೆ.

ಕರಡು ನಿಯಮಗಳ ಮೇಲಿನ ಈ ಸಮಾಲೋಚನಾ ಪ್ರಕ್ರಿಯೆಯು ಆಡಳಿತದಲ್ಲಿ ಸಾರ್ವಜನಿಕರ ಪಾಲ್ಗೊಳ್ಳುವಿಕೆಯನ್ನು ಖಚಿತಪಡಿಸುವ ಜೊತೆಗೆ, ವಿವಿಧ ರಾಜ್ಯ ಸರ್ಕಾರಗಳು, ಸಂಸ್ಥೆಗಳು, ತಜ್ಞರು, ನಾಗರಿಕ ಸಮಾಜದ ಸಂಘಟನೆಗಳು ಹಾಗೂ ಸಾರ್ವಜನಿಕರಿಂದ ಪ್ರತಿಕ್ರಿಯೆಗಳನ್ನು ಪಡೆಯುವ ಉದ್ದೇಶವನ್ನು ಹೊಂದಿದೆ ಎಂದಿದ್ದಾರೆ.

ಈ ಕರಡು ಪರಿವರ್ತನಾ ನಿಬಂಧನೆಗಳ ಅಡಿಯಲ್ಲಿ, ಪ್ರಸ್ತುತ ಚಾಲ್ತಿಯಲ್ಲಿರುವ ಉದ್ಯೋಗ ಖಾತರಿ ಕಾರ್ಯಕ್ರಮವಾದ ಎಂಜಿಎನ್‌ಆರ್‌ಇಜಿಎಯಿಂದ ಹೊಸ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಾದ ವಿಬಿಜಿ-ರಾಮ್ ಜಿಗೆ ಸುಗಮವಾಗಿ ಬದಲಾಗುವ ಚೌಕಟ್ಟನ್ನು ವಿವರಿಸಲಾಗಿದೆ.

ರಾಜ್ಯ ಸರ್ಕಾರಗಳು ಈ ಹೊಸ ಯೋಜನೆಯನ್ನು ಅಧಿಕೃತವಾಗಿ ಅಧಿಸೂಚನೆ ಮಾಡುವವರೆಗಿನ ಪರಿವರ್ತನಾ ಅವಧಿಯಲ್ಲಿ, ಪ್ರಸ್ತುತ ನಡೆಯುತ್ತಿರುವ ಕಾಮಗಾರಿಗಳ ಮುಂದುವರಿಕೆ, ಬಾಕಿ ಇರುವ ಹಣಕಾಸು ಹೊಣೆಗಾರಿಕೆಗಳ ಇತ್ಯರ್ಥ, ಹಳೆಯ ದಾಖಲೆಗಳ ವರ್ಗಾವಣೆ, ಇ-ಕೆವೈಸಿ ಪರಿಶೀಲಿಸಿದ ಜಾಬ್ ಕಾರ್ಡ್‌ಗಳ ಸಿಂಧುತ್ವ ಹಾಗೂ ಕಾರ್ಮಿಕರ ಹಕ್ಕುಗಳ ರಕ್ಷಣೆಯನ್ನು ಖಾತರಿಪಡಿಸಲು ಈ ನಿಬಂಧನೆಗಳು ಭರವಸೆ ನೀಡುತ್ತವೆ. ಇದರಿಂದ ಕಾರ್ಮಿಕರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ಸ್ಪಷ್ಟಪಡಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+