ಕೇಂದ್ರ ನೌಕರರಿಗೆ ಬೋನಸ್ ಘೋಷಿಸಿದ ಅರುಣ್ ಜೇಟ್ಲಿ
ನವದೆಹಲಿ, ಆಗಸ್ಟ್ 30: ಕೇಂದ್ರ ಸರ್ಕಾರಿ ನೌಕರರಿಗೆ ಎರಡು ವರ್ಷಗಳಿಂದ ಬಾಕಿ ಇದ್ದ ಬೋನಸ್ ನೀಡುವುದಾಗಿ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಮಂಗಳವಾರ ಘೊಷಿಸಿದ್ದಾರೆ.
ಇದರಿಂದಾಗಿ 33 ಲಕ್ಷ ನೌಕರರಿಗೆ ಬರಬೇಕಿರುವ 2014-15 ಮತ್ತು 2015-16 ನೇ ಸಾಲಿನ ಬೋನಸ್ ಕೈಸೇರಲಿದೆ. ಇದರ ಜೊತೆಗೆ 7 ನೇ ವೇತನ ಆಯೋಗದ ಶಿಫಾರಸ್ಸಿನ ಅನ್ವಯ ಹೆಚ್ಚುವರಿ ಬೋನಸ್ ಸಿಗಲಿದೆ. ಪ್ರತಿದಿನ 246 ರು ನಿಂದ 350ರುಗೇರಿದೆ. ಇದರಿಂದ ಸಿ ಕೆಟಗೆರಿ ನೌಕರರಿಗೆ ಇದರಿಂದ ಲಾಭವಾಗಲಿದೆ. [6.40 ಲಕ್ಷ ಸರ್ಕಾರಿ ನೌಕರರಿಗೆ ಶುಭ ಸುದ್ದಿ ಸಿಗಲಿದೆ ನಿರೀಕ್ಷಿಸಿ!]

ಕೇಂದ್ರ ಸರ್ಕಾರಿ ನೌಕರರ ಪ್ರತಿನಿಧಿಗಳೊಂದಿಗೆ ಗೃಹ ಸಚಿವ ರಾಜನಾಥ್ ಸಿಂಗ್ ನಿವಾಸದಲ್ಲಿ ನಡೆದ ಸಭೆಯಲ್ಲಿ ಜೇಟ್ಲಿ ಸಮಾಲೋಚನೆ ನಡೆಸಿ ತೀರ್ಮಾನ ಕೈಗೊಂಡಿದ್ದಾರೆ. ಈ ಮೂಲಕ ಸೆಪ್ಟೆಂಬರ್ 02ರ ದೇಶವ್ಯಾಪ್ತಿ ಮುಷ್ಕರದ ಬಿಸಿ ಶಮನಗೊಳಿಸಲು ಕೇಂದ್ರ ಸರ್ಕಾರ ಯೋಜಿಸಿದೆ. [7ನೇ ವೇತನ ಆಯೋಗ ಏನು? ಏತ್ತ? ಯಾಕೆ? ಲೆಕ್ಕಾಚಾರ ಹೇಗೆ?]
ಇದರ ಜೊತೆಗೆ ಅಸಂಘಟಿತ ವಲಯಗಳಾದ ಅಂಗನವಾಡಿ, ಮಧ್ಯಾಹ್ನದ ಬಿಸಿಯೂಟ, ಆಶಾ ಕಾರ್ಯಕರ್ತರಿಗೆ ಸಾಮಾಜಿಕ ಭದ್ರತೆ ನೀಡುವ ಬಗ್ಗೆ ಸಮಿತಿ ಶೀಘ್ರದಲ್ಲೇ ನಿರ್ಧರಿಸಿ ತನ್ನ ವರದಿ ನೀಡಲಿದೆ ಎಂದರು.[ಫ್ರೆಶರ್ಸ್ ಗೆ ಈಗ ಕೆಟ್ಟ ಕಾಲ, ಸಂಬಳ ಏರಿಕೆ ಆಗೋದಿಲ್ಲ!]












Click it and Unblock the Notifications