Sanchar Saathi app: ಸಂಚಾರ್ ಸಾಥಿ ಆಪ್ ಕಡ್ಡಾಯಕ್ಕೆ ವಿರೋಧ: ಅದೇಶ ಹಿಂಪಡೆದ ಕೇಂದ್ರ
ಬೆಂಗಳೂರು, ಡಿಸೆಂಬರ್ 03: ಮೊಬೈಲ್‌ಗಳ ನೈಜತೆ, ಕಳೆದು ಹೋಗುವ ಫೋನ್‌ಗಳ ಟ್ರ್ಯಾಕ್ ಮಾಡುವುದು ಮತ್ತು ಸೈಬರ್ ಶಕ್ತಿಗಳಿಂದ ಬಳಕೆದಾರರನ್ನು ರಕ್ಷಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ 'ಸಂಚಾರ್ ಸಾಥಿ' ಅಪ್ಲಿಕೇಷನ್ ಅನ್ನು ಕಡ್ಡಾಯಗೊಳಿಸಲಾಗಿತ್ತು. ಆದರೆ ಸಾಕಷ್ಟು ವಿರೋಧ ವ್ಯಕ್ತವಾದ ಬೆನ್ನಲ್ಲೆ ಈ ಆಪ್ ಡೌನ್‌ಲೋಡ್ ಕಡ್ಡಾಯ ಆದೇಶವನ್ನು ಕೇಂದ್ರ ಸರ್ಕಾರ ಹಿಂಪಡೆದಿದೆ.
ಚಳಿಗಾಲ ಅಧಿವೇಶನದಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಉತ್ತರಿಸಿದ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು, ಮೊಬೈಲ್ ಫೋನ್‌ಗಳಲ್ಲಿ 'ಸಂಚಾರ್ ಸಾಥಿ' ಆಪ್ ಇನ್‌ಸ್ಟಾಲ್ ಕಡ್ಡಾಯ ಆದೇಶವನ್ನು ಬುಧವಾರ ಹಿಂದಕ್ಕೆ ಪಡೆದಿದ್ದೇವೆ ಎಂದು ತಿಳಿಸಿದರು.

ಸಾಕಷ್ಟು ವಿರೋಧದ ನಂತರ ಫೋನ್‌ಗಳಲ್ಲಿ ಕಡ್ಡಾಯ ಸಂಚಾರ್ ಸಾಥಿ ಪೂರ್ವ-ಸ್ಥಾಪನೆ ನಿರ್ಧಾರವನ್ನು ಕೇಂದ್ರ ಕೈ ಬಿಟ್ಟಿದೆ. ಸಂಚಾರ್ ಸಾಥಿ ಸುರಕ್ಷತಾ ಅಪ್ಲಿಕೇಶನ್ ನಿಂದ ಬೇಹುಗಾರಿಕೆ ಮಾಡಲು ಸಾಧ್ಯವಿಲ್ಲ. ಈ ಅಪ್ಲಿಕೇಶನ್ "ನಾ ಸ್ನೂಪಿಂಗ್ ಸಂಭವ ಹೈ, ನಾ ಸ್ನೂಪಿಂಗ್ ಹೋಗಾ" ಎಂದು ಸಚಿವರು ಪ್ರಶ್ನೋತ್ತರ ಅವಧಿಯಲ್ಲಿ ಅವರು ಉತ್ತರಿಸಿದರು.
ಆಪ್ ಸಿದ್ಧಪಡಿಸಿದ್ದೇಕೆ? ಉದ್ದೇಶವೇನು?
ಸರ್ಕಾರದ ಆದೇಶದ ಬೆನ್ನಲ್ಲೆ ಆಂಡ್ರಾಯ್ಡ್ ಮತ್ತು ಐಫೋನ್ ಬಳಕೆದಾರರು ಈ ಆಪ್ ಡೌನ್‌ಲೋಡ್ ಮಾಡಿದ್ದಾರೆ. ಒಂದೇ ದಿನದಲ್ಲಿ ಸ್ವಯಂಪ್ರೇರಿತ ಅಪ್ಲಿಕೇಶನ್ ಡೌನ್‌ಲೋಡ್ ಪ್ರಮಾಣ 10 ಪಟ್ಟು ಜಿಗಿದಿದೆ. ಇದರ ಬಳಕೆದಾರರ ಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ. ಫೋನ್‌ಗಳ ನೈಜತೆ, ಟ್ರ್ಯಾಕಿಂಗ್, ಸೈಬರ್ ವಂಚನೆಯಿಂದ ರಕ್ಷಣೆಗಾಗಿ ಈ ಆಪ್ ಅನ್ನು ಸಿದ್ಧಪಡಿಸಲಾಗಿತ್ತು. ಅದರಂತೆ ಅಪ್ಲಿಕೇಷನ್ ಬಳಕೆದಾರರ ಮೊಬೈಲ್‌ನಲ್ಲಿ ಪೂರ್ವ ಸ್ಥಾಪನೆ ಕಡ್ಡಾಯ ಮಾಡಿ ಆದೇಶಿಸಿತ್ತು.
ಈ ಆಪ್ ಅನ್ನು ಬಳಕೆದಾರರು ಅಗತ್ಯವೆನಿಸಿದರೆ ಇಟ್ಟುಕೊಳ್ಳಬಹುದು. ಇಲ್ಲವಾದರೆ ಅನ್ ಇನ್‌ಸ್ಟಾಲ್ ಮಾಡಬಹುದು. ಇದನ್ನು ಕಡ್ಡಾಯವಾಗಿ ಡೌನ್‌ಲೋಡ್ ಮಾಡಿಕೊಳ್ಳಬೇಕೆಂಬ ನಿಯಮವೇನು ಇಲ್ಲ. ಡೌನ್‌ಲೋಡ್ ಆಯ್ಕೆ ಬಳಕೆದಾರರಿಗೇ ಬಿಟ್ಟದ್ದು ಎಂದು ಸಿಂಧಿಯಾ ಹೇಳಿದರು.
ಆಪ್ ಡೌನ್‌ಲೋಡ್ ಭಾರೀ ಹೆಚ್ಚಳ, ದುರುದ್ದೇಶ ಇರಲಿಲ್ಲ
ಕೇಂದ್ರದ ಸಂಚಾರ್ ಸಾಥಿ ಬಗೆಗಿನ ಆದೇಶಕ್ಕೆ ವಿರೋಧ ಪಕ್ಷಗಳು ಮತ್ತು ಸಾರ್ವಜನಿಕ ವಲಯದಲ್ಲೂ ವಿರೋಧ ಕೇಳಿ ಬಂತು. ದುಷ್ಟರಿಂದ ಜನರಿಗೆ ರಕ್ಷಣೆ ನೀಡುವ ಉದ್ದೇಶ ಹೊಂದಿತ್ತು. ವಿನಃ ಯಾವುದೇ ಬೇಹುಗಾರಿಕೆ, ಕೆಟ್ಟ ಉದ್ದೇಶ ಇರಲಿಲ್ಲ ಎಂದು ವಿಪಕ್ಷಗಳಿಗೆ ಸ್ಪಷ್ಟಪಡಿಸಿದರು.
ಈ ಹಿಂದೆ ನಡೆದ ಸೈಬರ್ ವಂಚನೆ, ಅಪರಾಧ ಘಟನೆಗಳ ಆಧರಿಸಿ, ಬಳಕೆದಾರರ ರಕ್ಷಣೆಗಾಗಿ ರಚಿಸಲಾಗಿತ್ತು. ಇದೀಗ ಬೇಡವೆಂದರೆ ಬಿಟ್ಟುಬಿಡಿ. ಪ್ರಜಾಪ್ರಭುತ್ವದಲ್ಲಿ ನಿರಾಕರಣೆಗೆ ಎಲ್ಲರಿಗೂ ಹಕ್ಕಿದೆ. ಒಂದೇ ದಿನದಲ್ಲಿ 6 ಲಕ್ಷ ನಾಗರಿಕರು ಅಪ್ಲಿಕೇಶನ್ ಡೌನ್‌ಲೋಡ್ ಮಾಡಲು ನೋಂದಾಯಿಸಿಕೊಂಡಿದ್ದಾರೆ ಎಂದ ಸಿಂಧಿಯಾ ಅವರು, ಮೊಬೈಲ್ ತಯಾರಕರಿಗೆ ಡಿವೈಸ್‌ನಲ್ಲಿ ಈ ಆಪ್ ಪೂರ್ವ-ಸ್ಥಾಪನೆಯನ್ನು ಕಡ್ಡಾಯಗೊಳಿಸಿದ್ದ ಅದೇಶ ಹಿಂಪಡೆದಿದ್ದೇವೆ ಎಂದರು.












Click it and Unblock the Notifications