ಚಂದ್ರಯಾನ-3ಕ್ಕೆ ಮುಹೂರ್ತ ಇಟ್ಟ ಕೇಂದ್ರ ಸರ್ಕಾರ
ನವದೆಹಲಿ, ಮಾರ್ಚ್ 4: ಚಂದ್ರಯಾನ -3ಕ್ಕೆ ಕೇಂದ್ರ ಸರ್ಕಾರ ಮುಹೂರ್ತ ಫಿಕ್ಸ್ ಮಾಡಿದೆ. ಈ ಕುರಿತು ಮಾಹಿತಿ ನೀಡಿರುವ ಕೇಂದ್ರ ಸಚಿವ ಜೀತೇಂದ್ರ ಸಿಂಗ್ 2021ರ ಮೊದಲ ಭಾಗದಲ್ಲಿ ಚಂದ್ರಯಾನ ನಡೆಯಲಿದೆ ಎಂದು ಹೇಳಿದ್ದಾರೆ.
ನಾವು ನಿಗದಿ ಮಾಡಿರುವ ಸಮಯಕ್ಕಿಂತಲೂ ಸ್ವಲ್ಪ ತಡವೂ ಆಗಬಹುದು ಆದರೆ 2021ರಲ್ಲಿ ಚಂದ್ರಯಾನ-3 ನಡೆಸುವುದು ಮಾತ್ರ ನಿಶ್ಚಿತ ಎಂದು ತಿಳಿಸಿದ್ದಾರೆ. ಲೋಕಸಭೆಯಲ್ಲಿ ಈ ಕುರಿತು ಮಾತನಾಡಿದ ಅವರು, ಬಯಾಲಾಜಿಕಲ್ ಹಾಗೂ ಎರಡು ಭೌತ ವಿಜ್ಞಾನದ ಪ್ರಯೋಗಗಳು ನಡೆದಿವೆ.
ವಿಜ್ಞಾನಿಗಳು ಚಂದ್ರಯಾನ-2ರಲ್ಲಿ ಆದ ತಪ್ಪುಗಳನ್ನು ಗಮನದಲ್ಲಿಟ್ಟುಕೊಂಡು ಅದನ್ನು ತಿದ್ದಿ, ಚಂದ್ರಯಾನ -3ಕ್ಕೆ ಸಿದ್ಧಗೊಳ್ಳುತ್ತಿದ್ದಾರೆ.

ಶೈಕ್ಷಣಿಕ ಸಂಸ್ಥೆಗಳಿಂದ ಮೈಕ್ರೊಗ್ರಾವಿಟಿಗೆ ಸಂಬಂಧಿಸಿದ ನಾಲ್ಕು ಜೈವಿಕ ಮತ್ತು ಎರಡು ಭೌತಿಕ ವಿಜ್ಞಾನ ಪ್ರಯೋಗಗಳನ್ನು ಪಟ್ಟಿ ಮಾಡಲಾಗಿದೆ. ಗಗನಯಾನದಲ್ಲಿನ ಪ್ರಗತಿಯನ್ನು ವಿಸ್ತಾರವಾಗಿ ವಿವರಿಸಿದ ಸಿಂಗ್, ನಾಲ್ಕು ಗಗನಯಾತ್ರಿ ಅಭ್ಯರ್ಥಿಗಳ ಬಾಹ್ಯಾಕಾಶ ಹಾರಾಟ ತರಬೇತಿಯನ್ನು ಸಹ ಪ್ರಾರಂಭಿಸಲಾಗಿದೆ ಎಂದು ಹೇಳಿದರು.
ಫ್ರಾನ್ಸ್‌ನ ಬಾಹ್ಯಾಕಾಶ ಸಂಸ್ಥೆಯಾದ ಸಿಎನ್‌ಇಎಸ್ ಭಾಗವಹಿಸುವಿಕೆಯೊಂದಿಗೆ ಫ್ಲೈಟ್ ಸರ್ಜನ್‌ಗಾಗಿ ಮೂರು ವಾರಗಳ ತರಬೇತಿ ಕಾರ್ಯಕ್ರಮವನ್ನು ಇಸ್ರೋದಲ್ಲಿ ಪೂರ್ಣಗೊಳಿಸಲಾಗಿದೆ ಎಂದು ಅವರು ಹೇಳಿದರು.












Click it and Unblock the Notifications